ಸಿನಿಮಾ ಬಗ್ಗೆ ಸ್ವಾಮೀಜಿ ಮಾತು
Team Udayavani, Jan 22, 2019, 6:00 AM IST
ತುಮಕೂರು ಸಿದ್ಧಗಂಗಾ ಮಠದ ಶ್ರೀ ಶಿವಕುಮಾರ ಮಹಾಸ್ವಾಮಿಗಳು ಈ ಹಿಂದೆ ಜಿ.ಮೂರ್ತಿ ನಿರ್ದೇಶನದ “ಸಿದ್ಧಗಂಗಾ’ ಚಿತ್ರದ ಧ್ವನಿಸುರುಳಿ ಬಿಡುಗಡೆ ಮಾಡಿದ್ದರು. ಅಷ್ಟೇ ಅಲ್ಲ, ಆ ಚಿತ್ರ ವೀಕ್ಷಿಸುವ ಮೂಲಕ ತಮಗಿರುವ ಕನ್ನಡ ಚಿತ್ರರಂಗದ ಮೇಲಿನ ಪ್ರೀತಿಯನ್ನೂ ತೋರಿಸಿದ್ದರು.
ಅಂದು “ಸಿದ್ಧಗಂಗಾ’ ಚಿತ್ರದ ಆಡಿಯೋ ಬಿಡುಗಡೆ ಮಾಡಿದ್ದ ಶ್ರೀಗಳು, ಚಿತ್ರರಂಗ ಮತ್ತು ಕನ್ನಡ ಚಿತ್ರಗಳ ಕುರಿತು ಮಾತನಾಡಿದ್ದರು. “ಅನಾಗರಿಕ ಮನುಷ್ಯ ಕ್ರಮೇಣ ನಾಗರಿಕನಾಗುತ್ತಾ ಬಂದ. ಈಗ ಸಮಾಜದಲ್ಲಿ ಮೊದಲ ಸ್ಥಾನದಲ್ಲಿದ್ದಾನೆ. ಎಲ್ಲಾ ಕ್ಷೇತ್ರದಲ್ಲೂ ಕೈ ಹಾಕಿ ಯಶಸ್ಸು ಕಂಡಿದ್ದಾನೆ.
ಹಲವು ಚಿತ್ರಗಳ ಮೂಲಕ ಸಾಮಾಜಿಕ ಸಮಸ್ಯೆಗಳನ್ನು ಎತ್ತಿ ಹಿಡಿದು ಒಂದಷ್ಟು ಪ್ರಗತಿಗೆ ಕಾರಣನಾಗಿದ್ದಾನೆ. ಈ ಚಿತ್ರರಂಗದ ಮೂಲಕ ಎಲ್ಲವನ್ನೂ ಹೇಳಲು ಸಾಧ್ಯವಿದೆ. ಒಳ್ಳೆಯ ಸಂದೇಶವಿರುವ ಚಿತ್ರಗಳನ್ನು ಕೊಡುವುದರ ಜತೆಯಲ್ಲಿ ಸಮಾಜದಲ್ಲಿರುವ ಭ್ರಷ್ಟತೆಯನ್ನು ಹೋಗಲಾಡಿಸುವಲ್ಲಿಯೂ ಮುಂದಾಗುವ ಅಗತ್ಯವಿದೆ’ ಎಂದಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Karkala: ಗೋವಾ ಮದ್ಯ ಅಕ್ರಮ ದಾಸ್ತಾನು ಪ್ರಕರಣ; ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚನೆ
Karkala: ದ್ವೇಷ ಭಾವನೆ ಕೆರಳಿಸುವ ಆರೋಪ; ದೂರು ದಾಖಲು
PoK ಪ್ರದೇಶದಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು: ಬಿಸಿಸಿಐ ನಿಂದ ತೀವ್ರ ಖಂಡನೆ
Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್.ಅಶೋಕ್
50 cr for 50 Cong MLAs ; ಎಸ್ ಐಟಿ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ಒತ್ತಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.