11 ವರ್ಷಗಳ ಹಿಂದೆ ದಾವಣಗೆರೆಗೆ ಆಗಮಿಸಿದ್ದ ದೇವರು!
Team Udayavani, Jan 22, 2019, 6:14 AM IST
ದಾವಣಗೆರೆ: ಸೋಮವಾರ ದೇವರ ಭೇಟಿಗೆ ತೆರಳಿರುವ ನಡೆದಾಡುವ ದೇವರು…. ತುಮಕೂರಿನ ಸಿದ್ದಗಂಗಾ ಮಠದ ಡಾ| ಶಿವಕುಮಾರ ಸ್ವಾಮೀಜಿಯವರು ಬರೋಬ್ಬರಿ 11 ವರ್ಷಗಳ ಹಿಂದೆ ಅಂದರೆ 21-1-2007 ರಂದು ದಾವಣಗೆರೆಗೆ ಆಗಮಿಸಿದ್ದರು!
ರಾಂ ಆ್ಯಂಡ್ ಕೋ ವೃತ್ತದಲ್ಲಿರುವ ಶ್ರೀ ವರಸಿದ್ಧಿ ವಿನಾಯಕ ದೇವಸ್ಥಾನದ ಕಳಸಾರೋಹಣ ಕಾರ್ಯಕ್ರಮಕ್ಕೆ ಡಾ| ಶಿವಕುಮಾರ ಸ್ವಾಮೀಜಿಯವರು ಆಗಮಿಸಿದ್ದರು. 11 ವರ್ಷಗಳ ನಂತರ ಅದೇ ದಿನ (21.1.2019) ಡಾ| ಶಿವಕುಮಾರ ಸ್ವಾಮೀಜಿಯವರು ಶಿವೈಕ್ಯರಾಗಿರುವುದು ಆಕಸ್ಮಿಕವೋ…, ಕಾಕತಾಳಿಯವೋ… ಅಚ್ಚರಿಯೋ…, ದೈವ ಇಚ್ಛೆಯೋ… ಎನ್ನುವ ಭಾವನೆ ದಾವಣಗೆರೆಯ ಭಕ್ತಾದಿಗಳದ್ದಾಗಿದೆ.ಆಗಲೇ ಶತಾಯುಷಿಗಳಾಗಿದ್ದ ಡಾ| ಶಿವಕುಮಾರ ಸ್ವಾಮೀಜಿಯವರು 2 ಗಂಟೆಗೂ ಅಧಿಕ ಕಾಲ ದಾವಣಗೆರೆಯಲ್ಲಿದ್ದರು.
ಡಾ| ಶಿವಕುಮಾರ ಸ್ವಾಮೀಜಿಯವರ ನೇತೃತ್ವದಲ್ಲೇ ಶ್ರೀ ವರಸಿದ್ಧಿ ವಿನಾಯಕ ದೇವಸ್ಥಾನದ ಕಳಸಾರೋಹಣ ಕಾರ್ಯಕ್ರಮ ನೆರವೇರಿದವು. ಕಳಸಾರೋಹಣ ಕಾರ್ಯಕ್ರಮವನ್ನು ಸಾಂಗೋಪವಾಗಿ ನೆರವೇರಿಸಿದ ನಂತರ ವೇದಿಕೆ ಕಾರ್ಯಕ್ರಮದಲ್ಲಿ ಆಶೀವರ್ಚನ ನೀಡಿದ್ದರು. ಡಾ| ಶಿವಕುಮಾರ ಸ್ವಾಮೀಜಿಯವರ ದಾವಣಗೆರೆಯ ಭೇಟಿ ಅದುವೇ ಕೊನೆ.
ಶ್ರೀ ವರಸಿದ್ಧಿ ವಿನಾಯಕ ದೇವಸ್ಥಾನದ ಕಳಸಾರೋಹಣ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಡಾ| ಶಿವಕುಮಾರ ಸ್ವಾಮೀಜಿಯವರು ನಗರಸಭೆ ಮಾಜಿ ಅಧ್ಯಕ್ಷ ಜಂಬಗಿ ಶರಣಪ್ಪ ಅವರ ನಿವಾಸಕ್ಕೆ ಪಾದಪೂಜೆಗೆ ತೆರಳಿದ್ದರು.
