7 ಲಕ್ಷ ರೂ.ವೆಚ್ಚದಲ್ಲಿ ಕನಕದಾಸ ಪುತ್ಥಳಿ ನಿರ್ಮಾಣ
Team Udayavani, Jan 25, 2019, 8:26 AM IST
ಹಗರಿಬೊಮ್ಮನಹಳ್ಳಿ: ಪಟ್ಟಣದಲ್ಲಿ 50 ಲಕ್ಷ ರೂ.ಅಂದಾಜು ಮೊತ್ತದಲ್ಲಿ ಕನಕ ಭವನ ನಿರ್ಮಿಸಲಾಗಿದ್ದು ಶೀಘ್ರದಲ್ಲಿ ಉದ್ಘಾಟನೆಗೊಳ್ಳಲಿದೆ ಎಂದು ಶಾಸಕ ಭೀಮಾನಾಯ್ಕ ತಿಳಿಸಿದರು. ಪಟ್ಟಣದ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಗುರುವಾರ ನಡೆದ ಕನಕದಾಸರ 531ನೇ ಜಯಂತ್ಯುತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕೊಟ್ಟೂರು ರಸ್ತೆಯನ್ನು ಭಕ್ತ ಕನಕದಾಸರ ವೃತ್ತವನ್ನಾಗಿ ಅಭಿವೃದ್ಧಿಪಡಿಸಲಾಗುವುದು. ಒಟ್ಟು 7 ಲಕ್ಷ ರೂ.ಅಂದಾಜು ಮೊತ್ತದಲ್ಲಿ ಕನಕದಾಸರ ಪುತ್ಥಳಿ ನಿರ್ಮಿಸಲಾಗುವುದು. ವಿಶೇಷ ಅನುದಾನದಡಿ ಕಿತ್ತೂರು ರಾಣಿ ಚನ್ನಮ್ಮ, ವಾಲ್ಮೀಕಿ ಮತ್ತು ಅಂಬೇಡ್ಕರ್ ಕಂಚಿನ ಪುತ್ಥಳಿ ನಿರ್ಮಿಸಲಾಗುವುದು. ಈಗಾಗಲೇ ತಾಲೂಕಿನ ಬ್ಯಾಸಿಗೆದೇರಿ ಗ್ರಾಮದಲ್ಲಿ ಸಂಗೊಳ್ಳಿರಾಯಣ್ಣ ಪುತ್ಥಳಿ ಸ್ಥಾಪಿಸಲಾಗಿದೆ. ಕಾತ್ಯಾಯಿನಿ ಮರಡಿ ಬಳಿ 80 ಸೆಂಟ್ಸ್ ನಿವೇಶನವನ್ನು ಹಾಲುಮತ ಸಮಾಜದ ಕಲ್ಯಾಣಮಂಟಪಕ್ಕೆ ಒದಗಿಸಲಾಗುವುದು ಎಂದು ತಿಳಿಸಿದರು.
ಕಾಗಿನೆಲೆ ಮಹಾಸಂಸ್ಥಾನಮಠದ ನಿರಂಜನಾನಂದಪುರಿ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ಹಾಲುಮತ ಸಮಾಜದವರು ಪ್ರಜ್ಞಾವಂತಿಕೆ ಮೆರೆಯಬೇಕು. ಡಿಜೆ ಸಂಸ್ಕೃತಿಯಿಂದ ಯುವಕರು ಹೊರ ಬರಬೇಕಿದೆ. ಕಲ್ಯಾಣ ಮಂಟಪಕ್ಕಿಂತಲೂ ಸಮಾಜದ ವಿದ್ಯಾರ್ಥಿಗಳ ವಸತಿ ನಿಲಯ ನಿರ್ಮಿಸುವುದು ಹೆಚ್ಚು ಸೂಕ್ತ. ದೇವಸ್ಥಾನದ ಗಂಟೆಗಿಂತಲೂ ಶಾಲೆಯ ಗಂಟೆಗಳು ಹೆಚ್ಚು ಕೇಳಿಬರುವುದು ಶೈಕ್ಷಣಿಕ ಪ್ರಗತಿಯ ಸಂಕೇತ. ಜಾತಿ ವ್ಯವಸ್ಥೆಯ ಅನಿಷ್ಠ ಪದ್ಧತಿ ನಿರ್ಮೂಲನೆ ಮಾಡಬೇಕು. ಸತ್ಯವನ್ನು ಮರೆತು ಬದುಕಬಾರದು, ಇತಿಹಾಸವನ್ನು ತಿಳಿದುಕೊಳ್ಳುವ ಅಗತ್ಯವಿದೆ. ಸಮುದಾಯ ಜಾಗೃತಿಯಾಗಬೇಕು. ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡುವ ಮೂಲಕ ಸ್ವಾವಲಂಬನೆಯ ದಾರಿ ಕಲ್ಪಿಸಬೇಕಿದೆ. ಜಾತಿಗಿಂತಲೂ ನೀತಿ ಮುಖ್ಯ, ಎಲ್ಲ ಸಮಾಜದೊಂದಿಗೆ ಸೌಹಾರ್ದ ಬದುಕು ನಡೆಸಿ. ಸಾಮಾಜಿಕ ಜಾಲತಾಣದಲ್ಲಿ ಯಾವ ಸಮಾಜವನ್ನು ನಿಂದನೆ ಮಾಡಬೇಡಿ. ಸುಸಂಸ್ಕೃತರಾಗಿ ಜೀವನ ನಡೆಸಿ ಎಂದು ಕಿವಿಮಾತು ಹೇಳಿದರು.
