ಕೊಹ್ಲಿ ಪಡೆಗೆ ಕಿವೀಸ್‌ ಸುಲಭ ತುತ್ತು


Team Udayavani, Jan 24, 2019, 12:30 AM IST

ap1232019000050a.jpg

ನೇಪಿಯರ್‌: ತನ್ನ ಕ್ರಿಕೆಟ್‌ ಪರಾಕ್ರಮವನ್ನು ಆಸ್ಟ್ರೇಲಿಯದಿಂದ ನ್ಯೂಜಿಲ್ಯಾಂಡಿಗೆ ವಿಸ್ತರಿಸಿದ ಭಾರತ, ನೇಪಿಯರ್‌ನಲ್ಲಿ ಬುಧವಾರ ನಡೆದ ಮೊದಲ ಏಕದಿನ ಮುಖಾಮುಖೀಯಲ್ಲಿ 8 ವಿಕೆಟ್‌ ಜಯಭೇರಿ ಮೊಳಗಿಸಿದೆ. 5 ಪಂದ್ಯಗಳ ಸರಣಿಗೆ ಅಪಾರ ಆತ್ಮವಿಶ್ವಾಸ ಗಳಿಸಿಕೊಂಡಿದೆ.

“ಮೆಕ್‌ಲೀನ್‌ ಪಾರ್ಕ್‌’ನಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ನ್ಯೂಜಿಲ್ಯಾಂಡ್‌ ಪ್ರವಾಸಿಗರ ದಾಳಿಗೆ ತತ್ತರಿಸಿ 38 ಓವರ್‌ಗಳಲ್ಲಿ 137 ರನ್ನಿಗೆ ಕುಸಿಯಿತು. ಭಾರತದ ಚೇಸಿಂಗ್‌ ವೇಳೆ ತೀವ್ರ ಬಿಸಿಲಿನಿಂದ ಅಡ್ಡಿಯಾದ್ದರಿಂದ ಅರ್ಧ ಗಂಟೆ ಕಾಲ ಆಟವನ್ನು ನಿಲ್ಲಿಸಬೇಕಾಯಿತು. ಬಳಿಕ ಡಿ-ಎಲ್‌ ನಿಯಮದಂತೆ ಗುರಿಯನ್ನು ಮರು ನಿಗದಿಗೊಳಿಸಿ 49 ಓವರ್‌ಗಳಲ್ಲಿ 156 ರನ್‌ ಸವಾಲು ನೀಡಲಾಯಿತು. ಭಾರತ 34.5 ಓವರ್‌ಗಳಲ್ಲಿ 2 ವಿಕೆಟಿಗೆ 156 ರನ್‌ ಬಾರಿಸಿ ಸುಲಭ ಜಯವನ್ನು ಒಲಿಸಿಕೊಂಡಿತು.

ಶಮಿ, ಕುಲದೀಪ್‌ ಕಂಟಕ
ಸೀಮರ್‌ ಮೊಹಮ್ಮದ್‌ ಶಮಿ, ರಿಸ್ಟ್‌ ಸ್ಪಿನ್ನರ್‌ ಕುಲದೀಪ್‌ ಯಾದವ್‌, ಲೆಗ್ಗಿ ಯಜುವೇಂದ್ರ ಚಾಹಲ್‌ ಸೇರಿಕೊಂಡು ವಿಲಿಯಮ್ಸನ್‌ ಪಡೆಯನ್ನು ವಿಲವಿಲ ಒದ್ದಾಡುವಂತೆ ಮಾಡಿದರು. ವಿಲಿಯಮ್ಸನ್‌ ಹೊರತುಪಡಿಸಿ ಉಳಿದವರ್ಯಾರಿಂದಲೂ ಭಾರತದ ಬೌಲಿಂಗ್‌ ದಾಳಿಗೆ ಉತ್ತರಿಸಲಾಗಲಿಲ್ಲ. ಕಪ್ತಾನನ ಆಟವಾಡಿದ ಅವರು 64 ರನ್‌ ಬಾರಿಸಿದರು (81 ಎಸೆತ, 7 ಬೌಂಡರಿ). ಆದರೆ ಅವರಿಗೆ ಇನ್ನೊಂದು ತುದಿಯಲ್ಲಿ ಬೆಂಬಲ ಸಿಗದಂತೆ ಮಾಡುವಲ್ಲಿ ಭಾರತದ ಬೌಲರ್‌ಗಳು ಭರಪೂರ ಯಶಸ್ಸು ಕಂಡರು. ವಿಲಿಯಮ್ಸನ್‌ ಹೊರತುಪಡಿಸಿದರೆ 24 ರನ್‌ ಮಾಡಿದ ರಾಸ್‌ ಟಯ್ಲರ್‌ ಅವರದೇ ಹೆಚ್ಚಿನ ಗಳಿಕೆ.

