ತವರು ಜಿಲ್ಲೆಯಲ್ಲಿ ಸಿದ್ಧಗಂಗಾಶ್ರೀಗಳ ಶೈಕ್ಷಣಿಕ ಒಡನಾಟ


Team Udayavani, Jan 22, 2019, 7:13 AM IST

3.jpg

ರಾಮನಗರ: ನಡೆದಾಡುವ ದೇವರು ಶ್ರೀಸಿದ್ಧಗಂಗಾ ಶ್ರೀಗಳು ಸೋಮವಾರ ಶಿವೈಕ್ಯರಾಗಿದ್ದಾರೆ. ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ವೀರಾಪುರದಲ್ಲಿ ಜನಸಿದ ಈ ಮಹಾಚೇತನಕ್ಕೆ ಜಿಲ್ಲೆಯ ನಾಗರಿಕರು ಕಣ್ಣೀರು ಮಿಡಿದಿದ್ದಾರೆ. ವಿಶ್ವವೇ ಕೊಂಡಾಡಿದ ಇಂತಹ ಮೇರು ವ್ಯಕ್ತಿತ್ವವನ್ನು ಪಡೆದ ನಾವೇ ಧನ್ಯರು ಎಂದು ಜಿಲ್ಲೆಯ ನಾಗರಿಕರು ಪ್ರತಿಕ್ರಿಯಿಸಿದ್ದಾರೆ.

ಸಿದ್ಧಗಂಗಾ ಮಠದ ಶ್ರೀಶಿವಕುಮಾರ ಸ್ವಾಮೀಜಿ ಮತ್ತು ಆದಿಚುಂಚನಗಿರಿ ಮಠಾಧೀಶರಾಗಿದ್ದ ಶ್ರೀಬಾಲಗಂಗಾಧರ ನಾಥ ಸ್ವಾಮೀಜಿ ಅವರು ಧಾರ್ಮಿಕ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅನನ್ಯ. ಇಬ್ಬರು ಮೇರು ಪುರುಷರನ್ನು ಜಿಲ್ಲೆ ಕೊಡುಗೆ ನೀಡಿದ್ದು, ವಿಶ್ವ ಇಬ್ಬರನ್ನು ಸ್ಮರಿಸುತ್ತಿದೆ.

ಜಿಲ್ಲೆಯಲ್ಲಿ ಶಿಕ್ಷಣ ಕೇಂದ್ರಗಳ ಸ್ಥಾಪನೆ: ನಡೆದಾಡುವ ದೇವರು, ತ್ರಿವಿಧ ದಾಸೋಹಿ, ಕಾರುಣ್ಯ ಕಡಲು, ಸಿದ್ಧಪುರುಷ ಎಂದು ಬಿರುದು ಪಡೆದಿರುವ ಡಾ.ಶ್ರೀ ಶಿವಕುಮಾರಸ್ವಾಮೀಜಿ ಅವರ ತವರು ಜಿಲ್ಲೆ ರಾಮನಗರ. ತವರು ಜಿಲ್ಲೆ ಎಂಬ ನಂಟಿಲ್ಲದೆ, ಶೈಕ್ಷಣಿಕವಾಗಿಯೂ ಅವರ ಬಾಂಧವ್ಯ ಜಿಲ್ಲೆಯೊಂದಿಗಿದೆ. ಸಂಸ್ಕೃತ ಪಾಠ ಶಾಲೆಗಳು, ಪ್ರಾಥಮಿಕ, ಪ್ರೌಢಶಾಲೆಗಳು, ಕಾಲೇಜುಗಳ ಜಿಲ್ಲೆಯಲ್ಲಿ ಅವರು ಸ್ಥಾಪಿಸಿದ್ದಾರೆ.

