ರೆಸಾರ್ಟಲ್ಲಿ ನಾವೇ ಗಲಾಟೆ ಬಿಡಿಸಿದ್ವಿ
Team Udayavani, Jan 25, 2019, 6:07 AM IST
ಬೆಂಗಳೂರು: “ಖಾಸಗಿ ರೆಸಾರ್ಟ್ನಲ್ಲಿ ವಿಜಯನಗರ ಶಾಸಕ ಆನಂದ್ ಸಿಂಗ್ ಹಾಗೂ ಕಂಪ್ಲಿ ಶಾಸಕ ಗಣೇಶ್ ಜಗಳವಾಡುವಾಗ ನಾವೇ ಮಧ್ಯೆ ಪ್ರವೇಶಿಸಿ ಜಗಳ ಬಿಡಿಸಿದೆವು’ ಎಂದು ಹರಿಹರ ಶಾಸಕ ರಾಮಪ್ಪ ಹೇಳಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿ, “ರೆಸಾರ್ಟ್ನಲ್ಲಿ ಗಣೇಶ್ ಹಾಗೂ ಆನಂದ್ ಸಿಂಗ್ ಕೊಠಡಿಗಳು ದೂರ ಇದ್ದವು.
ನಾನು, ರಘು ಮೂರ್ತಿ ಅವರ ರೂಮ್ ಬಳಿ ಹೋಗುವಷ್ಟರಲ್ಲಿ ಕಂಪ್ಲಿ ಗಣೇಶ್, ಆನಂದ್ ಸಿಂಗ್ ಅವರನ್ನು ಹೊಡೆಯುತ್ತಿದ್ದರು. ಆಗ ನಾವೇ ಜಗಳ ಬಿಡಿಸಿದೆವು. “ಮೂರು ಗಂಟೆಯಿಂದಲೇ ಇಬ್ಬರ ನಡುವೆ ಜಗಳ ನಡೆಯುತ್ತಿತ್ತಂತೆ. ಹೊಡೆದಾಡಿಕೊಳ್ಳಲು ಜನ ನಮ್ಮನ್ನು ಆರಿಸಿ ಕಳಿಸಿಲ್ಲ. ಗಣೇಶ್ ಆನಂದ್ ಸಿಂಗ್ ಅವರಿಗೆ ಹೊಡೆದಿರುವುದು ತಪ್ಪು’ ಎಂದು ರಾಮಪ್ಪ ಹೇಳಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.