ಇಂಡೋನೇಶ್ಯ ಮಾಸ್ಟರ್ ಮೊದಲ ಸುತ್ತು ದಾಟಿದ ಸೈನಾ,ಸಿಂಧು
Team Udayavani, Jan 25, 2019, 12:30 AM IST
ಜಕಾರ್ತಾ: ಭಾರತದ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಭಾರೀ ಹೋರಾಟದ ಬಳಿಕ “ಇಂಡೋನೇಶ್ಯ ಮಾಸ್ಟರ್’ ಕೂಟದ ದ್ವಿತೀಯ ಸುತ್ತು ಪ್ರವೇಶಿಸಿದ್ದಾರೆ. ಉಳಿದ ಆಟಗಾರರಾದ ಬಿ. ಸಾಯಿ ಪ್ರಣೀತ್, ಶುಭಂಕರ್ ಡೇ ಮತ್ತು ಪಿ. ಕಶ್ಯಪ್ ಆರಂಭಿಕ ಸುತ್ತಿನ ಪಂದ್ಯದಲ್ಲೇ ಸೋತು ಕೂಟದಿಂದ ನಿರ್ಗಮಿಸಿದ್ದಾರೆ.
ಬುಧವಾರ ನಡೆದ ವನಿತಾ ಸಿಂಗಲ್ಸ್ ವಿಭಾಗದ ಪಂದ್ಯದಲ್ಲಿ 8ನೇ ಶ್ರೇಯಾಂಕಿತೆ ಸೈನಾ ಸ್ಥಳೀಯ ಆಟಗಾರ್ತಿ ದಿನಾರ್ ಯಾಹ್ ಅಯುಸ್ಟಿನ್ ವಿರುದ್ಧ 7-21, 21-16, 21-11 ಗೇಮ್‌ಗಳಿಂದ ಗೆಲುವು ದಾಖಲಿಸಿದರು. ಅಯುಸ್ಟಿನ್ ವಿರುದ್ಧ ಸೈನಾ ಸಾಧಿಸಿದ 3ನೇ ಗೆಲುವಾಗಿದೆ. ಮುಂದಿನ ಪಂದ್ಯದಲ್ಲಿ ಸೈನಾ ಮತ್ತೋರ್ವ ಸ್ಥಳೀಯ ಆಟಗಾರ್ತಿ ಫಿಟ್ರಿಯಾನಿ ಫಿಟ್ರಿಯಾನಿ ವಿರುದ್ಧ ಆಡಲಿದ್ದಾರೆ. ಇವರ ವಿರುದ್ಧ ಸೈನಾ 4-0 ಗೆಲುವಿನ ದಾಖಲೆ ಹೊಂದಿದ್ದಾರೆ.
ಕಶ್ಯಪ್, ಪ್ರಣೀತ್ ಪರಾಭವ
ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಪಂದ್ಯದಲ್ಲಿ ಪಾರುಪಳ್ಳಿ ಕಶ್ಯಪ್ ಸ್ಥಳೀಯ ಆಟಗಾರ ಆ್ಯಂಟನಿ ಸಿನಿಸುಕ ವಿರುದ್ಧ 12-21, 16-21 ಗೇಮ್‌ಗಳಿಂದ ಸೋತರು. ಕಳೆದ ವಾರವಷ್ಟೇ ಮುಕ್ತಾಯಗೊಂಡ ಮಲೇಶ್ಯ ಮಾಸ್ಟರ್ ಕೂಟದ ದ್ವಿತೀಯ ಸುತ್ತಿನಲ್ಲೂ ಕಶ್ಯಪ್ ಆ್ಯಂಟನಿಗೆ ಸೋತಿದ್ದರು.ಪುರುಷರ ಮತ್ತೂಂದು ಪಂದ್ಯದಲ್ಲಿ ಬಿ. ಸಾಯಿ ಪ್ರಣೀತ್ 12-21, 16-21 ಗೇಮ್‌ಗಳಿಂದ ಒಲಿಂಪಿಕ್ ಚಾಂಪಿಯನ್, ಚೀನದ ಚೆನ್ ಲಾಂಗ್ ವಿರುದ್ಧ ಎಡವಿದರು.
ಸೋಮವಾರವಷ್ಟೇ ಪ್ರಧಾನ ಸುತ್ತಿಗೆ ಅರ್ಹತೆ ಪಡೆದ ಶುಭಂಕರ್ ಡೇ ಮಾಜಿ ವಿಶ್ವ ಚಾಂಪಿಯನ್, ಡೆನ್ಮಾರ್ಕ್‌ನ ವಿಕ್ಟರ್ ಎಕ್ಸೆಲ್‌ಸನ್ ಅವರಿಗೆ ತೀವ್ರ ಪೈಪೋಟಿ ನೀಡಿಯೂ 14-21, 21-19, 15-17 ಗೇಮ್‌ಗಳಿಂದ ಸೋಲು ಕಾಣಬೇಕಾಯಿತು.
