2 ದಿನಗಳ ಸೋಲಿನ ಬಳಿಕ ಸೆನ್ಸೆಕ್ಸ್ ಗೆಲುವು : 87 ಅಂಕ ಏರಿಕೆ
Team Udayavani, Jan 24, 2019, 11:04 AM IST
ಮುಂಬಯಿ : ಎರಡು ದಿನಗಳ ಸೋಲಿನ ಬಳಿಕ ಮತ್ತೆ ಗರಿಗೆದರಿದ ಮಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಇಂದು ಗುರುವಾರದ ವಹಿವಾಟನ್ನು ಕೊನೆಗೂ 86.63 ಅಂಕಗಳ ಏರಿಕೆಯೊಂದಿಗೆ 36,195.10 ಅಂಕಗಳ ಮಟ್ಟದಲ್ಲಿ ಸಮಾಪನಗೊಳಿಸಿದೆ.
ಇದೇ ರೀತಿ ರಾಷ್ಟ್ರೀಯ ಶೇರು ಪೇಟೆಯ ನಿಫ್ಟಿ ಸೂಚ್ಯಂಕ 18.30 ಅಂಕಗಳ ಮುನ್ನಡೆಯನ್ನು ಕಟ್ಟಿಕೊಂಡು ದಿನದ ವಹಿವಾಟನ್ನು 10,849.80 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಇಂದು ಸುಮಾರು 260 ಅಂಕಗಳ ಏಳು ಬೀಳುಗಳನ್ನು ಕಂಡ ಮುಂಬಯಿ ಶೇರು ಪೇಟೆಯಲ್ಲಿ ಟಾಪ್ ಗೇನರ್ ಎನಿಸಿಕೊಂಡ ರಿಲಯನ್ಸ್, ಎಸ್ ಬ್ಯಾಂಕ್, ಐಟಿಸಿ, ಟಿಸಿಎಸ್, ಎಸ್ಬಿಐ ಶೇರುಗಳು ಶೇ.8.39ರ ಏರಿಕೆಯನ್ನು ಕಂಡವು. ಕಳೆದ ಎರಡು ದಿನಗಳ ಸೋಲಿನ ವಹಿವಾಟಿನಲ್ಲಿ ಸೆನ್ಸೆಕ್ಸ್ ಒಟ್ಟು 470 ಅಂಕಗಳ ನಷ್ಟಕ್ಕೆ ಗುರಿಯಾಗಿತ್ತು.
ಮುಂಬಯಿ ಶೇರು ಪೇಟೆಯಲ್ಲಿ ಇಂದು ಒಟ್ಟು 2,654 ಕಂಪೆನಿಗಳ ಶೇರುಗಳು ವಹಿವಾಟಿಗೆ ಒಳಪಟ್ಟವು; ಈ ಪೈಕಿ 952 ಕಂಪೆನಿಗಳು ಮುನ್ನಡೆ ಸಾಧಿಸಿದವು; 1,547 ಕಂಪೆನಿಗಳು ಹಿನ್ನಡೆಗೆ ಗುರಿಯಾದವು; 155 ಕಂಪೆನಿಗಳ ಶೇರು ಧಾರಣೆಯಲ್ಲಿ ಯಾವುದೇ ವ್ಯತ್ಯಾಸ ಕಂಡು ಬರಲಿಲ್ಲ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.