ವಿವಿಧೆಡೆ ಭಕ್ತಿಪೂರ್ವಕ ಶ್ರದ್ಧಾಂಜಲಿ
Team Udayavani, Jan 23, 2019, 6:28 AM IST
ದಾವಣಗೆರೆ: ಸಿದ್ಧಗಂಗೆಯ ಪೀಠಾಧಿಪತಿ ಡಾ| ಶಿವಕುಮಾರ ಸ್ವಾಮೀಜಿಯವರು ಬಸವಣ್ಣನವರ ಆಶಯದಂತೆ ಜಾತಿ, ಮತ, ಭಾಷೆ, ಧರ್ಮರಹಿತ ಸಮತಾ ಸಮಾಜ ನಿರ್ಮಾಣಕ್ಕೆ ಶ್ರಮಿಸಿದಂತಹ ಮಹಾನ್ ಮಾನವತಾವಾದಿ ಎಂದು ಭಾರತ ಕಮ್ಯೂನಿಷ್ಟ್ ಪಕ್ಷ(ಸಿಪಿಐ) ಜಿಲ್ಲಾ ಕಾರ್ಯದರ್ಶಿ ಎಚ್.ಕೆ.ರಾಮಚಂದ್ರಪ್ಪ ಬಣ್ಣಿಸಿದ್ದಾರೆ.
ಮಂಗಳವಾರ ಶ್ರೀಜಯದೇವ ವೃತ್ತದಲ್ಲಿ ಭಾರತ ಕಮ್ಯೂನಿಷ್ಟ್ ಪಕ್ಷ(ಸಿಪಿಐ), ಭಾರತೀಯ ಜನಕಲಾ ಸಮಿತಿ(ಇಪಾr), ಸಾಮೂಹಿಕ ಸಂಘಟನೆಯಿಂದ ಹಾಡುಗಳ ಮೂಲಕ ಭಕ್ತಿಪೂರ್ವಕ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದ ಅವರು, ಹುಟ್ಟು ಆಕಸ್ಮಿಕ. ಸಾವು ನಿಶ್ವಿತ. ಹುಟ್ಟು ಮತ್ತು ಸಾವಿನ ನಡುವೆಯ ಅವಧಿಯಲ್ಲಿ ಸಮಾಜಕ್ಕೆ ಒಳ್ಳೆಯದಾಗುವಂತ ಕೆಲಸ ಮಾಡಬೇಕು ಎಂಬ ಮಾತಿಗೆ ಅನುಗುಣವಾಗಿ ಡಾ| ಶಿವಕುಮಾರ ಸ್ವಾಮೀಜಿಯವರು ತಮ್ಮ ಜೀವಿತದುದ್ದಕ್ಕೂ ಇಡೀ ಸಮಾಜವೇ ಸ್ಮರಿಸುವ ಕೆಲಸ ಮಾಡಿದ್ದಾರೆ ಎಂದರು.
ಡಾ| ಶಿವಕುಮಾರ ಸ್ವಾಮೀಜಿಯವರು ಸಿದ್ಧಗಂಗೆಯ ಮಠದಲ್ಲಿ ಯಾವುದೇ ಧರ್ಮ, ಜಾತಿಯ ನೋಡದೆ ಎಲ್ಲರಿಗೂ ಅನ್ನ, ಅಕ್ಷರ, ಜ್ಞಾನವನ್ನ ನೀಡಿದ್ದಾರೆ. ದೇಶದ ಮೂಲೆ ಮೂಲೆಗಳಲ್ಲಿ ಸಿದ್ಧಗಂಗೆಯಲ್ಲಿ ಓದಿದಂತಹ ವಿದ್ಯಾರ್ಥಿಗಳ ಕಾಣಬಹುದು. ಡಾ| ಶಿವಕುಮಾರ ಸ್ವಾಮೀಜಿಯವರು ಅಂತಹ ಮಹಾನ್ ಸಾಧಕರು ಎಂದು ತಿಳಿಸಿದರು.
