ಜವಾಬ್ದಾರಿ ಹೆಚ್ಚಿದರೆ ಭಯ ಬೇಡ
Team Udayavani, Jan 21, 2019, 7:56 AM IST
ವೃತ್ತಿ ಅಥವಾ ಖಾಸಗಿ ಬದುಕು ಯಾವುದೇ ಇರಲಿ ಹೆಣ್ಮಕ್ಕಳು ಜವಾಬ್ದಾರಿ ಹೊತ್ತುಕೊಳ್ಳಲು ಹೆಚ್ಚಾಗಿ ಹಿಂಜರಿಯುತ್ತಾರೆ. ಇದಕ್ಕೆ ಕಾರಣ ಅವರಲ್ಲಿ ಆತ್ಮವಿಶ್ವಾಸದ ಕೊರತೆ ಇರಬಹುದು. ಆದರೆ ಸಮಯಕ್ಕೆ ಸರಿಯಾಗಿ ನಿರ್ಧಾರಗಳನ್ನು ಕೈಗೊಳ್ಳದೇ ಹೋದರೆ ಉತ್ತಮ ಅವಕಾಶವೊಂದು ಕೈ ತಪ್ಪಿದಂತಾಗುತ್ತದೆ.
ವೃತ್ತಿಯಲ್ಲಿ ಪರಿಣತಳಾಗಿದ್ದ ರೇಷ್ಮಾಳಿಗೆ ಸಾಕಷ್ಟು ಉತ್ತಮ ಆಫರ್ ಗಳು ಬಂದರೂ ನಿರಾಕರಿಸುತ್ತಲೇ ಇದ್ದಳು. ಕಾರಣ ಈಗ ಇರುವ ವೃತ್ತಿ ಚೆನ್ನಾ ಗಿದೆ. ಬದುಕಿನಲ್ಲಿ ಹೆಚ್ಚಿನ ಯಾವುದೇ ನಿರೀಕ್ಷೆಗಳಿಲ್ಲ. ಇದ್ದಷ್ಟು ದಿನ ಇದ್ದುದರಲ್ಲೇ ತೃಪ್ತಿ ಪಡುವ ಜಾಯಮಾನ. ಹೀಗಾಗಿ ಬೇರೆ ಆಫರ್ ಗಳತ್ತ ಕಣ್ಣೆತ್ತಿಯೂ ನೋಡಲಿಲ್ಲ. ಆದರೆ ಇತ್ತೀಚೆಗೆ ಕಂಪೆನಿಯಲ್ಲಿ ಬಂದ ಹೊಸ ನಿಯ ಮವೊಂದು ಆಕೆಯನ್ನು ಕಂಗೆಡಿಸಿತು ಜತೆಗೆ ಜವಾಬ್ದಾರಿ ಹೆಚ್ಚಾಯಿತು. ಇದು ಆಕೆಯ ಮನೋ ಸಾಮರ್ಥ್ಯವನ್ನು ಮತ್ತಷ್ಟು ಕುಗ್ಗಿಸಿತು.
ಇಂಥ ಪರಿಸ್ಥಿತಿಗಳನ್ನು ಹಲವು ಮಂದಿ ಹೆಣ್ಮಕ್ಕಳು ತಮ್ಮ ವೃತ್ತಿ ಕ್ಷೇತ್ರದಲ್ಲಿ ಅನುಭವಿಸಿರುತ್ತಾರೆ. ಕಾರಣ ಅವರು ಕಂಫರ್ಟ್ ಝೋನ್ ನೊಳಗೆ ಕುಳಿತಿರುತ್ತಾರೆ. ಅದರಿಂದ ಹೊರಗಿನ ವಿಚಾರಗಳನ್ನು ತಿಳಿಯುವ ಕುತೂಹಲವಾಗಲಿ, ಅನಿವಾರ್ಯತೆಯಾಗಲಿ ಅವರಿಗೆ ಬಂದಿರುವುದಿಲ್ಲ. ಹೀಗಾಗಿ ಕೆಲವು ಅನಿರೀಕ್ಷಿತವಾಗಿ ಬಂದ ಘಟನೆಗಳಿಗೆ ಕಂಗೆಟ್ಟು ಹೋಗುತ್ತಾರೆ. ಇದು ವೃತ್ತಿ ಬದುಕಿಗೆ ಸೀಮಿತವಾಗಿರುವುದಿಲ್ಲ. ಬದಲಿಗೆ ಹೆಚ್ಚಿನವರ ಖಾಸಗಿ ಬದುಕಿನಲ್ಲೂ ಇಂಥ ಪ್ರಸಂಗಗಳಿವೆ.
