ರೆಸಾರ್ಟ್‌ ರಾದ್ಧಾಂತ: ಬಳ್ಳಾರಿ ರಾಜಕೀಯದ ಕರಿ ನೆರಳು


Team Udayavani, Jan 23, 2019, 12:30 AM IST

b-12.jpg

ಬಿಜೆಪಿ ಹಾಗೂ ಕಾಂಗ್ರೆಸ್‌ ಪಕ್ಷಗಳು ತಮ್ಮ ಶಾಸಕರನ್ನು ಬಾಹ್ಯ ಸಂಪರ್ಕದಿಂದ ವಿಮುಖಗೊಳಿಸಿ ರೆಸಾರ್ಟ್‌ಗಳು ಹಾಗೂ ಲಕ್ಷುರಿ ಹೊಟೇಲ್‌ಗ‌ಳಲ್ಲಿ ಕೂಡಿ ಹಾಕಿದ್ದನ್ನು ನೋಡಿದರೆ, ರಾಜ್ಯದ ಜನರು ಯಾವ ತೆರನ ವ್ಯಕ್ತಿಗಳನ್ನು ಆಯ್ಕೆ ಮಾಡುತ್ತಿದ್ದಾರೆಂದು ಅಚ್ಚರಿಪಡುವಂತಾಗುತ್ತದೆ. ನಮ್ಮ ಶಾಸಕರು ಆಮಿಷಗಳಿಗೆ ಬಲಿಯಾಗಿ ತಮ್ಮ ಪಕ್ಷಗಳಿಗೆ ದ್ರೋಹ ಬಗೆಯುವಷ್ಟು ದುರ್ಬಲರೆ? ಅಥವಾ ಭ್ರಷ್ಟರೆ?

ಬಳ್ಳಾರಿ ರಾಜಕಾರಣದ ಧೂಳು ಹಾಗೂ ರಾಡಿ ನಮ್ಮ ಇಡೀ ರಾಜ್ಯವನ್ನು ಮತ್ತು ಅದರ ರಾಜಕೀಯ ಸಂಸ್ಥೆಗಳನ್ನು ಮಲಿನಗೊಳಿಸುವ ಪ್ರಕ್ರಿಯೆ ಇನ್ನೂ ಮುಂದುವರಿದಿದೆ. ಮೊನ್ನೆ ಬೆಂಗಳೂರಿನ ಬಳಿಯ ಖಾಸಗಿ ರೆಸಾರ್ಟ್‌ನಲ್ಲಿ ಬಾಟ್ಲಿ ಕಾಳಗ ನಡೆಸಿದರೆನ್ನಲಾಗಿರುವ ಇಬ್ಬರು ಗೌರವಾನ್ವಿತ ಎಂ.ಎಲ್‌.ಎ.ಗಳು ಬಳ್ಳಾರಿ ಜಿಲ್ಲೆಯವರೇ. ಕುತೂಹಲಕಾರಿ ಸಂಗತಿಯೆಂದರೆ ಕರ್ನಾಟಕವನ್ನು ಈ ಹಿಂದೆ ಲಿಕ್ಕರ್‌ ಲಾಬಿ ಆಳುತ್ತಿದ್ದ ದಿನಗಳಲ್ಲಿ ಪಾನಮತ್ತ ಶಾಸಕರ ನಡುವೆ ಹೊಯ್‌ ಕೈ ಘಟನೆಗಳು ನಡೆದ ಬಗ್ಗೆ ಎಲ್ಲೂ ವರದಿಯಾಗಿಲ್ಲ.

