ನ್ಯಾಶನಲ್‌ ಪೆನ್ಶನ್‌ ಸ್ಕೀಮಿನ ಪ್ರತಿಫ‌ಲದ ನಾನಾ ಮುಖಗಳು 


Team Udayavani, Jan 21, 2019, 12:50 AM IST

pension.jpg

(ಕಳೆದ ವಾರದಿಂದ) 
ಎನ್‌ಪಿಎಸ್‌ನಲ್ಲಿ ನೀವು ಮಾಡಿದ ಹೂಡಿಕೆಯು ನಾಲ್ಕು ವಿವಿಧ ಕ್ಷೇತ್ರಗಳಲ್ಲಿ ಹೂಡಲ್ಪಡುತ್ತದೆ ಎಂದು ಈಗಾಗಲೇ ಹೇಳಿ ಆಗಿದೆಯಷ್ಟೆ? E ಅಥವಾ ಈಕ್ವಿಟಿ, G ಅಥವಾ ಗವನ್ಮೆìಂಟ್‌ ಡೆಟ್‌ (ಸರಕಾರಿ ಸಾಲಪತ್ರಗಳು), C ಅಥವಾ ಕಾರ್ಪೋರೇಟ್‌ ಡೆಟ್‌ (ಖಾಸಗಿ ಕಂಪೆನಿಗಳ ಸಾಲಪತ್ರಗಳು) ಅಥವಾ A ಅಥವಾ ಆಲ್ಟರ್ನೇಟಿವ್‌ ಫ‌ಂಡುಗಳು.

ಎÇÉಾ ನಾಲ್ಕೂ ಹೂಡಿಕೆಗಳು ಒಂದು ಮ್ಯೂಚುವಲ್‌ ಫ‌ಂಡ್‌ ರೀತಿಯÇÉೇ ನಡೆಯುವ ಈ ಯೋಜನೆಗೆ ಯಾವುದೇ ಗ್ಯಾರಂಟಿ ಪ್ರತಿಫ‌ಲ ಇಲ್ಲ. ಅಂತಿಮ ಪ್ರತಿಫ‌ಲ ಮಾರುಕಟ್ಟೆಯ ಆಧಾರದಲ್ಲಿ ಫ‌ಂಡ್‌ ಬೆಳವಣಿಗೆಯನ್ನು ಹೊಂದಿರುತ್ತದೆ. ನಾಲ್ಕೂ ರೀತಿಯ ಫ‌ಂಡುಗಳಿಗೂ ಪ್ರತ್ಯೇಕವಾದ ಪ್ರತಿಫ‌ಲ ಇರುತ್ತದೆ. ಅಂತೆಯೇ ಕಳೆದ 1,3, ಹಾಗೂ 5 ವರ್ಷಗಳ ಸಾಧನೆಯನ್ನು E, G, C  ಹಾಗೂ A ಆಯ್ಕೆಗಳಲ್ಲಿ ಪ್ರತಿಯೊಂದು ಫ‌ಂಡು ಹೌಸುಗಳಿಗೂ ಪ್ರತ್ಯೇಕವಾಗಿ ನೀಡಲಾಗಿದೆ. (ಈ ರೀತಿ ಎನ್‌ಪಿಎಸ್‌ ಪ್ರತಿಫ‌ಲವನ್ನು http://www.npstrust.org.in/return-of-nps-scheme ಲಿಂಕಿಗೆ ಹೋಗಿ ಯಾವಾಗ ಬೇಕಾದರೂ ನೋಡಬಹುದು). 

