“ದೇಶಿ ಹಸುಗಳ ಸಾಕಣೆಗೆ ಆದ್ಯತೆ ನೀಡಿ’
Team Udayavani, Jan 26, 2019, 12:55 AM IST
ಕಾರ್ಕಳ: ದೇಶಿ ತಳಿಯ ಗೋವುಗಳನ್ನು ಸಾಕುವ ಮೂಲಕ ಅವುಗಳ ಸಂರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಬೇಕು. ದೇಶಿ ಹಸುಗಳ ಹಾಲು, ಗಂಜಲ, ಸೆಗಣಿ ಹಾಗೂ ಅವುಗಳ ಉಪಯೋಗ ಮುಂದಿನ ದಿನಗಳಲ್ಲಿ ಹೆಚ್ಚಾಗುವಂತೆ ಜನತೆಗೆ ಅರಿವು ಮೂಡಿಸಬೇಕು. ಜನತೆ ಹಾಗೂ ಇಲಾಖೆ ಈ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾಗಬೇಕು ಎಂದು ಜಿ.ಪಂ. ಸದಸ್ಯೆ ರೇಶ್ಮಾ ಶೆಟ್ಟಿ ಇನ್ನಾ ಹೇಳಿದರು.
ಜಿ.ಪಂ., ತಾ.ಪಂ. ಕಾರ್ಕಳ ಹಾಗೂ ಪಶುಸಂಗೋಪನಾ ಇಲಾಖೆ, ಹಾಲು ಉತ್ಪಾದಕರ ಸಹಕಾರ ಸಂಘ ದೂಪದಕಟ್ಟೆ ಹಾಗೂ ಬೋರ್ಗಲ್‌ಗುಡ್ಡೆ, ನಿಟ್ಟೆ ವಿದ್ಯಾಸಂಸ್ಥೆಯ ಆಶ್ರಯದಲ್ಲಿ ಬೋರ್ಗಲ್‌ಗುಡ್ಡೆ ಮಹಾಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ನಡೆದ ಮಿಶ್ರ ಜಾನುವಾರು ತಳಿಯ ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಜಾನುವಾರು ಶಿಬಿರಗಳನ್ನು ಗ್ರಾಮೀಣ ಭಾಗದಲ್ಲಿ ಕೂಡ ಆಯೋಜಿಸುವ ಮೂಲಕ ಹಸುಗಳ ಸಾಕಾಣಿಕೆಗೆ ಪ್ರೋತ್ಸಾಹ ಹಾಗೂ ಮಾಹಿತಿ ನೀಡಬೇಕು ಎಂದರು.
ಮಂಗಳೂರು ಹಾಲು ಉತ್ಪಾದಕರ ಮಹಾಮಂಡಳಿಯ ನಿರ್ದೇಶಕ ನವೀನ್‌ಚಂದ್ರ ಜೈನ್, ದೇಶಿಯ ಹಾಲು ಉತ್ಪಾದನೆಗೆ ಮುಂದಿನ ದಿನಗಳಲ್ಲಿ ರಾಷ್ಟ್ರಮಟ್ಟದಲ್ಲಿ ಮಾತ್ರ ವಲ್ಲದೇ ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಬೇಡಿಕೆ ಹೆಚ್ಚಾಗಲಿದೆ. ದೇಶಿಯ ತಳಿಯ ಹಾಲಿಗೆ ಉತ್ತಮ ದರವೂ ದೊರೆಯಲಿದೆ. ಹೀಗಾಗಿ ರೈತರು ದೇಶಿಯ ಹಸುಗಳ ಸಾಕಲು ಆಸಕ್ತಿ ವಹಿಸಬೇಕು ಎಂದರು.
ಜಿಲ್ಲಾ ಉಪನಿರ್ದೇಶಕ ಸರ್ವೋತ್ತಮ ಉಡುಪ ಮಾತನಾಡಿದರು. ಪ್ರದರ್ಶನದಲ್ಲಿ 100ಕ್ಕೂ ಅಧಿಕ ಜಾನುವಾರುಗಳು ಭಾಗವಹಿಸಿದ್ದು, ಹಸುಗಳು, ಗೆಡಸು ಹಾಗೂ ಕರುಗಳು ಹೀಗೆ ಮೂರು ವಿಭಾಗದಲ್ಲಿ ಸ್ಪರ್ಧೆ ನಡೆಸಿ ಬಹುಮಾನ ನೀಡಲಾಯಿತು. ಎಲ್ಲ ಜಾನುವಾರುಗಳಿಗೆ ಪ್ರೋತ್ಸಾಹಕ ಬಹುಮಾನ ನೀಡಲಾಯಿತು.ತೀರ್ಪುಗಾರರಾಗಿ ಡಾ| ವಾಗೀಶ್ ಚೌಹಾನ್, ಡಾ| ಪ್ರದೀಪ್, ಡಾ| ಅರುಣ್ ಹೆಗ್ಡೆ ಭಾಗವಹಿಸಿದ್ದರು. ನಿಟ್ಟೆ ಶಿಕ್ಷಣ ಸಂಸ್ಥೆಯ ಶ್ಯಾಮಸುಂದರ್, ಕೆನರಾ ಫೀಡ್ಸ್‌ನ ಪಾಲುದಾರ ಭಾಸ್ಕರ್ ನಾಯಕ್, ಜಯರಾಜ್ ಶೆಟ್ಟಿ, ಯತಿರಾಜ್ ಶೆಟ್ಟಿ ಉಪಸ್ಥಿತರಿದ್ದರು.
ಪಶುಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ| ಸುಬ್ರಹ್ಮಣ್ಯ ಪ್ರಸಾದ್ ಸ್ವಾಗತಿಸಿದರು. ಡಾ| ವಾಸುದೇವ ಪೈ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Attack On Car: ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ: ಕಸಾಪ, ಬ್ರಾಹ್ಮಣ ಮಹಾಸಭಾ ಖಂಡನೆ
Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್ ಬರ್ಬರ ಹ*ತ್ಯೆ!
US Election 2024: ಟ್ರಂಪ್,ಕಮಲಾ ಮಧ್ಯೆ ತೀವ್ರ ಪೈಪೋಟಿ
Udupi: ಗೀತಾರ್ಥ ಚಿಂತನೆ-85: ಕಶ್ಮಲ-ಕಲ್ಮಶಗಳ ವ್ಯತ್ಯಾಸ
Mangaluru Airport: ಮಂಜು ಕವಿದ ವಾತಾವರಣ: ವಿಮಾನ ಯಾನದಲ್ಲಿ ವ್ಯತ್ಯಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.