ಪುರುಷರ ಜೋಡಿಗೆ ಜಯ
ಡಬಲ್ಸ್ ವಿಭಾಗದಲ್ಲಿ ರಾಷ್ಟ್ರೀಯ ಚಾಂಪಿಯನ್ ಮನು ಅತ್ರಿ-ಬಿ. ಸುಮೀತ್ ರೆಡ್ಡಿ ಜೋಡಿ ಡೆನ್ಮಾರ್ಕ್‌ನ ಮಾಡ್ಸ್ ಪೀಲರ್ ಕೊಲ್ಡಿಂಗ್-ನಿಕ್ಲಾಸ್ ನೊಹ್ ಜೋಡಿ ವಿರುದ್ಧ 14-21, 21-19, 21-15 ಗೇಮ್‌ಗಳಿಂದ ಜಯ ಸಾಧಿಸಿತು.
ವನಿತಾ ಡಬಲ್ಸ್ ವಿಭಾಗದಲ್ಲಿ ಅಶ್ವಿನಿ ಪೊನ್ನಪ್ಪ-ಎನ್. ಸಿಕ್ಕಿ ರೆಡ್ಡಿ ಅವರನ್ನು ಥಾಯ್ಲೆಂಡ್‌ನ ಜಾಂಗ್‌ಕೊಲ್ಫಾನ್ ಕಿಟಿಥರಕುಲ್-ರವಿಂದಾ ಪ್ರಜೋಂಗ್‌ಜಾಯ್ ಜೋಡಿ 21-14, 19-21, 21-15 ಗೇಮ್‌ಗಳಿಂದ ಸೋಲಿಸಿತು.
ಸಿಂಧು, ಶ್ರೀಕಾಂತ್ ಗೆಲುವಿನ ಆಟ
ರಾತ್ರಿ ನಡೆದ ವನಿತಾ ಸಿಂಗಲ್ಸ್ ಪಂದ್ಯದಲ್ಲಿ ಪಿ.ವಿ. ಸಿಂಧು 3 ಗೇಮ್‌ಗಳ ಕಾದಾಟದ ಬಳಿಕ ಚೀನದ ಲೀ ಕ್ಸುರುಯಿ ವಿರುದ್ಧ 22-24, 21-8, 21-17 ಅಂತರದ ಗೆಲುವು ಸಾಧಿಸಿ ದ್ವಿತೀಯ ಸುತ್ತು ಪ್ರವೇಶಿಸಿದರು.
ಇದೇ ವೇಳೆ ನಡೆದ ಪುರುಷರ ಸಿಂಗಲ್ಸ್ ಮುಖಾಮುಖೀಯಲ್ಲಿ ಕೆ. ಶ್ರೀಕಾಂತ್ ಮಲೇಶ್ಯದ ಚೆಂಗ್ ವೀ ಫೆಂಗ್ ಅವರನ್ನು 21-12, 21-8 ನೇರ ಗೇಮ್‌ಗಳಲ್ಲಿ ಮಣಿಸಿ ಶುಭಾರಂಭ ಮಾಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
8 ಮಸೂದೆ ಮಂಡನೆಗೆ ಸಂಪುಟ ಒಪ್ಪಿಗೆ; ವಿಧಾನಮಂಡಲದ ಅಧಿವೇಶನದಲ್ಲಿ ಮಂಡನೆ
Elephant: ಬಂಡೀಪುರದಲ್ಲಿ ಆನೆ ಮೃತದೇಹ ಪತ್ತೆ: ಆಂಥ್ರಾಕ್ಸ್ ಸೋಂಕು ಶಂಕೆ
Ballari District Hospital: ಬಾಣಂತಿಯರ ಸಾವಿಗೆ ವೈದ್ಯರಲ್ಲ, ದ್ರಾವಣ ಕಾರಣ’
ನಕ್ಸಲರ ಪತ್ತೆಗೆ ಶಿವಮೊಗ್ಗ ಪೊಲೀಸರು ಸಜ್ಜು : ಎಎನ್‌ಎಫ್ ಮಾದರಿಯಲ್ಲಿ ವಿಶೇಷ ಪೊಲೀಸ್ ಪಡೆ
Hassan: ಅಂಗಾಂಗ ದಾನ ಮಾಡಿ ಸಾವಿನಲ್ಲೂ ಸಾರ್ಥಕ್ಯ ಮೆರೆದ ಕಾರ್ಮಿಕನ ಕುಟುಂಬ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.