E ಕ್ಷೇತ್ರದಲ್ಲಿ ಕಳೆದ ಒಂದು ವರ್ಷಗಳಲ್ಲಿ ಶೇರು ಮಾರಕಟ್ಟೆಯ ದೆಶೆ ಅಷ್ಟೊಂದು ಚೆನ್ನಾಗಿ ಇಲ್ಲದಿದ್ದ ಕಾರಣ ಸಾಧನೆ ಚೆನ್ನಾಗಿಲ್ಲದಿದ್ದರೂ ಕಳೆದ 3 ಯಾ 5 ವರ್ಷಗಳಲ್ಲಿ ಸರಿಸುಮಾರು ಉತ್ತಮ ಪ್ರತಿಫ‌ಲವನ್ನು ನೀಡಿರುವುದನ್ನು ಗಮನಿಸಬಹುದು. ಎನ್‌ಪಿಎಸ್‌ ಒಂದು ದೀರ್ಘ‌ಕಾಲಿಕ ಖಾತೆ ಅಲ್ಲದೆ ಹೂಡಿಕೆ ಮಾರುಕಟ್ಟೆ ಆಧರಿತ ಆಗಿರುವುದರಿಂದ ಪ್ರತಿಫ‌ಲವನ್ನೂ ತುಸು ದೀರ್ಘ‌ಕಾಲಿಕವಾಗಿಯೇ ನೋಡಬೇಕು. ಯಾವುದೇ ಮಾರುಕಟ್ಟೆ ಹೂಡಿಕೆ ನಿಮಗೆ ಪ್ರತಿ ದಿನ, ಪ್ರತಿ ತಿಂಗಳು ನಿಯಮಿತವಾಗಿ ಉತ್ತಮ ಧನಾತ್ಮಕ ಪ್ರತಿಫ‌ಲದ ಭರವಸೆ ನೀಡಲಾರದು. ಹಾಗೆಯೇ ಉಳಿದಂತೆ G, C ಹಾಗೂ A ಖಾತೆಯ ಪ್ರತಿಫ‌ಲಗಳನ್ನು ಬೇರೆ ಬೇರೆ ಫ‌ಂಡು ಹೌಸುಗಳ ಬೇರೆ ಬೇರೆ ಸಮಯಾವಧಿಯಲ್ಲಿ ನೋಡಿ ವಿಶ್ಲೇಷಿಸಬಹುದು. 

