ಪೊಲೀಸ್ ಜನಸಂಪರ್ಕ ಶಿಬಿರ
Team Udayavani, Jan 25, 2019, 12:50 AM IST
ಕುಂದಾಪುರ: ಜನ ಸಾಮಾನ್ಯರಿಗೆ ರಕ್ಷಣೆ ನೀಡುವುದು, ಅನಗತ್ಯ ಚಟುವಟಿಕೆಗಳಿಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದು, ವಾಹನ ಚಾಲಕರಿಗೆ ಸೂಕ್ತ ಕಾನೂನು ಪಾಲನೆಯ ಬಗ್ಗೆ ಮಾಹಿತಿಯನ್ನು ನೀಡುವುದು ನಮ್ಮ ಆದ್ಯ ಕರ್ತವ್ಯ. ಅದಲ್ಲದೆ ಪೋಷಕರು ತಮ್ಮ ಮಕ್ಕಳ ಚಲನವಲನಗಳ ಬಗ್ಗೆ ನಿಗಾ ವಹಿಸುವುದು ಪಾಲಕರ ಕರ್ತವ್ಯವೆಂದು ಕಂಡೂÉರು ಪೊಲೀಸ್ ಠಾಣಾ ಎ.ಎಸ್.ಐ. ರವೀಶ್ ಹೊಳ್ಳ ಅವರು ಹೇಳಿದರು.
ಅವರು ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆ ಕಂಡೂÉರು, ಜೆಸಿಐ ಕುಂದಾಪುರ ಸಿಟಿ, ರಾಜ್ಯಪ್ರಶಸ್ತಿ ಪುರಸ್ಕೃತ ಮಹಾವಿಷ್ಣು ಯುವಕ ಮಂಡಲ ಹಾಗೂ ಮಾನಸ ಯುವತಿ ಮಂಡಲ ಇವುಗಳ ಆಶ್ರಯದಲ್ಲಿ ಹರೆಗೋಡು ಯುವಕ ಮಂಡಲದ ವಠಾರದಲ್ಲಿ ನಡೆದ ಪೊಲೀಸ್ ಜನಸಂಪರ್ಕ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಜೆಸಿಐ ಅಧ್ಯಕ್ಷ ಪ್ರಶಾಂತ ಹವಾಲ್ದಾರ್ ಅಧ್ಯಕ್ಷತೆ ವಹಿಸಿದ್ದರು.
ವಕೀಲ ರಾಘವೇಂದ್ರ ಚರಣ ನಾವಡ, ಶೇಖರ ಬಳೆಗಾರ, ಚಂದ್ರ ನಾಯ್ಕ, ಯುವಕ ಮಂಡಲದ ಅಧ್ಯಕ್ಷ ಬಸವ ದೊಡ್ಡಹಿತ್ಲು, ನರಸಿಂಹ ಗಾಣಿಗ, ಮಹೇಶ ಭಟ್, ಶ್ರೀಧರ ಸುವರ್ಣ, ಸುನೀತಾ, ಪ್ರಸನ್ನ, ಪೊಲೀಸ್ ಸಿಬಂದಿ ಗಂಗಾಧರ, ಶಾಮಲಾ, ರವೀಶ್ ಡಿ.ಎಚ್. ಮೊದಲಾದವರು ಉಪಸ್ಥಿತರಿದ್ದರು. ಗುರುರಾಜ ಗಾಣಿಗ ಸ್ವಾಗತಿಸಿ, ರಾಘವೇಂದ್ರ ಜೋಗಿ ಕಾರ್ಯಕ್ರಮ ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
SMAT 2024: ಸಯ್ಯದ್ ಮುಷ್ತಾಕ್ ಅಲಿ ಕೂಟಕ್ಕೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ
ಹೆದ್ದಾರಿ ತಡೆ ನಡೆಸಿದ ಆರೋಪ; ಸುಳ್ಯ, ಬೈಂದೂರು ಶಾಸಕರ ಸಹಿತ ಹಲವರ ವಿರುದ್ಧ ಪ್ರಕರಣ
IPL Auction: ಸಂಪೂರ್ಣ ಐಪಿಎಲ್ ಹರಾಜು ನಡೆಸಲಿದ್ದಾರೆ ಮಲ್ಲಿಕಾ ಸಾಗರ್
Jhansi Hospital: ಅಗ್ನಿ ದುರಂತ, ನವಜಾತ ಶಿಶುಗಳ ಸಜೀವ ದಹನ… ಮೋದಿ ಸಂತಾಪ, ಪರಿಹಾರ ಘೋಷಣೆ
Bhairathi Ranagal Review: ರೋಣಾಪುರದ ರಣಬೇಟೆಗಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.