ರಾಮಮಂದಿರ ನಿರ್ಮಾಣದಲ್ಲಿ ಹಂಪಿಯ ಪವಿತ್ರ ಶಿಲೆ ಬಳಕೆ
Team Udayavani, Jan 25, 2019, 1:04 AM IST
ಹೊಸಪೇಟೆ: ಅಯೋಧ್ಯೆಯ ರಾಮಮಂದಿರ ನಿರ್ಮಾಣಕ್ಕಾಗಿ ದಕ್ಷಿಣಕಾಶಿ ಖ್ಯಾತಿಯ ಹಂಪಿ ಕಿಷ್ಕಿಂಧೆಯ ಐದು ಪವಿತ್ರ ಶಿಲೆ (ಕಲ್ಲು)ಗಳಿಗೆ ಮಧ್ಯಪ್ರದೇಶದ ಜಬ್ಬಲ್ಪುರದ ಶ್ರೀಬಗುಲಮುಖೀ ಸಿದ್ದೇಶ್ವರ ಶಂಕರಾಚಾರ್ಯಪೀಠದಲ್ಲಿ ಕಳೆದ ಮಂಗಳವಾರ (ಜ.22) ಪೂಜೆ ಸಲ್ಲಿಸಿ ರಾಮಮಂದಿರ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ.
ಐತಿಹಾಸಿಕ ಹಂಪಿಯ ಸ್ವರ್ಣ ಹಂಪಿ ಮಠದ ಶ್ರೀಗೋವಿಂದ ಸರಸ್ವತಿ ಸ್ವಾಮೀಜಿ, ಭಕ್ತಿಯಿಂದ ಹೊತ್ತೂಯ್ದ ಕಿಷ್ಕಿಂಧೆಯ ಪವಿತ್ರ ಶಿಲೆ(ಕಲ್ಲು)ಗಳಿಗೆ ಭದ್ರ, ಜಯ, ಪೂರ್ಣ, ನಂದಭೀಜ ಸೇರಿದಂತೆ ರಾಮ-ಹನುಮ ಶಿಲೆ ಎಂದು ನಾಮಕರಣ ಮಾಡಿ ಪೂಜೆ ಸಲ್ಲಿಸಲಾಗಿದೆ. ರಾಮಮಂದಿರದ ಅಡಿಪಾಯದಲ್ಲಿ ಈ ಶಿಲೆಗಳನ್ನು ಸೇರಿಸಲು ಉದ್ದೇಶಿಸಿರುವುದರಿಂದ ಧಾರ್ಮಿಕ ವಿಧಿ ವಿಧಾನಗಳಂತೆ ಶಿಲೆಗಳಿಗೆ ವಿಶೇಷ ಪೂಜೆ ಸಲ್ಲಿಸಲಾಗಿದೆ.
ದ್ವಾರಕ ಶಾರದಾಪೀಠಾಧೀಶ್ವರ ಜಗದ್ಗುರು ಶಂಕರಾಚಾರ್ಯಸ್ವಾಮೀಜಿ, ಸ್ವರೂಪಾನಂದ ಸರಸ್ವತಿ ಸ್ವಾಮೀಜಿ ಸಾನ್ನಿಧ್ಯದಲ್ಲಿ ಇಂಗಲಾಂಜ್ ಸೇನಾಧ್ಯಕ್ಷ ಬ್ರಹ್ಮಚಾರಿ ಚೈತನ್ಯಾನಂದ ಮಹಾರಾಜ ಸ್ವಾಮೀಜಿ ಮತ್ತು ಇತರ ಸ್ವಾಮೀಜಿಗಳು ಈ ಪವಿತ್ರ ಶಿಲೆಗಳಿಗೆ ವಿಶೇಷ ಪೂಜೆ ಸಲ್ಲಿಸಿದರು.
ಜ.26ರಿಂದ ಮೂರು ದಿನ ನಡೆಯಲಿರುವ ಧರ್ಮಸಭೆಯಲ್ಲಿ ರಾಮಮಂದಿರ ನಿರ್ಮಾಣದ ದಿನಾಂಕ ಅಂತಿಮಗೊಳಿಸಲಾಗುವುದು ಎಂದು ಮಠದ ಮಾಧ್ಯಮ ಸಲಹೆಗಾರ ಮನೋಜ್ ಸೇನ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಯಾರಿಗೂ ಹೆದರೆನು, ವಕ್ಫ್ ಸಮರ ನಿಲ್ಲಿಸೆನು: ಬಸನಗೌಡ ಪಾಟೀಲ್ ಯತ್ನಾಳ್
Yadagiri: ವಕ್ಫ್ ಹೋರಾಟ ರೈತರ ಪರವಾಗಿದೆ: ಶಾಸಕ ಯತ್ನಾಳ
KFD Vaccine: ಮುಂಬರುವ ನವೆಂಬರ್ನಲ್ಲಿ ಮಂಗನ ಕಾಯಿಲೆಗೆ ಲಸಿಕೆ ಸಿದ್ಧ: ದಿನೇಶ್ ಗುಂಡೂರಾವ್
Constitution: ಕಾಂಗ್ರೆಸ್ಸಿಗರಿಂದ ಸಂವಿಧಾನದ ರಕ್ಷಕರಂತೆ ಕಪಟ ನಾಟಕ: ಬಿ.ವೈ.ವಿಜಯೇಂದ್ರ
Vijayapura: 6ರ ಬಾಲಕನ ಮೇಲೆ ಅನೈಸರ್ಗಿಕ ಲೈಂಗಿಕ ದೌರ್ಜನ್ಯ: ಅಪರಾಧಿಗೆ 20 ವರ್ಷ ಜೈಲು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.