ನೃತ್ಯಂ ಶಿವಂ ಸುಂದರಂ
Team Udayavani, Jan 26, 2019, 2:29 AM IST
ಜಾತ್ರೆಯೆಂದರೆ ಖುಷಿ, ಜಾತ್ರೆಯೆಂದರೆ ಅಚ್ಚರಿ, ಜಾತ್ರೆಯೆಂದರೆ ವರ್ಣಮಯ ಲೋಕ. ಅಲ್ಲಿ ಏನುಂಟು, ಏನಿಲ್ಲ? ಬೆಂಡು-ಬತ್ತಾಸು, ಬಳೆ-ಸರ ಅಂಗಡಿ, ಐಸ್‌ಕ್ಯಾಂಡಿ, ಬಾಂಬೆ ಮಿಠಾಯಿ, ಗೊಂಬೆ ಕುಣಿತ, ರಥೋತ್ಸವ… ಜಾತ್ರೆಯೆಂದರೆ ಥಟ್ಟನೆ ಮನಸ್ಸಿಗೆ ಬರುವ ಚಿತ್ರಣಗಳಿವು. ಆದರೆ, ಇಲ್ಲಿ ನಡೆಯುತ್ತಿರುವ ಜಾತ್ರೆಯೇ ಬೇರೆ ರೀತಿಯದ್ದು. ಇದು “ಡ್ಯಾನ್ಸ್ ಜಾತ್ರೆ’; ನೃತ್ಯಕ್ಕಾಗಿಯೇ ಮೀಸಲಾಗಿರುವ ಜಾತ್ರೆ.
ಸತತ ಏಳು ವರ್ಷಗಳಿಂದ ದೇಶ- ವಿದೇಶದ ನೃತ್ಯ ಕಲಾವಿದರನ್ನು “ಡ್ಯಾನ್ಸ್ ಜಾತ್ರೆ’ಯ ನೆಪದಲ್ಲಿ ಒಂದೆಡೆ ಸೇರಿಸುತ್ತಿರುವವರು ಖ್ಯಾತ ನೃತ್ಯ ಕಲಾವಿದೆ, ಶಾಂಭವಿ ಸ್ಕೂಲ್ ಆಫ್ ಡ್ಯಾನ್ಸ್‌ನ ಸ್ಥಾಪಕಿ ವೈಜಯಂತಿ ಕಾಶಿ. ಭಾರತದಲ್ಲಿಯೇ ಮೊದಲ ಬಾರಿಗೆ ನೃತ್ಯಕ್ಕಾಗಿ ಜಾತ್ರೆ ನಡೆಸಿದ ಹೆಗ್ಗಳಿಕೆ ವೈಜಯಂತಿ ಅವರಿಗೆ ಸೇರಬೇಕು. ಭರತನಾಟ್ಯ, ಕೂಚಿಪುಡಿ, ಕಥಕ್, ಒಡಿಸ್ಸಿ, ಮಣಿಪುರಿ, ಮೋಹಿನಿಯಟ್ಟಂ, ಜಾನಪದ ನೃತ್ಯ ಹೀಗೆ ಎಲ್ಲಾ ಬಗೆಯ ನೃತ್ಯಪ್ರಕಾರಗಳನ್ನು ಒಂದೇ ಕಡೆ ಕಣ್ತುಂಬಿಕೊಳ್ಳುವ ಅವಕಾಶ ಇಲ್ಲಿದೆ.
