ಪ್ರಯಾಗ್‌ರಾಜ್: ರಾಮ ನಾಮ ಬ್ಯಾಂಕ್!
Team Udayavani, Jan 22, 2019, 12:30 AM IST
ಅಲಹಾಬಾದ್: ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಕುಂಭಮೇಳದಲ್ಲಿ ವಿನೂತನ ಬ್ಯಾಂಕ್‌ವೊಂದು ಕಾರ್ಯನಿರ್ವಹಿಸುತ್ತಿದೆ. ಅದರ ಹೆಸರು ‘ರಾಮ ನಾಮ ಬ್ಯಾಂಕ್’!
ಈ ಬ್ಯಾಂಕ್‌ನಲ್ಲಿ ಹಣ, ಎಟಿಎಂ, ಚೆಕ್ ಬುಕ್‌ನ ಸುದ್ದಿಯೇ ಇರಲ್ಲ. ಏಕೆಂದರೆ, ಇಲ್ಲಿ ಹಣಕಾಸಿನ ವ್ಯವಹಾರವೇ ನಡೆಯುವುದಿಲ್ಲ. ಇಲ್ಲಿ ನಡೆಯುವುದು ಆಧ್ಯಾತ್ಮಿಕ ವ್ಯವಹಾರ. ಅಂದರೆ, ಮನಶಾÏಂತಿ ಹಾಗೂ ನೆಮ್ಮದಿಗಾಗಿ ಜನ ಈ ಬ್ಯಾಂಕ್‌ನಲ್ಲಿ ಖಾತೆ ತೆರೆಯುತ್ತಿದ್ದಾರೆ. ಇಲ್ಲಿ ಚಲಾವಣೆಯಾಗುವ ಏಕೈಕ ಕರೆನ್ಸಿಯೆಂದರೆ, ‘ಭಗವಾನ್ ಶ್ರೀರಾಮ.’
ಹೌದು, 20ನೇ ಶತಮಾನದ ಆರಂಭದಲ್ಲಿ ಈಶ್ವರ್ ಚಂದ್ರ ಎಂಬವರು ಆರಂಭಿಸಿದ್ದ ಬ್ಯಾಂಕ್ ಅನ್ನು ಈಗ ಅವರ ಮೊಮ್ಮಗ ಅಶುತೋಷ್ ನಿರ್ವಹಿಸುತ್ತಿದ್ದಾರೆ. ಒಂಬತ್ತು ದಶಕಗಳಿಂದ ಈ ಬ್ಯಾಂಕ್ ಕಾರ್ಯನಿರ್ವಹಿಸುತ್ತಿದೆ. ಪ್ರಸ್ತುತ ವಿವಿಧ ಧರ್ಮ ಹಾಗೂ ವಯೋಮಿತಿಯ ಸುಮಾರು ಒಂದು ಲಕ್ಷ ಖಾತೆದಾರರಿದ್ದಾರೆ.
ಕಾರ್ಯನಿರ್ವಹಣೆ ಹೇಗೆ?:
ಖಾತೆದಾರರಿಗೆ 108 ಕಾಲಂಗಳಿರುವ 30 ಪುಟಗಳ ಪುಸ್ತಿಕೆಯೊಂದನ್ನು ನೀಡಲಾಗುತ್ತದೆ. ಅದರಲ್ಲಿ ಅವರು ಪ್ರತಿ ದಿನ 108 ಬಾರಿ ‘ರಾಮ ನಾಮ’ವನ್ನು ಬರೆಯಬೇಕು. ಈ ಪುಸ್ತಿಕೆಯನ್ನು ಆಯಾ ಸದಸ್ಯನ ಖಾತೆಯಲ್ಲಿ ಡೆಪಾಸಿಟ್ ಮಾಡಲಾಗುತ್ತದೆ. ಇತರೆ ಬ್ಯಾಂಕ್‌ಗಳಂತೆ ಪಾಸ್‌ಬುಕ್‌ಗಳನ್ನೂ ವಿತರಿಸಲಾಗುತ್ತದೆ. ಖಾತೆಯ ಪ್ರಮಾಣವು ರಾಮ ನಾಮದ ಸಂಖ್ಯೆಗಳನ್ನು ಆಧರಿಸಿರುತ್ತದೆ. ಇದನ್ನು ಲಿಖೀತ ಜಪ ಎಂದು ಹೇಳಲಾಗುತ್ತದೆ. ರಾಮ ನಾಮವನ್ನು ಬರೆಯುತ್ತಾ, ಬರೆಯುತ್ತಾ ಆ ವ್ಯಕ್ತಿಯು ಮನಶಾÏಂತಿಯನ್ನು ಗಳಿಸುವನು ಎನ್ನುತ್ತಾರೆ ಬ್ಯಾಂಕ್ ಮ್ಯಾನೇಜರ್ ಅಶುತೋಷ್.
