ಪ್ರಣವ್ ಸಹಿತ ಮೂವರು ಭಾರತ ರತ್ನ
Team Udayavani, Jan 26, 2019, 12:30 AM IST
ದೇಶದ ಅಪ್ರತಿಮ ಪುರಸ್ಕಾರ ಈ ಬಾರಿ ಮೂವರಿಗೆ
ಭೂಪೇನ್, ನಾನಾಜಿಗೆ ಮರಣೋತ್ತರ ಪ್ರಶಸ್ತಿ
ಹೊಸದಿಲ್ಲಿ: ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ, ಅಪ್ರತಿಮ ಸಮಾಜ ಸೇವಕ ನಾನಾಜಿ ದೇಶಮುಖ್ ಮತ್ತು ಗಾಯಕ ಭೂಪೇನ್ ಹಜಾರಿಕಾ ಅವರು ದೇಶದ ಅತ್ಯಂತ ಪ್ರತಿಷ್ಠಿತ ಪುರಸ್ಕಾರ “ಭಾರತ ರತ್ನ’ಕ್ಕೆ ಭಾಜನರಾಗಿದ್ದಾರೆ. ಭೂಪೇನ್ ದಾ ಹಾಗೂ ನಾನಾಜಿಯವರಿಗೆ ಮರಣೋತ್ತರವಾಗಿ ಭಾರತ ರತ್ನ ನೀಡಿ ಪುರಸ್ಕರಿಸಲಾಗಿದೆ. ಮೂವರು ಗಣ್ಯರ ಸಾಧನೆಯನ್ನು ಪ್ರಧಾನಿ ನರೇಂದ್ರ ಮೋದಿ ಮೆಚ್ಚಿ, ಶುಭ ಕೋರಿ ಟ್ವೀಟ್ ಮಾಡಿದ್ದಾರೆ.
ಪ್ರಶಸ್ತಿ ಘೋಷಣೆಯಾಗುತ್ತಿದ್ದಂತೆ ಕರ್ನಾಟಕದಲ್ಲಿ ಸಿದ್ಧಗಂಗಾ ಶ್ರೀಗಳಿಗೂ ನೀಡಬೇಕಿತ್ತು ಎಂಬ ಮಾತುಗಳು ಕೇಳಿ ಬರುತ್ತಿವೆ. ಪಕ್ಷಾತೀತವಾಗಿ ಹೇಳಿಕೆ ನೀಡಿರುವ ರಾಜಕೀಯ ನಾಯಕರು ಶ್ರೀಗಳಿಗೆ ಭಾರತ ರತ್ನ ನೀಡಿದ್ದರೆ, ಪ್ರಶಸ್ತಿಯ ಮೆರುಗು ಇನ್ನಷ್ಟು ಹೆಚ್ಚುತ್ತಿತ್ತು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್‌ನ ಹಿರಿಯ ನಾಯಕರೂ ಆಗಿದ್ದ ಪ್ರಣವ್ ಮುಖರ್ಜಿ ಅವರು 2012ರಿಂದ 2017ರ ವರೆಗೆ ದೇಶದ 13ನೇ ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿದ್ದಾರೆ. ಅಲ್ಲದೆ ತಮ್ಮ 5 ದಶಕಗಳ ರಾಜಕೀಯ ಜೀವನದಲ್ಲಿ, ವಿತ್ತ, ರಕ್ಷಣಾ, ವಿದೇಶಾಂಗ ಸಚಿವ ರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ರಾಜಕೀಯ ಕ್ಷೇತ್ರದಲ್ಲಿ ಅವರು ನೀಡಿದ ಕೊಡುಗೆಗಾಗಿ ಈ ಪುರಸ್ಕಾರ ಸಂದಿದೆ. ಜನತಾ ಪಕ್ಷದ ಸ್ಥಾಪಕ ಸದಸ್ಯರಲ್ಲೊಬ್ಬ ರಾದ ನಾನಾಜಿ ದೇಶ್‌ಮುಖ್ ಅವರು ಸಮಾಜಸೇವೆಗೆ ನೀಡಿರುವಂಥ ಗಣ ನೀಯ ಕೊಡುಗೆ ಪರಿಗಣಿಸಿ ಈ ಪ್ರತಿಷ್ಠಿತ ಗೌರವವನ್ನು ನೀಡಲಾಗಿದೆ.