ಹಾಗೆ ನೋಡಿದರೆ ಇದು ಕಾಂಗ್ರೆಸ್‌ ಪಕ್ಷದ ಆಂತರಿಕ ವಿಚಾರವೆಂದು ಅಥವಾ ಇದು ಕೇವಲ ಇಬ್ಬರು ವ್ಯಕ್ತಿಗಳ ನಡುವೆ ನಡೆದ ಜಗಳವೆಂದು ಈ ಘಟನೆಯನ್ನು ತಳ್ಳಿ ಹಾಕಿಬಿಡಬಹುದು. ಆದರೆ ವಿರೋಧ ಪಕ್ಷವಾದ ಬಿಜೆಪಿ ಇಂಥದೊಂದು ತೀರ್ಮಾನಕ್ಕೆ ಬರುವ ಮೂಲಕ ತನ್ನ ಹೊಣೆಗಾರಿಕೆಯಿಂದ ಜಾರಿಕೊಳ್ಳುವಂತಿಲ್ಲ. ಅಧಿಕಾರವನ್ನು ಮರಳಿ ದಕ್ಕಿಸಿಕೊಳ್ಳುವುದಕ್ಕಾಗಿ ಬಿಜೆಪಿ ಕಮಲ ಕಾರ್ಯಾಚರಣೆಗೆ ಪ್ರಯತ್ನಿಸುತ್ತಿದೆಯೆಂಬ ಕಾಂಗ್ರೆಸ್‌ ಹಾಗೂ ಜೆಡಿಎಸ್‌ಗಳ ಆರೋಪ ಕುರಿತಂತೆ ಯಾರೂ ಶಿಫಾರಸು ಪತ್ರ ನೀಡುವ ಅಗತ್ಯವಿಲ್ಲವೆಂಬುದೇನೋ ನಿಜವೇ. ಆದರೂ ಬಳ್ಳಾರಿ ಗಣಿ ದೊರೆಗಳನ್ನು ಸಚಿವರನ್ನಾಗಿ ನೇಮಿಸುವ ಮೂಲಕ ಗಣಿ ಮಾಫಿಯಾಕ್ಕೆ ಗೌರವ ತಂದುಕೊಡಲು ಪ್ರಯತ್ನಿಸಿದ್ದು ಸಾಕ್ಷಾತ್‌ ಬಿಜೆಪಿಯೇ. ಶನಿವಾರದ ಜಗಳಕಾದ ಶಾಸಕರಿಬ್ಬರೂ ಆ ಜಿಲ್ಲೆಯ ಗಣಿ ಉದ್ಯಮದ ನವಸಿರಿವಂತ ಪೀಳಿಗೆಯವರು; ಉಚ್ಛಾ†ಯಕ್ಕೆ ಏರುತ್ತಿರುವ ಗಣಿ ದೊರೆಗಳು. ಈ ಹಿಂದೆ ಇದೇ ಬಳ್ಳಾರಿ ಜಿಲ್ಲೆ ಎಂ.ವೈ. ಘೋರ್ಪಡೆಯವರಂಥ ಅತ್ಯಂತ ಗೌರವಾನ್ವಿತ ಶಾಸಕರನ್ನು ನೀಡಿತ್ತು. ಗಾಂಧೀವಾದಿ ಟೇಕೂರ್‌ ಸುಬ್ರಹ್ಮಣ್ಯ, ಪ್ರಖ್ಯಾತ ಅರ್ಥಶಾಸ್ತ್ರಜ್ಞ , ಹಾಗೂ ಕೇಂದ್ರ ಸಚಿವರಾಗಿದ್ದ ಡಾ| ವಿ.ಕೆ. ಆರ್‌. ವಿ. ರಾವ್‌ ಅಥವಾ ಮಾಜಿ ಸಚಿವ ಡಾ| ಆರ್‌. ನಾಗನ ಗೌಡರಂಥ ಉನ್ನತ ವ್ಯಕ್ತಿಗಳನ್ನು ಲೋಕಸಭೆಗೆ ಆಯ್ದು ಕಳಿಸಿತ್ತು. ಇಂದು ಈ ಜಿಲ್ಲೆ ಕಂಡಿರುವ ಪತನವಾದರೂ ಎಂಥದು! ರೆಸಾರ್ಟ್‌ ಘಟನೆಯ ಆಧಾರದಲ್ಲಿ ಹೇಳುವುದಾದರೆ, ಬಳ್ಳಾರಿ ಜಿಲ್ಲೆಯ ರಾಜಕೀಯ ದಡ್ಡ ಶಿಖಾಮಣಿಗಳ ಕೈಗೆ ಹೋಗಿದೆ.

ರಾಜ್ಯ ರಾಜಕೀಯದ ಶುಭ ಸಮಾಚಾರಗಳಲ್ಲಿ ಒಂದೆಂದರೆ, 2011ರ ಸೆಪ್ಟೆಂಬರ್‌ನಲ್ಲಿ ಮಾಜಿ ಸಚಿವ ಜನಾರ್ದನ ರೆಡ್ಡಿಯವರನ್ನು ಅಕ್ರಮ ಗಣಿಗಾರಿಕೆಯ ಆರೋಪದಡಿಯಲ್ಲಿ ಸಿಬಿಐ ಬಂಧಿಸಿದ ಘಟನೆ. ಇದರ ಕೀರ್ತಿ ಸಲ್ಲಬೇಕಿರುವುದು ಆಂಧ್ರ ಪ್ರದೇಶದ ಮಾಜಿ ಮುಖ್ಯಮಂತ್ರಿ ಕೆ. ರೋಸಯ್ಯ ಅವರಿಗೆ. ರೆಡ್ಡಿ ವಿರುದ್ಧದ ದೂರನ್ನು ಸಿಬಿಐಗೆ ಒಪ್ಪಿಸಿದವರು ಅವರು. ಒಂದು ರೀತಿಯಲ್ಲಿ ನಾವು ಶ್ಲಾ ಸಬೇಕಾದ ಇನ್ನೊಂದು ಸಂಗತಿಯೆಂದರೆ ಬಳ್ಳಾರಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಜೆ. ಶಾಂತಾ ಅವರು ಕಂಡ ಸೋಲು. ಈಕೆ ಜನಾರ್ದನ ರೆಡ್ಡಿಗೆ ನಿಕಟವ್ಯಕ್ತಿಯೆಂದು ಗುರುತಿಸಿಕೊಂಡಿರುವ ಮೊಳಕಾಲ್ಮೂರು ಕ್ಷೇತ್ರದ ಬಿಜೆಪಿ ಶಾಸಕ ಬಿ. ಶ್ರೀ ರಾಮುಲು ಅವರ ಸಹೋದರಿ. ಈ ಉಪಚುನಾವಣೆಯಲ್ಲಿ ಗೆದ್ದಿರುವ ಕಾಂಗ್ರೆಸ್‌ ಅಭ್ಯರ್ಥಿ ವಿ.ಎಸ್‌. ಉಗ್ರಪ್ಪ ಅವರ ಲೋಕಸಭಾ ಸದಸ್ಯತ್ವದ ಅವಧಿ ಬಹಳ ಹೃಸ್ವ ಎನ್ನುವುದು ಬೇಸರದ ಸಂಗತಿ. ಉಗ್ರಪ್ಪ ಅವರು ಸಂಸದೀಯ ವ್ಯವಹಾರಗಳಲ್ಲಿ ಪಳಗಿದ ಒಬ್ಬ ಸಮರ್ಥ ವ್ಯಕ್ತಿ. ಜನಾರ್ದನ ರೆಡ್ಡಿ ಹಾಗೂ ಅವರ ಗೆಳೆಯರ ಗುಂಪನ್ನು ಪ್ರೋತ್ಸಾಹಿಸುವ ಮೂಲಕ ಬಿಜೆಪಿ ಗುರುವಿಗೇ ತಿರುಮಂತ್ರ ಪಠಿಸುವ ಮಹತ್ತಾಕಾಂಕ್ಷಿ ಪಡೆಯೊಂದನ್ನು ಘೋಷಿಸುವ ಕೆಲಸ ಮಾಡುತ್ತಿದೆ ಎಂದು ನಾನು ಹಿಂದೊಮ್ಮೆ ಇದೇ ಅಂಕಣದಲ್ಲಿ ಬರೆದದ್ದಿದೆ. ರೆಸಾರ್ಟ್‌ ರಾದ್ಧಾಂತ ಈ ಮಾತಿಗೆ ಪುರಾವೆ ಒದಗಿಸಿದೆ. ನೆನಪಿದೆಯೆ, ಬಿ. ಶ್ರೀ ರಾಮುಲು ಅವರನ್ನು ಉಪಮುಖ್ಯಮಂತ್ರಿಯನ್ನಾಗಿಸಲು ಬಿಜೆಪಿ ಬಯಸಿತ್ತು.

ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಪಕ್ಷವಾಗಿರುವ ಬಿಜೆಪಿ ಇಲ್ಲಿ ಕರ್ನಾಟಕದಲ್ಲಿ ಕಮಲ ಕಾರ್ಯಾಚರಣೆಯನ್ನು ಕೈಬಿಟ್ಟು ಜವಾಬ್ದಾರಿಯುತ ವಿರೋಧಪಕ್ಷವಾಗಿ ಕಾರ್ಯ ನಿರ್ವಹಿಸಬೇಕಿದೆ. ಬಿ.ಎಸ್‌. ಯಡಿಯೂರಪ್ಪ ಅವರಿಗೆ ಮುಖ್ಯಮಂತ್ರಿಯಾಗಲು ಅವಕಾಶ ನೀಡಿದ್ದು ಬಿಜೆಪಿಯ ನಾಯಕತ್ವದ ಒಂದು ದುಡುಕು ನಡೆಯೇ ಆಗಿತ್ತು. ಅವರು ಎರಡೇ ದಿನಗಳಲ್ಲಿ ಅಧಿಕಾರ ಕಳೆದುಕೊಳ್ಳುವಂತಾಯಿತು. ರಾಜ್ಯಪಾಲ ವಜೂಭಾಯ್‌ವಾಲಾ ಅವರು ಬಿಜೆಪಿ ಸರಕಾರದ ಸ್ಥಿರತೆಯ ಬಗ್ಗೆ ಲಕ್ಷ್ಯನೀಡಬೇಕಿತ್ತು. ಶನಿವಾರದ ಹೊಯ್‌ಕೈ ಘಟನೆಯ ಹಿನ್ನೆಲೆಯಲ್ಲಿ ಇನ್ನು ಆನಂದ್‌ಸಿಂಗ್‌ ಆಗಲಿ, ಜೆ.ಎನ್‌. ಗಣೇಶ್‌ ಆಗಲಿ ಬಿಜೆಪಿ ಮಾತ್ರವಲ್ಲ ಕಾಂಗ್ರೆಸ್‌ ಅಥವಾ ಇತರ ಯಾವುದೇ ಪಕ್ಷದಲ್ಲಿ ಮಂತ್ರಿಗಿರಿ ಒತ್ತಟ್ಟಿಗಿರಲಿ, ಇತರ ಯಾವುದೇ ತೆರನ ಸ್ಥಾನ ಪಡೆಯುವಂತಾಗಬಾರದು ಎಂದು ಸ್ಪಷ್ಟವಾಗಿ ಹೇಳುವ ಅಗತ್ಯವೇ ಇಲ್ಲ. ಬಿಜೆಪಿ ತನ್ನಲ್ಲಿರುವ ಸಮರ್ಥ ಶಾಸಕರಾದ ಎಸ್‌. ಸುರೇಶ್‌ ಕುಮಾರ್‌ ಹಾಗೂ ಎ. ರಾಮದಾಸ್‌ರಂಥವರ ಮೂಲಕ ಕುಮಾರಸ್ವಾಮಿ ಸರಕಾರದ ಕೆಲವು ನಡೆಗಳನ್ನು ಬಯಲುಗೊಳಿಸುವ ನಿಟ್ಟಿನಲ್ಲಿ ಇನ್ನಷ್ಟು ಪ್ರಯತ್ನಗಳನ್ನು ನಡೆಸಬೇಕಾಗಿದೆ.