ಭಯ ಬಿಟ್ಟು ಬಿಡಿ. ಭಯ ಎಂಬುದು ನಮ್ಮನ್ನು ದುರ್ಬಲರನ್ನಾಗಿ ಮಾಡುತ್ತದೆಯೇ ಹೊರತು ಅದರಿಂದ ಏನೂ ಲಾಭವಿಲ್ಲ. ಹೀಗಾಗಿ ಮೊದಲಿಗೆ ಏನಾಗಲಿ ಮುಂದೆ ಸಾಗು ನೀ ಎಂಬಂತೆ ಮುನ್ನಡೆಯುತ್ತಾ ಸಾಗಬೇಕು. ಆಗ ಭಯ ತನ್ನಿಂತಾನೇ ಕಡಿಮೆಯಾಗುತ್ತಾ ಹೋಗುತ್ತದೆ. ಸವಾಲುಗಳನ್ನು ಸ್ವೀಕರಿಸುವ ಅಭ್ಯಾಸ ಬೆಳೆಸಿಕೊಳ್ಳಬೇಕು. ಆರಂಭದಲ್ಲಿ ಸಣ್ಣ ಪುಟ್ಟ ಸವಾಲುಗಳನ್ನು ಸ್ವೀಕರಿಸಬೇಕು. ಇದು ಕ್ರಮೇಣ ನಮ್ಮ ಭಯವನ್ನು ನಿವಾರಿಸುತ್ತಾ ಹೋಗುತ್ತದೆ.
ಸವಾಲುಗಳನ್ನು ನಮ್ಮನ್ನು ಸದೃಢರನ್ನಾಗಿ ಮಾಡುತ್ತದೆ. ಜತೆಗೆ ಸಾಕಷ್ಟು ಅನುಭವಗಳನ್ನೂ ಕಟ್ಟಿಕೊಡುತ್ತದೆ. ಇದರಿಂದ ಮುಂದಿನ ಸವಾಲುಗಳನ್ನು ಎದುರಿಸುವುದು, ಬದುಕಿನಲ್ಲಿ ಹೊಸ ನಿರ್ಧಾರ ಕೈಗೊಳ್ಳುವುದು ಸುಲಭವಾಗುತ್ತದೆ.
ರಿಲ್ಯಾಕ್ಸ್ ಮಾಡಿಕೊಳ್ಳಿ. ಕೆಲಸ ಮಾಡುತ್ತಿರುವ ವೇಳೆ ಹೆಚ್ಚು ಸುಸ್ತು, ಟೆನ್ಶನ್ ಆದರೆ ಒಂದಷ್ಟು ಹೊತ್ತು ರಿಲ್ಯಾಕ್ಸ್ ಮಾಡಿಕೊಳ್ಳಿ. 10- 15 ಬಾರಿ ದೀರ್ಘವಾಗಿ ಉಸಿರಾಡಿ. ಇಲ್ಲವೇ ಸಣ್ಣದೊಂದು ವಾಕಿಂಗ್ ಹೋಗಿ ಬನ್ನಿ ಅಥವಾ ಹಾಸ್ಯ ಲೇಖನ ಓದಿ. ಇದು ನಿಮ್ಮ ಮನಸ್ಸನ್ನು ರಿಫ್ರೆಶ್ ಮಾಡುತ್ತದೆ.
ಜ್ಞಾನ ಭಂಡಾರ ಹೆಚ್ಚಿಸಿಕೊಳ್ಳಬೇಕು. ಯಾವುದೇ ಕ್ಷೇತ್ರವಿರಲಿ. ಹೊಸ ಹೊಸ ವಿಷಯಗಳನ್ನು ತಿಳಿದುಕೊಳ್ಳುವುದರಲ್ಲಿ ತಪ್ಪಿಲ್ಲ. ಜ್ಞಾನ ಎಂಬುದು ಎಲ್ಲೇ ಇದ್ದರೂ ಅದನ್ನು ಮುಕ್ತ ವಾಗಿ ನಮ್ಮ ಬಳಿ ಹರಿದುಬರಲು ಬಿಡಬೇಕು. ಇದರಿಂದ ನಾವು ಹೊಸತನಕ್ಕೆ ತೆರೆದುಕೊಳ್ಳುವುದು ಸುಲಭವಾಗುತ್ತದೆ.
ವಿಕೆ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.