ಎನ್‌ಪಿಎಸ್‌ ಪ್ರತಿಫ‌ಲದ ಬಗ್ಗೆ ಇರುವ ಗೊಂದಲಗಳನ್ನು ಹೋಗಲಾಡಿಸಲು ಇಷ್ಟು ಸುದೀರ್ಘ‌ವಾದ ಅಂಕಿ ಅಂಶಗಳನ್ನು – ತುಸು ಜಾಸ್ತಿ ಎನಿಸಿದರೂ – ನೀಡಿದ್ದೇನೆ. (ಟೇಬಲ್‌ಗ‌ಳನ್ನು ನೋಡಿ)
***
ಒಬ್ಟಾತನ ಹೂಡಿಕೆಯು ನಾಲ್ಕು ಕ್ಷೇತ್ರಗಳ ಮಿಶ್ರಣವಾಗಿದ್ದು ಅಂತಿಮ ಪ್ರತಿಫ‌ಲವೂ ಆ ಹೂಡಿಕಾ ಕ್ಷೇತ್ರಗಳ ಅನುಪಾತಕ್ಕನುಸಾರವಾಗಿಯೇ ದಕ್ಕುತ್ತದೆ. E, G, C ಹಾಗೂ A ಹೂಡಿಕೆಗಳ ಅನುಪಾತ ನಾವು ನಿರ್ದೇಶಿಸಿದಂತೆಯೇ ಫ‌ಂಡು ಹೌಸುಗಳು ನಡೆಸುತ್ತವೆ. ಸಾಮಾನ್ಯವಾಗಿ E ಆಯ್ಕೆಯಲ್ಲಿ ಶೇ.50 ಹಾಗೂ A ಆಯ್ಕೆಯಲ್ಲಿ ಶೇ.5 ಗರಿಷ್ಟ ಮಿತಿ ಆಗಿರುತ್ತದೆ. ಅಟೋ E ಆಯ್ಕೆಯಲ್ಲಿ ಶೇ.75 ಹೂಡಬಹುದು ಹಾಗೂ ಅಲ್ಲಿ A ಆಯ್ಕೆ ಇರುವುದಿಲ್ಲ. ನಿಮ್ಮ ಒಟ್ಟಾರೆ ಅಂತಿಮ ಪ್ರತಿಫ‌ಲ ನಿಮ್ಮ ವಿವಿಧ ಆಯ್ಕೆಗಳ ಸರಾಸರಿ ಆಗಿರುತ್ತದೆ. 
ಅಷ್ಟೇ ಅಲ್ಲದೆ, ಪ್ರತಿಫ‌ಲವು ಮಾರುಕಟ್ಟೆಯ ಹಿಡಿತದಲ್ಲಿದ್ದು ಹಿಂದಿನ ಪ್ರತಿಫ‌ಲ ಮುಂಬರುವ ಪ್ರತಿಫ‌ಲಗಳ ಮುನ್ಸೂಚನೆಯಲ್ಲವೆಂಬುದನ್ನು ಅರಿಯಬೇಕು. ಇಲ್ಲಿರುವ ಎÇÉಾ ನಾಲ್ಕೂ ಆಯ್ಕೆಗಳೂ ಮಾರುಕಟ್ಟೆ ಮಾದರಿಯದ್ದು. E, G, C, A ಇವೆಲ್ಲವೂ ಮಾರುಕಟ್ಟೆಯ ಮೌಲ್ಯಾಧಾರಿತವಾಗಿ ಪ್ರತಿಫ‌ಲ ನೀಡುತ್ತವೆ. G ಮತ್ತು C ಎಂಬ ಸಾಲಪತ್ರಗಳೂ ಕೂಡಾ ಮಾರುಕಟ್ಟೆ ಆಧಾರಿತ ಪ್ರತಿಫ‌ಲಗಳನ್ನೇ ನೀಡುತ್ತವೆ ಎಂಬುದನ್ನು ಗಮನಿಸಬೇಕು. 

ಅಂತೆಯೇ ಇಲ್ಲಿ ನೀಡಿರುವ ಪ್ರತಿಫ‌ಲಗಳು ಸಾರ್ವಜನಿಕರ ಮಾದರಿಯ¨ªಾಗಿದ್ದು ಇವನ್ನು ಪಿಪಿಎಫ್, ಎಫ್ಡಿ, ಯುಲಿಪ್‌ ಇತ್ಯಾದಿ ಸಾರ್ವಜನಿಕ ಯೋಜನೆಗಳ ಹೋಲಿಕೆಯಲ್ಲಿ ಓದಿಕೊಳ್ಳತಕ್ಕದ್ದು. ಈಗ ಎಫ್ಡಿ ನೀಡುವುದು ಸುಮಾರು ಶೇ.7.5-ಶೇ.8. ಪಿಪಿಎಫ್ ನೀಡುವುದು ಶೇ.8, ಎನ್‌ಎಸ್‌ಸಿ ಕೂಡಾ ನೀಡುವುದು ಶೇ.8. ಹಾಗಾಗಿ ಎನ್‌ಪಿಎಸ್‌ ಯೋಜನೆಯನ್ನು ಈ ಹೂಡಿಕೆಗಳ ತತ್ಸಮವಾಗಿ ಹೋಲಿಸುವುದು ಸಾಧುವೇ ಆಗಿದೆ. ಸರಕಾರಿ ಉದ್ಯೋಗವೇ ಇಲ್ಲದವರು ಇದನ್ನು 15 ವರ್ಷ ಹಿಂದಿನ ಸರಕಾರಿ ಪಿಂಚಣಿ ಪದ್ಧತಿಯೊಡನೆ ತಾಳೆ ಹಾಕಿ ಹಲುಬುವುದರಲ್ಲಿ ಅರ್ಥವಿಲ್ಲ.  ಇನ್ನು ಖಾಸಗಿ ರಂಗದಲ್ಲಿರುವ ಉದ್ಯೋಗಿಗಳು ಸದ್ಯದಲ್ಲಿ ಇಪಿಎಸ್‌ ಪದ್ಧತಿಯಲ್ಲಿ ಇ¨ªಾರೆ. ಇದು ತಾವು ಮಾಸಿಕ ಶೇ.12 ದೇಣಿಗೆ ನೀಡುವ ಇಪಿಎಫ್ ಯೋಜನೆಯ ಒಂದು ಭಾಗ. ಸದ್ಯದ ಇಪಿಎಸ್‌ ಯೋಜನೆ ಅಷ್ಟೊಂದು ಉತ್ತಮ ಯೋಜನೆಯಲ್ಲ. ಅದರಲ್ಲಿ ಕನಿಷ್ಟ ರೂ. 1000 ಹಾಗೂ ಗರಿಷ್ಟ ರೂ. 7500 ಪ್ರತಿ ಮಾಸ ಮಾತ್ರವೇ ಪಡಕೊಳ್ಳಲು ಸಾಧ್ಯ. ಹಾಕಿದ ದೇಣಿಗೆ ಸೂಕ್ತ ಪ್ರತಿಫ‌ಲ ಇಪಿಎಸ್‌ ಯೋಜನೆಯಲ್ಲಿ ಸಿಗುವುದಿಲ್ಲ.