ಪಾದಪೂಜೆ ಕಾರ್ಯಕ್ರಮ ಮುಗಿದ ನಂತರ ಬಹು ಕಾಲ ಇದ್ದ ಡಾ| ಶಿವಕುಮಾರ ಸ್ವಾಮೀಜಿಯವರು ಸರ್ವರಿಗೂ ದರ್ಶನ, ಆಶೀರ್ವಾದ ಭಾಗ್ಯ ನೀಡಿದ್ದರು. ಸಾಕಷ್ಟು ಹೊತ್ತು ಕಳೆದ ಡಾ| ಶಿವಕುಮಾರ ಸ್ವಾಮೀಜಿಯವರು ಎಲ್ಲರೂ ಸಂತೃಪ್ತಗೊಂಡ ನಂತರವೇ ತುಮಕೂರಿಗೆ ತೆರಳಿದರು ಎಂದು ಜಂಬಗಿ ಶರಣಪ್ಪ ಅವರ ಪುತ್ರ ರಾಧೇಶ್ ಮತ್ತು ಸೊಸೆ ಜ್ಯೋತಿ ಸ್ಮರಿಸುತ್ತಾರೆ.
ಡಾ| ಶಿವಕುಮಾರ ಸ್ವಾಮೀಜಿಯವರು ಮನೆಗೆ ಬಂದು, ಪಾದಪೂಜೆಯಲ್ಲಿ ಭಾಗವಹಿಸಿ ತೆರಳಿದ ನಂತರ ಮನೆಯಲ್ಲಿ ಒಂದು ರೀತಿಯ ಧನಾತ್ಮಕ ಶಕ್ತಿಯ ಅಂಶದ ಭಾವನೆ ಈ ಕ್ಷಣಕ್ಕೂ ಬರುತ್ತದೆ. ಹಾಗಾಗಿಯೇ ಡಾ| ಶಿವಕುಮಾರ ಸ್ವಾಮೀಜಿಯವರ ಪಾದಪೂಜೆ ನೆರವೇರಿದ ಸ್ಥಳವನ್ನು ಅತ್ಯಂತ ಜತನದಿಂದ ಕಾಪಾಡಲಾಗುತ್ತಿದೆ. ಮನೆಯ ದುರಸ್ತಿ ಸಂದರ್ಭದಲ್ಲೂ ಆ ಜಾಗಕ್ಕೆ ಯಾರೂ ಕಾಲಿಡದಂತೆ ನಿಗಾವಹಿಸಲಾಗಿತ್ತು. ಆ ಜಾಗ ತಮ್ಮ ಕುಟುಂಬಕ್ಕೆ ಅಷ್ಟೊಂದು ಪೂಜ್ಯನೀಯವಾಗಿದೆ ಎಂದು ಜ್ಯೋತಿ ಜಂಬಗಿ ಸ್ಮರಿಸುತ್ತಾರೆ.
ಶ್ರೀ ವರಸಿದ್ಧಿ ವಿನಾಯಕ ದೇವಸ್ಥಾನದ ಕಳಸಾರೋಹಣ ಕಾರ್ಯಕ್ರಮದ ನಂತರ ಡಾ| ಶಿವಕುಮಾರ ಸ್ವಾಮೀಜಿಯವರು ಸಾರ್ವತ್ರಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿಲ್ಲ. ಕೈಗಾರಿಕೋದ್ಯಮಿ ಎಸ್.ಎಸ್. ಗಣೇಶ್ ಪುತ್ರಿಯ ವಿವಾಹ ಸಂದರ್ಭದಲ್ಲಿ ಪಾದಪೂಜೆಗೆ ಆಗಮಿಸಿದ್ದರು. ಸ್ಫೂರ್ತಿ ಪ್ರಕಾಶನದ 16ನೇ ವಾರ್ಷಿಕೋತ್ಸವಕ್ಕೆ ಡಾ| ಶಿವಕುಮಾರ ಸ್ವಾಮೀಜಿಯವರನ್ನು ಆಹ್ವಾನಿಸಲಾಗಿತ್ತು. ಆದರೆ, ಆರೋಗ್ಯದ ಕಾರಣಕ್ಕೆ ಡಾ| ಶಿವಕುಮಾರ ಸ್ವಾಮೀಜಿಯವರು ಕಾರ್ಯಕ್ರಮಕ್ಕೆ ಆಗಮಿಸದೇ ಇದ್ದರೂ…. ನನ್ನ ಆಶೀರ್ವಾದ ಸದಾ ನಿಮ್ಮೊಂದಿಗೆ ಇರುತ್ತದೆ. ಕಾರ್ಯಕ್ರಮ ನಡೆಸಿ… ಎಂದು ಆಶೀರ್ವದಿಸಿದ್ದರು. ಕಾರ್ಯಕ್ರಮದ ನಂತರ ಸಿದ್ದಗಂಗಾ ಮಠಕ್ಕೆ ತೆರಳಿದ್ದಾಗ ಸನ್ಮಾನಿಸಿ, ಕಾರ್ಯಕ್ರಮದ ಬಗ್ಗೆ ವಿಚಾರಿಸಿದ್ದರು ಎಂದು ಸ್ಫೂರ್ತಿ ಪ್ರಕಾಶನದ ಎಂ. ಬಸವರಾಜ್ ಸ್ಮರಿಸುತ್ತಾರೆ.