ದಿಗ್ಗಜರ ದಂಡು
ಈ ಬಾರಿ, ಪದ್ಮಶ್ರೀ ಪುರಸ್ಕೃತ ಗೀತಾ ಚಂದ್ರನ್ ಹಾಗೂ ಇಲಿಯಾನ ಚಿತರಿಸ್ತಿ, ಕೇಂದ್ರ ಸಂಗೀತ ನೃತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಪ್ರೀತಿ ಪಟೇಲ ಹಾಗೂ ವೈಜಯಂತಿ ಕಾಶಿ, ಬಿಸ್ಮಿಲ್ಲಾ ಖಾನ್ ಯುವ ಪ್ರಶಸ್ತಿ ಪುರಸ್ಕೃತ ಅನುಜ್ ಮಿಶ್ರಾ ಹಾಗೂ ಪ್ರತೀಕ್ಷಾ ಕಾಶಿ ಮುಂತಾದ ಕಲಾವಿದರು ನೃತ್ಯ ಪ್ರದರ್ಶನ ನೀಡಲಿದ್ದಾರೆ. ವಿಶೇಷ ಆಕರ್ಷಣೆಯಾಗಿ, ನೃತ್ಯ ಕಲಾವಿದರಿಂದ ಫ್ಯಾಷನ್ ಶೋ ನಡೆಯಲಿದೆ
ನಿಮಗೂ ಇದೆ ಅವಕಾಶ
ಇದು ಕೇವಲ ನೃತ್ಯ ಕಲಾವಿದರಿಗಿರುವ ವೇದಿಕೆಯಲ್ಲ. ಎಳೆಯರಿಂದ ಹಿರಿಯರವರೆಗೆ, ನೃತ್ಯಶಾಲೆಗಳಿಂದ ಹಿಡಿದು, ಶಾಲೆ-ಕಾಲೇಜುಗಳು, ಕಾರ್ಪೊರೇಟ್ ಕಂಪನಿಗಳು ಕೂಡ ಸ್ಪರ್ಧೆಗಳಲ್ಲಿ ಭಾಗವಹಿಸಬಹುದು. ಸಮೂಹ ನೃತ್ಯ ಸ್ಪರ್ಧೆಗಳಲ್ಲಿ ಗೆಲ್ಲುವ ತಂಡಕ್ಕೆ ನಗದು ಬಹುಮಾನದ ಜೊತೆಗೆ ಸಂಜೆಯ ಮುಖ್ಯಕಾರ್ಯಕ್ರಮದಲ್ಲಿ ಪ್ರದರ್ಶನ ನೀಡುವ ಅವಕಾಶವಿದೆ. ಏಕವ್ಯಕ್ತಿ ಸ್ಪರ್ಧೆಯ ವಿಜೇತರಿಗೆ ಸ್ಕಾಲರ್‌ಶಿಪ್ ಹಾಗೂ ಬಿರುದು ನೀಡಲಾಗುವುದು. ಇದೇ ಮೊದಲ ಬಾರಿಗೆ, ಚಿಕ್ಕ ಮಕ್ಕಳಿಗಾಗಿಯೂ (7-10ವರ್ಷ) ನೃತ್ಯ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ನೃತ್ಯಕ್ಕೆ ಸಂಬಂಧಿಸಿದ ವಿಮರ್ಶೆ, ಪ್ರಬಂಧ ಸ್ಪರ್ಧೆ, ಚರ್ಚೆ, ರಸಪ್ರಶ್ನೆ, ಆಟಗಳು ಕೂಡ ನಡೆಯಲಿವೆ. ಸ್ಪರ್ಧೆಗಳಿಗೆ ಆನ್‌ಲೈನ್ ಮೂಲಕ ಅಥವಾ ಸ್ಥಳದಲ್ಲಿಯೂ ಹೆಸರು ನೋಂದಾಯಿಸಬಹುದು.
ಅಂಗಡಿಗಳೂ ಉಂಟು!
ಜಾತ್ರೆ ಅಂದಮೇಲೆ ಅಂಗಡಿಗಳು ಇರಲೇಬೇಕು. ಡ್ಯಾನ್ಸ್ ಜಾತ್ರೆಯಲ್ಲಿ, ನೃತ್ಯಸಂಬಂಧಿ ವೇಷಭೂಷಣ, ಆಭರಣ, ಪುಸ್ತಕ, ಡಿವಿಡಿ, ಪತ್ರಿಕೆಗಳ ಮಳಿಗೆಗಳು ಇರಲಿವೆ. ಸಾವಯವ ಧಾನ್ಯ-ತರಕಾರಿಗಳಿಂದ ಮಾಡಿದ, ಬಾಯಲ್ಲಿ ನೀರೂರಿಸುವ ತಿನಿಸುಗಳನ್ನು ಸವಿಯುವ ಅವಕಾಶವೂ ಇಲ್ಲಿದೆ.
ಛಾಯಾಚಿತ್ರ ಪ್ರದರ್ಶನ
ಡ್ಯಾನ್ಸ್ ಫೋಟೊಗ್ರಫಿ ಕೂಡ ಒಂದು ಅಪರೂಪದ ಕಲೆ. ಅದನ್ನೇ ಹವ್ಯಾಸವಾಗಿಸಿಕೊಂಡಿರುವ ಮುಂಬೈನ ಮಧುಸೂದನ್ ಸುರೇಂದ್ರ ಮೆನನ್ ಸೆರೆ ಹಿಡಿದಿರುವ ಅಪರೂಪದ ಛಾಯಾಚಿತ್ರಗಳ ಪ್ರದರ್ಶನ, “ಬೆಸ್ಟ್ ಮುಮೆಂಟ್ ಆಫ್ ಎನ್ ಆರ್ಟಿಸ್ಟ್’ ಜಾತ್ರೆಯ ಮತ್ತೂಂದು ಆಕರ್ಷಣೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಭಾರತ ಸರ್ಕಾರದ ಮಿನಿಷ್ಟ್ರಿ ಆಫ್ ಕಲ್ಚರ್, ದೆಹಲಿಯ ಸಂಗೀತ ನಾಟಕ ಅಕಾಡೆಮಿಯ ಸಹಕಾರದಲ್ಲಿ ಈ ಜಾತ್ರೆ ನಡೆಯುತ್ತಿದೆ.
