ಕರ್ನಾಟಕಕ್ಕೆ ಫೈನಲ್ ಕನಸು
Team Udayavani, Jan 27, 2019, 12:30 AM IST
ಬೆಂಗಳೂರು: ಮೊದಲ ಇನಿಂಗ್ಸ್‌ನಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದ ಪರಿಣಾಮ, ರಣಜಿ ಸೆಮಿಫೈನಲ್‌ನಲ್ಲಿ ಸೋಲಿನ ಭೀತಿಯಲ್ಲಿದ್ದ ಕರ್ನಾಟಕ ನಿಧಾನಕ್ಕೆ ಅದರಿಂದ ಹೊರಬರುವ ಸುಳಿವು ನೀಡಿದೆ.
ಮೊದಲ ಇನಿಂಗ್ಸ್‌ನಲ್ಲಿ ಕರ್ನಾಟಕ ಗಳಿಸಿದ 275 ರನ್‌ಗಳಿಗೆ ಪ್ರತಿಯಾಗಿ, ಪ್ರವಾಸಿ ಸೌರಾಷ್ಟ್ರ ತನ್ನ 1ನೇ ಇನಿಂಗ್ಸ್ ಅನ್ನು ಕೇವಲ 236 ರನ್‌ಗೆ ಮುಗಿಸಿತು. 2ನೇ ಇನಿಂಗ್ಸ್‌ನಲ್ಲಿ ಮತ್ತೆ ಕುಸಿತ ಅನುಭವಿಸಿದ ರಾಜ್ಯ 8 ವಿಕೆಟ್ ಕಳೆದುಕೊಂಡು, 237 ರನ್ ಗಳಿಸಿದೆ. ಮೊದಲ ಇನಿಂಗ್ಸ್‌ನಲ್ಲಿ ಪಡೆದ 39 ರನ್ ಸೇರಿ ರಾಜ್ಯ ಒಟ್ಟು 276 ರನ್ ಮುನ್ನಡೆ ಸಾಧಿಸಿದೆ.
ರಾಜ್ಯದ ಕೈಯಲ್ಲಿ ಇನ್ನೂ ಎರಡು ವಿಕೆಟ್ ಇರುವುದರಿಂದ ಈ ಮುನ್ನಡೆಯನ್ನು 300ಕ್ಕೆ ದಾಟಿಸುವ ಅವಕಾಶವಿದೆ. ಇದು ಸಾಧ್ಯವಾದರೆ, ತನ್ನ ಬೌಲಿಂಗ್ ಮೂಲಕ ಸೌರಾಷ್ಟ್ರವನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾದರೇ ಫೈನಲ್‌ಗೇರುವ ಅವಕಾಶವನ್ನು ಸಂಪಾದಿಸಲಿದೆ.
ಶುಕ್ರವಾದ ಆಟದಲ್ಲಿ ದಿಢೀರ್ ಕುಸಿದು 227 ರನ್‌ಗಳಿಗೆ 7 ವಿಕೆಟ್ ಕಳೆದುಕೊಂಡಿದ್ದ ಸೌರಾಷ್ಟ್ರ, ಶನಿವಾರ ಇನ್ನಷ್ಟು ಕುಸಿತ ಅನುಭವಿಸಿ 9 ರನ್ ಗಳಿಸಿ ಒಟ್ಟು 236ಕ್ಕೆ ಆಲೌಟಾಯಿತು. ರೋನಿತ್ ಮೋರೆ ಒಟ್ಟು 6 ವಿಕೆಟ್ ಕಿತ್ತರು. ಮಿಥುನ್ 3 ವಿಕೆಟ್ ಸಂಪಾಸಿದರು.
