ಸಂವಿಧಾನ ಸಂಭಾಷಣೆ ಕಾರ್ಯಕ್ರಮ: ಸರ್ಕಾರದ ಆದೇಶವೇ ಉಲ್ಲಂಘನೆ
Team Udayavani, Jan 23, 2019, 12:40 AM IST
ಬೆಂಗಳೂರು: ಸಿದ್ಧಗಂಗಾ ಶ್ರೀಗಳ ಲಿಂಗೈಕ್ಯ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವೇ ಮೂರು ದಿನಗಳ ಕಾಲ ಶೋಕಾಚರಣೆ ಘೋಷಿಸಿ ಎಲ್ಲ ಅಧಿಕೃತ ಕಾರ್ಯಕ್ರಮ ರದ್ದುಗೊಳಿಸಿದ್ದರೂ ಸಮಾಜ ಕಲ್ಯಾಣ ಇಲಾಖೆ ಸಂವಿಧಾನ ಸಂಭಾಷಣೆ ಕಾರ್ಯಕ್ರಮ ಆಯೋಜಿಸಿ ಸರ್ಕಾರದ ಆದೇಶ ಉಲ್ಲಂಘಸಿದೆ.
ಅಷ್ಟೇ ಅಲ್ಲದೆ ಸಮಾಜ ಕಲ್ಯಾಣ ಇಲಾಖೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ತಮ್ಮ ಹೇಳಿಕೆಗಳ ಮೂಲಕ ವಿವಾದಕ್ಕೊಳಗಾಗಿರುವ ಕನ್ಹಯ್ಯಕುಮಾರ್ ಹಾಗೂ ಅಸಾವುದ್ದೀನ್ ಓವೈಸಿ ವೇದಿಕೆ ಹಂಚಿಕೊಂಡಿದ್ದು ಸಮ್ಮಿಶ್ರ ಸರ್ಕಾರದ ವಿರುದಟಛಿದ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಸಮ್ಮಿಶ್ರ ಸರ್ಕಾರವು ಸಿದ್ದಗಂಗಾ ಶ್ರೀಗಳಿಗೆ ಅಗೌರವ ತೋರಿದೆ. ರಾಜ್ಯ ಸರ್ಕಾರವೇ ಹೊರಡಿಸಿದ ಆದೇಶ ಉಲ್ಲಂಘನೆಯಾಗಿದೆ. ಸಮಾಜ ಕಲ್ಯಾಣ ಇಲಾಖೆಯು ಸರ್ಕಾರದ ಆದೇಶಕ್ಕೆ ಬೆಲೆ ಇಲ್ಲದಂತೆ ಮಾಡಿದೆ ಎಂಬ ಮಾತುಗಳು ಕೇಳಿ ಬಂದಿವೆ.
ಮೂಲಗಳ ಪ್ರಕಾರ, ಮುಖ್ಯಮಂತ್ರಿ ಎಚ್ .ಡಿ.ಕುಮಾರಸ್ವಾಮಿಯವರು ಸಹ ಪ್ರತಿಭಟನೆ ವಿಚಾರ ಕೇಳಿ ಕಾರ್ಯಕ್ರಮ ರದ್ದುಗೊಳಿಸಿ ಎಂದು ಸೂಚಿಸಿದ್ದರು. ಆದರೂ ಖಾಸಗಿಯಾಗಿ ಮಾಡಲಾಗಿದೆ ಎಂಬ ನೆಪ ಹೇಳಿ ಸಂವಾದ ಮುಂದುವರಿಸಿದ್ದು ಕನ್ಹಯ್ಯಕುಮಾರ್, ಅಸಾವುದ್ದೀನ್ ಓವೈಸಿ ಭಾಗಿಯಾಗಿದ್ದು ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿದೆ.
“ಸ್ವಾಮೀಜಿಗಳಿಗೆ ಅರ್ಪಿಸಿ ಕಾರ್ಯಕ್ರಮ ಆರಂಭಿಸಿದ್ದೆವು’
ಬೆಂಗಳೂರು: ಸಂವಿಧಾನ ಚರ್ಚೆಗಳು ಕಾರ್ಯಕ್ರಮ ವನ್ನು ಸರಳವಾಗಿ ಆಚರಣೆ ಮಾಡಲು ಸರ್ಕಾರದ ನಿರ್ದೇಶನ ಇತ್ತು. ಅದರಂತೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮವನ್ನು ಸಿದ್ದಗಂಗಾ
ಶ್ರೀಗಳಿಗೆ ಅರ್ಪಿಸಿ, ಒಂದು ನಿಮಿಷ ಮೌನಾಚರಣೆ ಮಾಡಿಯೇ ಆರಂಭಿಸಲಾಗಿತ್ತು ಎಂದು ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಕಳೆದ ಮೂರು ತಿಂಗಳಿಂದ ಕಾರ್ಯಕ್ರಮದ ಸಿದ್ದತೆ ಕುರಿತು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ
ಮಟ್ಟದಲ್ಲಿ ಪ್ರಚಾರ ನಡೆಸಲಾಗಿತ್ತು. ಸಂವಿಧಾನದ ಬಗ್ಗೆಚರ್ಚಿಸಲು ಅಂತಾರಾಷ್ಟ್ರೀಯ ಲೇಖಕರು, ಚಿಂತಕರು ಎಲ್ಲರೂ ಬರಲು ಒಪ್ಪಿಗೆ ಸೂಚಿಸಿದ್ದರು. ಸ್ವಾಮೀಜಿಗಳ ದೇಹಾಂತ್ಯದ ನಂತರ ಸರ್ಕಾರದ ಮುಖ್ಯ
ಕಾರ್ಯದರ್ಶಿಗಳೊಂದಿಗೆ ಚರ್ಚಿಸಲಾಗಿತ್ತು. ಅವರ ಸೂಚನೆಯಂತೆ ಸರಳವಾಗಿ ಆಚರಿಸಿ, ರಾಜ್ಯ ಸರ್ಕಾರದ ವತಿಯಿಂದ ಯಾರೂ ಪಾಲ್ಗೊಳ್ಳದಂತೆ ಸೂಚಿಸಿದ್ದರು. ಅದರಂತೆ ಸರ್ಕಾರದ ಪ್ರತಿನಿಧಿಗಳ ಭಾಷಣವನ್ನು ರದ್ದು ಪಡಿಸಲಾಗಿತ್ತು. ಮಾಜಿ ಉಪ ರಾಷ್ಟ್ರಪತಿ ಆಗಮಿಸಿದ್ದರು. ಆರಂಭದಲ್ಲಿಯೇ ಶ್ರೀ ಶಿವಕುಮಾರ ಸ್ವಾಮೀಜಿಗಳಿಗೆ ಶ್ರದ್ದಾಂಜಲಿ ಸಲ್ಲಿಸಿ, ಇಡೀ ಕಾರ್ಯಕ್ರಮವನ್ನು ಅವರಿಗೆ ಅರ್ಪಿಸಲಾಗಿತ್ತು.