ತಾಲೂಕು ಹಾಲುಮತ ಸಮಾಜದ ಅಧ್ಯಕ್ಷ ಬಿ.ಬಸವರಾಜ, ಸಮಾಜದ ಮುಖಂಡ ಮುಟುಗನಹಳ್ಳಿ ಕೊಟ್ರೇಶ್, ಬಿಇಒ ಶೇಖರಪ್ಪ ಹೊರಪೇಟೆ ಮಾತನಾಡಿದರು. ಸಮಾಜದ ಗುರುವಿನ ಕೊಟ್ರಯ್ಯ ಒಡೆಯರ್, ಕುರಿ ಶಿವಮೂರ್ತಿ, ಕನಕಸೇನೆ ಅಧ್ಯಕ್ಷ ದೊಡ್ಡಬಸಪ್ಪ, ಕೊಟ್ರೇಶ್, ತಾಪಂ ಇಒ ಮಲ್ಲಾನಾಯ್ಕ, ತೋಟಗಾರಿಕೆ ಸಹಾಯಕ ನಿರ್ದೇಶಕ ಡಾ| ಪರಮೇಶ್ವರಪ್ಪ, ತಾಪಂ ಅಧ್ಯಕ್ಷೆ ಕೆ.ನಾಗಮ್ಮ, ಉಪಾಧ್ಯಕ್ಷೆ ಕೊಚಾಲಿ ಸುಶೀಲಮ್ಮ ಮಂಜುನಾಥ, ಎಪಿಎಂಸಿ ಅಧ್ಯಕ್ಷ ದೊಡ್ಡಬಸಪ್ಪ, ತಾ.ಪಂ.ಸದಸ್ಯರಾದ ಗೀತಾ ಹುಲುಗಪ್ಪ, ಸೊನ್ನದ ಪ್ರಭಾಕರ್, ಶ್ಯಾಮಲಮ್ಮ, ಸಮಾಜದ ಮಾಜಿ ಅಧ್ಯಕ್ಷ ಮೈಲಾರಪ್ಪ, ಕುರುಬ ಸಮಾಜದ ಮಹಿಳಾ ಘಟಕದ ಅಧ್ಯಕ್ಷೆ ನಾಗರತ್ನಮ್ಮ, ಜಿಲ್ಲಾ ನಿರ್ದೇಶಕಿ ಸುಶೀಲಮ್ಮ, ವಾಲ್ಮೀಕಿ ಸಮಾಜದ ಮುಖಂಡ ಪವಾಡಿ ಹನುಮಂತಪ್ಪ, ಜಂಬಣ್ಣ, ಜಳಿಕಿ ಗುರುಬಸಪ್ಪ, ಎಪಿಎಂಸಿ ನಿರ್ದೇಶಕ ರಾಮಣ್ಣ, ವರದಾಪುರ ಕುಮಾರ ಇತರರಿದ್ದರು. ಉಪನ್ಯಾಸಕ ಗೂಳೆಪ್ಪ, ಮುಖ್ಯಗುರು ಎಚ್.ದೇವಪ್ಪ, ಶಿಕ್ಷಕ ರಾಮಣ್ಣ ನಿರೂಪಿಸಿದರು.