ಜಾತ್ರೆ, ಜನರನ್ನು ಒಂದುಗೂಡಿಸುತ್ತದೆ. ನೃತ್ಯ ಕೂಡ ಮನಸ್ಸುಗಳನ್ನು ಬೆಸೆಯುತ್ತದೆ. ಹಾಗಾಗಿ ನೃತ್ಯಕ್ಕಾಗಿಯೇ ಒಂದು ಜಾತ್ರೆ ನಡೆಯಬೇಕು, ಆ ಮೂಲಕ ಕಲಾರಸಿಕರನ್ನು ಒಂದುಗೂಡಿಸಬೇಕು ಎಂಬ ದೃಷ್ಟಿಯಿಂದ ಶುರುವಾದದ್ದು ಈ ಡ್ಯಾನ್ಸ್ ಜಾತ್ರೆ. ನೃತ್ಯದ ಬೇರೆ ಬೇರೆ ಆಯಾಮಗಳನ್ನು ತೆರೆದಿಡುವುದು ಡ್ಯಾನ್ಸ್ ಜಾತ್ರೆಯ ಉದ್ದೇಶ. ನೃತ್ಯ ಪ್ರದರ್ಶನ, ಸ್ಪರ್ಧೆಗಳು ಅಷ್ಟೇ ಅಲ್ಲ, ನೃತ್ಯ ಸಂಯೋಜನೆಯ ಕುರಿತು, ನೃತ್ಯಶಾಸ್ತ್ರದಲ್ಲಿ ಫಿಟ್‌ನೆಸ್, ಪ್ರಸಾದನ ಕಲೆ ಹೀಗೆ ಬೇರೆ ಬೇರೆ ವಿಷಯಗಳ ಕುರಿತು ಕಾರ್ಯಾಗಾರಗಳು ನಡೆಯಲಿವೆ. ಸಾಂಸ್ಕೃತಿಕ ಸೊಗಡಿನ ವಾತಾವರಣದಲ್ಲಿ ಎರಡು ದಿನ ಕಳೆಯುವ ಅವಕಾಶ ಕಲಾರಸಿಕರಿಗೆ ಸಿಗುತ್ತದೆ.
-ವೈಜಯಂತಿ ಕಾಶಿ, ಡ್ಯಾನ್ಸ್ ಜಾತ್ರೆ ರೂವಾರಿ
ಮೊದಲ ದಿನ
* 10.30-5.30ರವರೆಗೆ ಕಿರಿಯ (11-16 ವರ್ಷ) ಹಿರಿಯರ (17 ವರ್ಷ ಮೇಲ್ಪಟ್ಟ) ಸಮೂಹ ನೃತ್ಯ ಹಾಗೂ ಸಬ್ ಜೂನಿಯರ್ (7-10) ವಿಭಾಗದ ಏಕವ್ಯಕ್ತಿ ಸ್ಪರ್ಧೆಗಳು ನಡೆಯಲಿವೆ
*10.30-2.30ರವರೆಗೆ ಪದ್ಮಶ್ರೀ ಗೀತಾ ಚಂದ್ರನ್‌ರಿಂದ ಭರತನಾಟ್ಯ, ಅನುಜ್ ಮಿಶ್ರಾರಿಂದ ಕಥಕ್, ಭೂಮಿ ಥಕ್ಕರ್‌ರಿಂದ ದಾಂಡಿಯಾ ಪ್ರದರ್ಶನ
* 2-30 ರಿಂದ 5-30ರವರೆಗೆ, “ದಿ ಆರ್ಟ್ ಆಫ್ ಕೊರಿಯೋಗ್ರಫಿ’- ಮಯೂರಿ ಉಪಾಧ್ಯಾಯ, “ನಾಟ್ಯಾಗ್ರಫಿ’- ವಿಜಯ್ ಮಾಧವನ್, “ಚಾವು-ಮೂವಿಂಗ್ ಇನ್ ಸ್ಪೇಸ್’ ಪದ್ಮಶ್ರೀ ಇಲಿಯಾನ ಚಿತರಿಸ್ತಿ ಅವರಿಂದ ಕಾರ್ಯಾಗಾರ ನಡೆಯಲಿವೆ
*ಸಂಜೆ 6-9ರವೆರಗೆ, ಶರ್ಮಿಳಾ ಮುಖರ್ಜಿ ಮತ್ತು ತಂಡದಿಂದ ಒಡಿಸ್ಸಿ, ಗೀತಾ ಚಂದ್ರನ್ ಮತ್ತು ತಂಡದಿಂದ ಭರತನಾಟ್ಯ, ಅನುಜ್ ಮಿಶ್ರಾ ಮತ್ತು ತಂಡದಿಂದ ಕಥಕ್ ನೃತ್ಯ ಪ್ರದರ್ಶನ
ಎರಡನೇ ದಿನ