ನೇಪಿಯರ್‌ ಟ್ರ್ಯಾಕ್‌ನಲ್ಲಿ ಮೊದಲ ಓವರಿನಿಂದಲೇ ಅತ್ಯಂತ ಘಾತಕವಾಗಿ ಪರಿಣಮಿಸಿದ ಶಮಿ, ಅಪಾಯಕಾರಿ ಆರಂಭಿಕರಾದ ಮಾರ್ಟಿನ್‌ ಗಪ್ಟಿಲ್‌ (5) ಮತ್ತು ಕಾಲಿನ್‌ ಮುನ್ರೊ (8) ಅವರನ್ನು ಅಗ್ಗಕ್ಕೆ ಕೆಡವಿ ಭಾರತದ ಮೇಲುಗೈಗೆ ಮುನ್ನುಡಿ ಬರೆದರು. ಈ ಆಘಾತದಿಂದ ಚೇತರಿಸಿಕೊಳ್ಳಲು “ಬ್ಲ್ಯಾಕ್‌ ಕ್ಯಾಪ್ಸ್‌’ಗೆ ಸಾಧ್ಯವಾಗಲೇ ಇಲ್ಲ. ಶಮಿ ಸಾಧನೆ 19ಕ್ಕೆ 3 ವಿಕೆಟ್‌. ಆರರಲ್ಲಿ 2 ಓವರ್‌ಗಳನ್ನು ಮೇಡನ್‌ ಮಾಡಿದ ಶಮಿ ಅರ್ಹವಾಗಿ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.

ಸ್ಪಿನ್‌ದ್ವಯರಾದ ಕುಲದೀಪ್‌ ಮತ್ತು ಚಾಹಲ್‌ ಆತಿಥೇಯರ ಮಧ್ಯಮ ಕ್ರಮಾಂಕವನ್ನು ಸೀಳಿದರು. 39ಕ್ಕೆ 4 ವಿಕೆಟ್‌ ಕಿತ್ತ ಕುಲದೀಪ್‌ ಭಾರತದ ಯಶಸ್ವಿ ಬೌಲರ್‌. ಚಾಹಲ್‌ ಸಾಧನೆ 43ಕ್ಕೆ 2.

ಧವನ್‌, ಕೊಹ್ಲಿ ಸಾಧನೆ
ಚೇಸಿಂಗ್‌ ವೇಳೆ ಭಾರತ ರೋಹಿತ್‌ ಶರ್ಮ (11) ಅವರನ್ನು ಬೇಗನೆ ಕಳೆದುಕೊಂಡಿತು. ಆಗ ಭಾರತ 10ನೇ ಓವರಿನಲ್ಲಿ 41 ರನ್‌ ಮಾಡಿತ್ತು. ಆದರೆ ಧವನ್‌-ಕೊಹ್ಲಿ ಸೇರಿಕೊಂಡು ನಿರಾತಂಕವಾಗಿ ತಂಡವನ್ನು ಮುಂದೋಡಿಸತೊಡಗಿದರು. 2ನೇ ವಿಕೆಟಿಗೆ 81 ರನ್‌ ಒಟ್ಟುಗೂಡಿತು. ಕೊಹ್ಲಿ 45 ರನ್ನಿಗೆ ಔಟಾದರೆ (59 ಎಸೆತ, 3 ಬೌಂಡರಿ), ಧವನ್‌ 75 ರನ್‌ ಬಾರಿಸಿ ಅಜೇಯರಾಗಿ ಉಳಿದರು (103 ಎಸೆತ, 6 ಬೌಂಡರಿ). ಮತ್ತೋರ್ವ ನಾಟೌಟ್‌ ಬ್ಯಾಟ್ಸ್‌ಮನ್‌ ಅಂಬಾಟಿ ರಾಯುಡು (13).

ಈ ಬ್ಯಾಟಿಂಗ್‌ ವೇಳೆ ಧವನ್‌ 5 ಸಾವಿರ ರನ್‌ ಪೂರ್ತಿಗೊಳಿಸಿದರೆ, ಕೊಹ್ಲಿ ವಿಂಡೀಸ್‌ ಲೆಜೆಂಡ್‌ ಲಾರಾ ಅವರ ಮೊತ್ತವನ್ನು ಮೀರಿ ನಿಂತರು.