ಸಿದ್ಧಗಂಗೆಯ ಮಠದಲ್ಲಿರುವ 10 ಸಾವಿರಕ್ಕೂ ಹೆಚ್ಚು ಮಕ್ಕಳು ಊಟ ಮಾಡಿದ ಬಳಿಕವೇ ತಮ್ಮ ಸಾವಿನ ಸುದ್ದಿಯನ್ನ ತಿಳಿಸಬೇಕು ಎಂದು ಕಿರಿಯ ಸ್ವಾಮೀಜಿಯವರಿಗೆ ಹೇಳಿದ್ದ ಡಾ| ಶಿವಕುಮಾರ ಸ್ವಾಮೀಜಿಯವರು ತಮ್ಮ ಸಾವಿನ ಸಂದರ್ಭದಲ್ಲೂ ಯಾರಿಗೂ ತೊಂದರೆ ಆಗಬಾರದು ಎಂದು ಬಯಸಿದ್ದವರು. ಅಂತಹವರಿಗೆ ಗೌರವ, ಶ್ರದ್ಧಾಂಜಲಿ ಸಲ್ಲಿಸುವುದು ಮತ್ತು ಅವರು ನೀಡಿರುವ ಆದರ್ಶ ಪಾಲನೆ ಮುಖ್ಯ ಎಂದು ತಿಳಿಸಿದರು.
ಡಾ| ಶಿವಕುಮಾರ ಸ್ವಾಮೀಜಿಯವರು ಗ್ರಾಮೀಣ ಭಾಗದ ಬಡ ಕುಟುಂಬದಿಂದ ಬಂದವರು ಹಾಗಾಗಿಯೇ ಅವರು ಪ್ರತಿಯೊಬ್ಬರ ಸಂಕಷ್ಟವನ್ನ ಅತೀ ಸುಲಭವಾಗಿ ಅರ್ಥ ಮಾಡಿಕೊಳ್ಳುತ್ತಿದ್ದರು. ಅದೇ ರೀತಿ ಸ್ಪಂದಿಸಿದವರು. ಕಂತೆಭಿಕ್ಷೆಯ ಮೂಲಕ ಸಿದ್ಧಗಂಗೆಯನ್ನ ಶೈಕ್ಷಣಿಕ ಕೇಂದ್ರವಾಗಿ ಮಾಡಿದವರು. ಲಕ್ಷಾಂತರ ಜನರಿಗೆ ಊಟ, ವಸತಿ, ಶಿಕ್ಷಣ ನೀಡಿದವರು. ಅಂತಹ ಮಹಾನ್ ಮಾನವತವಾದಿಯ ಚರಿತ್ರೆ ಮುಂದಿನ ಪೀಳಿಗೆಗೂ ಆದರ್ಶಪ್ರಾಯ ಎಂದು ಸ್ಮರಿಸಿದರು.
ಡಾ| ಶಿವಕುಮಾರ ಸ್ವಾಮೀಜಿಯವರನ್ನು ದೇವರಿಗೆ ಹೋಲಿಕೆ ಮಾಡಬಾರದು. ಅವರು ಮಾನವ ದೇವರು. ದೇವರಿಗೆ ಹೋಲಿಕೆ ಮಾಡಿದರೆ ಅವರು, ಸೇವೆಯನ್ನು ಮರೆಯುವಂತಾಗುತ್ತದೆ. ಆ ಮಾನವ ದೇವರು ಇಡೀ ಮಾನವ ಕುಲಕ್ಕೆ ಕೊಡುಗೆ ನೀಡಿರುವುದನ್ನ ಸ್ಮರಿಸುತ್ತಾ ಸಮತಾ ಸಮಾಜ ನಿರ್ಮಾಣಕ್ಕೆ ಶ್ರಮಿಸೋಣ ಎಂದು ಮನವಿ ಮಾಡಿದರು.
ಡಾ| ಶಿವಕುಮಾರ ಸ್ವಾಮೀಜಿಯವರಿಗೆ ಭಾರತರತ್ನ.. ಪ್ರಶಸ್ತಿ ನೀಡದೇ ಮೂಲಕ ಎಲ್ಲಾ ಸರ್ಕಾರಗಳು ಕೊಡದಿರುವ ಅಪರಾಧ ಮಾಡಿವೆ. ಅವರು ಜೀವಂತ ಇರುವಾಗಲಾದರೂ ಭಾರತರತ್ನ… ಕೊಡದೇ ಇರುವ ಅಪರಾಧವನ್ನ ಅವರು ಲಿಂಗೈಕ್ಯರಾದ ನಂತರವಾದರೂ ಕೊಡದೇ ಇರುವ ಅಪರಾಧ ಮಾಡದೆ ಭಾರತರತ್ನ… ಕೊಡುವ ಮೂಲಕ ಗೌರವ ಸಲ್ಲಿಸಬೇಕು ಎಂದರು.