ಸ್ವಾಮೀಜಿಗಳ ತವರು ತಾಲೂಕು ಮಾಗಡಿಯಲ್ಲಿ ನಾರಸಂದ್ರ, ಬ್ಯಾಲೆಕೆರೆ, ಗುಡೇಮಾರನಹಳ್ಳಿ, ಕುದೂರು, ಕಂಚುಗಲ್‌ ಬಂಡೇಮಠಗಳಲ್ಲಿ ಸಂಸ್ಕೃತಿ ಪಾಠ ಶಾಲೆಗಳನ್ನು ಶ್ರೀಗಳು ಸ್ಥಾಪಿಸಿದ್ದಾರೆ. ಮಾಗಡಿ ತಾಲೂಕಿನ ಗುಡೇಮಾರನಹಳ್ಳಿ ಹ್ಯಾಂಡ್‌ ಪೋಸ್ಟ್‌, ಸೋಲೂರು, ರಾಮನಗರ ತಾಲೂಕಿನ ದೊಡ್ಡಗಂಗವಾಡಿಗಳಲ್ಲಿ ಪ್ರೌಢಶಾಲೆಗಳನ್ನು ಸ್ಥಾಪಿಸಿ ತಮ್ಮ ತವರು ಜಿಲ್ಲೆಯೊಂದಿಗೆ ಶೈಕ್ಷಣಿಕ ಬಾಂಧವ್ಯವನ್ನು ಹೊಂಡಿದ್ದರು.

ಧರ್ಮ ಪ್ರಚಾರಕ್ಕೆ ಭೇಟಿ: ಸಮಾಜದಲ್ಲಿದ್ದ ಮೂಢನಂಬಿಕೆ, ಅಸ್ಪೃಶ್ಯತೆಗಳ ಬಗ್ಗೆ ಸಮಾಜದಲ್ಲಿ ಜಾಗೃತಿ ಮೂಡಿಸುತ್ತಾ, ಬಸವ ಧರ್ಮ ಪ್ರಚಾರಕ್ಕೆ ಅವರು ಹಲವು ಬಾರಿ ರಾಮನಗರಕ್ಕೆ ಭೇಟಿ ನೀಡಿದ್ದಾರೆ. ದಶಕದಿಂದೀಚೆಗೆ ಅವರು ಜಿಲ್ಲೆಯ ಕಡೆ ಬರಲಾಗಲಿಲ್ಲ ಎಂದು ಅವರ ಭಕ್ತವೃಂದ ಹೇಳಿದೆ. ಅದಕ್ಕೂ ಮುನ್ನ ರಾಮನಗರಕ್ಕೆ ಹಲವು ಬಾರಿ ಬಸವಜಯಂತಿ ಆಚರಣೆಗೆ ಆಗಮಿಸಿದ್ದರು.

ದೇಗುಲ ಮಠದೊಂದಿಗೆ ಬಾಂಧವ್ಯ: ಜಿಲ್ಲೆಯ ಕನಕಪುರ ತಾಲೂಕಿನ ಶ್ರೀದೇಗುಲ ಮಠದೊಂದಿಗೆ ಅವರ ಒಡನಾಟ ಹೆಚ್ಚಾಗಿತ್ತು. ಶ್ರೀ ಶಿವಕುಮಾರ ಸ್ವಾಮೀಜಿ ಅವರ ಗುರುಗಳಾಗಿದ್ದ ಶ್ರೀಉದ್ದಾನ ಶಿವಯೋಗಿಗಳ ಶಿಷ್ಯರಾಗಿದ್ದ ಶ್ರೀನಿರ್ವಾಣ ಮಾಹ ಸ್ವಾಮೀಜಿ ಅವರು 1974ರಲ್ಲಿ ದೇಗುಲ ಮಠದ ಉಸ್ತುವಾರಿವಹಿಸಿಕೊಂಡರು. ತದನಂತರ ಶ್ರೀ ಇಮ್ಮಡಿ ಮಹಾಲಿಂಗೇಶ್ವರ ಸ್ವಾಮೀಜಿ ಅವರು ದೇಗುಲ ಮಠದ ಉಸ್ತುವಾರಿವಹಿಸಿಕೊಂಡರು.

