ಹೆತ್ತವರ ಪ್ರೀತಿ ಸಿಗದೆ ಖಿನ್ನತೆ: ಯುವತಿ ಆತ್ಮಹತ್ಯೆ
Team Udayavani, Jan 25, 2019, 6:07 AM IST
ಬೆಂಗಳೂರು: ದುಬೈನಲ್ಲಿರುವ ಪೋಷಕರ ಪ್ರೀತಿಯಿಂದ ದೂರವಾಗಿ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಮುಂಬೈ ಮೂಲದ 19 ವರ್ಷದ ವಿದ್ಯಾರ್ಥಿನಿ ಅತಿಯಾದ ಮಾತ್ರೆ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಜ.23ರಂದು ಕೊತ್ತನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಖಾಸಗಿ ಕಾಲೇಜಿನಲ್ಲಿ ಪತ್ರಿಕೋದ್ಯಮ ಪದವಿ ವ್ಯಾಸಂಗ ಮಾಡುತ್ತಿದ್ದ ಸೋಫಿಯಾ ಧಮನಿ ಆತ್ಮಹತ್ಯೆ ಮಾಡಿಕೊಂಡ ಯುವತಿ.
ಸೋಫಿಯಾ ಮೃತದೇಹದ ಸಮೀಪ ಪತ್ರವೊಂದು ಲಭ್ಯವಾಗಿದ್ದು, “ನಾನು ಡಿಪ್ರಶನ್‌ಗೆ (ಮಾನಸಿಕ ಖಿನ್ನತೆ) ಒಳಗಾಗಿ ಯಾತನೆ ಅನುಭವಿಸುತ್ತಿದ್ದೆ’ ಎಂದು ಬರೆಯಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಪೋಷಕರಿಂದ ದೂರವಿದ್ದ ಸೋಫಿಯಾ, ಅವರ ಪ್ರೀತಿಯಿಂದ ವಂಚಿತರಾದ ಕಾರಣ ಮಾನಸಿಕವಾಗಿ ಖಿನ್ನತೆಗೆ ಒಳಗಾಗಿದ್ದರು. ಇದೇ ನೋವಿನಲ್ಲಿ ಮಿತಿ ಮೀರಿ ಮಾತ್ರೆಗಳನ್ನು ಸೇವಿಸಿ ಆಯ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಸೋಫಿಯಾ ಸಾವಿನ ಕುರಿತು ಯಾವುದೇ ಅನುಮಾನವಿಲ್ಲ ಎಂದು ಆಕೆಯ ಪೋಷಕರು ತಿಳಿಸಿದ್ದಾರೆ. ಈ ಕುರಿತು ಕೊತ್ತನೂರು ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದೇವೆ. ಮೃತದೇಹವನ್ನು ಅವರ ಪೋಷಕರಿಗೆ ಹಸ್ತಾಂತರಿಸಲಾಗಿದೆ ಎಂದು ಅಧಿಕಾರಿ ಮಾಹಿತಿ ನೀಡಿದರು.
ಮೃತ ಸೋಫಿಯಾ ತಂದೆ, ತಾಯಿ ಇಬ್ಬರೂ ದುಬೈನಲ್ಲಿ ಉದ್ಯಮವೊಂದನ್ನು ನಡೆಸುತ್ತಿದ್ದಾರೆ. ಸೋಫಿಯಾ ಕಳೆದ ಎರಡು ವರ್ಷಗಳ ಹಿಂದೆ ಬೆಂಗಳೂರಿಗೆ ಆಗಮಿಸಿದ್ದು, ಖಾಸಗಿ ಕಾಲೇಜಿನಲ್ಲಿ ದ್ವಿತೀಯ ವರ್ಷದ ಪತ್ರಿಕೋದ್ಯಮ ಪದವಿ ವ್ಯಾಸಂಗ ಮಾಡುತ್ತಿದ್ದು, ಪೇಯಿಂಗ್ ಗೆಸ್ಟ್ ಒಂದರಲ್ಲಿ ಉಳಿದುಕೊಂಡಿದ್ದರು.