ಶ್ರೀಗಳನ್ನು ನೋಡಿದ್ದೇ ನಮ್ಮ ಪುಣ್ಯ
ದಾವಣಗೆರೆ: ಈ ಶತಮಾನದ ಶಿವಯೋಗಿ, ನಡೆದಾಡುವ ದೇವರು ಎಂದೇ ಹೆಸರುವಾಸಿ ಯಾಗಿದ್ದ ಸಿದ್ಧಗಂಗಾ ಮಠದ ಶ್ರೀ ಶಿವಕುಮಾರ ಮಹಾಸ್ವಾಮೀಜಿಗಳು ಲಿಂಗೈಕ್ಯರಾಗಿರುವುದು ಕರ್ನಾಟಕದ ಜನತೆಗೆ ಅತೀವ ದುಃಖವನ್ನು ಉಂಟು ಮಾಡಿದೆ. ಜಾತಿ, ಮತದ ಭೇದವಿಲ್ಲದೆ
ಲಕ್ಷಾಂತರ ವಿದ್ಯಾರ್ಥಿಗಳಿಗೆ ಅಕ್ಷರ ಹಾಗೂ ಅನ್ನ ದಾಸೋಹ ಕಲ್ಪಿಸಿದ ದಿವ್ಯ ಚೇತನ ಶಿವಕುಮಾರ ಶ್ರೀಗಳು. ವಿಧಾನ
ಪರಿಷತ್ ಆಗ್ನೇಯ ಪದವೀಧರ ಕ್ಷೇತ್ರದ ಪ್ರತಿನಿಧಿಯಾಗಿದ್ದಾಗ ಶ್ರೀಗಳ ದರ್ಶನಾಶೀರ್ವಾದ ಪಡೆಯುವ ಸೌಭಾಗ್ಯ ನನ್ನದಾಗಿತ್ತು.
