ಫೆಲುಕ್ವಾಯೊ ಆಲ್‌ರೌಂಡ್ ಶೋ ದಕ್ಷಿಣ ಆಫ್ರಿಕಾ ತಿರುಗೇಟು
Team Udayavani, Jan 24, 2019, 12:30 AM IST
ಡರ್ಬನ್: ಆ್ಯಂಡಿಲ್ ಫೆಲುಕ್ವಾಯೊ ಅವರ ಅಮೋಘ ಆಲ್‌ರೌಂಡ್ ಪ್ರದರ್ಶನದಿಂದ ಡರ್ಬನ್ ಏಕದಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸಿ ಪಾಕಿಸ್ಥಾನಕ್ಕೆ ತಿರುಗೇಟು ನೀಡುವಲ್ಲಿ ಯಶಸ್ವಿಯಾಗಿದೆ. ಸರಣಿ 1-1 ಸಮಬಲಕ್ಕೆ ಬಂದಿದೆ.ಮಂಗಳವಾರ ರಾತ್ರಿಯ ಈ ಸಣ್ಣ ಮೊತ್ತದ ಈ ಮೇಲಾಟದಲ್ಲಿ ಪಾಕಿಸ್ಥಾನ 45.5 ಓವರ್‌ಗಳಲ್ಲಿ 203ಕ್ಕೆ ಕುಸಿದರೆ, ದಕ್ಷಿಣ ಆಫ್ರಿಕಾ 42 ಓವರ್‌ಗಳಲ್ಲಿ 5 ವಿಕೆಟಿಗೆ 207 ರನ್ ಮಾಡಿ ಗೆಲುವು ಒಲಿಸಿಕೊಂಡಿತು.
ಫೆಲುಕ್ವಾಯೊ ಪಾಕಿಸ್ಥಾನದ ಕುಸಿತದ ಹಾಗೂ ಯಶಸ್ವಿ ರನ್ ಚೇಸಿಂಗ್‌ನ ರೂವಾರಿಯಾಗಿ ಕಾಣಿಸಿಕೊಂಡರು. ಬೌಲಿಂಗ್ ದಾಳಿಯ ವೇಳೆ 22 ರನ್ನಿತ್ತು 4 ವಿಕೆಟ್ ಕಿತ್ತರೆ, ಚೇಸಿಂಗ್ ವೇಳೆ ಅಜೇಯ 69 ರನ್ ಸಿಡಿಸಿದರು. 80 ಎಸೆತಗಳ ಈ ಇನ್ನಿಂಗ್ಸ್‌ನಲ್ಲಿ 7 ಫೋರ್ ಹಾಗೂ 2 ಸಿಕ್ಸರ್ ಸೇರಿತ್ತು.
ಡ್ಯುಸೆನ್-ಫೆಲುಕ್ವಾಯೊ ಸಾಹಸ
ಚೇಸಿಂಗಿಗೆ ಇಳಿದ ದಕ್ಷಿಣ ಆಫ್ರಿಕಾ ಆರಂಭದಲ್ಲಿ ತೀವ್ರ ಕುಸಿತಕ್ಕೆ ಸಿಲುಕಿತ್ತು. 29ಕ್ಕೆ 3, 80ಕ್ಕೆ 4 ವಿಕೆಟ್ ಹಾರಿ ಹೋಗಿತ್ತು. ಆರಂಭಿಕರಾದ ಹೆಂಡ್ರಿಕ್ಸ್ (5) ಮತ್ತು ಆಮ್ಲ (8) 15 ರನ್ ಆಗುವಷ್ಟರಲ್ಲಿ ಶಹೀನ್ ಅಫ್ರಿದಿ ಮೋಡಿಗೆ ಸಿಲುಕಿದ್ದರು. ನಾಯಕ ಡು ಪ್ಲೆಸಿಸ್ ಗಳಿಕೆ 8 ರನ್ ಮಾತ್ರ. ಆಗ ಆಫ್ರಿಕಾ ಸೋಲಿನ ಭೀತಿಗೆ ಸಿಲುಕಿತ್ತು. ಆದರೆ ವಾನ್ ಡರ್ ಡ್ಯುಸೆನ್ ಒಂದೆಡೆ ಕ್ರೀಸ್ ಆಕ್ರಮಿಸಿಕೊಂಡು ತಂಡಕ್ಕೆ ನೆರವಾದರು. ಡ್ಯುಸೆನ್ ಕೊಡುಗೆ ಅಜೇಯ 80 ರನ್ (123 ಎಸೆತ, 9 ಬೌಂಡರಿ). ಈ ನಡುವೆ ಮಿಲ್ಲರ್ 31 ರನ್ ಮಾಡಿ ನಿರ್ಗಮಿಸಿದರು.
ಡ್ಯುಸೆನ್-ಫೆಲುಕ್ವಾಯೊ 6ನೇ ವಿಕೆಟಿಗೆ 127 ರನ್ ಪೇರಿಸಿ ತಂಡವನ್ನು ದಡ ಮುಟ್ಟಿಸಿದರು.
ಸಂಕ್ಷಿಪ್ತ ಸ್ಕೋರ್: ಪಾಕಿಸ್ಥಾನ-45.5 ಓವರ್‌ಗಳಲ್ಲಿ 203 (ಹಸನ್ ಅಲಿ 59, ಸಫìರಾಜ್ 41, ಫಕಾರ್ 26, ಫೆಲುಕ್ವಾಯೊ 22ಕ್ಕೆ 4, ಶಮಿÕ 56ಕ್ಕೆ 3, ರಬಾಡ 35ಕ್ಕೆ 2). ದಕ್ಷಿಣ ಆಫ್ರಿಕಾ-42 ಓವರ್‌ಗಳಲ್ಲಿ 5 ವಿಕೆಟಿಗೆ 207 (ಡ್ಯುಸೆನ್ ಔಟಾಗದೆ 80, ಫೆಲುಕ್ವಾಯೊ ಔಟಾಗದೆ 69, ಅಫ್ರಿದಿ 44ಕ್ಕೆ 3, ಶಾಬಾದ್ 46ಕ್ಕೆ 2).
ಪಂದ್ಯಶ್ರೇಷ್ಠ: ಆ್ಯಂಡಿಲ್ ಫೆಲುಕ್ವಾಯೊ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.