ಬಿಜೆಪಿ ಹಾಗೂ ಕಾಂಗ್ರೆಸ್‌ ಪಕ್ಷಗಳು ತಮ್ಮ ಶಾಸಕರನ್ನು ಬಾಹ್ಯ ಸಂಪರ್ಕದಿಂದ ವಿಮುಖಗೊಳಿಸಿ ರೆಸಾರ್ಟ್‌ಗಳು ಹಾಗೂ ಲಕ್ಷುರಿ ಹೊಟೇಲ್‌ಗ‌ಳಲ್ಲಿ ಕೂಡಿ ಹಾಕಿದ್ದನ್ನು ನೋಡಿದರೆ, ರಾಜ್ಯದ ಜನರು ಯಾವ ತೆರನ ವ್ಯಕ್ತಿಗಳನ್ನು ಆಯ್ಕೆ ಮಾಡುತ್ತಿದ್ದಾರೆಂದು ಅಚ್ಚರಿಪಡುವಂತಾಗುತ್ತದೆ. ನಮ್ಮ ಶಾಸಕರು ಆಮಿಷಗಳಿಗೆ ಬಲಿಯಾಗಿ ತಮ್ಮ ಪಕ್ಷಗಳಿಗೆ ದ್ರೋಹ ಬಗೆಯುವಷ್ಟು ದುರ್ಬಲರೆ? ಅಥವಾ ಭ್ರಷ್ಟರೆ? 2008ರ ಕಮಲ ಕಾರ್ಯಾಚರಣೆ ಅಧಿಕಾರದಲ್ಲುಳಿಯಲು ಬಿಜೆಪಿಗೆ ನೆರವಾದುದು ಹೌದಾದರೂ ಅದು 2013ರಲ್ಲಿ ತನ್ನ ಘನತೆಯನ್ನು ಕಳೆದುಕೊಂಡದ್ದು ಸಾಬೀತಾಯಿತು. ಬಳ್ಳಾರಿ ಜಿಲ್ಲೆಯ ಬಿಜೆಪಿ ಶಾಸಕರು ಪಕ್ಷದ ಮಾನವನ್ನು ಹರಾಜು ಹಾಕಿಬಿಟ್ಟರು.

ಇವರೇ ನಮ್ಮ ಜನನಾಯಕರು? 
ರೆಸಾರ್ಟ್‌ ರಂಪಾಟ ನಮ್ಮ ರಾಜಕೀಯ ಹಾಗೂ “ಜನರಿಂದ ಚುನಾಯಿಸಲ್ಪಟ್ಟ ಶಾಸಕರ’ ಬಗ್ಗೆ ಕೆಲವು ಮುಖ್ಯ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಭಾರತೀಯ ರಾಜಕಾರಣದಲ್ಲಿನ ನೇತ್ಯಾತ್ಮಕ ಲಕ್ಷಣಗಳೇನಿವೆ, ಅವುಗಳನ್ನು ಅನೇಕರು ಅನೇಕ ಬಗೆಗಳಲ್ಲಿ ಬಣ್ಣಿಸಿದ್ದುಂಟು. ಭಾರತದ ಶ್ರೇಷ್ಠ ನ್ಯಾಯಮೂರ್ತಿಯಾಗಿದ್ದ ಎಂ.ಎನ್‌.ವೆಂಕಟಾಚಲಯ್ಯ ಅವರು ಅದನ್ನು “ಕೌಡಿಯೆಸ್ಟ್‌’ ಎಂದು ವರ್ಣಿಸಿದರೆ, ಉದಾರವಾದಿ ಆರ್ಥಿಕತೆಯ ಪ್ರತಿಪಾದಕ ಹಾಗೂ ಶ್ರೇಷ್ಠ ಸಂಸದೀಯ ಪಟುವಾಗಿದ್ದ ದಿವಂಗತ ಮಿನೂ ಮಸಾನಿಯವರು “ಭಾರತ ದೇಶ ಅತಿಯಾದ ರಾಜಕೀಯದಿಂದ ಅತ್ಯಂತ ಕಡಿಮೆ ಪ್ರಮಾಣದ ಪ್ರಜಾಪ್ರಭುತ್ವ ಗುಣದಿಂದ ಬಳಲುತ್ತಿದೆ’ ಎಂದಿದ್ದರು. ಮಸಾನಿ ಅವರು ಬಿಜೆಪಿ ಹಾಗೂ ಕಾಂಗ್ರೆಸ್‌ ಪಕ್ಷಗಳ ರೂಪದಲ್ಲಿ ಪುನರ್ಜನ್ಮ ತಳೆದಿರುವ ಸ್ವತಂತ್ರ ಪಾರ್ಟಿಯೊಂದಿಗೆ ದೀರ್ಘ‌ ಕಾಲದಿಂದ ಸಂಪರ್ಕ ಹೊಂದಿದ್ದವರು. ನ್ಯಾ| ವೆಂಕಟಾಚಲಯ್ಯ ಹಾಗೂ ಮಸಾನಿ ಇಬ್ಬರ ಅಭಿಪ್ರಾಯಗಳೂ ಸರಿಯಾಗಿಯೇ ಇವೆ. 

