ಮಹಾತ್ಮಾ ಗಾಂಧಿ ಜೀವನ ಗಾಥೆಯೇ ಹೈಲೈಟ್

Team Udayavani, Jan 27, 2019, 2:39 AM IST

ww-12.jpg

ಹೊಸದಿಲ್ಲಿ: ಮಹಾತ್ಮಾ ಗಾಂಧಿಯವರ 150ನೇ ಜಯಂತಿ ಸಂದರ್ಭದಲ್ಲಿ 70ನೇ ಗಣರಾಜ್ಯೋತ್ಸವ ಈ ಬಾರಿ ಇನ್ನಷ್ಟು ಕಳೆ ಕಟ್ಟಿತ್ತು. ಎಂದಿನ ಅದ್ದೂರಿ ಮಿಲಿಟರಿ ಪರೇಡ್‌, ಇತಿಹಾಸ, ಸಂಸ್ಕೃತಿ ಮತ್ತು ವೈವಿಧ್ಯತೆಯ ಅನಾವರಣದ ಜತೆಗೆ ಮಹಾತ್ಮಾಗಾಂಧಿ ಜೀವನಗಾಥೆಯನ್ನು ಪ್ರತಿಬಿಂಬಿಸುವ 22 ಸ್ತಬ್ಧಚಿತ್ರಗಳನ್ನು ಪ್ರದರ್ಶಿ ಸಲಾಯಿತು. 16 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು, ಆರು ಕೇಂದ್ರ ಸಚಿವಾಲಯ ಮತ್ತು ಇಲಾಖೆಗಳ ಸ್ತಬ್ಧಚಿತ್ರಗಳು ರಾಜಪಥದಲ್ಲಿ ಪ್ರದರ್ಶನಗೊಂಡವು. ಈ ಬಾರಿಯ ಗಣ ರಾಜ್ಯೋತ್ಸವಕ್ಕೆ ದಕ್ಷಿಣ ಆಫ್ರಿಕಾದ ಅಧ್ಯಕ್ಷ ಸಿರಿಲ್‌ ರಾಮಫೋಸಾ ವಿಶೇಷ ಅತಿಥಿಯಾಗಿದ್ದರು. ಮಹಾತ್ಮಾಗಾಂಧಿ ತಮ್ಮ 21 ವರ್ಷಗಳನ್ನು ದಕ್ಷಿಣ ಆಫ್ರಿಕಾದಲ್ಲಿ ಕಳೆದಿದ್ದರಿಂದ, ಈ ವರ್ಷ ರಾಮಫೋಸಾ ಆಗಮಿಸಿರುವುದು ವಿಶೇಷವಾಗಿತ್ತು.

ಭಯೋತ್ಪಾದನೆಯನ್ನು ತೊರೆದು ಸೇನೆ ಸೇರಿ ಹುತಾತ್ಮನಾದ ಲಾನ್ಸ್‌ ನಾಯಕ್‌ ನಜೀರ್‌ ಅಹಮದ್‌ ವಾನಿಗೆ ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅಶೋಕ ಚಕ್ರವನ್ನು ಪುರಸ್ಕರಿಸಿದ ಅನಂತರದಲ್ಲಿ ರಾಜಪಥದಲ್ಲಿ ಪರೇಡ್‌ ಆರಂಭವಾಯಿತು. ಇದಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಅಮರ್‌ ಜವಾನ್‌ ಜ್ಯೋತಿ ಬೆಳಗಿಸಿದರು.

ಸುಭಾಷ್‌ ಚಂದ್ರ ಬೋಸ್‌ ಸ್ಥಾಪಿಸಿದ ಇಂಡಿಯನ್‌ ನ್ಯಾಶನಲ್‌ ಆರ್ಮಿಯ ನಾಲ್ವರು ಹಿರಿಯರಾದ ಪರಮಾನಂದ, ಲಾಲ್ತಿ ರಾಮ್‌, ಹೀರಾ ಸಿಂಗ್‌ ಮತ್ತು ಭಾಗ್ಮಲ್‌ ಇದೇ ಮೊದಲ ಬಾರಿಗೆ ಗಣರಾಜ್ಯೋತ್ಸವದ ಪರೇಡ್‌ನ‌ಲ್ಲಿ ಭಾಗವಹಿಸಿದ್ದು, ಆಕರ್ಷಣೆಯ ಕೇಂದ್ರವಾಗಿತ್ತು. ಅಷ್ಟೇ ಅಲ್ಲ, ಈ ಬಾರಿಯ ಗಣರಾಜ್ಯೋತ್ಸವ ಹಲವು ಪ್ರಥಮಗಳಿಗೂ ಕಾರಣವಾಗಿದೆ.

