ವಿಜಯ್ ಸಲಗ ನಿರ್ದೇಶಕ ಬದಲು
Team Udayavani, Jan 21, 2019, 6:01 AM IST
ದುನಿಯಾ ವಿಜಯ್ ಕಳೆದ ಡಿಸೆಂಬರ್‌ನಲ್ಲಿ ರಾಘ ಶಿವಮೊಗ್ಗ ನಿರ್ದೇಶನದಲ್ಲಿ “ಸಲಗ’ ಚಿತ್ರವನ್ನು ಮಾಡುವುದಾಗಿ ಘೋಷಿಸಿದ್ದರು. ಆದರೆ ಈಗ ಈ ಚಿತ್ರದ ಸಾರಥ್ಯವನ್ನು ಬೇರೊಬ್ಬರು ವಹಿಸಿಕೊಳ್ಳುತ್ತಿದ್ದಾರೆ. ಹೌದು, “ಸಲಗ’ ಚಿತ್ರದ ನಿರ್ದೇಶನದಿಂದ ರಾಘು ಶಿವಮೊಗ್ಗ ಹೊರಬಂದಿದ್ದಾರೆ. ಈ ಹಿಂದೆ “ಸಲಗ’ ಎಂಬ ಟೈಟಲ್ ಇಟ್ಟುಕೊಂಡು ರಾಘು ಔಟ್ ಅ್ಯಂಡ್ ಔಟ್ ಮಾಸ್ ಕಥೆಯನ್ನು ರೆಡಿ ಮಾಡುತ್ತಿದ್ದರು. ಇದೇ ವೇಳೆ ದುನಿಯಾ ವಿಜಿ ಬಳಿ ಮತ್ತೂಂದು ಕಥೆ ಚರ್ಚೆಗೆ ಬಂತು.
ಬಳಿಕ ಆ ಕಥೆಯನ್ನು ರಾಘು ಶಿವಮೊಗ್ಗ ಬಳಿ ಹೇಳಿದಾಗ, “ಈ ಕಥೆ “ಸಲಗ’ ಟೈಟಲ್‌ಗೆ ಹೊಂದುತ್ತದೆ. ಹಾಗಾಗಿ “ಸಲಗ’ ಟೈಟಲ್‌ನಲ್ಲಿ ನೀವು ಇದೇ ಕಥೆಯನ್ನು ಸಿನಿಮಾ ಮಾಡಿ. ನಾವಿಬ್ಬರೂ ಈ ಹಿಂದಿನ ಕಮಿಟ್‌ಮೆಂಟ್‌ನಂತೆ “ಕುಸ್ತಿ’ ಸಿನಿಮಾವನ್ನೇ ಮಾಡೋಣ’ ಎಂದರಂತೆ. ಹಾಗಾಗಿ, “ಸಲಗ’ದಿಂದ ರಾಘು ಹೊರಬಂದಿದ್ದಾರೆ. ಈ ಬಗ್ಗೆ ತಮ್ಮ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿರುವ ವಿಜಿ, “ನನಗೆ ರಾಘು ಕಮಿಟ್ಮೆಂಟ್ ಇಷ್ಟ ಆಯ್ತು.
ಒಬ್ಬ ನಿರ್ದೇಶಕ ಈ ರೀತಿಯೂ ಯೋಚಿಸಬಹುದಾ ಎಂದುಕೊಂಡೆ. ಇದು ಅವರಲ್ಲಿನ ವೃತ್ತಿಪರತೆಯನ್ನು ತೋರಿಸುತ್ತದೆ. ಅವರ ಈ ನಿರ್ಧಾರ ನನಗೆ ಒಳ್ಳೆ ಕಥೆಗಾರ ಮತ್ತು ನಿಸ್ವಾರ್ಥಿ ನಿರ್ದೇಶಕನನ್ನು ತೋರಿಸಿಕೊಟ್ಟಿತು. ಹಾಗಾಗಿ ಈ ಬಾರಿ ಬೇರೆ ಮಾವುತನೊಂದಿಗೆ ಸಲಗನಾಗಿ ನಿಮ್ಮ ಮುಂದೆ ಬರಲಿದ್ದೇನೆ. ಆ ಮಾವುತ ಮತ್ತು ಆ ಸಿನಿಮಾದ ಇತರ ವಿವರವನ್ನು ಮುಂದೆ ತಿಳಿಸುತ್ತೇನೆ. ರಾಘು ಶಿವಮೊಗ್ಗ ಮತ್ತು ನಾನು ಮುಂದಿನ ದಿನಗಳಲ್ಲಿ ಒಟ್ಟಿಗೆ ಕೆಲಸ ಮಾಡುತ್ತೇವೆ.
