ರಸ್ತೆ ಕಾಮಗಾರಿಗೆ ಅಳವಡಿಸಿದ ಕ್ರಶರ್‌ನಿಂದ ಧೂಳಿನ ಕಾಟ 


Team Udayavani, Jan 24, 2019, 12:50 AM IST

crusher.jpg

ಕಟಪಾಡಿ: ಮಟ್ಟು ಕಡಲ ಕಿನಾರೆಯ ಬಳಿಯ ರಸ್ತೆ ದುರಸ್ಥಿ ಕಾಮಗಾರಿಯಿಂದಾಗಿ ಸ್ಥಳೀಯ ನಿವಾಸಿಗಳು ನಿತ್ಯ ಕ್ರಶರ್‌ ಧೂಳು ತಿನ್ನುವ ಸಂಕಷ್ಟ ಅನುಭವಿಸುವಂತಾಗಿದೆ. ಇದಕ್ಕೆ ಗಾಯದ ಮೇಲೆ ಉಪ್ಪು ಸವರಿದಂತೆ ಕಾಮಗಾರಿಯೂ ಮಂದಗತಿಯಲ್ಲಿ ಸಾಗುತ್ತಿರುವುದು ಜನರನ್ನು ಮತ್ತಷ್ಟು ಕಷ್ಟಕ್ಕೆ ದೂಡಿದೆ.  

ನಿತ್ಯ ಧೂಳು ತಿನ್ನುವ ಜನ
ಮಳೆಯಿಂದಾಗಿ ಹಾನಿಗೊಂಡಿದ್ದ ಉಳಿಯಾರಗೋಳಿ-ಪಡುಕರೆ-ಮಲ್ಪೆ ಸಂಪರ್ಕದ ರಸ್ತೆ ದುರಸ್ತಿ ಕಾಮಗಾರಿಗೆ ಡಿ.16ರಂದು ಮಳೆಹಾನಿ ದುರಸ್ತಿ ಯೋಜನೆಯಡಿ ಅಂದಾಜು 75 ಲಕ್ಷ ರೂ. ವೆಚ್ಚದಲ್ಲಿ ಮಟ್ಟು ಬೀಚ್‌ ಬಳಿ ಕಾಪು ಶಾಸಕ ಲಾಲಾಜಿ ಆರ್‌ ಮೆಂಡನ್‌ ಅವರು 1.50 ಕಿ.ಮೀ. ವ್ಯಾಪ್ತಿಯ ಈ ಕಾಮಗಾರಿಗೆ ಗುದ್ದಲಿ ಪೂಜೆ ನಡೆಸಿದ್ದರು. ಬೆರಳೆಣಿಕೆಯ ದಿನಗಳಲ್ಲಿಯೇ ಕಾಮಗಾರಿ ಆರಂಭಗೊಂಡಿತ್ತು. ಇನ್ನೇನು ಶೀಘ್ರದಲ್ಲಿಯೇ ಕಾಮಗಾರಿ ನಡೆದು ಸುವ್ಯವಸ್ಥಿತ ಸಂಚಾರಕ್ಕೆ ಅವಕಾಶ ಆಗ ಬಲ್ಲುದು ಎಂದು ನಿಟ್ಟುಸಿರುಬಿಟ್ಟ ಈ ಭಾಗದ ಜನತೆಗೆ ಇದೀಗ ನಿತ್ಯ ನಿರಾಶೆ ಎದುರಿಸುವಂತಾಗಿದೆ. 

ಊಟ, ಆಹಾರ ಸೇವಿಸುವಂತಿಲ್ಲ 
ರಸ್ತೆ ದುರಸ್ತಿ ಕಾಮಗಾರಿಗೆ ಅಳವಡಿಸಲಾದ ಜಲ್ಲಿ, ಕ್ರಶರ್‌ ಹುಡಿಯು ವಾಹನಗಳ ಸಂಚಾರದ ಸಂದರ್ಭ ಎದ್ದೇಳುವ ಧೂಳಿನಿಂದ ಮನೆಯೊಳಗೆ ಊಟ, ಆಹಾರ ಸೇವಿಸುವಂತಿಲ್ಲ. ಏಕೆಂದರೆ ಈ ರಸ್ತೆಯಲ್ಲಿ ವಾಹನ ಸಂಚರಿಸುವಾಗ ಏಳುವ ಕ್ರಶರ್‌ಹುಡಿಯ ಧೂಳಿನ ರಾಶಿ ಮನೆಗಳ ಒಳಗೂ ಆವರಿಸಿದೆ. ಆರೋಗ್ಯದ ಮೇಲೆ ಬಹಳಷ್ಟು ದುಷ್ಪರಿಣಾಮ ಬೀರುತ್ತಿದ್ದು, ವಯೋವೃದ್ಧರು ಹೆಚ್ಚು ಕಷ್ಟ ಪಡುವಂತಾಗಿದೆ.  