ಸಿದ್ಧಗಂಗಾ ಶ್ರೀಗಳಿಗೆ ಇವರೊಂದಿಗೆ ಆತ್ಮೀಯತೆಯಿತ್ತು. ಇಬ್ಬರು ಸಮಕಾಲೀನರು. ಒಂದೇ ಗುರುಗಳ ಶಿಷ್ಯರು. ಹೀಗಾಗಿ ದೇಗುಲ ಮಠದಲ್ಲಿ ನಡೆಯುವ ಕಾರ್ಯಕ್ರಮಗಳಿಗೆ ಸಿದ್ಧಗಂಗಾಶ್ರೀಗಳ ಹಾಜರಾಗುತ್ತಿದ್ದರು ಎಂದು ಶ್ರೀಮಠದ ಭಕ್ತರಲ್ಲೊಬ್ಬರಾದ ನಿವೃತ್ತ ಸಂಸ್ಕೃತ ಶಿಕ್ಷಕ ಸಿ.ಎಂ. ಕೆಂಪಯ್ಯ ಸ್ಮರಿಸುತ್ತಾರೆ.

ಬೆಟ್ಟಳ್ಳಿ, ಅಂಕನಹಳ್ಳಿ ಮತ್ತು ಬಂಡೇ ಮಠದ ಸ್ವಾಮೀಜಿಗಳು, ದೇಗುಲ ಮಠದ ಹಾಲಿ ಉಸ್ತುವಾರಿ ನೋಡಿಕೊಳ್ಳುತ್ತಿರುವ ಶ್ರೀಇಮ್ಮಡಿ ನಿರ್ಮಾಣ ಸ್ವಾಮೀಜಿ ಮತ್ತು ಶ್ರೀಬಸಲವಲಿಂಗ ಸ್ವಾಮೀಜಿಗಳು ಸಹ ಶ್ರೀ ಶಿವಕುಮಾರ ಸ್ವಾಮೀಜಿ ಅರನ್ನು ಹತ್ತಿರದಿಂದ ಬಲ್ಲವರಾಗಿದ್ದಾರೆ ಎಂದು ಭಕ್ತರು ತಿಳಿಸಿದ್ದಾರೆ. 

ವೀರಾಪುರ ಮಾದರಿ ಗ್ರಾಮವಾಗಲಿಲ್ಲ: ಆದಿಚುಂಚನಗಿರಿ ಮಠಾಧೀಶ ಡಾ.ಬಾಲಗಂಗಾಧರನಾಥ ಸ್ವಾಮೀಜಿ ಅವರು 13 ಜನವರಿ 2013ರಲ್ಲಿ ನಿಧನರಾದಾಗ ಸರ್ಕಾರ ಬಾಲಗಂಗಾಧರನಾಥ ಸ್ವಾಮೀಜಿ ಅವರ ಹುಟ್ಟೂರು ರಾಮನಗರ ತಾಲೂಕು ಬಿಡದಿ ಹೋಬಳಿ ಬಾನಂದೂರು ಮತ್ತು ಶ್ರೀಸಿದ್ಧಗಂಗಾ ಶ್ರೀಶಿವಕುಮಾರ ಸ್ವಾಮೀಜಿ ಅವರ ಹುಟ್ಟೂರು

ಮಾಗಡಿ ತಾಲೂಕು ಕುದೂರು ಹೋಬಳಿ ವೀರಾಪುರ ಗ್ರಾಮಗಳಿಗೆ ಮೂಲ ಸೌಲಭ್ಯವನ್ನು ಕಲ್ಪಿಸುವ ಮೂಲಕ ಮಾದರಿ ಗ್ರಾಮಗಳನ್ನಾಗಿ ಪರಿವರ್ತಿಸಲು ನಿರ್ಧರಿಸಿ ಅನುದಾನ ಘೋಷಿಸಿತ್ತು. ಆದರೆ, ವರ್ಷಗಳು ಉರುಳಿದರು ಸರ್ಕಾರ ಮಾತ್ರ ತಾನು ಕೊಟ್ಟ ಮಾತು ಉಳಿಸಿಕೊಳ್ಳಲಿಲ್ಲ ಎಂದು ಜಿಲ್ಲೆಯ ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸರ್ಕಾರ ಈಗಲಾದರೂ ಎರಡೂ ಗ್ರಾಮಗಳನ್ನು ಮಾದರಿಯಾಗಿ ಪರಿವರ್ತಿಸಿ ಇಬ್ಬರೂ ಶ್ರೀಗಳಿಗೆ ಗೌರವ ಸಲ್ಲಿಸಬೇಕು ಎಂದು ಮನವಿ ಮಾಡಿದ್ದಾರೆ. 