ಮಹಾನಗರ ಪಾಲಿಕೆ ಮಾಜಿ ಸದಸ್ಯ ಕೆ.ಜಿ. ಶಿವಕುಮಾರ್ ಮಾತನಾಡಿ, ಡಾ| ಶಿವಕುಮಾರ ಸ್ವಾಮೀಜಿಯವರು ಬರೀ ಕರ್ನಾಟಕ, ಭಾರತಕ್ಕೆ ಮಾತ್ರವಲ್ಲ ಇಡೀ ಪ್ರಪಂಚದ ಪ್ರೀತಿ, ಗೌರವಕ್ಕೆ ಪಾತ್ರರಾದವರು.
111 ವರ್ಷಗಳ ಕಾಲ ಮನುಕುಲಕ್ಕೆ ಆಶೀರ್ವಾದ ಮಾಡಿದವರು. ಯಾವುದೇ ಜಾತಿ, ಮತ, ಪಂಥ, ವರ್ಗ ಭೇದ ಇಲ್ಲದೆ 10 ಸಾವಿರಕ್ಕೂ ಅಧಿಕ ಮಕ್ಕಳಿಗೆ ಶಿಕ್ಷಣ ನೀಡಿದವರು. ಅಂತಹ ಮಹಾನ್ ಪುರುಷರ ದಾರಿಯಲ್ಲಿ ಕಿಂಚಿತ್ತಾದರೂ ಸಾಗುವುದೇ ಅವರಿಗೆ ಗೌರವ ಸಲ್ಲಿಸಿದಂತಾಗುತ್ತದೆ ಎಂದರು.
ಮಹಾನಗರ ಪಾಲಿಕೆ ಸದಸ್ಯ ಆವರಗೆರೆ ಎಚ್.ಜಿ. ಉಮೇಶ್, ಭಾರತ ಕಮ್ಯೂನಿಷ್ಟ್ ಪಕ್ಷ(ಸಿಪಿಐ) ಖಜಾಂಚಿ ಆನಂದರಾಜ್, ಆವರಗೆರೆ ವಾಸು, ಸರೋಜಾ, ನಿಂಗಪ್ಪ ಇತರರು ಇದ್ದರು.
ಸಿಪಿಐ, ಇರ್ಪಾದಿಂದ ಗಾಯನ ನಮನ
ದಾವಣಗೆರೆ: ನಡೆದಾಡುವ ದೇವರು, ತ್ರಿವಿಧ ದಾಸೋಹಿ, ಶತಾಯುಷಿ ಸಿದ್ಧಗಂಗೆಯ ಪೀಠಾಧಿಪತಿ ಡಾ| ಶಿವಕುಮಾರ ಸ್ವಾಮೀಜಿಯವರಿಗೆ ದೇವನಗರಿ ದಾವಣಗೆರೆಯಲ್ಲಿ ಮಂಗಳವಾರ ಭಾರತ ಕಮ್ಯೂನಿಷ್ಟ್ ಪಕ್ಷ(ಸಿಪಿಐ), ಭಾರತೀಯ ಜನಕಲಾ ಸಮಿತಿ(ಇರ್ಪಾ), ಸಾಮೂಹಿಕ ಸಂಘಟನೆಯಿಂದ ಹಾಡುಗಳ ಮೂಲಕ ಭಕ್ತಿಪೂರ್ವಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಶ್ರೀಜಯದೇವ ವೃತ್ತದಲ್ಲಿ ನಡೆದ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಇರ್ಪಾ ಕಲಾವಿದರಾದ ಐರಣಿ ಚಂದ್ರು, ಅಂಜಿನಪ್ಪ ಲೋಕಿಕೆರೆ, ಪಾಲವನಹಳ್ಳಿ ಪ್ರಸನ್ನಕುಮಾರ್, ಪಿ. ಷಣ್ಮುಖಸ್ವಾಮಿ, ಕೊಂಡಯ್ಯ, ಮಾಂತೇಶ್, ಪರಶುರಾಮ್, ರಂಗನಾಥ್, ಗದಿಗೀಶ್ ಇತರರು ರಾಷ್ಟ್ರಕವಿ ಕುವೆಂಪುರವರ, ಓ ನನ್ನ ಚೇತನ… ಆಗು ನೀ ಅನಿಕೇತನ.. ಹಾಡು ಹಾಡುವ ಮೂಲಕ ಡಾ| ಶಿವಕುಮಾರ ಸ್ವಾಮೀಜಿಯವರು ಕೋಟ್ಯಂತರ ಜನರಿಗೆ ಅನ್ನ, ಅಕ್ಷರ, ಜ್ಞಾನ ದಾಸೋಹದ ಮೂಲಕ ಬಾಳಿನ ಚೇತನ ಆಗಿದ್ದಾರೆ. ಆ ಮೂಲಕ ಅನಂತತಾನಾದ ಅನಿಕೇತನ.. ವಾಗಿದ್ದಾರೆ ಎಂದು ಸ್ಮರಿಸಿದರು.