ಈ ಮಾತನ್ನು ಹಲವಾರು ಬಾರಿ ಕಾಕುನಲ್ಲಿ ಚರ್ಚಿಸಲಾಗಿದೆ. ಈ ನಿಟ್ಟಿನಲ್ಲಿ ಉದ್ಯೋಗಿಗಳ ಒಳಿತಿಗಾಗಿ ಹಲವಾರು ಖಾಸಗಿ ಸಂಸ್ಥೆಗಳು ಐಚ್ಛಿಕವಾಗಿ ಎನ್‌ಪಿಎಸ್‌ನಲ್ಲಿ ಹೂಡಿಕೆ ಆರಂಭಿಸಿ¨ªಾರೆ. ಇದು ಕಾನೂನು ಪ್ರಕಾರ ಕಡ್ಡಾಯವಲ್ಲದಿದ್ದರೂ ಉದ್ಯೋಗಿಗಳ ಹಿತದೃಷ್ಟಿಯಿಂದ ಒಂದು ಉತ್ತಮ ಬೆಳವಣಿಗೆ. ಖಾಸಗಿ ಉದ್ಯೋಗದಾತರಿಗೆ ಒಂದು ಪೈಸೆಯ ಹೆಚ್ಚುವರಿ ಖರ್ಚು ಇಲ್ಲದೆ ಕೊಡುವ ಸಂಬಳದಲ್ಲಿಯೇ ಎನ್‌ಪಿಎಸ್‌ ಆರಂಭಿಸಲು ಸಾಧ್ಯ. ಈ ಬಗ್ಗೆ ಕೂಡಾ ಕಾಕುನಲ್ಲಿ ಈ ಹಿಂದೆ ಚರ್ಚಿಸಲಾಗಿದೆ. 