ದೊಡ್ಡಗಂಗವಾಡಿಯಲ್ಲಿ ಶ್ರೀಗಳು ಸ್ಥಾಪಿಸಿದ ಪ್ರೌಢಶಾಲೆ: ಶಿಕ್ಷಣಕ್ಕೆ ಆದ್ಯತೆ ನೀಡಿದ್ದ ಶ್ರೀಸಿದ್ಧಗಂಗಾ ಮಠದ ಶ್ರೀಶಿವಕುಮಾರ ಸ್ವಾಮೀಜಿ ಅವರು ರಾಮನಗರ ತಾಲೂಕಿನ ದೊಡ್ಡಗಂಗವಾಡಿ ಗ್ರಾಮದಲ್ಲಿ ಪ್ರೌಢಶಾಲೆ ಸ್ಥಾಪಿಸಲು ಶ್ರಮಿಸಿದ್ದರು. ಶ್ರೀಗಳು ಇಲ್ಲಿ ಪ್ರೌಢಶಾಲೆ ಸ್ಥಾಪಿಸುವ ಉದ್ದೇಶವನ್ನು ಪ್ರಕಟಿಸುತ್ತಿದ್ದಂತೆ ಗ್ರಾಮದ ನಿವಾಸಿ ಗಂಗಾಧರಯ್ಯ ಎಂಬುವರು ತಮಗೆ ಸೇರಿದ 2 ಎಕರೆ ಭೂಮಿಯನ್ನು ಶಾಲೆ ನಿರ್ಮಾಣಕ್ಕಾಗಿ ನೀಡಿದರು.

ದಾನಿಗಳು ಮತ್ತು ಸಂಸದ ರಾಜಶೇಖರ ಮೂರ್ತಿ ಅವರ ಅನುದಾನದಲ್ಲಿ ಸ್ವಾಮೀಜಿ ಶಾಲೆಯ ಕಟ್ಟಡವನ್ನು ನಿರ್ಮಿಸಿ, ಪ್ರೌಢಶಾಲೆಯನ್ನು 1990ರಲ್ಲಿ ಸ್ಥಾಪಿಸಿದರು. ಪ್ರಸ್ತುತ ಶಾಲೆಯನ್ನು ತುಮಕೂರು ಜಿಲ್ಲೆ ಕ್ಯಾತಸಂದ್ರದ ಶ್ರೀಸಿದ್ಧಗಂಗಾ ಎಜುಕೇಷನಲ್‌ ಟ್ರಸ್ಟ್‌ ನಿರ್ವಹಿಸುತ್ತಿದೆ. ಶಾಲೆಯಲ್ಲಿ 91 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ ಎಂದು ಶಾಲೆ ಶಿಕ್ಷಕರು ಮಾಹಿತಿ ನೀಡಿದ್ದಾರೆ. 

ರಾಮನಗರ ಜಿಲ್ಲೆಯೊಂದಿಗೆ ಒಳ್ಳೆಯ ಒಡನಾಟ ಇದ್ದ ಸಿದ್ಧಗಂಗಾಶ್ರೀಗಳು ಹಲವು ಬಾರಿ ಭೇಟಿ ನೀಡಿದ್ದರು. ಬಸವ ಜಯಂತಿ ವೇಳೆ ಬಸವೇಶ್ವರರ ಕುರಿತು ನಾಟಕ ಪ್ರದರ್ಶನಗಳು ನಡೆಯುತ್ತಿತ್ತು. ಬಸವ ತತ್ವಗಳನ್ನು ಪ್ರತಿಪಾದಿಸುತ್ತಿದ್ದ ಶ್ರೀಗಳು ನಾಟಕ ಮುಗಿಯುವವರಿಗೂ ಜನರೊಂದಿಗೆ ಇರುತ್ತಿದ್ದರು. 
-ಚಂದ್ರಶೇಖರಯ್ಯ, ಪ್ರಾಂಶುಪಾಲರು, ಪಿರಂಗಿ ಸ್ವಾಮಿ ಸಂಸ್ಕೃತ ಶಾಲೆ, ಮೈಸೂರು