ಶ್ರೀನಿರಂಜನಾನಂದಪುರಿ ಸ್ವಾಮೀಜಿ, ಕಾಗಿನೆಲೆ ಮಹಾಸಂಸ್ಥಾನ ಮಠ
ಜಾತಿ ವ್ಯವಸ್ಥೆಯ ಅನಿಷ್ಠ ಪದ್ಧತಿ ನಿರ್ಮೂಲನೆ ಮಾಡಬೇಕು. ಸತ್ಯವನ್ನು ಮರೆತು ಬದುಕಬಾರದು, ಇತಿಹಾಸವನ್ನು ತಿಳಿದುಕೊಳ್ಳುವ ಅಗತ್ಯವಿದೆ. ಸಮುದಾಯ ಜಾಗೃತಿಯಾಗಬೇಕು. ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡುವ ಮೂಲಕ ಸ್ವಾವಲಂಬನೆಯ ದಾರಿ ಕಲ್ಪಿಸಬೇಕಿದೆ. ಜಾತಿಗಿಂತಲೂ ನೀತಿ ಮುಖ್ಯ, ಎಲ್ಲ ಸಮಾಜದೊಂದಿಗೆ ಸೌಹಾರ್ದ ಬದುಕು ನಡೆಸಿ. ಸಾಮಾಜಿಕ ಜಾಲತಾಣದಲ್ಲಿ ಯಾವ ಸಮಾಜವನ್ನು ನಿಂದನೆ ಮಾಡಬೇಡಿ. ಸುಸಂಸ್ಕೃತರಾಗಿ ಜೀವನ ನಡೆಸಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sri Krishnadevaraya ವಿ.ವಿ.ಗೆ ಮಂಗಳಮುಖಿ ಅತಿಥಿ ಉಪನ್ಯಾಸಕಿ; ರಾಜ್ಯದಲ್ಲೇ ಮೊದಲು
Bellary ಜಿಲ್ಲಾಸ್ಪತ್ರೆಗೆ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ಭೇಟಿ
Ballary; ಐವರು ಬಾಣಂತಿಯರ ಕುಟುಂಬಗಳಿಗೆ ಪರಿಹಾರ 5 ಲಕ್ಷಕ್ಕೇರಿಸಿದ ಸಿಎಂ
Ballari; ಬಾಣಂತಿಯರ ಸಾ*ವು: ಲೋಕಾದಿಂದ ಸುಮೋಟೋ ಕೇಸ್
BIMS Hospital: ಶ್ರೀರಾಮುಲು ನೇತೃತ್ವದಲ್ಲಿ ಸತ್ಯಾಗ್ರಹ; ಸ್ಥಳಕ್ಕೆ ಆರೋಗ್ಯ ಸಚಿವ ಭೇಟಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Intervention: ಗೃಹ ಇಲಾಖೆಯಲ್ಲಿ ಯಾರ ಹಸ್ತಕ್ಷೇಪವೂ ಇಲ್ಲ: ಸಚಿವ ಪರಮೇಶ್ವರ್
Encounter: ಉತ್ತರಪ್ರದೇಶದಲ್ಲಿ ಎನ್‌ಕೌಂಟರ್: 3 ಶಂಕಿತ ಖಲಿಸ್ಥಾನಿ ಉಗ್ರರ ಹತ್ಯೆ
Investment: 9.8 ಸಾವಿರ ಕೋಟಿ ರೂ. 9 ಯೋಜನೆಗೆ ಒಪ್ಪಿಗೆ: ಸಿಎಂ ಸಿದ್ದರಾಮಯ್ಯ
Growers Meet: ಕಾಫಿಗೆ ಜಗತ್ತಿನೆಲ್ಲೆಡೆ ಮಾರುಕಟ್ಟೆ ಸೃಷ್ಟಿ ಅಗತ್ಯ: ಪಿಯೂಷ್ ಗೋಯಲ್
Congress Government: ಸಿದ್ದರಾಮಯ್ಯ ಅವಧಿಯಲ್ಲೇ ದ್ವೇಷದ ರಾಜಕಾರಣ ಬೇಸರ ತಂದಿದೆ: ಸೋಮಣ್ಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.