ಬೇಗ ಕಾಮಗಾರಿ ಮುಗಿಸಲು ಒತ್ತಾಯ
ಕಡಲ ಕಿನಾರೆಯಾದುದರಿಂದ ಇಲ್ಲಿ ವಾಹನ ಸಂಚಾರದ ಸಂದರ್ಭ ಏಳುವ ಈ ಕ್ರಶರ್‌ ಧೂಳು  ಸುಮಾರು ಒಂದೂವರೆ ಫರ್ಲಾಂಗ್‌ ದೂರದವರೆಗೂ ಬೀಸುವ ಗಾಳಿಯಲ್ಲಿ  ಹಾರುತ್ತದೆ. ಬಟ್ಟೆ ಒಣಗಿಸಲೂ ಸಾಧ್ಯವಿಲ್ಲ. ಬೈಕ್‌ ಸವಾರರಿಗಂತೂ ದೊಡ್ಡ ವಾಹನಗಳು ಓಡಾಡುವ ವೇಳೆ ತೀರಾ ಸಮಸ್ಯೆಯಾಗುತ್ತಿದೆ. ಸ್ಥಳೀಯರು ಕಾಮಗಾರಿ ವಿರೋಧಿಸುತ್ತಿಲ್ಲ. ಆದರೆ ಸಮಸ್ಯೆಗೆ ಮುಕ್ತಿ ನೀಡುವಂತೆ ಜರೂರು ಕಾಮಗಾರಿ ಮುಗಿಸುವಂತೆ ಆಗ್ರಹಿಸುತ್ತಿದ್ದಾರೆ.  

ಅಧಿಕ ಭಾರದ ವಾಹನಗಳ ಭರಾಟೆ  
ಈ ಭಾಗದಲ್ಲಿ ಸಂಚರಿಸುವ ಅಧಿಕ ಭಾರದ ವಾಹನಗಳ ಭರಾಟೆಯಿಂದಾಗಿ ಹೆಚ್ಚು ಧೂಳು ಏಳುತ್ತಿದೆ. ಈ ಭಾಗದಲ್ಲಿ ಧೂಳು ಏಳದಂತೆ ದಿನಕ್ಕೆ ಮೂರು, ನಾಲ್ಕು ಬಾರಿಯಾದರೂ ನೀರು ಸಿಂಪಡಿಸಿ ತಾತ್ಕಾಲಿಕ ಕ್ರಮ ಕೈಗೊಳ್ಳುವಂತೆ ಜನತೆ ಒತ್ತಾಯಿಸುತ್ತಿದ್ದಾರೆ.

ಸಮಸ್ಯೆ ಸರಿಪಡಿಸಲು ಸೂಚನೆ 
ಒವರ್‌ ಲೋಡ್‌ ಲಾರಿ ಸಂಚಾರ ಸ್ಥಗಿತಗೊಳಿಸುವಂತೆ ಸಂಬಂಧಪಟ್ಟ ಇಲಾಖೆಗೆ ತಿಳಿಸಲಾಗಿದೆ. 2-3 ದಿನಗಳೊಳಗೆ ಡಾಮರು ಹಾಕುವ ಪ್ರಕ್ರಿಯೆ ಆರಂಭಿಸಲು ಮತ್ತು ತಾತ್ಕಾಲಿಕವಾಗಿ ನೀರು ಸಿಂಪಡಣೆಯ ಮೂಲಕ ಧೂಳು ಏಳದಂತೆ ಜಾಗ್ರತೆ ವಹಿಸಿ ಸಮಸ್ಯೆ ಸರಿಪಡಿಸುವಂತೆ ಗುತ್ತಿಗೆದಾರರಿಗೆ ಸೂಚಿಸಲಾಗುವುದು. 
-ಜಗದೀಶ್‌ ಭಟ್‌, ಅಸಿಸ್ಟೆಂಟ್‌ ಎಕ್ಸಿಕ್ಯೂಟಿವ್‌ ಎಂಜಿನಿಯರ್‌, ಲೋಕೋಪಯೋಗಿ ಇಲಾಖೆ.