ಕ್ರಿಕೆಟ್‌ ಪಂದ್ಯಕ್ಕೆ ತಡೆಯಾದ ಸೂರ್ಯರಶ್ಮಿ!
ಮಳೆ, ಬೆಳಕಿನ ಅಭಾವ ಮುಂತಾದ ಕಾರಣಗಳಿಂದ ಕ್ರಿಕೆಟ್‌ ಪಂದ್ಯ ಸ್ಥಗಿತಗೊಳ್ಳುವುದು ಮಾಮೂಲು. ಆದರೆ ನೇಪಿಯರ್‌ನದ್ದು ಇದಕ್ಕೆ ಭಿನ್ನವಾದ ಕೇಸ್‌. ಇದು ಸೂರ್ಯನೇ ಕ್ರಿಕೆಟ್‌ ಪಂದ್ಯವನ್ನು ನಿಲ್ಲಿಸಿದ ವಿಚಿತ್ರ ವಿದ್ಯಮಾನ! 

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ, ಅದೂ ಡೇ-ನೈಟ್‌ ಪಂದ್ಯದಲ್ಲಿ ಹೀಗಾಗುತ್ತಿರುವುದು ಬಹಳ ಅಪರೂಪ.
ಇದು ಸಂಭವಿಸಿದ್ದು ಭಾರತದ ಇನ್ನಿಂಗ್ಸಿನ 10ನೇ ಓವರಿನಲ್ಲಿ. ಆಗ ಸೂರ್ಯನ ಪ್ರಖರ ಕಿರಣ ನೇರವಾಗಿ ಬ್ಯಾಟ್ಸ್‌ಮನ್‌ಗಳ ಕಣ್ಣಿಗೆ ಚುಚ್ಚುತ್ತಿತ್ತು. ಇದರಿಂದ ಅವರಿಗೆ ಚೆಂಡನ್ನು ಗುರುತಿಸಲು ಸಾಧ್ಯವಾಗಲಿಲ್ಲ. ಆಗ ಶಿಖರ್‌ ಧವನ್‌ ಅಂಪಾಯರ್‌ ಬಳಿ ವಿಷಯವನ್ನು ಪ್ರಸ್ತಾವಿಸಿದರು. ಪಂದ್ಯ ಸ್ಥಗಿತಗೊಳಿಸಿ ಸೂರ್ಯಾಸ್ತದ ತನಕ ಕಾಯಲಾಯಿತು. ಇದರಿಂದ ಸುಮಾರು 30 ನಿಮಿಷಗಳ ಆಟ ನಷ್ಟವಾಯಿತು. ಹೀಗಾಗಿ ಭಾರತದ ಗುರಿಯನ್ನು ಮರು ನಿಗದಿಗೊಳಿಸಿ 49 ಓವರ್‌ಗಳಲ್ಲಿ 156 ರನ್‌ ತೆಗೆಯುವ ಸವಾಲು ನೀಡಲಾಯಿತು.

ಸಾಮಾನ್ಯವಾಗಿ ಕ್ರಿಕೆಟ್‌ ಪಿಚ್‌ಗಳನ್ನು ಉತ್ತರ-ದಕ್ಷಿಣಕ್ಕೆ ಮುಖಮಾಡಿ ನಿರ್ಮಿಸಲಾಗುತ್ತದೆ. ಆದರೆ ನೇಪಿಯರ್‌ನಲ್ಲಿ ಇದು ಪೂರ್ವ-ಪಶ್ಚಿಮಾಭಿಮುಖವಾಗಿ ಇದೆ. ಹೀಗಾಗಿ ಸಮಸ್ಯೆ ಉದ್ಭವಿಸುತ್ತದೆ.

“ಸಂಜೆ ವೇಳೆ ಸೂರ್ಯನ ಕಿರಣ ನೇರವಾಗಿ ಬ್ಯಾಟ್ಸ್‌ಮನ್‌ಗಳ ಕಣ್ಣಿಗೆ ರಾಚುತ್ತದೆ. ಆಟಗಾರರ ಹಾಗೂ ಅಂಪಾಯರ್‌ಗಳ ಸುರಕ್ಷತೆ ನಮಗೆ ಮುಖ್ಯ. ಹೀಗಾಗಿ ಪರಿಸ್ಥಿತಿ ಸುಧಾರಿಸುವ ತನಕ ಆಟವನ್ನು ಸ್ಥಗಿತಗೊಳಿಸಲು ನಿರ್ಧರಿಸಲಾಯಿತು. 14 ವರ್ಷಗಳ ವೃತ್ತಿ ಬದುಕಿನಲ್ಲಿ ನಾನು ಇಂಥದೊಂದು ವಿದ್ಯಮಾನ ಕಂಡಿರುವುದು ಇದೇ ಮೊದಲು’ ಎಂಬುದಾಗಿ ಅಂಪಾಯರ್‌ ಶಾನ್‌ ಜಾರ್ಜ್‌ ಹೇಳಿದರು.

