ಸೇವೆಯಲ್ಲಿ ದೇವರ ಕಂಡ ಸ್ವಾಮೀಜಿ
Team Udayavani, Jan 25, 2019, 8:43 AM IST
ಭಾಲ್ಕಿ: ಬಸವಾದಿ ಶರಣರ ಸದಾಶಯದಂತೆ ಕಾಯಕ ಮತ್ತು ದಾಸೋಹವನ್ನು ತಮ್ಮ ಜೀವನದ ಉಸಿರಾಗಿಸಿಕೊಂಡಿರುವ ಡಾ| ಶಿವಕುಮಾರ ಮಹಾಸ್ವಾಮಿಗಳು ದುರ್ಬಲರ ಸೇವೆಯಲ್ಲಿ ದೇವರನ್ನು ಕಂಡವರಾಗಿದ್ದರು ಎಂದು ಮಹಾ ಸಭೆಯ ಜಿಲ್ಲಾ ಉಪಾಧ್ಯಕ್ಷ ಪ್ರಾ| ಚಂದ್ರಕಾಂತ ಬಿರಾದಾರ ಹೇಳಿದರು.
ಪಟ್ಟಣದ ಬಸವೇಶ್ವರ ವೃತ್ತದ ಬಳಿ ಮಂಗಳವಾರ ಅಖೀಲ ಭಾರತ ವೀರಶೈವ ಮಹಾ ಸಭೆ ವತಿಯಿಂದ ಆಯೋಜಿಸಿದ್ದ ಡಾ| ಶಿವಕುಮಾರ ಸ್ವಾಮಿಗಳ ನುಡಿ ನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಡಾ| ಶಿವಕುಮಾರ ಸ್ವಾಮೀಜಿ ಈ ಸಮಾಜ ಕಂಡ ಅಪರೂಪದ ಮಹಾತ್ಮರಾಗಿದ್ದರು. ಅಪ್ಪಟ ಬಸವಾಭಿಮಾನಿಯಾಗಿದ್ದ ಪೂಜ್ಯರು ಕಾಯಕ ತತ್ವ ಅಕ್ಷರ ದಾಸೋಹ ನಡೆಸಿಕೊಂಡು ಬಂದ ಪೂಜ್ಯರು ಆಗಿದ್ದರು. ಅಂತಹ ಮಹಾನ್ ಪೂಜ್ಯರು ಇಂದು ನಮ್ಮೊಂದಿಗೆ ದೇಹಧಾರಿಯಾಗಿರದಿದ್ದರೂ ಆತ್ಮರೂಪದಿಂದ ನಮ್ಮೊಂದಿಗೆ ಸದಾ ಇರುವರು ಎಂದು ಹೇಳಿದರು.
ಮಹಾ ಸಭೆಯ ಜಿಲ್ಲಾ ಪ್ರದಾನ ಕಾರ್ಯದರ್ಶಿ ಬಸವರಾಜ ರಿಕ್ಕೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಚಿನ್ನಮ್ಮ ಬಾವುಗೆ, ವೈಜಿನಾಥ ಸಿರ್ಸಗಿಕರ, ಮಹಾದೇವ ಕಾಸಿ ಸ್ವಾಮಿ, ಧನರಾಜ ಪಾಟೀಲ, ಸುಭಾಷ ಕಾರಾಮುಂಗೆ, ಸುರೇಶ ಪಾಟೀಲ, ರಾಜಕುಮಾರ ಬಾವುಗೆ, ಬಸವರಾಜ ನುಚ್ಚಾ, ವಿ.ಕೆ.ಪಾಟೀಲ, ಶಿವಪುತ್ರ ದಾಬಶೆಟ್ಟಿ, ಸಂಗಶೆಟ್ಟಿ ಬಾಪುರಸೆ ಇದ್ದರು.
ಬಸವಕಲ್ಯಾಣ
ನಗರದ ಬಸವೇಶ್ವರ ವೃತ್ತದಲ್ಲಿ ತ್ರಿವಿಧ ದಾಸೋಹಿ ಡಾ| ಶಿವಕುಮಾರ ಮಹಾಸ್ವಾಮಿಗಳಿಗೆ ಶ್ರದ್ಧಾಂಜಲಿ ಹಾಗೂ ನುಡಿ ನಮನ ಸಲ್ಲಿಸಲಾಯಿತು.