ಕೊಟಗೇನಹಳ್ಳಿ ರಾಮಯ್ಯನವರ ಶರಣಯ್ಯ… ಶರಣು… ಶರಣು… ಶರಣು… ಎನ್ನುವ ಹಾಡಿನ ಮೂಲಕ ಧಾರ್ಮಿಕ, ಆಧ್ಯಾತ್ಮಿಕ, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರದಲ್ಲಿ 111 ವರ್ಷಗಳ ಕಾಲ ನಿಸ್ವಾರ್ಥ ಸೇವೆ ಸಲ್ಲಿಸುವ ಮೂಲಕ ನಡೆದಾಡುವ ದೇವರೇ.. ಆಗಿರುವ ಡಾ| ಶಿವಕುಮಾರ ಸ್ವಾಮೀಜಿಯವರಿಗೆ ಶರಣು ಸಮರ್ಪಿಸಿದರು.
ಹಾಲಂತ ಮನಸು ಶರಣು… ದೀವಟಿಗೆಯ ಬೆಳಕಿಗೆ ಶರಣು… ಎನ್ನುವ ಸಾಲುಗಳ ಹಾಡುವ ಮೂಲಕ ಸಿದ್ಧಗಂಗೆಯ ಪೀಠಾಧಿಪತಿಯಾಗಿ ವಿಶ್ವಕ್ಕೇ ಗುರುವಾಗಿದ್ದರೂ ಮಠದಲ್ಲಿನ 15 ಸಾವಿರದಷ್ಟು ಮಕ್ಕಳ ಜೊತೆಗೆ ಮಕ್ಕಳಂತೆ ಆಟವಾಡುತ್ತಿದ್ದಂತಹ ಹಾಲಿನಂತ ಮನಸಿನ ಗುರುಗಳಾಗಿದ್ದರು ಎಂದು ಸ್ಮರಿಸಿದರು.
ದೀವಟಿಗೆಯ ಬೆಳಕಿಗೆ ಶರಣು… ಎನ್ನುವ ಸಾಲಿನ ಮೂಲಕ 1930ರಿಂದ ಸಿದ್ದಗಂಗೆಯ ಮಠಾಧಿಪತಿಯಾಗಿ ಶೈಕ್ಷಣಿಕ ಕ್ರಾಂತಿಯ ಮೂಲಕ ಲಕ್ಷಾಂತರ ಜನರ ಬಾಳಿನ ಬೆಳಕಾಗಿ ದಾರಿದೀಪವಾಗಿರುವ ಡಾ| ಶಿವಕುಮಾರ ಸ್ವಾಮೀಜಿಯವರು ದೀವಟಿಗೆ ಬೆಳಕಿನಂತೆ ಜನರ, ಸಮಾಜದ ಬೆಳಕಾಗಿದ್ದರು ಎಂದು ಕೊಂಡಾಡಿದರು.