2004ರ ಬಳಿಕ ಹೊಸದಾಗಿ ಸೇರುವವರಿಗೆ ಅನ್ವಯಿಸುವಂತೆ ಸರಕಾರದಲ್ಲೂ ಈ ಹೊಸ ಪಿಂಚಣಿ ಯೋಜನೆ (ಎನ್‌ಪಿಎಸ್‌) ಜಾರಿಯಲ್ಲಿದೆ. ಸರಕಾರಿ ಮಾದರಿಯಲ್ಲಿ ಹೂಡಿಕೆಯ ಕ್ರಮವೇ ಭಿನ್ನವಾಗಿದ್ದು, ಸ್ವಾಭಾವಿಕವಾಗಿ ಅಲ್ಲಿನ ಪ್ರತಿಫ‌ಲಗಳು ಕೂಡಾ ಇದರಿಂದ ಭಿನ್ನವಾಗಿವೆ. ಆದರೂ ಸರಕಾರಿ ಉದ್ಯೋಗಿಗಳು ತಮ್ಮ ಪ್ರತಿಫ‌ಲವನ್ನು ಹಳೆಯ ಪೆನ್ಶನ್‌ ಪದ್ಧತಿಗೆ ಅನುಸಾರವಾಗಿ ನೋಡುವುದು ಸಹಜವೇ ಆಗಿದೆ. ಈ ಬಗ್ಗೆ ಸರಕಾರಿ ನೌಕರರಲ್ಲಿ ತೀವ್ರ ಅಸಮಧಾನ ಕೂಡಾ ಇದೆ. 

ಈ ರೀತಿಯಲ್ಲಿ ಎನ್‌ಪಿಎಸ್‌ ಎಂಬ ಮಹಾನ್‌ ಯೋಜನೆಯು ಹಲವು ಮುಖಗಳ ಮೂಲಕ ಗೋಚರವಾಗುತ್ತದೆ. ಪ್ರತಿಯೊಬ್ಬರೂ ತಮ್ಮ ಸಂದರ್ಭಕ್ಕೆ ತಕ್ಕುದಾದ ಮುಖವನ್ನು ಮಾತ್ರ ನೋಡಿಕೊಂಡು ನಿರ್ಧಾರ ತೆಗೆದುಕೊಳ್ಳಬೇಕು. ಇನ್ನೊಬ್ಬರಿಗೆ ಅನ್ವಯವಾಗುವ ಮುಖವನ್ನು ತಮ್ಮ ಸಂದರ್ಭಕ್ಕೆ ಸಜ್ಜಿಗೆ-ಬಜಿಲ್‌ ಮಾಡಿಕೊಂಡು ಗೊಂದಲಕ್ಕೀಡಾಗಬೇಡಿ. ಗ್ರಹಿಕೆ ತಪ್ಪಾದರೆ ವಿಶ್ಲೇಷಣೆ ಮತ್ತು ತೀರ್ಮಾನ ಕೂಡಾ ತಪ್ಪಾಗುತ್ತದೆ. ಹೂಡಿಕೆಯು ಲೆಕ್ಕಾಚಾರದ ಕ್ರಿಯೆ; ಭಾವನಾತ್ಮಕ ಪ್ರತಿಕ್ರಿಯೆ ಅಲ್ಲ. 

– ಜಯದೇವ ಪ್ರಸಾದ ಮೊಳೆಯಾರ

ಟಾಪ್ ನ್ಯೂಸ್

snehamayi krishna

Snehamayi Krishna ವಿರುದ್ಧ ಕಾಂಗ್ರೆಸ್‌ನಿಂದ ಪೊಲೀಸರಿಗೆ ಮತ್ತೊಂದು ದೂರು

bsy

Covid ವೇಳೆ ಜೀವ ಉಳಿಸುವ ಕೆಲಸ ಮಾಡಿದ್ದೇವೆ: ಬಿಎಸ್‌ವೈ

Parameshwar

Waqf issue; ಬಿಜೆಪಿಯಿಂದ ಕೋಮು ಗಲಭೆಗೆ ಯತ್ನ: ಕಾಂಗ್ರೆಸ್‌

Chaluvarayaswamy

Kumaraswamy ಅವರಿಗೆ ಜತೆಗಿರುವಾಗ ಕೊಚ್ಚೆ ವಾಸನೆ ಬರಲಿಲ್ಲವೇ?: ಚಲುವರಾಯಸ್ವಾಮಿ ತಿರುಗೇಟು

Mangaluru-Sahakara

Mangaluru: ಸಹಕಾರ ಆಂದೋಲನ ಜನರ ಆಂದೋಲನವಾಗಲಿ: ಸಚಿವ ಕೆ.ಎನ್‌.ರಾಜಣ್ಣ

1-reee

BJP; 50 ಅಲ್ಲ ,100 ಕೋಟಿ ರೂ. ಆಮಿಷ: ಶಾಸಕ ರವಿ ಗಣಿಗ!