ಡಾ| ಗಂಗಾಂಬಿಕಾ ಅಕ್ಕ ಮಾತನಾಡಿ, ವಿಶ್ವದ ದಾಸೋಹ ಶಕ್ತಿ ನಮ್ಮಿಂದ ಕಣ್ಮರೆಯಾಗಿದೆ. ಅವರು ಸಮಾಜಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ. ಇರಲು ಆಶ್ರಯ, ಊಟ ಮತ್ತು ಶಿಕ್ಷಣ ಕೊಟ್ಟು ಸಾವಿರಾರು ಮಕ್ಕಳನ್ನು ಬೆಳೆಸಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದರು.
ಶ್ರೀ ರಾಜೇಶ್ವರ ಶಿವಾಚಾರ್ಯರು, ಶ್ರೀ ಚನ್ನಮಲ್ಲ ದೇವರು, ಜಿಪಂ ಸದಸ್ಯ ಸುಧಿಧೀರ ಕಾಡಾದಿ, ಬಿಕೆಡಿಬಿ ಆಯುಕ್ತ ಶರಣಬಸಪ್ಪಾ ಕೊಟ್ಟಪ್ಪಗೋಳ, ಡಾ| ಜಿ.ಎಸ್.ಭೂರಾಳೆ, ಸುಲೋಚನಾ, ನಗರ ಸಭೆ ಸದಸ್ಯ ರವೀಂದ್ರ ಕೊಳಕುರ, ಶಿವಕುಮಾರ ಬಿರಾದಾರ, ಶ್ರೀಶೈಲ ಹುಡೇದ ಮಾತನಾಡಿದರು.
ಬಿಡಿಪಿಸಿ ಅಧ್ಯಕ್ಷ ಅನೀಲಕುಮಾರ ರಗಟೆ, ಅನೀಲಕುಮಾರ ಮೆಟಗೆ, ರೇವಣಪ್ಪಾ ಬಾಲಕಿಲೆ, ಸುಭಾಷ ಹೊಳಕುಂದೆ, ಸುನೀಲ ಪಾಟೀಲ, ರವಿ ಚಂದನಕೇರೆ, ಅಶೋಕ ನಾಗರಾಳೆ, ಮಲ್ಲಿಕಾರ್ಜುನ, ಭದ್ರಿನಾಥ ಪಾಟೀಲ, ಬಸವರಾಕ ಕೊರಕೆ, ಶಿವು ಆಗ್ರೆ, ಮಹೇಶ ಸುಂಟನೂರೆ, ನಾಗೇಶ ಕೊಡಗೆ, ಸಂಜು ಮೆಟಗೆ, ಸಂಗಮೇಶ, ಜಗದೀಶ ಪಾಟೀಲ, ಕಿರಣ ಆರ್ಯ ಮತ್ತಿತರರು ಇದ್ದರು. ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಜ್ಯೋತಿ ಪ್ರಜ್ವಲಿಸಿದ ಬಳಿಕ ನಗರದ ಪ್ರಮುಖ ವೃತ್ತಗಳ ಮಾರ್ಗವಾಗಿ ಬಸವೇಶ್ವರ ವೃತ್ತದ ವರೆಗೆ ಸ್ವಾಮೀಜಿ ಭಾವಚಿತ್ರ ಮೆರವಣಿಗೆ ನಡೆಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
By Polls Result: ಪ್ರತಿಪಕ್ಷಗಳ ಸುಳ್ಳು ಆರೋಪಕ್ಕೆ ಜನಾದೇಶದ ಉತ್ತರ: ಖಂಡ್ರೆ
Bidar; ಲಂಚ ಸ್ವೀಕರಿಸುತ್ತಿದ್ದ ಬುಡಾ ಆಯುಕ್ತ ಸೇರಿ ಮೂವರು ಲೋಕಾಯುಕ್ತ ಬಲೆಗೆ
Bidar: ಬಿಜೆಪಿಯವರು ಅಧಿಕಾರಕ್ಕಾಗಿ ಏನು ಮಾಡಲೂ ಹೇಸದವರು: ಈಶ್ವರ್ ಖಂಡ್ರೆ
Bidar: ದೇಶದ ಆರ್ಥಿಕತೆಗೆ ‘ಸಹಕಾರʼದ ಕೊಡುಗೆ ಶ್ರೇಷ್ಠ: ಸಚಿವ ಈಶ್ವರ ಖಂಡ್ರೆ
Bidar: ವಾಂತಿ-ಭೇದಿ… ವಸತಿ ಶಾಲೆಯ 50ಕ್ಕೂ ಹೆಚ್ಚು ಮಕ್ಕಳು ಆಸ್ಪತ್ರೆಗೆ ದಾಖಲು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.