ಬುಧವಾರ ಬೆಳಗ್ಗೆ ತನ್ನ ಸ್ನೇಹಿತೆಗೆ “ನಾನು ಕಾಲೇಜಿಗೆ ಬರುವುದಿಲ್ಲ’ ಎಂದು ಹೇಳಿ ಕಳುಹಿಸಿದ ಸೋಫಿಯಾ, ರೂಮ್‌ನಲ್ಲಿಯೇ ಉಳಿದುಕೊಂಡಿದ್ದರು. ಮಧ್ಯಾಹ್ನ 3 ಗಂಟೆ ಸುಮಾರಿಗೆ ಕೊಠಡಿ ಸ್ವತ್ಛಗೊಳಿಸುವ ಮಹಿಳೆ ಸೋಫಿಯಾಳ ಕೊಠಡಿಗೆ ತೆರಳಿದಾಗ ಆಕೆ ಆತ್ಮಹತ್ಯೆಗೆ ಶರಣಾಗಿರುವುದು ಬೆಳಕಿಗೆ ಬಂದಿದೆ. ಮೃತದೇಹದ ಸಮೀಪವಿದ್ದ ಮಾತ್ರೆಗಳ ಡಬ್ಬಿ ನೋಡಿ ಆತಂಕಗೊಂಡ ಕೆಲಸದಾಕೆ, ಪಿಜಿ ಮಾಲೀಕರಿಗೆ ವಿಷಯ ತಿಳಿಸಿದ್ದಾರೆ. ಪಿಜಿ ಮಾಲೀಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಅನಾರೋಗ್ಯದ ನಿಮಿತ್ತ ತೆಗೆದುಕೊಳ್ಳುವ ಮಾತ್ರೆಗಳನ್ನು ಅತಿ ಹೆಚ್ಚು ಸೇವಿಸಿರುವುದರಿಂದ ಸೋಫಿಯಾ ಮೃತಪಟ್ಟಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕ ಆಕೆಯ ಸಾವು ಹೇಗೆ ಸಂಭವಿಸಿದೆ ಎಂಬ ಬಗ್ಗೆ ಖಚಿತ ಮಾಹಿತಿ ತಿಳಿಯಲಿದೆ. ಎಂದು ಅಧಿಕಾರಿ ಹೇಳಿದರು.
ಒಂಟಿತನ, ಮಾನಸಿಕ ಖಿನ್ನತೆ: ಸೋಫಿಯಾ ಸಾವಿನ ಕುರಿತು ಎಲ್ಲ ಆಯಾಮಗಳಲ್ಲೂ ತನಿಖೆ ಮುಂದುವರಿಸಿ ಮಾಹಿತಿ ಸಂಗ್ರಹಿಸಲಾಗಿದೆ. ಆಕೆಯ ಪೋಷಕರು ದುಬೈನಲ್ಲಿ ವಾಸವಿದ್ದು, ಸೋಫಿಯಾ ವಿದ್ಯಾಭ್ಯಾಸ ಹಾಗೂ ಖರ್ಚಿಗೆ ಹಣ ಕಳುಹಿಸಿಕೊಡುತ್ತಿದ್ದರು. ಪೋಷಕರು ಹಣ ಮಾತ್ರ ಕಳುಹಿಸುತ್ತಾರೆ. ಆದರೆ ನೋಡಲು ಬರುವುದಿಲ್ಲ ಎಂದು ಯುವತಿ ಮಾನಸಿಕವಾಗಿ ನೊಂದಿದ್ದಳು ಎಂಬ ಮಾಹಿತಿಯಿದೆ.
ಈ ಕುರಿತು ಆಕೆಯ ಸ್ನೇಹಿತೆಯನ್ನು ಕೇಳಿದರೂ, ಸೋಫಿಯಾ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರು ಎಂದಷ್ಟೇ ಹೇಳಿದ್ದಾರೆ. ಆಕೆಯ ಮೃತದೇಹದ ಪಕ್ಕದಲ್ಲಿ ದೊರೆತ ಚೀಟಿಯೊಂದರಲ್ಲಿ, “ಸಾರಿ… ನಿನ್ನ ಜತೆ ಬರಲು ಸಾಧ್ಯವಾಗಿಲ್ಲ’ ಎಂಬ ಸಂದೇಶ ಕೂಡ ಇದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
World Prematurity Day: ಅಂತಾರಾಷ್ಟ್ರೀಯ ಅವಧಿಪೂರ್ವ ಶಿಶು ಜನನ ದಿನ; ನವೆಂಬರ್ 17
Bantwal: ನೇತ್ರಾವತಿ ಹೊಸ ಸೇತುವೆ ಸಂಚಾರಕ್ಕೆ ಮುಕ್ತ
Davanagere: ಯತ್ನಾಳ್ ಫೋರ್ತ್ ಗ್ರೇಡ್ ರಾಜಕಾರಣಿ..: ರೇಣುಕಾಚಾರ್ಯ ವಾಗ್ದಾಳಿ
BBK11: ಹನುಮಂತು ಬಳಿಕ ಮತ್ತಿಬ್ಬರು ವೈಲ್ಡ್ ಕಾರ್ಡ್ ಸ್ಪರ್ಧಿಗಳು ಬಿಗ್‌ಬಾಸ್ ಮನೆಗೆ
Karkala: ಬೋಳ ಅಕ್ರಮ ಮದ್ಯ ದಾಸ್ತಾನು ಪ್ರಕರಣ: ಕಾರವಾರದಲ್ಲಿ ಓರ್ವ ಆರೋಪಿ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.