ಸಹಕಾರ ಸಂಘ ಸಾಲ ಇಲ್ಲ ಅನ್ನಬಾರದು: ಡಾ| ಎಂ.ಎನ್. ಆರ್.
Team Udayavani, Jan 26, 2019, 12:30 AM IST
ಸುಳ್ಯ: ಸಹಕಾರ ಸಂಘವು ಪ್ರತಿ ವ್ಯಕ್ತಿಗೆ ಅಗತ್ಯದ ಸಂದರ್ಭ ಸಾಲ ಒದಗಿಸ ಬೇಕು. ಸಾಲ ಇಲ್ಲ ಎಂಬ ಪದ ಸಹಕಾರ ಕ್ಷೇತ್ರದಲ್ಲಿ ಬರಬಾರದು ಎಂದು ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ| ಎಂ.ಎನ್. ರಾಜೇಂದ್ರ ಕುಮಾರ್ ಹೇಳಿದರು.
ಸುಳ್ಯ ತಾಲೂಕಿನ ಐವರ್ನಾಡು ಪ್ರಾ.ಕೃ. ಪತ್ತಿನ ಸಹಕಾರ ಸಂಘದ ಶತಮಾ ನೋತ್ಸವ ಸಂಭ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ರಾಷ್ಟ್ರೀಯ ಸಹಕಾರ ನೀತಿ ಘೋಷಿಸಿ
ಸಹಕಾರ ಕ್ಷೇತ್ರದಲ್ಲಿ ಅಭಿವೃದ್ಧಿ ಸಾಧಿ ಸಲು ಮುಂದಿನ 25 ವರ್ಷಗಳನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ರಾಷ್ಟ್ರೀಯ ಸಹಕಾರ ನೀತಿ ಘೋಷಿಸಿ ಎಂದರು.
ಶತಮಾನೋತ್ಸವದ ಹಿನ್ನೆಲೆಯಲ್ಲಿ ಐವರ್ನಾಡು ಸಹಕಾರ ಸಂಘವು ಸ್ಥಾಪಿಸಿದ ಸಹಕಾರ ಶತಾಬ್ಧ ಸಾಂತ್ವನ ನಿಧಿಯನ್ನು ಲೋಕಾರ್ಪಣೆಗೊಳಿಸ ಲಾಯಿತು. ಸಂಸದ ನಳಿನ್ ಕುಮಾರ್ ಕಟೀಲು ಸ್ಮರಣಸಂಚಿಕೆ ಬಿಡುಗಡೆ ಗೊಳಿಸಿದರು. ಹಾಲಿ, ನಿವೃತ್ತ ಸೈನಿಕರಿಗೆ, ಸಂಘದ ಮಾಜಿ ಅಧ್ಯಕ್ಷರು, ನಿರ್ದೇ ಶಕರು, ಸಿಬಂದಿ, ಸಮಗ್ರ ಕೃಷಿಕರು,ಶೈಕ್ಷಣಿಕ ಸಾಧಕರನ್ನು ಈ ಸಂದರ್ಭ ಸಮ್ಮಾನಿಸಲಾಯಿತು. ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ರಜತ ಸಂಭ್ರಮ ಪೂರೈಸಿದ ಡಾ| ಎಂ.ಎನ್. ರಾಜೇಂದ್ರ ಕುಮಾರ್ ಅವರನ್ನು ಸಮ್ಮಾನಿಸಲಾಯಿತು.
ಶಾಸಕ ಎಸ್. ಅಂಗಾರ ಅಧ್ಯಕ್ಷತೆ ವಹಿಸಿದ್ದರು. ಚನಿಯ ಕಲ್ತಡ್ಕ, ಹರೀಶ್ ಆಚಾರ್, ನಿತ್ಯಾನಂದ ಮುಂಡೋಡಿ, ಕೆ.ಎಸ್. ದೇವರಾಜ್, ಶಶಿಕುಮಾರ್ ರೈ ಬಾಲೊÂಟ್ಟು, ಹರೀಶ್ ಕಂಜಿಪಿಲಿ, ಪುಷ್ಪಾವತಿ ಬಾಳಿಲ, ರಾಧಾಕೃಷ್ಣ ಬೊಳ್ಳೂರು, ಚೈತ್ರಾ ಕಟ್ಟತ್ತಾರು, ವಿಕ್ರಂ ಪೈ, ನಿರ್ದೇಶಕರು, ಮಾಜಿ ಅಧ್ಯಕ್ಷರು ಉಪಸ್ಥಿತರಿದ್ದರು. ಸಂಘದ ಅಧ್ಯಕ್ಷ ಎಸ್.ಎನ್. ಮನ್ಮಥ ಸ್ವಾಗತಿಸಿ, ಸಿಇಒ ರವಿಪ್ರಸಾದ್ ಸಿ.ಕೆ. ವರದಿ ವಾಚಿಸಿದರು. ಸತೀಶ್ ಎಡಮಲೆ ವಂದಿಸಿ, ಕೆ.ಟಿ. ವಿಶ್ವನಾಥ ನಿರೂಪಿಸಿದರು.