ಇದಕ್ಕೆ ಶೀಘ್ರವೇ ಪರಿಹಾರ ಒದಗಿಸಬೇಕು ಎಂಬುದು ನೇಪಿಯರ್‌ ಮೇಯರ್‌ ಬಿಲ್‌ ಡಾಲ್ಟನ್‌ ಪ್ರತಿಕ್ರಿಯೆ.

ಇದೇ ಮೊದಲಲ್ಲ…
ನೇಪಿಯರ್‌ನಲ್ಲಿ ಸೂರ್ಯ ರಶ್ಮಿಯಿಂದ ಕ್ರಿಕೆಟಿಗೆ ಅಡಚಣೆಯಾದದ್ದು ಇದೇ ಮೊದಲಲ್ಲ. ಮೊನ್ನೆ ಜ. 19ರಂದು ಸೆಂಟ್ರಲ್‌ ಡಿಸ್ಟ್ರಿಕ್ಟ್$Õ-ಕ್ಯಾಂಟರ್‌ಬರಿ ತಂಡಗಳ ನಡುವಿನ ಸೂಪರ್‌ ಸ್ಮ್ಯಾಶ್‌ ಪಂದ್ಯ ವೇಳೆಯೂ ಹೀಗಾಗಿತ್ತು. 2017ರ ಜನವರಿಯಲ್ಲಿ ನಡೆದ ನ್ಯೂಜಿಲ್ಯಾಂಡ್‌-ಬಾಂಗ್ಲಾದೇಶ ಟಿ20 ಪಂದ್ಯಕ್ಕೂ ಸೂರ್ಯ ಅಡ್ಡಿಪಡಿಸಿದ್ದ. ನೇಪಿಯರ್‌ ಪಂದ್ಯಗಳಿಗೆ ಸೂರ್ಯನಿಂದ ಈ ಎಲ್ಲ ಅಡಚಣೆ ಸಂಭವಿಸಿದ್ದು ಜನವರಿಯಲ್ಲೇ ಎಂಬುದು ವಿಶೇಷ.

ಉಳಿದಂತೆ ಪಾಕಿಸ್ಥಾನ-ನ್ಯೂಜಿಲ್ಯಾಂಡ್‌ ನಡುವಿನ 1996ರ ಗುಜ್ರನ್‌ವಾಲ ಏಕದಿನ ಪಂದ್ಯದ ವೇಳೆ, ಇಂಗ್ಲೆಂಡ್‌-ವೆಸ್ಟ್‌ ಇಂಡೀಸ್‌ ನಡುವಿನ 1995ರ ಓಲ್ಡ್‌ ಟ್ರಾಫ‌ರ್ಡ್‌ ಪಂದ್ಯದ ಮೊದಲ ದಿನವೂ ಸೂರ್ಯಕಿರಣದ ಪ್ರಖರತೆಯಿಂದ ಆಟಕ್ಕೆ ಅಡಚಣೆಯಾಗಿತ್ತು.