ನಮ್ಮ ಶಾಸನಸಭೆಗಳಲ್ಲಾಗಲಿ, ಪಕ್ಷದ ಕಕ್ಷೆಯಲ್ಲಾಗಲಿ ಕ್ರಮ ತಪ್ಪಿದ ನಡವಳಿಕೆಗಳನ್ನು ಹಾಗೂ ಹಿಂಸಾತ್ಮಕ ಘಟನೆಗಳನ್ನು ಆಗಾಗ ನೋಡುತ್ತಲೇ ಇದ್ದೇವೆ. ಆದರೆ ಮೊನ್ನೆ ರೆಸಾರ್ಟ್‌ನಲ್ಲಿ ನಡೆದಿದೆಯೆಂದು ಹೇಳಲಾಗಿರುವ ಘಟನೆ ಬೇರೆಯೇ ತೆರನಾದದ್ದು. ನಮ್ಮ ವಿಧಾನಸಭೆಗಳಲ್ಲಿ, ಅಷ್ಟೇಕೆ, ಸಂಸತ್ತಿನಲ್ಲೂ ಕಂಡು ಬರುವ ಗಲಾಟೆ, ಕೂಗಾಟಗಳು ಸಾಮಾನ್ಯವಾಗಿ ರಾಜಕೀಯ ವಿವಾದಗಳಿಗೆ, ರಾಜಿಗೆ ಸಿದ್ಧವಿಲ್ಲದ ಸರಕಾರದ ಬಿಗು ನಿಲುವಿಗೆ ಅಥವಾ ವಿಪಕ್ಷೀಯ ಸದಸ್ಯರ ಹತಾಶೆಗಷ್ಟೆ ಸಂಬಂಧಪಟ್ಟಿರುತ್ತವೆ. 

ನಮ್ಮ ವಿಧಾನಮಂಡಲಗಳಲ್ಲಾಗಲಿ, ಸಂಸತ್ತಿನಲ್ಲಾಗಲಿ ಅತ್ಯಂತ ಕೆಟ್ಟದೇನಾದರೂ ಸಂಭವಿಸದಿರಲಿ ಎಂದಷ್ಟೇ ಎಲ್ಲರೂ ಹಾರೈಸುವಂತಾಗಿದೆ. ಹಾಗೆ ನೋಡಿದರೆ, ನನ್ನ ದೃಷ್ಟಿಯಲ್ಲಿ “ರೌಡಿತನದ ಅತ್ಯಂತ ಕೆಟ್ಟ ಘಟನೆ’ ನಡೆದಿರುವುದು 1958ರ ಸೆ. 20ರಂದು; ಢಾಕ್ಕಾ (ಇಂದಿನ ಬಾಂಗ್ಲಾ )ದೇಶದ ವಿಧಾನಸಭೆಯಲ್ಲಿ. ಕೋಪೋದ್ರಿಕ್ತರಾಗಿದ್ದ ವಿಪಕ್ಷ ಅವಾಮೀಲೀಗ್‌ನ ಸದಸ್ಯರು ಸದನದಲ್ಲಿ ವಿಪರೀತ ದಾಂಧಲೆಯೆಬ್ಬಿಸಿ ಆಳುವ ಪಕ್ಷಗಳ ಸದಸ್ಯರತ್ತ ಹಾಗೂ ಸದನದ ಅಧ್ಯಕ್ಷರತ್ತ ಕೈಗೆ ಸಿಕ್ಕ ವಸ್ತುಗಳನ್ನು ಎಸೆದರು. ಅಧ್ಯಕ್ಷರ ಆಸನದಲ್ಲಿದ್ದ ಡೆಪ್ಯುಟಿ ಸ್ಪೀಕರ್‌ ಶಹೀದ್‌ ಅಲಿ ಅವರತ್ತ ತೂರಿಬಂದ ಮುರುಕು ಕುರ್ಚಿಯೊಂದು ಅವರ ತಲೆಗೆ ಬಡಿದು, ತಲೆಬುರುಡೆ ಒಡೆದೇ ಹೋಯಿತು. ಇದಾದ ಐದು ದಿನಗಳ ಬಳಿಕ ಅವರು ಸಾವನ್ನಪಿದರು. ಈ ಪ್ರಕರಣ ಪಾಕಿಸ್ಥಾನದ ಪ್ರಜಾಪ್ರಭುತ್ವ ವ್ಯವಸ್ಥೆಯ ಕೊನೆಯ ಹಂತದ ಸೂಚಕ ಘಟನೆಯೂ ಆಗಿತ್ತು. ಆಗಿನ ಅಧ್ಯಕ್ಷ ಮೇ|ಜ| ಇಸ್ಕಂದರ್‌ ಮಿರ್ಜಾ ಅವರು ಸರ್‌ ಫಿರೋಜ್‌ ಖಾನ್‌ ಮಾನ್‌ ಅವರ ಸರಕಾರವನ್ನು ವಜಾಗೊಳಿಸಿ ಮಾರ್ಷಲ್‌ ಲಾ ಜಾರಿಗೊಳಿಸಿದರು. ಇದಾದ ಕೆಲವೇ ಸಮಯದಲ್ಲಿ ನಡೆದ ಮಿಲಿಟರಿ ಸಂಚಿನಲ್ಲಿ ಜನರಲ್‌ ಅಯೂಬ್‌ ಖಾನ್‌ ಅವರು ಅಧ್ಯಕ್ಷ ಮಿರ್ಜಾರನ್ನು ಪದಚ್ಯುತಗೊಳಿಸಿದರು. ಅದೇ ಅವಾಮಿ ಲೀಗ್‌ ಇಂದು ಪರಿಷ್ಕೃತಗೊಂಡಿದೆ. ಶೇಕ್‌ ಹಸೀನಾ ವಾಜೇದ್‌ ಅವರ ಮೂಲಕ ಬಾಂಗ್ಲಾದ ಆಡಳಿತ ನಡೆಸುತ್ತಿದೆ. ಅದೃಷ್ಟ ವಶಾತ್‌ ನಮ್ಮ ಭಾರತದ ಮಿಲಿಟರಿ ಶಿಸ್ತುಬದ್ಧವಾಗಿದೆ. ಪ್ರಜಾಪ್ರಭುತ್ವಕ್ಕೆ ಗೌರವ ನೀಡುವುದೆಂದರೇನೆಂದು ಅದಕ್ಕೆ ಗೊತ್ತಿದೆ. ನಮ್ಮ ಜನರಿಗೂ ಮಿಲಿಟರಿ ಕುರಿತು ಆಡಲಾಗುವ ಅಸಂಬದ್ಧ ಮಾತುಗಳು ರುಚಿಸುವುದಿಲ್ಲ. ಇದಕ್ಕೆ ಉದಾಹರಣೆಯೆಂದರೆ ಧಾರವಾಡದ ಸಮ್ಮೇಳನದಲ್ಲಿ ಅಂಕಣಕಾರ ಶಿವ ವಿಶ್ವನಾಥನ್‌ ಮಾಡಿದ ಅಬದ್ಧ ಟೀಕೆಗೆ ಸಾರ್ವಜನಿಕರು ವ್ಯಕ್ತಪಡಿಸಿದ ವಿರೋಧ.