ಸದ್ಯ “ಸಲಗ’ ಮತ್ತು “ಕುಸ್ತಿ’ ಸಿನಿಮಾ ನಡೆಯುತ್ತಿದೆ. ಈ ಎರಡೂ ಸಿನಿಮಾಗಳು ಪೂರ್ಣಗೊಂಡ ನಂತರ ಮುಂದಿನ ಸಿನಿಮಾದ ಬಗ್ಗೆ ಯೋಚಿಸುತ್ತೇನೆ. ಅಭಿಮಾನಿಗಳು ನನ್ನಿಂದ ಏನು ನಿರೀಕ್ಷಿಸುತ್ತಾರೋ ಅಂಥ ಸಿನಿಮಾಗಳನ್ನು ಮಾಡುತ್ತೇನೆ. ಅವರನ್ನು ನಿರಾಸೆಗೊಳಿಸುವುದಿಲ್ಲ’ ಎಂದರು. ಇನ್ನು ವಿಜಯ್ ಭಾನುವಾರ (ಫೆ. 19) 45ನೇ ವಸಂತಕ್ಕೆ ಕಾಲಿಟ್ಟರು. ಇನ್ನು ವಿಜಯ್ ಬರ್ತ್‌ಡೇ ಪ್ರಯುಕ್ತ ಬೆಳ್ಳಗಿನಿಂದಲೇ ಅವರ ಮನೆ ಮುಂದೆ ನೂರಾರು ಅಭಿಮಾನಿಗಳು ಜಮಾಯಿಸಿದ್ದರು. ಅಭಿಮಾನಿಗಳು ತಂದಿದ್ದ ಕೇಕ್ ಕತ್ತರಿಸಿ ವಿಜಯ್ ಸಂಭ್ರಮಿಸಿದರು.
ವಿಜಯ್ ಅವರಿಗೆ ಬೇರೊಂದು ಕಥೆ ಬಂತು. ಅದು ಸಲಗ ಟೈಟಲ್‌ಗೆ ಚೆನ್ನಾಗಿ ಹೊಂದಿಕೆಯಾಗುತ್ತಿತ್ತು. ಆ ಕಾರಣದಿಂದ ಆ ಕಥೆಯನ್ನು “ಸಲಗ’ ಟೈಟಲ್‌ನಡಿ ಮಾಡುತ್ತಿದ್ದಾರೆ. ನಾನು “ಸಲಗ’ ಟೈಟಲ್‌ನಡಿ ಮಾಡಿಕೊಂಡಿರುವ ಕಥೆಯನ್ನು ಬೇರೆ ಹೀರೋಗೆ ಮಾಡುತ್ತೇನೆ. ವಿಜಯ್ ಜೊತೆ ಮುಂದೆ “ಕುಸ್ತಿ’ ಸಿನಿಮಾ ಮಾಡುತ್ತೇನೆ.
-ರಾಘು ಶಿವಮೊಗ್ಗ, ನಿರ್ದೇಶಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Upendra: ʼಯುಐʼಗೆ ಸ್ಯಾಂಡಲ್‌ವುಡ್ ಸಾಥ್; ಉಪೇಂದ್ರ ಚಿತ್ರ ನೋಡಲು ಕಾತುರ
Shiva Rajkumar: ಚಿಕಿತ್ಸೆಗಾಗಿ ಅಮೆರಿಕದತ್ತ ಶಿವಣ್ಣ; ಚಿತ್ರರಂಗದ ಶುಭ ಹಾರೈಕೆ
BBK11: ಟಾಸ್ಕ್ ವಿಚಾರದಲ್ಲಿ ಫೈಯರ್ ಚೈತ್ರಾ ಠುಸ್.. ಮನೆಮಂದಿ ಸುಸ್ತು
BBK11: ಮತ್ತೆ ಬಿಗ್ ಬಾಸ್ ಮನೆಗೆ ಗೋಲ್ಡ್ ಸುರೇಶ್..? ವಿಡಿಯೋದಲ್ಲಿ ಸುಳಿವು
Sandalwood: ಕಣ್ಣಾ ಮುಚ್ಚೆ ಕಾಡೇ ಗೂಡೇ ತೆರೆಗೆ ಸಿದ್ಧ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು
Laxmi Hebbalkar; ಅವಾಚ್ಯ ಪದ ಬಳಕೆ ಕೇಸ್: ಸಿ.ಟಿ.ರವಿ ಪೊಲೀಸರ ವಶಕ್ಕೆ
Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು
Jagdeep Dhankhar; ರಾಜ್ಯಸಭಾ ಸಭಾಪತಿ ವಿರುದ್ದದ ಪ್ರತಿಪಕ್ಷಗಳ ಅವಿಶ್ವಾಸ ನಿರ್ಣಯ ತಿರಸ್ಕೃತ
Yakshagana;ಕನ್ನಡ ಭಾಷೆಯ ಮೌಲ್ಯವನ್ನು ಉಳಿಸುವಲ್ಲಿ ಸಾರ್ವಕಾಲಿಕ ಕೊಡುಗೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.