ಸ್ಕೋರ್‌ಪಟ್ಟಿ
ನ್ಯೂಜಿಲ್ಯಾಂಡ್‌

ಮಾರ್ಟಿನ್‌ ಗುಪ್ಟಿಲ್‌    ಬಿ ಶಮಿ    5
ಕಾಲಿನ್‌ ಮುನ್ರೊ    ಬಿ ಶಮಿ    8
ಕೇನ್‌ ವಿಲಿಯಮ್ಸನ್‌    ಸಿ ಶಂಕರ್‌ ಬಿ ಕುಲದೀಪ್‌    64
ರಾಸ್‌ ಟಯ್ಲರ್‌    ಸಿ ಮತ್ತು ಬಿ ಚಾಹಲ್‌    24    
ಟಾಮ್‌ ಲ್ಯಾಥಂ    ಸಿ ಮತ್ತು ಬಿ ಚಾಹಲ್‌    11
ಹೆನ್ರಿ ನಿಕೋಲ್ಸ್‌    ಸಿ ಕುಲದೀಪ್‌ ಬಿ ಜಾಧವ್‌    12
ಮಿಚೆಲ್‌ ಸ್ಯಾಂಟ್ನರ್‌    ಎಲ್‌ಬಿಡಬ್ಲ್ಯು ಶಮಿ    14    
ಡಗ್‌ ಬ್ರೇಸ್‌ವೆಲ್‌    ಬಿ ಕುಲದೀಪ್‌    7
ಟಿಮ್‌ ಸೌಥಿ    ಔಟಾಗದೆ    9
ಲಾಕಿ ಫ‌ರ್ಗ್ಯುಸನ್‌    ಸ್ಟಂಪ್ಡ್ ಧೋನಿ ಬಿ ಕುಲದೀಪ್‌    0
ಟ್ರೆಂಟ್‌ ಬೌಲ್ಟ್    ಸಿ ರೋಹಿತ್‌ ಬಿ ಕುಲದೀಪ್‌    1
ಇತರ        2
ಒಟ್ಟು  (38  ಓವರ್‌ಗಳಲ್ಲಿ ಆಲೌಟ್‌ )    157    
ವಿಕೆಟ್‌ ಪತನ: 1-5, 2-18, 3-52, 4-76, 5-107, 6-133, 7-146, 8-146, 9-148.
ಬೌಲಿಂಗ್‌:
ಭುವನೇಶ್ವರ್‌ ಕುಮಾರ್‌        5-0-20-0
ಮೊಹಮ್ಮದ್‌ ಶಮಿ        6-2-19-3
ವಿಜಯ್‌ ಶಂಕರ್‌        4-0-19-0
ಯಜುವೇಂದ್ರ ಚಾಹಲ್‌        10-0-43-2
ಕುಲದೀಪ್‌ ಯಾದವ್‌    10-1-39-4
ಕೇದಾರ್‌ ಜಾಧವ್‌    3-0-17-1
ಭಾರತ
(ಗುರಿ: 49 ಓವರ್‌ಗಳಲ್ಲಿ 156 ರನ್‌)
ಶಿಖರ್‌ ಧವನ್‌    ಔಟಾಗದೆ    75
ರೋಹಿತ್‌ ಶರ್ಮ    ಸಿ ಗಪ್ಟಿಲ್‌ ಬಿ ಬ್ರೇಸ್‌ವೆಲ್‌    11
ವಿರಾಟ್‌ ಕೊಹ್ಲಿ    ಸಿ ಲ್ಯಾಥಂ ಬಿ ಫ‌ರ್ಗ್ಯುಸನ್‌    45
ಅಂಬಾಟಿ ರಾಯುಡು    ಔಟಾಗದೆ    13
ಇತರ    12
ಒಟ್ಟು (34.5 ಓವರ್‌ಗಳಲ್ಲಿ 2 ವಿಕೆಟಿಗೆ)    156
ಬೌಲಿಂಗ್‌:
ಟ್ರೆಂಟ್‌ ಬೌಲ್ಟ್    6-1-19-0
ಟಿಮ್‌ ಸೌಥಿ    6.5-0-36-0
ಲಾಕಿ ಫ‌ಗುÕìಸನ್‌    8-0-41-1
ಡಗ್‌ ಬ್ರೇಸ್‌ವೆಲ್‌        7-0-23-1
ಮಿಚೆಲ್‌ ಸ್ಯಾಂಟ್ನರ್‌    7-0-32-0
ಪಂದ್ಯಶ್ರೇಷ್ಠ: ಮೊಹಮ್ಮದ್‌ ಶಮಿ
2ನೇ ಪಂದ್ಯ: ಜ. 26 (ಮೌಂಟ್‌ ಮೌಂಗನುಯಿ)