ಇಲ್ಲಿ 2014ರ ಫೆಬ್ರವರಿ 13ರಂದು ಲೋಕಸಭೆಯಲ್ಲಿ ನಡೆದ ಮೆಣಸಿನ ಪುಡಿ ಪ್ರಕರಣಗಳನ್ನು ನೆನಪು ಮಾಡಿಕೊಳ್ಳಬಹುದು. ಆಂಧ್ರದ ವಿಜಯವಾಡದ ಕಾಂಗ್ರೆಸ್‌ ಸಂಸದ ಲಗಡಪಾಟಿ ರಾಜಗೋಪಾಲ್‌ ಅವರು ಸದನದಲ್ಲಿ ಮೆಣಸಿನ ಪುಡಿ ಸ್ಪ್ರೆà ಮಾಡಿದಾಗ ಭಾರೀ ಕೋಲಾಹಲ ಸೃಷ್ಟಿಯಾಗಿತ್ತು. ಆದರೆ ಈ ಪ್ರಕರಣ ಹಿಂದೆಯೂ ಒಂದು ಪ್ರಬಲ ರಾಜಕೀಯ ಕಾರಣವಿತ್ತು. ಆಂಧ್ರವನ್ನು ಆಂಧ್ರಪ್ರದೇಶ ಹಾಗೂ ತೆಲಂಗಾಣವೆಂದು ಪ್ರತ್ಯೇಕಿಸುವ ಆಶಯದ “ತೆಲಂಗಾಣ ಮಸೂದೆ’ಯನ್ನು ಆಗಿನ ಯುಪಿಎ ಸರಕಾರ ಮಂಡಿಸಿದ್ದನ್ನು ಪ್ರತಿಭಟಿಸುವ ಸಲುವಾಗಿ ನಡೆಸಿದ ಕೃತ್ಯ ಇದಾಗಿತ್ತು.

ಎಲ್ಲಕ್ಕಿಂತ ಮುಖ್ಯವಾಗಿ ಗಮನಿಸಬೇಕಾದ ಸಂಗತಿಯೆಂದರೆ, ಕರ್ನಾಟಕದ ಕಾಂಗ್ರೆಸ್‌ ದೊರೆಗಳು ತಮ್ಮ ಶಾಸಕರನ್ನು ಕೂಡಿ ಹಾಕಲು, ತನ್ಮೂಲಕ ಬಿಜೆಪಿಯ ಪ್ರಯತ್ನವನ್ನು ಬಗ್ಗು ಬಡಿಯಲು ಬಾಕಿ ಪಾವತಿಯ ವಿವಾದದಲ್ಲಿ ಸಿಲುಕಿಕೊಂಡಿರುವ ಖಾಸಗಿ ರೆಸಾರ್ಟನ್ನು ಆಯ್ಕೆ ಮಾಡಿಕೊಂಡದ್ದೇ ತಪ್ಪು. ಈ ರೆಸಾರ್ಟ್‌ನ ಮಾಲೀಕರು ಸರಕಾರಿ ಭೂಮಿಯನ್ನು ಅತಿಕ್ರಮಿಸಿದ್ದಾರೆನ್ನಲಾಗಿದೆ; ಅವರಿಂದ ರಾಜ್ಯ ಸರಕಾರಕ್ಕೆ 900 ಕೋ. ರೂ. ಪಾವತಿಯಾಗಬೇಕಿದ್ದು, ಇನ್ನೂ ಇದನ್ನು ಪಾವತಿಸಿಲ್ಲ ಎನ್ನಲಾಗಿದೆ. ಇಷ್ಟು ದೊಡ್ಡ ಮೊತ್ತದ ವಸೂಲಾತಿ ಪ್ರಕ್ರಿಯೆಯನ್ನು ನಿರ್ವಹಿಸುವಲ್ಲಿ ಸರಕಾರ ಯಾಕೆ ವಿಫ‌ಲವಾಯಿತು. ತಪ್ಪುಗಾರ ವ್ಯಕ್ತಿಗಳ ಒಡೆತನದ ಖಾಸಗಿ ರೆಸಾರ್ಟನ್ನು ಯಾಕೆ ಆಯ್ಕೆ ಮಾಡಲಾಯಿತು ಎಂಬಂಥ ಪ್ರಶ್ನೆಗಳಿಗೆ ಕಂದಾಯ ಸಚಿವ ಆರ್‌.ವಿ. ದೇಶಪಾಂಡೆ ಉತ್ತರಿಸಬೇಕಾಗಿದೆ. ರಾಜ್ಯದ ಬಹುತೇಕ ಭಾಗಗಳಲ್ಲಿ ಜೀವನ ನಿರ್ವಹಣೆಯೇ ಕಷ್ಟ ಎಂಬಂಥ ಪರಿಸ್ಥಿತಿಯಿರುವಾಗ ಎಂಎಲ್‌ಎಗಳು ರೆಸಾರ್ಟ್‌ ಹೊಕ್ಕು ಮಜಾ ಉಡಾಯಿಸಿದ್ದಾರೆ ಎಂಬ ಟೀಕೆಗಳಲ್ಲಿ ಅರ್ಥವಿಲ್ಲದೆ ಇಲ್ಲ.