ಕಾರ್ಯಕ್ರಮಕ್ಕೆ ಕನ್ಹಯ್ಯ ಕುಮಾರ್, ಅಸಾವುದ್ದೀನ್‌ಓವೈಸಿ ಅವರನ್ನು ಕರೆಸಿದ್ದಾರೆ ಎಂದು ಆರೋಪಿಸಲಾಗುತ್ತಿದೆ. ಆದರೆ, ಕಾರ್ಯಕ್ರಮಕ್ಕೆ ಬಿಜೆಪಿಯ ನಾಯಕರಾದ ವಾಮನಾಚಾರ್ಯ, ಗೋ.ಮಧುಸೂಧನ್, ಶೇಷಾದ್ರಿ ಅಯ್ಯರ್, ರಾಕೇಶ್ ಸಿನ್ಹಾ, ಆರ್ ಎಸ್‌ಎಸ್ ಪ್ರಚಾರಕರು ಹಾಗೂ ವಿವೇಕ್ ರೆಡ್ಡಿ, ಕಮ್ಯುನಿಷ್ಟರು ಎಲ್ಲರೂ ಆಗಮಿಸಿದ್ದರು.
ಸಂವಿಧಾನದಲ್ಲಿ ಎಲ್ಲರ ಅಭಿಪ್ರಾಯಗಳಿಗೂ ಅವಕಾಶ ಇದೆ. ಹೀಗಾಗಿ ಎಲ್ಲರ ಅಭಿಪ್ರಾಯ ವ್ಯಕ್ತಪಡಿಸಲು ಅವಕಾಶ ಇದೆ ಎನ್ನುವ ಕಾರಣಕ್ಕೆ ಎಲ್ಲರನ್ನೂ ಕರೆಯಲಾಗಿತ್ತು. ಇದರಲ್ಲಿ ಯಾವುದೇ ವೈಯಕ್ತಿಕ ಪ್ರಚಾರದ ಉದ್ದೇಶವಿಲ್ಲ. ಆದರೆ, ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಜನರ ಭಾವನೆಗಳಿಗೆ ಧಕ್ಕೆಯಾಗುತ್ತದೆ ಎಂದು ಮುಖ್ಯಮಂತ್ರಿಗಳು ಸೂಚನೆ ನೀಡಿದ ನಂತರ ಸರ್ಕಾರದ ಕಾರ್ಯಕ್ರಮವನ್ನು ರದ್ದು ಪಡಿಸಲಾಗಿದೆ. ಮುಂದಿನ ದಿನಗಳಲ್ಲಿ ಕಾರ್ಯಕ್ರಮ ಮಾಡುತ್ತೇವೆ ಎಂದು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijaypura: ಕೋರ್ಟ್ ನಲ್ಲೆ ಕತ್ತು ಕೊ*ಯ್ದುಕೊಂಡ ಆರೋಪಿ!!
C.T.Ravi; ಬಿಡುಗಡೆ ಬಳಿಕ ಬಿಜೆಪಿ ಕಿಡಿ ಕಿಡಿ: ನಾವೇನು ಬಳೆ ತೊಟ್ಟು ಕುಳಿತಿಲ್ಲ…!
C.T. Ravi; ಅವಾಚ್ಯ ಶಬ್ದಗಳಿಂದ ನಿಂದಿಸಿದ ದಾಖಲೆ ಇಲ್ಲ: ಮಹತ್ವ ಪಡೆದ ಸಭಾಪತಿ ಹೇಳಿಕೆ
C.T. Ravi ಅವರನ್ನು ತತ್ ಕ್ಷಣ ಬಿಡುಗಡೆ ಮಾಡಿ: ಹೈಕೋರ್ಟ್ ಆದೇಶ
Davanagere: ಬಿಜೆಪಿ-ಕಾಂಗ್ರೆಸ್ ಹೊಂದಾಣಿಕೆ ಆರೋಪದ ಬಗ್ಗೆ ರೇಣುಕಾಚಾರ್ಯ ಸ್ಪಷ್ಟನೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.