ಪ್ರಣವ್ ದಾ ನಮ್ಮ ಕಾಲದ ಮುತ್ಸದ್ದಿ. ಅವರು ದೇಶಕ್ಕೆ ದಶಕಗಳವರೆಗೆ ಸ್ವಾರ್ಥರಹಿತ ಅವಿಶ್ರಾಂತ ಸೇವೆ ಸಲ್ಲಿಸಿದ್ದಾರೆ. ದೇಶದ ಪ್ರಗತಿಯ ಪಥದಲ್ಲಿ ಅವರ ಛಾಪು ಮಹತ್ವದ್ದಾಗಿದೆ.
ಶ್ರೀ ಭೂಪೇನ್ ಹಜಾರಿಕಾ ಅವರ ಹಾಡುಗಳು ಎಲ್ಲ ತಲೆಮಾರುಗಳ ಜನರನ್ನೂ ಮಂತ್ರಮುಗ್ಧ ಗೊಳಿಸುವಂಥದ್ದು. ಅವರ ಮೂಲಕ ನ್ಯಾಯ, ಸಾಮರಸ್ಯ ಮತ್ತು ಭಾತೃತ್ವದ ಸಂದೇಶವು ಕಿರಣಗಳಂತೆ ಹೊರ ಹೊಮ್ಮಿದೆ. ವಿಶ್ವಾದ್ಯಂತ ಭಾರತದ ಸಂಸ್ಕೃತಿಯನ್ನು ಪಸರಿಸಿದವರು ಹಜಾರಿಕಾ. ಭೂಪೇನಾ ದಾಗೆ ಭಾರತ ರತ್ನ ಸಂದಿರುವುದು ಸಂತೋಷದ ಸಂಗತಿ.
ನಾನಾಜಿ ದೇಶ್‌ಮುಖ್ ಅವರು ಗ್ರಾಮೀಣ ಅಭಿವೃದ್ಧಿಗೆ ನೀಡಿರುವ ಕೊಡುಗೆಯು ನಮ್ಮ ದೇಶದ ಗ್ರಾಮೀಣ ಪ್ರದೇಶಗಳ ಜನರ ಸಬಲೀಕರಣಕ್ಕೆ ಹೊಸ ಮಾದರಿಯನ್ನೇ ಕಲ್ಪಿಸಿದೆ. ವಿನಯ, ಸಹಾನುಭೂತಿ ಮತ್ತು ಸೇವಾ ಮನೋಭಾವದ ಪ್ರತೀಕವೇ ಅವರಾಗಿದ್ದಾರೆ. ಅವರು ನಿಜಕ್ಕೂ ಭಾರತದ ರತ್ನವೆ.
ಮೋದಿ ಟ್ವೀಟ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?
Mahayuti ಗೆಲುವು: ಆ್ಯಕ್ಸಿಸ್ ಮೈ ಇಂಡಿಯಾ, ಚಾಣಕ್ಯ ಸಮೀಕ್ಷೆ ಭವಿಷ್ಯ
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
MUST WATCH
ಹೊಸ ಸೇರ್ಪಡೆ
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
Mudigere: ಕಾಫಿ ಬೆಳೆಗಾರರ ಸಂಘಟನೆಗಳ ಪದಾಧಿಕಾರಿಗಳ ಜೊತೆ ಪೊಲೀಸ್ ಅಧಿಕಾರಿಗಳ ಸಭೆ
Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ
Udupi: ಸಹಕಾರ ಕ್ಷೇತ್ರ ಪಠ್ಯವಾಗಲಿ: ಡಾ| ಎಂ.ಎನ್.ಆರ್.
Actor Darshan Bail Case: ಹತ್ಯೆ ಸ್ಥಳದಲ್ಲಿ ದರ್ಶನ್ ಇದ್ರು: ಫೋಟೋ ಸಾಕ್ಷ್ಯ ಲಭ್ಯ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.