ಈ ಬ್ಯಾಂಕ್19 ಕೋಟಿಗೂ ಅಧಿಕ ರಾಮನಾಮ ಡೆಪಾಸಿಟ್ಹೊಂದಿದೆ. ಇದರಲ್ಲಿ ಭಾರತೀಯರು ಮಾತ್ರವಲ್ಲದೆ ಅನಿವಾಸಿ ಭಾರತೀಯರು ಕೂಡ ಖಾತೆ ಹೊಂದಿದ್ದಾರೆ. ರಾಮನಾಮ ಬರೆಯುವಾಗ ಮಾಂಸಾಹಾರ, ನೀರುಳ್ಳಿ, ಬೆಳ್ಳುಳ್ಳಿ ವರ್ಜಿಸುವಂತಹ ಶರತ್ತುಗಳಿರುತ್ತವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jamia Millia Islamia: ಇಸ್ಲಾಂಗೆ ಮತಾಂತರಗೊಳ್ಳಿ ಅಥವಾ ಅತ್ಯಾಚಾರಕ್ಕೆ ಒಳಗಾಗಿ: ಭಾರಿ ಆರೋಪ
Jhansi Hospital: ಅಗ್ನಿ ದುರಂತ, ನವಜಾತ ಶಿಶುಗಳ ಸಜೀವ ದಹನ… ಮೋದಿ ಸಂತಾಪ, ಪರಿಹಾರ ಘೋಷಣೆ
Employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ
Air Pollution: ದಿಲ್ಲಿ ಗಾಳಿಯೇ ವಿಷ, ಒಂದು ದಿನದ ಉಸಿರಾಟ 25 ಸಿಗರೇಟಿಗೆ ಸಮ!
India: ಹಿರಿಯ ನಾಗರಿಕರ ಭದ್ರತೆಗೆ ಶೀಘ್ರ ಹೊಸ ನೀತಿ: ಕೇಂದ್ರ
MUST WATCH
ಹೊಸ ಸೇರ್ಪಡೆ
Jamia Millia Islamia: ಇಸ್ಲಾಂಗೆ ಮತಾಂತರಗೊಳ್ಳಿ ಅಥವಾ ಅತ್ಯಾಚಾರಕ್ಕೆ ಒಳಗಾಗಿ: ಭಾರಿ ಆರೋಪ
Belagavi: ವಿವಾಹಿತ ಮಹಿಳೆ ಮತ್ತು ತಾಯಿಯ ಸೀರೆ ಬಿಚ್ಚಿ ಹಲ್ಲೆ ನಡೆಸಿದ ನೆರೆಹೊರೆಯವರು!
Tamil Director: ಖ್ಯಾತ ತಮಿಳು ಚಿತ್ರ ನಿರ್ದೇಶಕ ಸುರೇಶ್ ಸಂಗಯ್ಯ ವಿಧಿವಶ
SMAT 2024: ಸಯ್ಯದ್ ಮುಷ್ತಾಕ್ ಅಲಿ ಕೂಟಕ್ಕೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ
ಹೆದ್ದಾರಿ ತಡೆ ನಡೆಸಿದ ಆರೋಪ; ಸುಳ್ಯ, ಬೈಂದೂರು ಶಾಸಕರ ಸಹಿತ ಹಲವರ ವಿರುದ್ಧ ಪ್ರಕರಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.