ಶ್ರೀಮಠಕ್ಕೆ ಯಾರೇ ಬಂದರೂ ಅವರಿಗೆ ಪ್ರಸಾದ ಸ್ವೀಕರಿಸಿ ಎಂಬುದಾಗಿ ಹೇಳುತ್ತಿದ್ದರು. ಆರೋಗ್ಯ ಕ್ಷೀಣಿಸುತ್ತಿದ್ದರೂ ನಿತ್ಯವೂ ತ್ರಿಕಾಲ ಪೂಜೆ ತಪ್ಪಿಸಲಿಲ್ಲ. ಶ್ರೀಗಳು ತಮ್ಮ ಆಶೀರ್ವಚನದಲ್ಲಿ ಭರತ ಖಂಡ ಎಂದು ಉಲ್ಲೇಖೀಸಿ,ದೇಶಭಕ್ತಿ, ಸಂಸ್ಕೃತಿ ಬಗ್ಗೆ ತಿಳಿಸುತ್ತಿದ್ದರು. ಶ್ರೀಗಳು, ಅಟಲ್ ಬಿಹಾರಿ ವಾಜಪೇಯಿ ಅವರನ್ನ ಮೆಚ್ಚಿಕೊಂಡಿದ್ದರು. 1996ರಲ್ಲಿ ವಾಜಪೇಯಿಯವರು 13 ದಿನ ಪ್ರಧಾನಿಯಾಗಿ ರಾಜೀನಾಮೆ ನೀಡಿದಾಗ ಬಹಳ
ನೊಂದುಕೊಂಡಿದ್ದರು. ಉತ್ತರಾಯಣ ಪುಣ್ಯಕಾಲಕ್ಕಾಗಿ ಕಾದು ಶ್ರೀಗಳು ಇಚ್ಛಾಮರಣಿಯಾಗಿ ನಮ್ಮನ್ನಗಲಿದ್ದಾರೆ. ನಡೆದಾಡುವ ದೇವರನ್ನ ನಾವು ನೋಡಿದೆವು ಎಂಬುದೇ ನಮ್ಮ ಪುಣ್ಯ. ತ್ರಿವಿಧ ದಾಸೋಹಿ ಶಿವಕುಮಾರ ಶ್ರೀಗಳಿಗೆ ಕೇಂದ್ರ ಸರ್ಕಾರ ಭಾರತ ರತ್ನ ಘೋಷಿಸಿ, ಆ ಪ್ರಶಸ್ತಿಯ ಗೌರವ ಹೆಚ್ಚಿಸಲಿ ಎಂದು ಕೋರುವೆ.
ಡಾ| ಎ.ಎಚ್.ಶಿವಯೋಗಿಸ್ವಾಮಿ, ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davanagere: ವೃದ್ಧೆ ಮೇಲೆ ಅತ್ಯಾ*ಚಾರ; ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ
Davanagere: ಬಿಜೆಪಿ-ಕಾಂಗ್ರೆಸ್ ಹೊಂದಾಣಿಕೆ ಆರೋಪದ ಬಗ್ಗೆ ರೇಣುಕಾಚಾರ್ಯ ಸ್ಪಷ್ಟನೆ
Davanagere; ಉಸ್ತುವಾರಿ ಸಚಿವರ ಬದಲಾವಣೆಗೆ ಸಿಎಂಗೆ ಪತ್ರ ಬರೆದ ಚನ್ನಗಿರಿ ಕಾಂಗ್ರೆಸ್ ಶಾಸಕ
Davangere: 2021ರಲ್ಲಿ ಅಪ್ರಾಪ್ತೆಯನ್ನು ಅಪಹರಿಸಿ ಅತ್ಯಾಚಾರವೆಸಗಿದ್ದವನಿಗೆ ಶಿಕ್ಷೆ ಪ್ರಕಟ
Davanagere: ಪಾಠ ಮಾಡುತ್ತಿದ್ದಾಗಲೇ ಹೃದಯಾಘಾತ; ಶಿಕ್ಷಕ ಸಾವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Intervention: ಗೃಹ ಇಲಾಖೆಯಲ್ಲಿ ಯಾರ ಹಸ್ತಕ್ಷೇಪವೂ ಇಲ್ಲ: ಸಚಿವ ಪರಮೇಶ್ವರ್
Encounter: ಉತ್ತರಪ್ರದೇಶದಲ್ಲಿ ಎನ್‌ಕೌಂಟರ್: 3 ಶಂಕಿತ ಖಲಿಸ್ಥಾನಿ ಉಗ್ರರ ಹತ್ಯೆ
Investment: 9.8 ಸಾವಿರ ಕೋಟಿ ರೂ. 9 ಯೋಜನೆಗೆ ಒಪ್ಪಿಗೆ: ಸಿಎಂ ಸಿದ್ದರಾಮಯ್ಯ
Growers Meet: ಕಾಫಿಗೆ ಜಗತ್ತಿನೆಲ್ಲೆಡೆ ಮಾರುಕಟ್ಟೆ ಸೃಷ್ಟಿ ಅಗತ್ಯ: ಪಿಯೂಷ್ ಗೋಯಲ್
Congress Government: ಸಿದ್ದರಾಮಯ್ಯ ಅವಧಿಯಲ್ಲೇ ದ್ವೇಷದ ರಾಜಕಾರಣ ಬೇಸರ ತಂದಿದೆ: ಸೋಮಣ್ಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.