ವಿರಾಟ್‌ ಕೊಹ್ಲಿಗೆ ವಿಶ್ರಾಂತಿ
ನೇಪಿಯರ್‌ ಗೆಲುವಿನ ಬಳಿಕ ಸಂಭವಿಸಿದ ದಿಢೀರ್‌ ಬೆಳವಣಿಗೆಯೊಂದರಲ್ಲಿ ಟೀಮ್‌ ಇಂಡಿಯಾ ಕಪ್ತಾನ ವಿರಾಟ್‌ ಕೊಹ್ಲಿ ಅವರಿಗೆ ನ್ಯೂಜಿಲ್ಯಾಂಡ್‌ ಎದುರಿನ ಕೊನೆಯ 2 ಏಕದಿನ ಹಾಗೂ ಟಿ20 ಸರಣಿಯಿಂದ ಬಿಡುಗಡೆಗೊಳಿಸಿ ವಿಶ್ರಾಂತಿ ನೀಡಲಾಗಿದೆ. ಕೊಹ್ಲಿ ಗೈರಲ್ಲಿ ರೋಹಿತ್‌ ಶರ್ಮ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ. ಯಾವುದೇ ಬದಲಿ ಆಟಗಾರನನ್ನು ನೇಮಿಸುವುದಿಲ್ಲ ಎಂಬುದಾಗಿ ಬಿಸಿಸಿಐ ತನ್ನ ಪ್ರಕಟನೆಯಲ್ಲಿ ತಿಳಿಸಿದೆ.

ಬಿಡುವಿಲ್ಲದ ಕ್ರಿಕೆಟ್‌ ಹಾಗೂ ಒತ್ತಡವನ್ನು ಪರಿಗಣಿಸಿ ತಂಡದ ಆಡಳಿತ ಮಂಡಳಿ ಮತ್ತು ಆಯ್ಕೆ ಸಮಿತಿ ಕೊಹ್ಲಿಗೆ ವಿಶ್ರಾಂತಿ ನೀಡುವ ನಿರ್ಧಾರಕ್ಕೆ ಬಂದಿದೆ. ಆಸ್ಟ್ರೇಲಿಯ ಪ್ರವಾಸಕ್ಕೂ ಮುನ್ನ ತವರಲ್ಲಿ ನಡೆದ ವೆಸ್ಟ್‌ ಇಂಡೀಸ್‌ ಎದುರಿನ ಟಿ20 ಸರಣಿ ವೇಳೆಯೂ ಕೊಹ್ಲಿಗೆ ವಿಶ್ರಾಂತಿ ನೀಡಲಾಗಿತ್ತು.ನ್ಯೂಜಿಲ್ಯಾಂಡ್‌ ಸರಣಿ ಮುಗಿದ ಬೆನ್ನಲ್ಲೇ ಆಸ್ಟ್ರೇಲಿಯ ತಂಡ ಭಾರತಕ್ಕೆ ಪ್ರವಾಸ ಕೈಗೊಳ್ಳಲಿದ್ದು, 5 ಏಕದಿನ ಪಂದ್ಯಗಳನ್ನಾಡಲಿದೆ. ಬಳಿಕ ಐಪಿಎಲ್‌ ಹಣಾಹಣಿ ಮೊದಲ್ಗೊಳ್ಳುತ್ತದೆ.