ಸಹಕಾರಿ ವಿ.ವಿ. ಸ್ಥಾಪನೆಯಾಗಲಿ
ಬಡತನದಲ್ಲಿದ್ದ ದೇಶವನ್ನು ಅಭಿವೃದ್ಧಿಪರ ದೇಶವನ್ನಾಗಿಸಲು ಸಹಕಾರ ಕ್ಷೇತ್ರದ ಕೊಡುಗೆ ಸಾಕಷ್ಟಿದೆ. ಇದನ್ನು ಅಧ್ಯಯನ ಮಾಡಬೇಕು. ಅಕಾಡೆಮಿಕ್ ರಿಸರ್ಚ್ ಆಗಬೇಕು. ಅದಕ್ಕಾಗಿ ಭಾರತದಲ್ಲಿ ಸಹಕಾರಿ ವಿ.ವಿ. ಸ್ಥಾಪನೆ ಆಗಬೇಕು ಎಂದು ಕ್ಯಾಂಪ್ಕೊ ಅಧ್ಯಕ್ಷ ಎಸ್. ಆರ್. ಸತೀಶ್ಚಂದ್ರ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karkala: ಬೋಳ ಅಕ್ರಮ ಮದ್ಯ ದಾಸ್ತಾನು ಪ್ರಕರಣ: ಕಾರವಾರದಲ್ಲಿ ಓರ್ವ ಆರೋಪಿ ಬಂಧನ
Lokayukta: ಖಜಾನೆ ಇಲಾಖೆ ಉಪನಿರ್ದೇಶಕ, ಸಹಾಯಕ ಲೋಕಾಯುಕ್ತ ಬಲೆಗೆ
Udupi: ಕಸ್ತೂರಿ ರಂಗನ್ ವರದಿ ಬಗ್ಗೆ ಯಾರೂ ಆತಂಕಪಡಬೇಕಿಲ್ಲ: ಕೋಟ ಶ್ರೀನಿವಾಸ ಪೂಜಾರಿ
Manipal: ಗ್ರಾಮೀಣ ಓದುಗರ ಸ್ಪಂದನೆಯೇ ಯಶಸ್ಸು: ಎಂಡಿ, ಸಿಇಒ ವಿನೋದ್ ಕುಮಾರ್
Udupi; ಗೀತಾರ್ಥ ಚಿಂತನೆ 96 : ವ್ಯಾಮೋಹ ಜಾಲ vs ಜಾಗೃತಾತ್ಮ
MUST WATCH
ಹೊಸ ಸೇರ್ಪಡೆ
World Prematurity Day: ಅಂತಾರಾಷ್ಟ್ರೀಯ ಅವಧಿಪೂರ್ವ ಶಿಶು ಜನನ ದಿನ; ನವೆಂಬರ್ 17
Bantwal: ನೇತ್ರಾವತಿ ಹೊಸ ಸೇತುವೆ ಸಂಚಾರಕ್ಕೆ ಮುಕ್ತ
Davanagere: ಯತ್ನಾಳ್ ಫೋರ್ತ್ ಗ್ರೇಡ್ ರಾಜಕಾರಣಿ..: ರೇಣುಕಾಚಾರ್ಯ ವಾಗ್ದಾಳಿ
BBK11: ಹನುಮಂತು ಬಳಿಕ ಮತ್ತಿಬ್ಬರು ವೈಲ್ಡ್ ಕಾರ್ಡ್ ಸ್ಪರ್ಧಿಗಳು ಬಿಗ್‌ಬಾಸ್ ಮನೆಗೆ
Karkala: ಬೋಳ ಅಕ್ರಮ ಮದ್ಯ ದಾಸ್ತಾನು ಪ್ರಕರಣ: ಕಾರವಾರದಲ್ಲಿ ಓರ್ವ ಆರೋಪಿ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.