ಮತ್ತೆ ಕುಸಿದ ರಾಜ್ಯ
ಸೌರಾಷ್ಟ್ರವನ್ನು 236 ರನ್‌ಗೆ ಆಲೌಟ್ ಮಾಡಿದ ಖುಷಿಯಲ್ಲೇ 2ನೇ ಇನಿಂಗ್ಸ್ ಆರಂಭಿಸಿದ ಕರ್ನಾಟಕ ಇಲ್ಲೂ ಕುಸಿತ ಅನುಭವಿಸಿತು. ಈಗಾಗಲೇ 8 ವಿಕೆಟ್ ಕಳೆದುಕೊಂಡಿರುವ ರಾಜ್ಯ ತಂಡದ ಮೊತ್ತ 237. ಆದರೆ ಮೊದಲ ಇನಿಂಗ್ಸ್‌ನಲ್ಲಿ ಸಿಕ್ಕ 39 ರನ್ ಮುನ್ನಡೆ ರಾಜ್ಯವನ್ನು ಬಚಾವ್ ಮಾಡಿದೆ. ರಾಜ್ಯದ ಈ ಕುಸಿತಕ್ಕೆ ಪ್ರಮುಖ ಕಾರಣ ಸೌರಾಷ್ಟ್ರ ನಾಯಕ, ವೇಗದ ಬೌಲರ್ ಜೈದೇವ್ ಉನಾದ್ಕರ್ ಹಾಗೂ ಧರ್ಮೇಂದ್ರ ಜಡೇಜ. ಇಬ್ಬರೂ ತಲಾ 3 ವಿಕೆಟ್ ಪಡೆದರು.ರಾಜ್ಯಕ್ಕೆ ಮತ್ತೆ ಆಸರೆಯಾಗಿದ್ದು ಆಲ್‌ರೌಂಡರ್ ಶ್ರೇಯಸ್ ಗೋಪಾಲ್. ಮೊದಲ ಇನಿಂಗ್ಸ್‌ನಲ್ಲಿ ಶ್ರೇಯಸ್ ಗೋಪಾಲ್ ಹೋರಾಟಕಾರಿ ಬ್ಯಾಟಿಂಗ್ ನಡೆಸಿ 87 ರನ್ ಗಳಿಸಿದ್ದರು. ಈ ಇನಿಂಗ್ಸ್‌ನಲ್ಲೂ ನಡೆಸಿ, 61 ರನ್ ಗಳಿಸಿ ಅಜೇಯರಾಗಿ ಉಳಿದಿದ್ದಾರೆ. ಇದು ರಾಜ್ಯಕ್ಕೆ ಶ್ರೀರಕ್ಷೆಯಾಗುವುದರ ಜೊತೆಗೆ ಮುನ್ನಡೆ ಹೆಚ್ಚಾಗಲು ಕಾರಣವಾಗಿದೆ. ಶ್ರೇಯಸ್ ಭಾನುವಾರ ಇನ್ನಷ್ಟು ಜವಾಬ್ದಾರಿಯಿಂದ ಆಡಿದರೆ ರಾಜ್ಯಕ್ಕೆ ಶುಭಸೂಚನೆಯಾಗಲಿದೆ.
ಸಂಕ್ಷೀಪ್ತ ಸ್ಕೋರ್: ಕರ್ನಾಟಕ 275 ಮತ್ತು 8 ವಿಕೆಟಿಗೆ 237 (ಶ್ರೇಯಸ್ ಗೋಪಾಲ್ ಔಟಾಗದೆ 61, ಮಾಯಾಂಕ್ ಅಗರ್ವಾಲ್ 46, ಮಿಥನ್ 35, ಉನಾದ್ಕತ್ 35ಕ್ಕೆ3, ಜಡೇಜ 77ಕ್ಕೆ3). ಸೌರಾಷ್ಟ್ರ: 236ಕ್ಕೆ ಆಲೌಟ್ (ಸ್ನೇಲ್ ಪಟೇಲ್ 85, ಜಾಕ್ಸನ್ 46, ಪೂಜಾರ 45, ಮೋರೆ 60ಕ್ಕೆ6, ಮಿಥನ್ 46ಕ್ಕೆ3
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.