ಶ್ರೀಶಿವಕುಮಾರ ಸ್ವಾಮೀಜಿ ಅವರ ಸಾಮಾಜಿಕ ಕೈಂಕರ್ಯಗಳನ್ನು ಮನುಕುಲ ಸದಾ ಸ್ಮರಿಸುತ್ತದೆ. ರಾಮನಗರ ಜಿಲ್ಲೆಗೆ ಹಲವು ಶೈಕ್ಷಣಿಕ ಸಂಸ್ಥೆಗಳ ಕೊಡುಗೆ ನೀಡಿದ್ದಾರೆ. ಶಿಕ್ಷಣದ ಮೂಲಕ ಸಾಮಾಜಿಕ ಪರಿವರ್ತನೆ ಸಾಧ್ಯ ಎಂದು ನಿರೂಪಿಸಿದ್ದಾರೆ.
-ರಾಜಶೇಖರ್‌, ವೀರಶೈವ ಸಮಾಜದ ಜಿಲ್ಲಾಧ್ಯಕ್ಷ

* ಬಿ.ವಿ.ಸೂರ್ಯ ಪ್ರಕಾಶ್‌

ಟಾಪ್ ನ್ಯೂಸ್

ಶಸ್ತ್ರಾಸ್ರ ತ್ಯಜಿಸಿ ಕೂಡಲೇ ಶರಣಾಗಿ… ನಕ್ಸಲರಿಗೆ ಕೇಂದ್ರ ಸಚಿವ ಅಮಿತ್ ಶಾ ಮನವಿ

Surrender Arms: ಶಸ್ತ್ರಾಸ್ತ್ರ ತ್ಯಜಿಸಿ ಕೂಡಲೇ ಶರಣಾಗಿ… ನಕ್ಸಲರಿಗೆ ಅಮಿತ್ ಶಾ ಮನವಿ

Supreme Court slams Karnataka High Court judge for Pakistan statement

Karnataka HC: ಪಾಕಿಸ್ತಾನ ಹೇಳಿಕೆ ನೀಡಿದ ಹೈಕೋರ್ಟ್‌ ಜಡ್ಜ್‌ ಗೆ ಸುಪ್ರೀಂ ಕೋರ್ಟ್ ತರಾಟೆ

NS2

Stock Market: ಷೇರುಪೇಟೆ ಸೂಚ್ಯಂಕ ಸಾರ್ವಕಾಲಿಕ ದಾಖಲೆ ಏರಿಕೆ, ನಿಫ್ಟಿ ಜಿಗಿತ

INDvsBAN: Bangladesh team in fear of ICC punishment

INDvsBAN: ಟೆಸ್ಟ್‌ ಮೊದಲ ದಿನವೇ ಪ್ರಮಾದ; ಐಸಿಸಿ ಶಿಕ್ಷೆಯ ಭಯದಲ್ಲಿ ಬಾಂಗ್ಲಾದೇಶ ತಂಡ

Labanon: ಲೆಬನಾನ್‌ ಪ್ರಯಾಣಿಕರು ಪೇಜರ್ಸ್‌, ವಾಕಿಟಾಕಿ ಒಯ್ಯುವಂತಿಲ್ಲ: ಕತಾರ್‌ ಏರ್‌ ವೇಸ್

Labanon: ಲೆಬನಾನ್‌ ಪ್ರಯಾಣಿಕರು ಪೇಜರ್ಸ್‌, ವಾಕಿಟಾಕಿ ಒಯ್ಯುವಂತಿಲ್ಲ: ಕತಾರ್‌ ಏರ್‌ ವೇಸ್

Thirthahalli: ಮರವೇರಿ ಕುಳಿತ್ತಿದ್ದ ಹೆಬ್ಬಾವು… ಸ್ಥಳೀಯರಿಂದ ರಕ್ಷಣೆ

Thirthahalli: ಮರವೇರಿ ಕುಳಿತ 13 ಅಡಿ ಉದ್ದದ ಹೆಬ್ಬಾವು… ಸ್ಥಳೀಯರಿಂದ ರಕ್ಷಣೆ

3-bng

Bengaluru: ನಗರದಲ್ಲಿ 3 ವರ್ಷದಲ್ಲಿ 9700 ಮರಗಳ ಹನನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ರಾಜಕಾರಣಿಗಳನ್ನು ಹನಿಟ್ರ್ಯಾಪ್‌ ಮಾಡುತ್ತಿದ್ದರಾ ಮುನಿರತ್ನ?