ಎಕ್ಸ್‌ಟ್ರಾ ಇನ್ನಿಂಗ್ಸ್‌
* 2015ರ ಬಳಿಕ ಏಶ್ಯನ್‌ ತಂಡವೊಂದು ನ್ಯೂಜಿಲ್ಯಾಂಡಿನಲ್ಲಿ ಮೊದಲ ಬಾರಿಗೆ ಏಕದಿನ ಪಂದ್ಯದಲ್ಲಿ ಜಯ ಸಾಧಿಸಿತ್ತು. ಅಂದು ಶ್ರೀಲಂಕಾ ಈ ಸಾಧನೆ ಮಾಡಿತ್ತು. ಈ ಅವಧಿಯಲ್ಲಿ ಏಶ್ಯದ ತಂಡಗಳ ವಿರುದ್ಧ ಆಡಿದ ಎಲ್ಲ 15 ಪಂದ್ಯಗಳಲ್ಲೂ ನ್ಯೂಜಿಲ್ಯಾಂಡ್‌ ಜಯಿಸಿತ್ತು.
* ಭಾರತ 3,595 ದಿನಗಳ ಬಳಿಕ ನ್ಯೂಜಿಲ್ಯಾಂಡಿನಲ್ಲಿ ಮೊದಲ ಗೆಲುವು ದಾಖಲಿಸಿತು. 2009ರ ಹ್ಯಾಮಿಲ್ಟನ್‌ ಟೆಸ್ಟ್‌ ಗೆಲುವಿನ ಬಳಿಕ ಭಾರತ ಸಾಧಿಸಿದ ಮೊದಲ ಜಯ ಇದಾಗಿದೆ.
* ಗಪ್ಟಿಲ್‌ ಅವರನ್ನು ಔಟ್‌ ಮಾಡಿದ ಮೊಹಮ್ಮದ್‌ ಶಮಿ ಅತೀ ಕಡಿಮೆ ಪಂದ್ಯಗಳಲ್ಲಿ 100 ವಿಕೆಟ್‌ ಉರುಳಿಸಿದ ಭಾರತದ ಬೌಲರ್‌ ಎನಿಸಿದರು (56ನೇ ಪಂದ್ಯ). ಹಿಂದಿನ ದಾಖಲೆ ಇರ್ಫಾನ್‌ ಪಠಾಣ್‌ ಹೆಸರಲ್ಲಿತ್ತು (59 ಪಂದ್ಯ).
* ಶಮಿ 3ನೇ ಸಲ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.
* ಭಾರತದೆದುರಿನ ತವರಿನ ಪಂದ್ಯಗಳಲ್ಲಿ ಕೇನ್‌ ವಿಲಿಯಮ್ಸನ್‌ ಸತತ 7ನೇ ಅರ್ಧ ಶತಕ ಹೊಡೆದರು. ಒಟ್ಟಾರೆಯಾಗಿ ಇದು ಅವರ 36ನೇ ಫಿಫ್ಟಿ.
* ಭಾರತದೆದುರು ತವರಿನಲ್ಲಿ ನ್ಯೂಜಿಲ್ಯಾಂಡ್‌ ತನ್ನ 2ನೇ ಕನಿಷ್ಠ ಸ್ಕೋರ್‌ ದಾಖಲಿಸಿತು. 1994ರ ಆಕ್ಲೆಂಡ್‌ ಪಂದ್ಯದಲ್ಲಿ 142ಕ್ಕೆ ಆಲೌಟ್‌ ಆದದ್ದು ದಾಖಲೆ.
* ನ್ಯೂಜಿಲ್ಯಾಂಡ್‌ ಏಕದಿನವೊಂದರಲ್ಲಿ ಭಾರತದ ಸ್ಪಿನ್ನರ್‌ಗಳು ಗರಿಷ್ಠ 7 ವಿಕೆಟ್‌ ಉರುಳಿಸಿದರು. 1976ರ ಆಕ್ಲೆಂಡ್‌ ಪಂದ್ಯದಲ್ಲಿ 6 ವಿಕೆಟ್‌ ಕಿತ್ತ ದಾಖಲೆ ಪತನಗೊಂಡಿತು.
* ನ್ಯೂಜಿಲ್ಯಾಂಡ್‌ 20 ವರ್ಷಗಳ ಬಳಿಕ ಏಕದಿನವೊಂದರಲ್ಲಿ ಗರಿಷ್ಠ 7 ವಿಕೆಟ್‌ಗಳನ್ನು ಸ್ಪಿನ್ನರ್‌ಗಳಿಗೆ ಒಪ್ಪಿಸಿತು. 1998ರ ಆಕ್ಲೆಂಡ್‌ ಪಂದ್ಯದಲ್ಲಿ ಜಿಂಬಾಬ್ವೆ ಸ್ಪಿನ್ನರ್‌ಗಳೂ 7 ವಿಕೆಟ್‌ ಹಾರಿಸಿದ್ದರು.
* ಶಿಖರ್‌ ಧವನ್‌ 118 ಇನ್ನಿಂಗ್ಸ್‌ಗಳಲ್ಲಿ 5 ಸಾವಿರ ರನ್‌ ಪೂರ್ತಿಗೊಳಿಸಿದರು. ಕಡಿಮೆ ಇನ್ನಿಂಗ್ಸ್‌ಗಳ ಲೆಕ್ಕಾಚಾರದಲ್ಲಿ ಇದು 4ನೇ, ಭಾರತದ 2ನೇ ಅತೀ ವೇಗದ ಸಾಧನೆಯಾಗಿದೆ. ಉಳಿದ ಸಾಧಕರೆಂದರೆ ಆಮ್ಲ (101), ರಿಚರ್ಡ್ಸ್‌ (114) ಮತ್ತು ಕೊಹ್ಲಿ (114).
* ಧವನ್‌ 9 ಇನ್ನಿಂಗ್ಸ್‌ಗಳ ಬಳಿಕ ಮೊದಲ ಅರ್ಧ ಶತಕ ಹೊಡೆದರು.
* ಒಟ್ಟು ರನ್‌ ಗಳಿಕೆಯಲ್ಲಿ ವಿರಾಟ್‌ ಕೊಹ್ಲಿ ವಿಂಡೀಸಿನ ಬ್ರಿಯಾನ್‌ ಲಾರಾ ದಾಖಲೆಯನ್ನು ಹಿಂದಿಕ್ಕಿ 10ನೇ ಸ್ಥಾನ ಅಲಂಕರಿಸಿದರು. ಕೊಹ್ಲಿ 10,430 ರನ್‌, ಲಾರಾ 10,045 ರನ್‌ ಹೊಡೆದಿದ್ದಾರೆ.

