ಇಚ್ಛಾನುಸಾರ ಪರಿವರ್ತನೆ ಸಲ್ಲದು:ಡಾ| ಜೋಷಿ
Team Udayavani, Jan 26, 2019, 1:20 AM IST
ಮಂಜೇಶ್ವರ: ಕಲಾಕ್ಷೇತ್ರಗಳಲ್ಲಿ ಬದಲಾವಣೆ ಸಹಜ. ಆದರೆ ಕಲೆಯ ಮೂಲ ಆಶಯಕ್ಕೆ ದಕ್ಕೆ ತರುವಂತಹ ಪರಿವರ್ತನೆ ಸಲ್ಲದು ಎಂದು ಖ್ಯಾತ ವಿದ್ವಾಂಸ, ವಿಮರ್ಶಕ ಡಾ|ಪ್ರಭಾಕರ ಜೋಷಿ ಅಭಿಪ್ರಾಯಪಟ್ಟರು.
ಮೀಯಪದವಿನಲ್ಲಿ ದಕ್ಷಿಣ ವಲಯ ಸಾಂಸ್ಕೃತಿಕ ಕೇಂದ್ರ ತಂಜಾವೂರು, ರಂಗಚೇತನ ಸಂಸ್ಕೃತಿ ಕೇಂದ್ರ ಬೆಂಗಳೂರು ಹಾಗೂ ಚೌಟರ ಪ್ರತಿಷ್ಠಾನ ಮೀಯಪದವು ಇದರ ವತಿಯಿಂದ ನಡೆಸಲಾದ ರಾಷ್ಟ್ರೀಯ ಯಕ್ಷರಂಗೋತ್ಸವ – 2018 ಇದರ ಸಮಾರೋಪ ಸಮಾರಂಭದ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಯಕ್ಷಗಾನ ಜೀವಂತ ಕಲೆ, ಅದರ ಹಿರಿಯ ಕಲಾವಿದರು ಪಾತ್ರ ವಹಿಸುವ ಬದಲು ಅವರ ನಿರ್ದೇಶನದಲ್ಲಿ ಯಕ್ಷಗಾನಗಳು ನಡೆಯಬೇಕು. ಕಲೆಯ ಕುರಿತು ಅತಿ ಭಕ್ತಿ ಅಥವಾ ಅತಿ ತಿರಸ್ಕಾರ ಎರಡೂ ಅಪಾಯಕಾರಿ. ಯಕ್ಷಗಾನದ ವೇಷಭೂಷಣ ಆವಿಷ್ಕಾರ ನಾಟಕೀಯವಾಗಬಾರದು. ಎತ್ತರ ಕಿರೀಟದ ರಾವಣನ ಮುಂದೆ ರಾಮನೂ ಕಿರೀಟಧಾರಿಯೇ ಆಗಿರಬೇಕು. ಅದು ಯಕ್ಷಗಾನದ ವೈಶಿಷ್ಟÂ ಎಂಬುದಾಗಿ ಅವರು ಅಮೂಲ್ಯ ಸಲಹೆಯನ್ನಿತ್ತರು.
ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ್ದ ಡಾ|ಡಿ.ಸಿ.ಚೌಟರು ಯಕ್ಷಗಾನಕ್ಕೆ ಜೋಷಿಯವರ ಕೊಡುಗೆ ಅನನ್ಯ ಎಂದು ಕೊಂಡಾಡಿ ಯಕ್ಷಗಾನ ತನಗೆ ಸಂಸ್ಕೃತಿ ಕಲಿಸಿ ಬೆಳೆಸಿದೆ ಎಂದರು. ಸಮಾರೋಪ ಸಮಾರಂಭದ ಈ ಸಭೆಗೆ ರಂಗಚೇತನ ಸಂಸ್ಕೃತಿ ಕೇಂದ್ರದ ವ್ಯವಸ್ಥಾಪಕ ಧರ್ಮದರ್ಶಿ ತೊಟ್ಟವಾಡಿ ನಂಜುಂಡ ಸ್ವಾಮಿ ಸ್ವಾಗತಿಸಿದರು. ಶ್ರೀಧರ ರಾವ್ ವಂದಿಸಿದರು. ರಾಜಾರಾಮ ರಾವ್ ಕಾರ್ಯಕ್ರಮ ನಿರ್ವಹಿಸಿದರು. ಸಭಾ ಕಾರ್ಯಕ್ರಮದ ಬಳಿಕ ಮಹಾಗಣಪತಿ ಮಹಿಳಾ ಯಕ್ಷಗಾನ ಮಂಡಳಿ ಕಾಟಿಪಳ್ಳ ಇವರಿಂದ “ಶ್ರೀ ದೇವಿ ಮಹಿಷಮರ್ದಿನಿ’ ಎಂಬ ಯಕ್ಷಗಾನ ಬಯಲಾಟ ಜರಗಿತು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.