*10.30-5.30ರವರೆಗೆ ಕಿರಿಯ ಹಾಗೂ ಹಿರಿಯರ ವಿಭಾಗದ ಏಕವ್ಯಕ್ತಿ ಸ್ಪರ್ಧೆಗಳು ನಡೆಯಲಿವೆ
* 10-5.30ರವರೆಗೆ ಮಣಿಪುರಿ (ಪ್ರೀತಿ ಪಟೇಲ್), ಕಲೆºàಲಿಯ (ಭೂಮಿ ಥಕ್ಕರ್), ಫಿಟ್‌ನೆಸ್ ಥ್ರೂ ಶಾಸ್ತ್ರ (ಜಯಶ್ರೀ ರಾಜಗೋಪಾಲನ್) ಮ್ಯಾಜಿಕ್ ಆಫ್ ಮೂವ್‌ಮೆಂಟ್ (ದೇವೇಶ್ ಮಿರ್ಚಂದಾನಿ), ಮೆಟಫರ್ ಇನ್ ಡ್ಯಾನ್ಸ್ (ಪೂರ್ಣಿಮಾ ಗುರುರಾಜ) ಫ್ಲೋ ಇಂಟು ದ ಮೂವ್‌ಮೆಂಟ್ಸ್ (ಅಡ್ರಿನ್ ಇಝೆಸೆಪಿ, ಹಂಗೇರಿ) ರಿ ಡ್ರೆಸ್ಸಿಂಗ್ ಎ ಫೆಮಿಲಿಯರ್ ರಿದಂ (ಲತಾ ಸುರೇಂದ್ರ) ಕುರಿತಾದ ಕಾರ್ಯಾಗಾರಗಳು ನಡೆಯಲಿವೆ
*6-8.15ರವರೆಗೆ, ಸಮೂಹ ನೃತ್ಯದಲ್ಲಿ ವಿಜೇತರಾದ ಹಿರಿಯರ ತಂಡದಿಂದ ನೃತ್ಯ, ವೈಜಯಂತಿ ಕಾಶಿಯವರಿಂದ ಕೂಚಿಪುಡಿ, ಪ್ರೀತಿ ಪಟೇಲ್ ಮತ್ತು ತಂಡದಿಂದ ಮಣಿಪುರಿ ನೃತ್ಯ ಪ್ರದರ್ಶನ ಇರಲಿವೆ.
ಎಲ್ಲಿ?: ಶಂಕರ ಫೌಂಡೇಷನ್, ಕನಕಪುರ ರಸ್ತೆ (ಯಲಚೇನಹಳ್ಳಿ ಮೆಟ್ರೋ ಸ್ಟೇಷನ್ ಹತ್ತಿರ)
ಯಾವಾಗ?: ಜ.26-27, ಬೆಳಗ್ಗೆ 10-9
ಪ್ರವೇಶ: ಉಚಿತ
ಹೆಚ್ಚಿನ ಮಾಹಿತಿಗೆ: 9886956596/98866 87559 www.dancejathre.com
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Kumble: ಹೆತ್ತವರನ್ನೇ ಕೊಠಡಿಯಲ್ಲಿ ಕೂಡಿ ಹಾಕಿದ ಪುತ್ರಿ
Congress: ಗ್ಯಾರಂಟಿಗಳ ಹಿಂಭಾರ, ಮುಂಭಾರ ಹೆಚ್ಚಾಗಿ ಮುಗ್ಗರಿಸುತ್ತಿದೆ ಸರಕಾರ: ಸಿ.ಟಿ.ರವಿ
Higher Education: ಕಾಲೇಜು ಸಿಬಂದಿ ರಜೆ ಹಾಕದೆ ಕೇಂದ್ರ ಕಚೇರಿಗೆ ಬರುವಂತಿಲ್ಲ
Local Bodies: ಸ್ಥಳೀಯ ಸಂಸ್ಥೆ ಉಪಚುನಾವಣೆ: ಕಾಂಗ್ರೆಸ್ 8, ಬಿಜೆಪಿ 3, ಪಕ್ಷೇತರ 1
Medical Asist: ಪತ್ರಿಕಾ ವಿತರಕರಿಗೆ ವೈದ್ಯ ನೆರವು: 70 ವರ್ಷಕ್ಕೆ ವಯೋಮಿತಿ ಹೆಚ್ಚಳ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.