ಫುಟ್ಪಾತ್ ಮಾರ್ಗದ ಒತ್ತುವರಿ ತೆರವು
Team Udayavani, Jan 25, 2019, 6:07 AM IST
ಬೆಂಗಳೂರು: ಪಾದಚಾರಿ ಮಾರ್ಗದಲ್ಲಿನ ಒತ್ತುವರಿ ತೆರವು ಕಾರ್ಯಾಚರಣೆ ಮುಂದುವರೆಸಿರುವ ಬಿಬಿಎಂಪಿ, ಗುರುವಾರ ಹಳೇ ಮದ್ರಾಸ್ ರಸ್ತೆಯಲ್ಲಿ ಪಾದಚಾರಿ ಮಾರ್ಗ ಒತ್ತುವರಿ ಮಾಡಿಕೊಂಡಿದ್ದ ತಾತ್ಕಾಲಿಕ ಅಂಗಡಿಗಳು, ಶೆಡ್ಗಳನ್ನು ತೆರವುಗೊಳಿಸಿತು.
ಕೆ.ಆರ್.ಪುರ, ಬಸವನಪುರ ಹಾಗೂ ದೇವಸಂದ್ರ ವಾರ್ಡ್ಗಳಲ್ಲಿ ತೆರವು ಕಾರ್ಯಾಚರಣೆ ನಡೆಯಿತು. ಐಟಿಐನಿಂದ ಟಿ.ಸಿ.ಪಾಳ್ಯ ಸಿಗ್ನಲ್, ಹಳೇ ಮದ್ರಾಸ್ರಸ್ತೆವರೆಗೆ ಸುಮಾರು 8 ಕಿ.ಮೀ ರಸ್ತೆಯ ಎರಡೂ ಬದಿಯ ಪಾದಚಾರಿ ಮಾರ್ಗದಲ್ಲಿ ಹಾಕಲಾಗಿದ್ದ ಅಂಗಡಿಗಳನ್ನು ತೆರವುಗೊಳಿಸಲಾಯಿತು.
ಮತ್ತೆ ಅಂಗಡಿಗಳನ್ನು ತೆರೆದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆಯನ್ನೂ ನೀಡಲಾಯಿತು. ಮಹದೇವಪುರ ವಲಯದ ಮುಖ್ಯಎಂಜಿನಿಯರ್ ಆರ್.ಎಲ್. ಪರಮೇಶ್ವರಯ್ಯ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆಯಿತು.
ಬಿಬಿಎಂಪಿ ವ್ಯಾಪ್ತಿಯಲ್ಲಿ ನಿರಂತರ ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆಗೆ ಅನುಕೂಲವಾಗುವಂತೆ ಇಬ್ಬರು ಕಾಯಂ ಭೂ ಮಾಪಕರನ್ನು ನಿಯೋಜಿಸಿ ಸರ್ಕಾರ ಆದೇಶ ಹೊರಡಿಸಿದೆ. ಅವರನ್ನು ಬಳಸಿಕೊಂಡು ನಿರಂತರವಾಗಿ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಲಾಗುವುದು ಎಂದು ಬೃಹತ್ ಮಳೆನೀರುಗಾಲುವೆ ವಿಭಾಗದ ಮುಖ್ಯ ಇಂಜಿನಿಯರ್ ಪ್ರಹ್ಲಾದ್ ತಿಳಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.