ಮನುಜ ಜಾತಿ ತಾನೊಂದೇ ವಲಂ…. ಮನುಜ ಜಾತಿ ತಾನೊಂದೇ ಕುಲಂ… ಎನ್ನುವ ಹಾಡು ಹಾಡುವ ಮೂಲಕ ಡಾ| ಶಿವಕುಮಾರ ಸ್ವಾಮೀಜಿಯವರು ಜಾತಿ, ಮತ, ಪಂಥ, ವರ್ಗ ಎಲ್ಲವನ್ನೂ ಮೀರಿ ಇಡೀ ಮಾನವ ಕುಲ.. ಒಂದೇ ಎಂಬ ಉದಾತ್ತ ಸಂದೇಶವನ್ನು ಎಲ್ಲರಿಗೂ ಶಿಕ್ಷಣ, ಅನ್ನ, ಜ್ಞಾನ ಧಾರೆ ಎರೆಯುವ ಮೂಲಕ ಮಾನವ ಜಾತಿಯ ಶ್ರೇಷ್ಠತೆಯ ಎತ್ತಿ ಹಿಡಿದಂತಹ ಮಹಾನ್ ಮಾನವತಾವಾದಿ ಎಂಬುದನ್ನ ಸಾರಿ ಸಾರಿ ಹೇಳಲಾಯಿತು.
ದೇಶ, ಭಾಷೆಯ ಎಲ್ಲೆಯ ಮೀರಿ… ಎನ್ನುವ ಮೂಲಕ ಡಾ| ಶಿವಕುಮಾರ ಸ್ವಾಮೀಜಿಯವರ ಇಡೀ ಬದುಕು, ಸಾಗಿದ ಬಂದ ಹಾದಿ, ಸಾಧಿಸಿದ ಸಾಧನೆಗಳು, ಮಾನವ ಕುಲಕ್ಕೆ ನೀಡಿರುವಂತಹ ಮಹತ್ವದ ಅವಿಸ್ಮರಣೀಯ ಕಾಣಿಕೆ… ದೇಶ, ಭಾಷೆಯ ಎಲ್ಲೆಯನ್ನೂ ಮೀರಿ ನಿಂತಿದೆ ಎಂದು ಗುಣಗಾನ ಮಾಡುವ ಮೂಲಕ ನಡೆದಾಡುವ ದೇವರು, ತ್ರಿವಿಧ ದಾಸೋಹಿ, ಶತಾಯುಷಿ ಡಾ| ಶಿವಕುಮಾರ ಸ್ವಾಮೀಜಿಯವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Save Life: ಆಯತಪ್ಪಿ ಬಿದ್ದು ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನ ಕಾಪಾಡಿದ ಹೋಂಗಾರ್ಡ್!
Davanagere: ಕಾಂತರಾಜ್ ವರದಿ ಸ್ವೀಕರಿಸಿ ಬಹಿರಂಗಪಡಿಸಿ: ಸಿಎಂಗೆ ಆಂಜನೇಯ ಮನವಿ
Davangere: ಮದುವೆಯಾಗುವುದಾಗಿ ಯುವತಿಯರಿಗೆ 62 ಲಕ್ಷ ರೂ.ಗೂ ಹೆಚ್ಚು ವಂಚಿಸಿದವನ ಬಂಧನ
Davangere: ಮಹಿಳೆಯ ಮೇಲೆ ಕರಡಿ ದಾಳಿ
Congress Govt.,: ಅಬಕಾರಿ ಡೀಲರ್‌ಗಳಿಂದ ಸರ್ಕಾರಕ್ಕೆ 900 ಕೋಟಿ ರೂ. ಸಲ್ಲಿಕೆ: ಅಶೋಕ್
MUST WATCH
ಹೊಸ ಸೇರ್ಪಡೆ
Jhansi Hospital: ಅಗ್ನಿ ದುರಂತ, ನವಜಾತ ಶಿಶುಗಳ ಸಜೀವ ದಹನ… ಮೋದಿ ಸಂತಾಪ, ಪರಿಹಾರ ಘೋಷಣೆ
Bhairathi Ranagal Review: ರೋಣಾಪುರದ ರಣಬೇಟೆಗಾರ
Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ
Waqf Notice: ಬಸನಗೌಡ ಪಾಟೀಲ್ ಯತ್ನಾಳ್ ತಂಡದಿಂದ 1 ತಿಂಗಳು ಜನ ಜಾಗೃತಿ
Waqf Issue: ಕಾಂಗ್ರೆಸ್ ಸರಕಾರದ ವಿರುದ್ಧ ಬಿಜೆಪಿಯಿಂದ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.