ಟೋಲ್ ವಿನಾಯಿತಿಗಾಗಿ ಆಮರಣಾಂತ ಉಪವಾಸ
Team Udayavani, Jan 24, 2019, 12:50 AM IST
ಪಡುಬಿದ್ರಿ: ಉಡುಪಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ, ಪಡುಬಿದ್ರಿಯ ನಾಗರಿಕ ಸಮಿತಿ ಸದಸ್ಯರು, ಅಪರ ಜಿಲ್ಲಾಧಿಕಾರಿ ವಿದ್ಯಾ ಕುಮಾರಿ, ತಹಶೀಲ್ದಾರ್ ಪ್ರದೀಪ್ ಕುಡೇìಕರ್ ಮತ್ತು ನವಯುಗ ನಿರ್ಮಾಣ ಕಂಪೆನಿಯ ರಾಘವೇಂದ್ರ ಅವರೊಂದಿಗೆ ಪಡುಬಿದ್ರಿ ಜಿ. ಪಂ. ವ್ಯಾಪ್ತಿಯ ಎಲ್ಲ ವಾಹನಗಳಿಗೆ ಸುಂಕ ವಿನಾಯಿತಿಗಾಗಿ ನಡೆಸಲಾದ ಸಭೆಯಲ್ಲಿ ಯಾವುದೇ ತೀರ್ಮಾನಕ್ಕೆ ಬರಲಾಗಿಲ್ಲ. ನಾಳೆಯಿಂದ ಕರವೇ ಪಡುಬಿದ್ರಿಯಲ್ಲಿ ಆಮರಣಾಂತ ಉಪವಾಸವನ್ನು ಆರಂಭಿಸಲಿದೆ.
ಜಿಲ್ಲೆಯಲ್ಲಿ ಸಾಸ್ತಾನ ಟೋಲ್ ಗೇಟ್‌ನಲ್ಲಿ ನೀಡಿದಂತಹ ವಿನಾಯಿತಿಯನ್ನು ಹೆಜಮಾಡಿಯಲ್ಲಿ ಪಡುಬಿದ್ರಿ ಜಿಲ್ಲಾ ಪಂಚಾಯ್ ವ್ಯಾಪ್ತಿಗೂ ನೀಡಲೇ ಬೇಕು. ನವಯುಗ ಕಂಪೆನಿ ಅವೈಜ್ಞಾನಿಕ ಕಾಮಗಾರಿಗಳಿಂದ ಅದೆಷ್ಟೋ ಜೀವಹಾನಿಗಳಾಗಿವೆ. ಜಿಲ್ಲೆಯ ಎಲ್ಲೂ ಹಸುರು ಹೊದಿಕೆಯ ಕೆಲಸ ಕಾರ್ಯಗಳಾಗಿಲ್ಲ. ಜನ ಸಾಮಾನ್ಯರಿಗಾಗಿ ಬಸ್ ನಿಲ್ದಾಣಗಳನ್ನು ರಚಿಸಲಾಗಿಲ್ಲ. ಸರ್ವಿಸ್ ರಸ್ತೆ ಮೊದಲೇ ಇಲ್ಲ. ಹೆಜಮಾಡಿಯಲ್ಲಿ ಸ್ಕೈವಾಕ್ ನಿರ್ಮಾಣ ಅತ್ಯಗತ್ಯವಾಗಿದ್ದು ಅದನ್ನೂ ನಿಭಾಯಿಸದೇ ಕೇವಲ ಟೋಲ್ ವಸೂಲಿಗಾಗಿ ಜನತೆಯನ್ನು ಪೀಡಿಸಲಾಗುತ್ತಿದೆ.
ತಮ್ಮ ಪ್ರತಿಭಟನೆ ಯೊಂದಿಗೆ ನಾಳೆಯಿಂದ ಆಮರಣಾಂತ ಉಪವಾಸವನ್ನೂ ಆರಂಭಿಸುವ ನಿರ್ಧಾರವನ್ನೂ ಪಡುಬಿದ್ರಿ ನಾಗರಿಕ ಸಮಿತಿಯ ಅಧ್ಯಕ್ಷ ನವೀನ್‌ಚಂದ್ರ ಜೆ. ಶೆಟ್ಟಿ ಹಾಗೂ ಕರವೇ ನಾಯಕ ಅನ್ಸಾರ್ ಅಹಮ್ಮದ್ ಮತ್ತಿತರರು ಅಪರ ಜಿಲ್ಲಾಧಿಕಾರಿ ಸಮಕ್ಷಮ ನಡೆದ ಸಭೆಯಲ್ಲಿ ಹೇಳಿದರು.
ಸಭೆಯಲ್ಲಿ ಡಾ| ದೇವಿಪ್ರಸಾದ್ ಶೆಟ್ಟಿ, ಗುಲಾಂ ಮಹಮ್ಮದ್, ಮೂಲ್ಕಿಯ ನಾಗರಿಕ ಸಮಿತಿ ಅಧ್ಯಕ್ಷ, ಮೂಲ್ಕಿ ಪುರಸಭಾಧ್ಯಕ್ಷ ಸುನಿಲ್ ಅಳ್ವ , ಮೂಲ್ಕಿ ಕಾರು ಚಾಲಕ ಮಾಲಕರ ಸಂಘದ ಅಧ್ಯಕ್ಷ ಮಧು ಆಚಾರ್ಯ, ದಸಂಸ ನಾಯಕ ಲೋಕೇಶ್ ಕಂಚಿನಡ್ಕ ಮತ್ತಿತರರು ಮಾತನಾಡಿದರು.
ಇದೇ ವೇಳೆ ನವಯುಗ ಅಧಿಕಾರಿ ರಾಘವೇಂದ್ರ ಯಾವುದೇ ತಿರ್ಮಾನಕ್ಕೆ ಬರಲು ಇನ್ನೂ ಮೂರು ದಿನಗಳ ಕಾಲಾವಕಾಶವನ್ನು ಬಯಸಿದರು.
ಪಡುಬಿದ್ರಿಯ ಟೆಂಪೋ ನಿಲ್ದಾಣದ ಬಳಿ ತಮ್ಮ ಪ್ರತಿಭಟನ ಸ್ಥಳದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಅನ್ಸಾರ್ ಅಹಮ್ಮದ್ ಹಾಗೂ ಕಾಪು ಘಟಕಾಧ್ಯಕ್ಷ ಸೆಯ್ಯದ್ ನಿಝಾಮ್ ಮತ್ತಿತರರು ತಮ್ಮ ಆಮರಣಾಂತ ಉಪವಾಸವನ್ನು ಆರಂಭಿಸಲಿರುವುದಾಗಿ ಆಸೀಫ್ ಆಪದಾºಂಧವ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.