ಟಾಪ್ ನ್ಯೂಸ್

1-aaccc

PoK ಪ್ರದೇಶದಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು: ಬಿಸಿಸಿಐ ನಿಂದ ತೀವ್ರ ಖಂಡನೆ

Ashok-1

Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್‌.ಅಶೋಕ್‌

HDK (4)

50 cr for 50 Cong MLAs ; ಎಸ್ ಐಟಿ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ಒತ್ತಾಯ

1-kangu

‘Kanguva’; ಮೊದಲ ದಿನವೇ 58.62 ಕೋಟಿ ರೂ. ಬಾಚಿದ ಕಂಗುವ

Ajit Pawar

BJP;’ಬಟೆಂಗೆ ತೊ ಕಟೆಂಗೆ’ ಹೇಳಿಕೆಗೆ ಬೆಂಬಲವಿಲ್ಲ ಎಂದ ಅಜಿತ್ ಪವಾರ್

01

Catacombs: ಇದು ಎಲುಬುಗಳೇ ತುಂಬಿಕೊಂಡ ಸುರಂಗ; ಸುಂದರ ದೇಶದ ಕರಾಳ ಇತಿಹಾಸ

DVG-Rail

Save Life: ಆಯತಪ್ಪಿ ಬಿದ್ದು ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನ ಕಾಪಾಡಿದ ಹೋಂಗಾರ್ಡ್‌!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-aaccc

PoK ಪ್ರದೇಶದಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು: ಬಿಸಿಸಿಐ ನಿಂದ ತೀವ್ರ ಖಂಡನೆ

Kiwi player will be away from Test cricket after the England series

Test: ಇಂಗ್ಲೆಂಡ್‌ ಸರಣಿಯ ಬಳಿಕ ಟೆಸ್ಟ್‌ ಕ್ರಿಕೆಟ್‌ ನಿಂದ ದೂರವಾಗಲಿದ್ದಾರೆ ಕಿವೀಸ್‌ ಆಟಗಾರ

Ranji Trophy: ಇನ್ನಿಂಗ್ಸ್‌ ನ ಎಲ್ಲಾ 10 ವಿಕೆಟ್‌ ಕಿತ್ತು ಅನ್ಶುಲ್‌ ಕಾಂಬೋಜ್‌ ದಾಖಲೆ

Ranji Trophy: ಇನ್ನಿಂಗ್ಸ್‌ ನ ಎಲ್ಲಾ 10 ವಿಕೆಟ್‌ ಕಿತ್ತು ಅನ್ಶುಲ್‌ ಕಾಂಬೋಜ್‌ ದಾಖಲೆ

India Vs India A ಅಭ್ಯಾಸ ಪಂದ್ಯ: ಅಗ್ಗಕ್ಕೆ ಔಟಾದ ಕೊಹ್ಲಿ, ಪಂತ್;‌ ಗಾಯಗೊಂಡ ರಾಹುಲ್

India Vs India A ಅಭ್ಯಾಸ ಪಂದ್ಯ: ಅಗ್ಗಕ್ಕೆ ಔಟಾದ ಕೊಹ್ಲಿ, ಪಂತ್;‌ ಗಾಯಗೊಂಡ ರಾಹುಲ್

India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ

India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

Padubidri-Police

Padubidri: ನವವಿವಾಹಿತೆಗೆ ಕಿರುಕುಳ; ಪತಿಯ ಮನೆಮಂದಿ ವಿರುದ್ಧ ದೂರು

POLICE-5

Karkala: ಗೋವಾ ಮದ್ಯ ಅಕ್ರಮ ದಾಸ್ತಾನು ಪ್ರಕರಣ; ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚನೆ

5

Karkala: ದ್ವೇಷ ಭಾವನೆ ಕೆರಳಿಸುವ ಆರೋಪ; ದೂರು ದಾಖಲು

1-aaccc

PoK ಪ್ರದೇಶದಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು: ಬಿಸಿಸಿಐ ನಿಂದ ತೀವ್ರ ಖಂಡನೆ

Ashok-1

Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್‌.ಅಶೋಕ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.