ರಾಜಕಾರಣಿಗಳನ್ನು ಹನಿಟ್ರ್ಯಾಪ್‌ ಮಾಡುತ್ತಿದ್ದರಾ ಮುನಿರತ್ನ?

10

Channapatnam by-election: ಡಿಕೆಸು ಕೈ ಅಭ್ಯರ್ಥಿ ಮಾಡಲು ಕಾರ್ಯಕರ್ತರ ಒತ್ತಡ

ಮುನಿರತ್ನ ವಿರುದ್ಧ ಅತ್ಯಾಚಾರ, ಹನಿಟ್ರ್ಯಾಪ್ ಆರೋಪ‌ ಮಾಡಿದ ಮಹಿಳೆ; ಎಫ್‌ಐಆರ್

Munirathna: ಮುನಿರತ್ನ ವಿರುದ್ಧ ಅತ್ಯಾಚಾರ, ಹನಿಟ್ರ್ಯಾಪ್ ಆರೋಪ‌ ಮಾಡಿದ ಮಹಿಳೆ; ಎಫ್‌ಐಆರ್

Magadi: ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಕಾರು; ಒಂದೇ ಕುಟುಂಬ ಐವರು ಸಾವು

Magadi: ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಕಾರು; ಒಂದೇ ಕುಟುಂಬ ಐವರು ಸಾವು

cmNandini Milk ಮತ್ತಷ್ಟು ತುಟ್ಟಿ? ಶೀಘ್ರವೇ ದರ ಪರಿಷ್ಕರಣೆ: ಸಿದ್ದರಾಮಯ್ಯ ಸುಳಿವು

Nandini Milk ಮತ್ತಷ್ಟು ತುಟ್ಟಿ? ಶೀಘ್ರವೇ ದರ ಪರಿಷ್ಕರಣೆ: ಸಿದ್ದರಾಮಯ್ಯ ಸುಳಿವು

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Sullia: ಅಭಿವೃದ್ಧಿ ಕಾಣದ ಪೆರ್ಮಾಜೆ-ಕೋಟೆಗುಡ್ಡೆ-ಪಂಬೆತ್ತಾಡಿ ರಸ್ತೆ

Sullia: ಅಭಿವೃದ್ಧಿ ಕಾಣದ ಪೆರ್ಮಾಜೆ-ಕೋಟೆಗುಡ್ಡೆ-ಪಂಬೆತ್ತಾಡಿ ರಸ್ತೆ

10-bng

Bengaluru:ಟಿವಿ ರಿಪೇರಿಗೆ ಸ್ಪಂದಿಸದ ಎಲೆಕ್ಟ್ರಾನಿಕ್‌ಸರ್ವೀಸ್‌ ಸೆಂಟರ್‌ಗೆ 12 ಸಾವಿರ ದಂಡ!

Thumbe: ಅಗೆದಲ್ಲಿ ಕಡೆಗೂ ಡಾಮರು

Thumbe: ಅಗೆದಲ್ಲಿ ಕಡೆಗೂ ಡಾಮರು

9-bng

Bengaluru: ʼರಾಹುಲ್‌ ಭಯೋತ್ಪಾದಕ’ ಹೇಳಿಕೆ: ಕೇಂದ್ರ ಸಚಿವ ರವನೀತ್‌ ವಿರುದ್ಧ ಕೇಸ್‌

ಶಸ್ತ್ರಾಸ್ರ ತ್ಯಜಿಸಿ ಕೂಡಲೇ ಶರಣಾಗಿ… ನಕ್ಸಲರಿಗೆ ಕೇಂದ್ರ ಸಚಿವ ಅಮಿತ್ ಶಾ ಮನವಿ

Surrender Arms: ಶಸ್ತ್ರಾಸ್ತ್ರ ತ್ಯಜಿಸಿ ಕೂಡಲೇ ಶರಣಾಗಿ… ನಕ್ಸಲರಿಗೆ ಅಮಿತ್ ಶಾ ಮನವಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.