ಹುತಾತ್ಮ ಯೋಧ ವಾನಿಗೆ ಅಶೋಕ ಚಕ್ರ
Team Udayavani, Jan 25, 2019, 12:30 AM IST
ಹೊಸದಿಲ್ಲಿ: ಹಿಂದೊಮ್ಮೆ ಉಗ್ರವಾದಿಯಾಗಿ, ಅನಂತರ ಮುಖ್ಯವಾಹಿನಿಗೆ ಬಂದು ಭಾರತೀಯ ಸೇನೆಯ ಯೋಧನಾಗಿ ಹುತಾತ್ಮರಾದ ಲ್ಯಾನ್ಸ್ ನಾಯಕ್ ನಜೀರ್ ವಾನಿ ಅವರಿಗೆ ಸೇವೆಯಲ್ಲಿ ಮಡಿದ ಯೋಧರಿಗೆ ನೀಡಲಾಗುವ ಪ್ರತಿಷ್ಠಿತ ಗೌರವ “ಅಶೋಕ ಚಕ್ರ’ ಘೋಷಿಸಲಾಗಿದೆ. ಈ ಬಾರಿಯ ಗಣರಾಜ್ಯೋತ್ಸವ ಸಂದರ್ಭದಲ್ಲಿ ವಾನಿ ಕುಟುಂಬಕ್ಕೆ ರಾಷ್ಟ್ರಪತಿ ರಾಮನಾಥ ಕೋವಿಂದ್ ಈ ಗೌರವ ಪ್ರದಾನ ಮಾಡಲಿದ್ದಾರೆ. ಈ ವಿಶೇಷ ಗೌರವ ಪಡೆದ ಜಮ್ಮು-ಕಾಶ್ಮೀರದ ಮೊದಲ ನಾಗರಿಕ ಎಂಬ ಹೆಗ್ಗಳಿಕೆಗೆ ವಾನಿ ಪಾತ್ರರಾಗಿದ್ದಾರೆ.
ಕುಲ್ಗಾಮ್ ಜಿಲ್ಲೆಯ ಅಶಿಮುಜಿ ಪ್ರಾಂತ್ಯದವರಾದ ವಾನಿ, 90ರ ದಶಕದಲ್ಲಿ ಕಾಶ್ಮೀರದ ಇಖ್ವಾನಿಸ್ ಎಂಬ ನುಸುಳುಕೋರ ಉಗ್ರರ ಪಡೆಯಲ್ಲಿ ಸಕ್ರಿಯ ವಾಗಿದ್ದರು. ಆದರೆ ಅನಂತರ ಮನಃಪರಿವರ್ತನೆ ಯಾಗಿ 2004ರಲ್ಲಿ ಭಾರತೀಯ ಸೇನೆ ಸೇರಿದ್ದರು. 2018ರ ನ. 25ರಂದು ಶೋಪಿಯಾನ್ ಜಿಲ್ಲೆಯ ಬಟಗುಂಡ್ ಹಳ್ಳಿಯ ಮನೆಯಲ್ಲಿ ಅಡಗಿದ್ದ ಉಗ್ರರ ತಂಡದೊಂದಿಗೆ ಹೋರಾಡುವಾಗ ಹುತಾತ್ಮರಾಗಿದ್ದರು. ಗುಂಡಿನ ದಾಳಿಯಲ್ಲಿ ಜರ್ಝರಿತರಾಗಿದ್ದರೂ ಇಬ್ಬರು ಉಗ್ರರನ್ನು ಹತ್ಯೆಗೈಯ್ಯುವಲ್ಲಿ ಅವರು ಯಶಸ್ವಿಯಾಗಿದ್ದರು.
17 ಎನ್ಕೌಂಟರ್ಗಳಲ್ಲಿ ಭಾಗಿ
ವಾನಿ ಕಣಿವೆ ರಾಜ್ಯದಲ್ಲಿ ನಡೆದ 17 ಪ್ರಮುಖ ಎನ್ಕೌಂಟರ್ಗಳಲ್ಲಿ ಭಾಗಿಯಾಗಿದ್ದರು. ದೇಶಕ್ಕೆ ಅವರು ನೀಡಿದ ಸೇವೆಯನ್ನು ಪರಿಗಣಿಸಿ ಎರಡು ಬಾರಿ ಸೇನಾ ಪದಕವನ್ನೂ ನೀಡಿ ಗೌರವಿಸಲಾಗಿತ್ತು. ಕಾಶ್ಮೀರಿ ಯೋಧರು, ಪೊಲೀಸರು ಹಾಗೂ ಅವರ ಕುಟುಂಬ ಸದಸ್ಯರನ್ನು ಉಗ್ರರು ಟಾರ್ಗೆಟ್ ಮಾಡಿ ಕೊಲ್ಲುತ್ತಿದ್ದಂಥ ಘಟನೆಗಳ ಹೊರತಾಗಿಯೂ ವಾನಿ ಅವರು ಧೃತಿಗೆಡದೆ ಸೇನಾ ಕಾರ್ಯಾಚರಣೆಯಲ್ಲಿ ಭಾಗಿಯಾಗುತ್ತಿದ್ದರು. ಪ್ರತಿಕೂಲ ಪರಿಸ್ಥಿತಿಗಳಲ್ಲೂ ಧೈರ್ಯಗೆಡದೆ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದರು ಎಂದು ರಾಷ್ಟ್ರಪತಿ ಭವನದ ಪ್ರಕಟನೆಯಲ್ಲಿ ಉಲ್ಲೇಖೀಸಲಾಗಿದೆ.