ಹಾಗೆಂದ ಮಾತ್ರಕ್ಕೆ ಬಿಜೆಪಿ ಶಾಸಕರು ದೂರದ ಹರ್ಯಾಣದ ಗುರುಗ್ರಾಮದಲ್ಲಿನ ವೈಭವೋಪೇತ ಹೊಟೇಲಿನಲ್ಲಿ ಅವಿತು ಕುಳಿತಿದ್ದ ಘಟನೆ ಒಂದು ಕ್ಷಮಾರ್ಹವಿದ್ಯಮಾನವೆಂದು ತಳ್ಳಿ ಹಾಕುವಂತಿಲ್ಲ. ಅವರಾಗಲಿ, ಅವರ ನಾಯಕರಾಗಲಿ ಅಲ್ಲಿಯವರೆಗೆ ಹೋಗುವ, ಅಲ್ಲಿ ತಂಗುವ ಅಗತ್ಯವೇ ಇರಲಿಲ್ಲ. ಶಾಸಕರನ್ನು ಜನರು ಆಯ್ಕೆ ಮಾಡಿಕಳಿಸಿದ್ದು ಕರ್ನಾಟಕದ ವಿಧಾನಸಭೆಗೇ ಹೊರತು ಅಂಥ ಐಷಾರಾಮೀ ಹೊಟೇಲ್‌ಗ‌ಳಿಗಾಗಲಿ, ರೆಸಾರ್ಟ್‌ಗಳಿಗಾಗಲಿ ಅಲ್ಲ.

ಟಾಪ್ ನ್ಯೂಸ್

Upendra’s UI Movie Review

UI Movie Review: ಫೋಕಸ್‌ ಸಿಗೋವರೆಗೆ ಸಿನ್ಮಾ ನೋಡ್ತಾನೇ ಇರಿ!

Bantwal; ನಿಷೇಧವಿದ್ದರೂ ಹಳೇಯ ಸೇತುವೆಯಲ್ಲಿ ಸಂಚಾರ; ಸಿಲುಕಿಕೊಂಡ ಗೂಡ್ಸ್‌ ವಾಹನ

Bantwal; ನಿಷೇಧವಿದ್ದರೂ ಹಳೇಯ ಸೇತುವೆಯಲ್ಲಿ ಸಂಚಾರ; ಸಿಲುಕಿಕೊಂಡ ಗೂಡ್ಸ್‌ ವಾಹನ

ರಬಕವಿ-ಬನಹಟ್ಟಿ: ಸಚಿವರಿಂದ ಬೇಡಿಕೆ ಈಡೇರಿಸುವ ಭರವಸೆ… ತಿಂಗಳ ಬಳಿಕ ನೇಕಾರರ ಹೋರಾಟ ಅಂತ್ಯ

ರಬಕವಿ-ಬನಹಟ್ಟಿ: ಸಚಿವರಿಂದ ಬೇಡಿಕೆ ಈಡೇರಿಸುವ ಭರವಸೆ… ತಿಂಗಳ ಬಳಿಕ ನೇಕಾರರ ಹೋರಾಟ ಅಂತ್ಯ

German: ಮಾರುಕಟ್ಟೆಗೆ ನುಗ್ಗಿಸಿದ ಕಾರು, ಇಬ್ಬರು ಸಾವು, 60ಕ್ಕೂ ಹೆಚ್ಚು ಗಾಯ, ವೈದ್ಯನ ಬಂಧನ

German: ಮಾರುಕಟ್ಟೆಗೆ ನುಗ್ಗಿದ ಕಾರು, ಇಬ್ಬರು ಸಾವು, 60ಕ್ಕೂ ಹೆಚ್ಚು ಗಾಯ, ವೈದ್ಯನ ಬಂಧನ

Prithvi Shaw: ಮುಂಬೈ-ಶಾ ನಡುವೆ ಆರೋಪ ಸಮರ; ಅರ್ಧ ಗೊತ್ತಿದ್ದು ಮಾತಾಡಬೇಡಿ ಎಂದ ಶಾ

Prithvi Shaw: ಮುಂಬೈ-ಶಾ ನಡುವೆ ಆರೋಪ ಸಮರ; ಅರ್ಧ ಗೊತ್ತಿದ್ದು ಮಾತಾಡಬೇಡಿ ಎಂದ ಶಾ

tobacc

Tobacco: ತಂಬಾಕು ಮೇಲಿನ ಚಿತ್ರ ಸಹಿತ ಎಚ್ಚರಿಕೆ ಗಾತ್ರ ಶೀಘ್ರ ಹಿರಿದು!