BBK11: ಏರು ಧ್ವನಿಯಲ್ಲೇ ತರಾಟೆಗೆ ತೆಗೆದುಕೊಂಡ ಕಿಚ್ಚ.. ಚೈತ್ರಾ ಕುಂದಾಪುರ ಕಕ್ಕಾಬಿಕ್ಕಿ

BBK11: ಏರು ಧ್ವನಿಯಲ್ಲೇ ತರಾಟೆಗೆ ತೆಗೆದುಕೊಂಡ ಕಿಚ್ಚ.. ಚೈತ್ರಾ ಕುಂದಾಪುರ ಕಕ್ಕಾಬಿಕ್ಕಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಭಯ ಅಂದ್ರೆ ಏನ್ರೀ.. ಎನ್ನುವ ಲೇಡಿ ಜೇಮ್ಸ್‌ ಬಾಂಡ್‌!

ಭಯ ಅಂದ್ರೆ ಏನ್ರೀ.. ಎನ್ನುವ ಲೇಡಿ ಜೇಮ್ಸ್‌ ಬಾಂಡ್‌!

ಕರ ಚೋರರ ಮೇಲೆ ಹದ್ದಿನ ಕಣ್ಣಿಡುವ ಫಾರ್ಮ್ 26ಎಎಸ್‌

ಕರ ಚೋರರ ಮೇಲೆ ಹದ್ದಿನ ಕಣ್ಣಿಡುವ ಫಾರ್ಮ್ 26ಎಎಸ್‌

ವಿದ್ಯಾ ಸಾಲದ ಬಡ್ಡಿ ಮತ್ತು ಕರ ವಿನಾಯಿತಿ

ವಿದ್ಯಾ ಸಾಲದ ಬಡ್ಡಿ ಮತ್ತು ಕರ ವಿನಾಯಿತಿ

Home-Loan-730

ಗೃಹ ಸಾಲದ ಮೇಲೆ ಕರ ವಿನಾಯಿತಿ

tax-rebate

ಇನ್ನಷ್ಟು 87ಎ ರಿಬೇಟ್‌ಗಳು ಮತ್ತು ಅವುಗಳ ಮಹತ್ವ

MUST WATCH

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

ಹೊಸ ಸೇರ್ಪಡೆ

snehamayi krishna

Snehamayi Krishna ವಿರುದ್ಧ ಕಾಂಗ್ರೆಸ್‌ನಿಂದ ಪೊಲೀಸರಿಗೆ ಮತ್ತೊಂದು ದೂರು

bsy

Covid ವೇಳೆ ಜೀವ ಉಳಿಸುವ ಕೆಲಸ ಮಾಡಿದ್ದೇವೆ: ಬಿಎಸ್‌ವೈ

Parameshwar

Waqf issue; ಬಿಜೆಪಿಯಿಂದ ಕೋಮು ಗಲಭೆಗೆ ಯತ್ನ: ಕಾಂಗ್ರೆಸ್‌

Chaluvarayaswamy

Kumaraswamy ಅವರಿಗೆ ಜತೆಗಿರುವಾಗ ಕೊಚ್ಚೆ ವಾಸನೆ ಬರಲಿಲ್ಲವೇ?: ಚಲುವರಾಯಸ್ವಾಮಿ ತಿರುಗೇಟು

Mangaluru-Sahakara

Mangaluru: ಸಹಕಾರ ಆಂದೋಲನ ಜನರ ಆಂದೋಲನವಾಗಲಿ: ಸಚಿವ ಕೆ.ಎನ್‌.ರಾಜಣ್ಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.