ಇಂಡೋನೇಶ್ಯಾ ಮಾಸ್ಟರ್ ಸೈನಾ-ಮರಿನ್ ಪ್ರಶಸ್ತಿ ಕಾದಾಟ
Team Udayavani, Jan 27, 2019, 12:30 AM IST
ಜಕಾರ್ತಾ: ಭಾರತದ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ “ಇಂಡೋನೇಶ್ಯ ಮಾಸ್ಟರ್’ ಕೂಟದ ಫೈನಲ್ ಪ್ರವೇಶಿಸಿದ್ದಾರೆ.
ಶನಿವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಸೈನಾ ಅವರ ಹೀ ಬಿಂಗ್‌ಜಿಯೊ ಅವರನ್ನು 18-21, 21-12, 21-18 ಅಂತರದಿಂದ ಸೋಲಿಸಿದರು.
ಬಿಂಗ್‌ಜಿಯೊ ಅವರನ್ನು ಮೊದಲ ಬಾರಿಗೆ ಎದುರಿಸುತ್ತಿರುವ ಸೈನಾಗೆ ಸ್ವಲ್ಪಮಟ್ಟಿನ ಪೈಪೋಟಿ ಎದುರಾಯಿತು. ಮೊದಲ ಗೇಮ್‌ನ ಆರಂಭದಿಂದಲೇ ಮುನ್ನಡೆ ಕಾಯ್ದುಕೊಂಡ ಬಂದ ಸೈನಾ 16-11 ಅಂಕಗಳ ಅಂತರವನ್ನು ಸಂಪಾದಿಸಿದರು. ಬಳಿಕ ಬಿಂಗ್‌ಜಿಯೊ ಅತ್ಯುತ್ತಮ ಆಟವಾಡಿ ಸೈನಾ ಅವರನ್ನು 18 ಅಂಕಗಳಿಗೆ ಕಟ್ಟಿಹಾಕಿ ಮೊದಲ ಗೇಮ್ ತಮ್ಮದಾಗಿಸಿಕೊಂಡರು.
ಸೈನಾ ಎಚ್ಚರಿಕೆಯ ಆಟ
ಮೊದಲ ಗೇಮ್‌ನ ಸೋಲಿನ ಬಳಿಕ ಎಚ್ಚರಿಕೆ ಆಟವಾಡಿದ ಸೈನಾ ಎರಡನೇ ಗೇಮ್ 21-12 ಅಂಕಗಳ ಅಂತರದಿಂದ ಜಯಿಸಿದರು. ಅಂತಿಮ ಹಾಗೂ ನಿರ್ಣಾಯಕ ಗೇಮ್‌ನಲ್ಲಿ ಇವರಿಬ್ಬರ ನಡುವೆ ತೀವ್ರ ಪೈಪೋಟಿಯೇ ನಡೆಯಿತು. ಆರಂಭದಲ್ಲಿ 6-3 ಅಂಕಗಳಿಂದ ಮುನ್ನಡೆಯಲಿದ್ದ ಸೈನಾ ಮುನ್ನಡೆಯನ್ನು 9-5 ಅಂತರ ಸಂಪಾದಿಸಿದರು. ಆದರೆ ಬಿಂಗ್‌ಜಿಯೊ ಉತ್ತಮ ಆಟವಾಡಿ 11-10 ಮುನ್ನಡೆ ಕಾಯ್ದುಕೊಂಡರು. ಆನಂತರ ಸತತ ಅಂಕಗಳಿಂದ ಸೈನಾ 21-18 ಅಂತರದಿಂದ ಗೆಲವು ದಾಖಲಿಸಿ ಫೈನಲ್ ಪ್ರವೇಶಿಸಿದ್ದಾರೆ. ಕಳೆದ ಬಾರಿ ಈ ಕೂಟ ಫೈನಲ್ ಪ್ರವೇಶಿಸಿದ್ದ ಸೈನಾ ಚೈನೀಸ್ ತೈಪೆನ ತೈ ಝ ಯಿಂಗ್ ವಿರುದ್ಧ ಪರಾಭವಗೊಂಡಿದ್ದರು.