Coconut: ಕೊಬ್ಬರಿಯ ಕನಿಷ್ಠ ಬೆಂಬಲ ಬೆಲೆ 422 ರೂ. ಹೆಚ್ಚಳ: ಕೇಂದ್ರ  ಸಂಪುಟ

Coconut: ಕೊಬ್ಬರಿಯ ಕನಿಷ್ಠ ಬೆಂಬಲ ಬೆಲೆ 422 ರೂ. ಹೆಚ್ಚಳ: ಕೇಂದ್ರ  ಸಂಪುಟ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅತೃಪ್ತಿ ಹಣಿಯಲು ಚಾಣಕ್ಯ ಸಂದೇಶದ ತಂತ್ರ 

ಅತೃಪ್ತಿ ಹಣಿಯಲು ಚಾಣಕ್ಯ ಸಂದೇಶದ ತಂತ್ರ 

ಮೇಲ್ಮನೆಗೆ ಗೊಗೋಯ್‌, ವಿಪಕ್ಷ ಸಭಾತ್ಯಾಗ

ಮೇಲ್ಮನೆಗೆ ಗೊಗೋಯ್‌, ವಿಪಕ್ಷ ಸಭಾತ್ಯಾಗ

ಸಂವಿಧಾನ: ಅಂಬೇಡ್ಕರ್‌ ಜತೆಗೆ ನಪಿಸಿಕೊಳ್ಳಬೇಕಾದವರು

ಸಂವಿಧಾನ: ಅಂಬೇಡ್ಕರ್‌ ಜತೆಗೆ ನೆನಪಿಸಿಕೊಳ್ಳಬೇಕಾದವರು

kala-43

ಬ್ರಿಟನ್‌ ವಿತ್ತದ ಕೀಲಿ ಕೈ ಭಾರತೀಯ ಮೂಲದವರ ಕೈಯಲ್ಲಿ

jai-43

ನೂತನ ಸಚಿವ ಪರಿವಾರ -ಬಿಜೆಪಿಗೆ ಹೊರೆಯೇ, ವರವೇ?

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Upendra’s UI Movie Review

UI Movie Review: ಫೋಕಸ್‌ ಸಿಗೋವರೆಗೆ ಸಿನ್ಮಾ ನೋಡ್ತಾನೇ ಇರಿ!

Bantwal; ನಿಷೇಧವಿದ್ದರೂ ಹಳೇಯ ಸೇತುವೆಯಲ್ಲಿ ಸಂಚಾರ; ಸಿಲುಕಿಕೊಂಡ ಗೂಡ್ಸ್‌ ವಾಹನ

Bantwal; ನಿಷೇಧವಿದ್ದರೂ ಹಳೇಯ ಸೇತುವೆಯಲ್ಲಿ ಸಂಚಾರ; ಸಿಲುಕಿಕೊಂಡ ಗೂಡ್ಸ್‌ ವಾಹನ

ರಬಕವಿ-ಬನಹಟ್ಟಿ: ಸಚಿವರಿಂದ ಬೇಡಿಕೆ ಈಡೇರಿಸುವ ಭರವಸೆ… ತಿಂಗಳ ಬಳಿಕ ನೇಕಾರರ ಹೋರಾಟ ಅಂತ್ಯ

ರಬಕವಿ-ಬನಹಟ್ಟಿ: ಸಚಿವರಿಂದ ಬೇಡಿಕೆ ಈಡೇರಿಸುವ ಭರವಸೆ… ತಿಂಗಳ ಬಳಿಕ ನೇಕಾರರ ಹೋರಾಟ ಅಂತ್ಯ

German: ಮಾರುಕಟ್ಟೆಗೆ ನುಗ್ಗಿಸಿದ ಕಾರು, ಇಬ್ಬರು ಸಾವು, 60ಕ್ಕೂ ಹೆಚ್ಚು ಗಾಯ, ವೈದ್ಯನ ಬಂಧನ

German: ಮಾರುಕಟ್ಟೆಗೆ ನುಗ್ಗಿದ ಕಾರು, ಇಬ್ಬರು ಸಾವು, 60ಕ್ಕೂ ಹೆಚ್ಚು ಗಾಯ, ವೈದ್ಯನ ಬಂಧನ

Prithvi Shaw: ಮುಂಬೈ-ಶಾ ನಡುವೆ ಆರೋಪ ಸಮರ; ಅರ್ಧ ಗೊತ್ತಿದ್ದು ಮಾತಾಡಬೇಡಿ ಎಂದ ಶಾ

Prithvi Shaw: ಮುಂಬೈ-ಶಾ ನಡುವೆ ಆರೋಪ ಸಮರ; ಅರ್ಧ ಗೊತ್ತಿದ್ದು ಮಾತಾಡಬೇಡಿ ಎಂದ ಶಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.