ಕೊನೆಯ ದಿನ…
ಅಂದು ಶೋಪಿಯಾನ್ನ ಬಂಟಗುಂಡ್ ಗ್ರಾಮದಲ್ಲಿ 6 ಉಗ್ರರು ಅವಿತಿದ್ದ ಮಾಹಿತಿಯ ಆಧಾರದಲ್ಲಿ ಸೇನೆ ಕಾರ್ಯಾಚರಣೆಗಿಳಿದಿತ್ತು. ಈ ವೇಳೆ ಲಷ್ಕರ್ ಉಗ್ರರಿಗೆ ಎಸ್ಕೇಪ್ ಆಗಲು ಯಾವುದೇ ದಾರಿ ಸಿಗಬಾರದೆಂದು ಎಲ್ಲ ಮಾರ್ಗಗಳನ್ನೂ ಬ್ಲಾಕ್ ಮಾಡುವಲ್ಲಿ ವಾನಿ ಮತ್ತು ಅವರ ತಂಡ ಮಹತ್ವದ ಪಾತ್ರ ವಹಿಸಿತ್ತು. ಈ ಸಮಯದಲ್ಲಿ ಉಗ್ರರು ಒಂದೇ ಸಮನೆ ಗ್ರೆನೇಡ್ ಎಸೆಯುತ್ತಾ, ಗುಂಡಿನ ಮಳೆಗೆರೆಯತೊಡಗಿದರು. ಆದರೂ ಅವರಿಗೆ ತಕ್ಕ ಪ್ರತ್ಯುತ್ತರ ನೀಡಿದ ಯೋಧರು, ಒಬ್ಬ ಉಗ್ರನನ್ನು ಸದೆಬಡಿಯುವಲ್ಲಿ ಯಶಸ್ವಿಯಾದರು. ತದನಂತರ ಮತ್ತೂಬ್ಬ ಉಗ್ರ ಅವಿತಿದ್ದ ಮನೆಯೊಳಗೆ ವಾನಿ ಪ್ರವೇಶಿಸಿ, ಉಗ್ರನೊಂದಿಗೆ ಹೋರಾಡಿದರು. ಅಷ್ಟರಲ್ಲಾಗಲೇ ಅವರ ದೇಹದೊಳಕ್ಕೆ ಸಾಕಷ್ಟು ಗುಂಡುಗಳು ಹೊಕ್ಕಿದ್ದವು. ಆದರೆ ಆ ಮನೆಯೊಳಗಿದ್ದ ಉಗ್ರನನ್ನು ಕೊಂದ ಬಳಿಕ ಕುಸಿದು ಬಿದ್ದ ವಾನಿ ಅನಂತರ ಮೇಲೇಳಲೇ ಇಲ್ಲ. ಈ ಕಾರ್ಯಾಚರಣೆಯಲ್ಲಿ ಎಲ್ಲ 6 ಲಷ್ಕರ್ ಉಗ್ರರನ್ನು ಹತ್ಯೆಗೈಯ್ಯುವಲ್ಲಿ ಸೇನೆ ಯಶಸ್ವಿಯಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharashtra: ಫಲಿತಾಂಶಕ್ಕೂ ಮೊದಲೇ ರಾರಾಜಿಸುತ್ತಿದೆ ಅಜಿತ್ ಪವಾರ್ ಗೆಲುವಿನ ಬ್ಯಾನರ್
Wayanad: ಪ್ರಿಯಾಂಕಾ ಗಾಂಧಿ ‘ಕೈ’ ಹಿಡಿಯಲಿದ್ದಾರಾ ಮತದಾರರು… 85,000 ಮತಗಳಿಂದ ಮುನ್ನಡೆ
Election Results: ಮಹಾರಾಷ್ಟ್ರ, ಝಾರ್ಖಂಡ್ ನಲ್ಲಿ ಮತ ಎಣಿಕೆ ಪ್ರಕ್ರಿಯೆ ಆರಂಭ
Govt Employees: 8ನೇ ವೇತನ ಆಯೋಗ ಶಿಫಾರಸು ಜಾರಿಯಾದರೆ ಕನಿಷ್ಠ ವೇತನ 51000 ರೂ.!
Winter Session: ಸಂಸತ್ ಅಧಿವೇಶನ ನಾಡಿದ್ದಿಂದ:”ವಕ್ಫ್’ ವಿಧೇಯಕ ಮಂಡನೆ?
MUST WATCH
ಹೊಸ ಸೇರ್ಪಡೆ
Maharashtra: ಫಲಿತಾಂಶಕ್ಕೂ ಮೊದಲೇ ರಾರಾಜಿಸುತ್ತಿದೆ ಅಜಿತ್ ಪವಾರ್ ಗೆಲುವಿನ ಬ್ಯಾನರ್
Aaram Aravinda Swamy Movie Review: ಪಕ್ಕದ್ಮನೆ ಹುಡುಗನ ಫನ್ರೈಡ್
Karnataka By Poll Results: ಮತಎಣಿಕೆ-ಚನ್ನಪಟ್ಟಣ, ಶಿಗ್ಗಾಂವಿ, ಸಂಡೂರು “ಕೈ” ಮುನ್ನಡೆ
By Election: ನಿಖಿಲ್ ವಿರುದ್ದ ಮುನ್ನಡೆ ಸಾಧಿಸಿದ ಯೋಗೇಶ್ವರ್; ಕುತೂಹಲದತ್ತ ಚನ್ನಪಟ್ಟಣ
Karkala: ಶಾಲಾ ವಾಹನಕ್ಕೆ ಢಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲೇ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.