ಫೈನಲ್‌ನಲ್ಲಿ ಮರೀನ್ ಎದುರಾಳಿ
ವನಿತೆಯ ಮತ್ತೂಂದು ಸೆಮಿಫೈನಲ್ ಪಂದ್ಯದಲ್ಲಿ ಸ್ಪೇನ್‌ನ ಕ್ಯಾರೋಲಿನಾ ಮರಿನ್ ಚೀನದ ಚೆನ್ ಯುಫೆಯಿ ವಿರುದ್ಧ 17-21, 21-11, 23-21 ಗೇಮ್‌ಗಳಿಂದ ಗೆದ್ದು ಸೈನಾ ವಿರುದ್ಧ ಫೈನಲ್ ಕಾದಾಟಕ್ಕೆ ಸಿದ್ದರಾಗಿದ್ದಾರೆ. ಸೈನಾ ವಿರುದ್ಧ 6-5 ಗೆಲುವಿನ ದಾಖಲೆಯನ್ನು ಹೊಂದಿರುವ ಮರಿನ್ ಇತ್ತೀಚೆಗಷ್ಟೇ ಮುಕ್ತಾಯಗೊಂಡ “ಮಲೇಶ್ಯಾ ಮಾಸ್ಟರ್’ ಸೆಮಿಫೈನಲ್‌ನಲ್ಲಿ ಸೈನಾ ಅವರನ್ನು ಸೋಲಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ranking: ಐಸಿಸಿ ನೂತನ ರ್‍ಯಾಂಕಿಂಗ್ ಪ್ರಕಟ: ಶಾಹೀನ್ ಅಫ್ರಿದಿ ಮತ್ತೆ ನಂ.1
Hockey: ವನಿತಾ ಏಷ್ಯಾ ಚಾಂಪಿಯನ್ಸ್ ಹಾಕಿ… ಇಂದು ಭಾರತಕ್ಕೆ ಥಾಯ್ಲೆಂಡ್ ಎದುರಾಳಿ
T20: ತಿಲಕ್ ವರ್ಮ ಸ್ಫೋಟಕ ಶತಕ… ಭಾರತ ಆರು ವಿಕೆಟಿಗೆ 219
Ranaji Trophy: ಉತ್ತರ ಪ್ರದೇಶ ವಿರುದ್ಧ ಕರ್ನಾಟಕಕ್ಕೆ ಮುನ್ನಡೆ
Border-Gavaskar Trophy ಆರಂಭಕ್ಕೆ ಮುನ್ನ ಗಂಭೀರ್- ರಿಕಿ ಪಾಂಟಿಂಗ್ ವಾಗ್ಯುದ್ಧ
MUST WATCH
ಹೊಸ ಸೇರ್ಪಡೆ
Ranking: ಐಸಿಸಿ ನೂತನ ರ್‍ಯಾಂಕಿಂಗ್ ಪ್ರಕಟ: ಶಾಹೀನ್ ಅಫ್ರಿದಿ ಮತ್ತೆ ನಂ.1
Kalidas Samman: ವರ್ಣಚಿತ್ರಕಾರ ರಘುಪತಿ ಭಟ್ ಅವರಿಗೆ ರಾಷ್ಟ್ರೀಯ ಕಾಳಿದಾಸ್ ಪ್ರಶಸ್ತಿ
Hockey: ವನಿತಾ ಏಷ್ಯಾ ಚಾಂಪಿಯನ್ಸ್ ಹಾಕಿ… ಇಂದು ಭಾರತಕ್ಕೆ ಥಾಯ್ಲೆಂಡ್ ಎದುರಾಳಿ
Chikkamagaluru: ಮದುವೆ ಹಾಲ್ ನಲ್ಲೇ ವಧುವಿನ ಚಿನ್ನ ಎಗರಿಸಿದ ಖದೀಮರು…
T20: ತಿಲಕ್ ವರ್ಮ ಸ್ಫೋಟಕ ಶತಕ… ಭಾರತ ಆರು ವಿಕೆಟಿಗೆ 219
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.