ಟಾಪ್ ನ್ಯೂಸ್

New Zealand: ತವರಿನಂಗಳದಲ್ಲೇ ಟೆಸ್ಟ್‌ ನಿವೃತ್ತಿಗೆ ಸೌಥಿ ನಿರ್ಧಾರ

New Zealand: ತವರಿನಂಗಳದಲ್ಲೇ ಟೆಸ್ಟ್‌ ನಿವೃತ್ತಿಗೆ ಸೌಥಿ ನಿರ್ಧಾರ

SMG-Shikaripura

Shivamogga: ಆಸ್ಪತ್ರೆಯಲ್ಲಿನ ತೆರೆದ ನೀರಿನ ತೊಟ್ಟಿಗೆ ಬಿದ್ದು ಮಗು ಮೃತ್ಯು!

1-aaccc

PoK ಪ್ರದೇಶದಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು: ಬಿಸಿಸಿಐ ನಿಂದ ತೀವ್ರ ಖಂಡನೆ

Ashok-1

Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್‌.ಅಶೋಕ್‌

HDK (4)

50 cr for 50 Cong MLAs ; ಎಸ್ ಐಟಿ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ಒತ್ತಾಯ

1-kangu

‘Kanguva’; ಮೊದಲ ದಿನವೇ 58.62 ಕೋಟಿ ರೂ. ಬಾಚಿದ ಕಂಗುವ

Ajit Pawar

BJP;’ಬಟೆಂಗೆ ತೊ ಕಟೆಂಗೆ’ ಹೇಳಿಕೆಗೆ ಬೆಂಬಲವಿಲ್ಲ ಎಂದ ಅಜಿತ್ ಪವಾರ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Padubidri-Police

Padubidri: ನವವಿವಾಹಿತೆಗೆ ಕಿರುಕುಳ; ಪತಿಯ ಮನೆಮಂದಿ ವಿರುದ್ಧ ದೂರು

POLICE-5

Karkala: ಗೋವಾ ಮದ್ಯ ಅಕ್ರಮ ದಾಸ್ತಾನು ಪ್ರಕರಣ; ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚನೆ

4

Udupi: ಮೀನುಗಾರಿಕೆ ಕಾರ್ಮಿಕ ಸಾವು; ಪ್ರಕರಣ ದಾಖಲು

kmc

Manipal KMC Hospital: ಮಲ್ಪೆ ಬೀಚ್‌ನಲ್ಲಿ ಮಧುಮೇಹ ಜಾಗೃತಿ

11(1)

Udupi: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್; ಉಡುಪಿ ಮಹಿಳಾ ವಿಭಾಗ ಆರಂಭ

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

New Zealand: ತವರಿನಂಗಳದಲ್ಲೇ ಟೆಸ್ಟ್‌ ನಿವೃತ್ತಿಗೆ ಸೌಥಿ ನಿರ್ಧಾರ

New Zealand: ತವರಿನಂಗಳದಲ್ಲೇ ಟೆಸ್ಟ್‌ ನಿವೃತ್ತಿಗೆ ಸೌಥಿ ನಿರ್ಧಾರ

Suilla

Punjalkatte: ಬೈಕ್‌ ಢಿಕ್ಕಿ; ರಸ್ತೆ ಬದಿ ನಿಂತಿದ್ದ ವ್ಯಕ್ತಿ ಸಾವು

SMG-Shikaripura

Shivamogga: ಆಸ್ಪತ್ರೆಯಲ್ಲಿನ ತೆರೆದ ನೀರಿನ ತೊಟ್ಟಿಗೆ ಬಿದ್ದು ಮಗು ಮೃತ್ಯು!

Padubidri-Police

Padubidri: ನವವಿವಾಹಿತೆಗೆ ಕಿರುಕುಳ; ಪತಿಯ ಮನೆಮಂದಿ ವಿರುದ್ಧ ದೂರು

POLICE-5

Karkala: ಗೋವಾ ಮದ್ಯ ಅಕ್ರಮ ದಾಸ್ತಾನು ಪ್ರಕರಣ; ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.