ರಾಹುಲ್‌ಗೆ ಮೊದಲ ಸಾಲಿನ ಆಸನ: ಕಳೆದ ಗಣರಾಜ್ಯೋತ್ಸವದಂದು 6ನೇ ಸಾಲಿನಲ್ಲಿ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿಗೆ ಆಸನ ವ್ಯವಸ್ಥೆ ಕಲ್ಪಿಸಿದ್ದು ವಿವಾದಕ್ಕೀಡಾದ ಕಾರಣ ಎಚ್ಚೆತ್ತ ಕೇಂದ್ರ ಸರಕಾರ ಈ ಬಾರಿ ಮೊದಲ ಸಾಲಿನಲ್ಲಿ ಆಸನ ವ್ಯವಸ್ಥೆ ಮಾಡಿತ್ತು. ಬಿಜೆಪಿ ಮುಖಂಡ ನಿತಿನ್‌ ಗಡ್ಕರಿ ಪಕ್ಕವೇ ಅವರಿಗೆ ಆಸನ ವ್ಯವಸ್ಥೆ ಏರ್ಪಡಿಸಲಾಗಿತ್ತು. ರಾಹುಲ್‌ ಜತೆಗೆ ಗಡ್ಕರಿ ನಗುತ್ತಾ ಮಾತನಾಡುತ್ತಿದ್ದ ದೃಶ್ಯಗಳ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆಯಾಗಿದೆ. ಇನ್ನೊಂದೆಡೆ ಕಳೆದ ವರ್ಷ ಆರನೇ ಸಾಲಿನಲ್ಲಿ ರಾಹುಲ್‌ ಪಕ್ಕ ಕುಳಿತಿದ್ದ ರಾಜ್ಯಸಭೆಯ ವಿಪಕ್ಷ ನಾಯಕ ಗುಲಾಂ ನಬಿ ಆಜಾದ್‌ ಕೂಡ ಈ ಬಾರಿ ಎರಡನೇ ಸಾಲಿಗೆ ಭಡ್ತಿ ಪಡೆದಿದ್ದರು.

ಗೌರವ ಸ್ವೀಕರಿಸಿದ ದ.ಆಫ್ರಿಕಾದ ಎರಡನೇ ಅಧ್ಯಕ್ಷ: ಗಣರಾಜ್ಯೋತ್ಸವದಲ್ಲಿ ದಕ್ಷಿಣ ಆಫ್ರಿಕಾದ ಅಧ್ಯಕ್ಷರು ಭಾಗವಹಿಸುತ್ತಿರುವುದು ಇದೇ ಮೊದಲಲ್ಲ. 24 ವರ್ಷಗಳ ಹಿಂದೆ ನೆಲ್ಸನ್‌ ಮಂಡೇಲಾÃ‌ನ್ನು ಇದೇ ಸಂಭ್ರಮಕ್ಕೆ ಆಹ್ವಾನಿಸಲಾಗಿತ್ತು. ಮಹಾತ್ಮಾಗಾಂಧಿ 150ನೇ ಜಯಂತಿ ವರ್ಷದಂದೇ ಗಣರಾಜ್ಯೋ ತ್ಸವಕ್ಕೆ ದಕ್ಷಿಣ ಆಫ್ರಿಕಾ ಅಧ್ಯಕ್ಷ ಸಿರಿಲ್‌ ರಾಮಫೋಸಾರನ್ನು ಆಹ್ವಾನಿಸಿರುವುದು ಅತ್ಯಂತ ಮಹತ್ವ ಪಡೆದಿದೆ.

ಸಂವಿಧಾನದ ಮೂಲ ಆಶಯ ರಕ್ಷಿಸಬೇಕು: ಪ್ರಣವ್‌: ಸಂವಿಧಾನದಲ್ಲಿ ಉಲ್ಲೇಖೀಸಲಾಗಿರುವ ನ್ಯಾಯ, ಸ್ವಾತಂತ್ರ್ಯ, ಸಮಾನತೆ ಯನ್ನು ರಕ್ಷಿಸಲು ಕಟಿಬದ್ಧರಾಗುವಂತೆ ಮಾಜಿ ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಕರೆ ನೀಡಿದ್ದಾರೆ. ದೇಶದ ಅತ್ಯುನ್ನತ ಪುರಸ್ಕಾರ ‘ಭಾರತ ರತ್ನ’ಕ್ಕೆ ಆಯ್ಕೆಯಾದ ಮರುದಿನ 70ನೇ ಗಣರಾಜ್ಯ ದಿನದಂದು ಮಾತನಾಡಿದ ಅವರು, ಸಂವಿಧಾನದ ಆಶಯಕ್ಕೆ ಅನುಗುಣವಾಗಿ ನಾವು ಜೀವಿಸಬೇಕಿದೆ ಎಂದು ಟ್ವೀಟ್ ಮಾಡಿದ್ದಾರೆ. ಅಲ್ಲದೆ ದೇಶದ ಎಲ್ಲರಿಗೂ ಗಣರಾಜ್ಯೋತ್ಸವದ ಶುಭ ಕೋರಿದ್ದಾರೆ.

ಈಶಾನ್ಯದಲ್ಲಿ ಬಂದ್‌!: ಪೌರತ್ವ ಮಸೂದೆಗೆ ಕೇಂದ್ರ ಸರಕಾರ ಅನುಮೋದನೆ ನೀಡಿದಾಗಿನಿಂದಲೂ ಪ್ರತಿಭಟನೆ ವ್ಯಕ್ತವಾಗುತ್ತಿರುವ ಈಶಾನ್ಯ ರಾಜ್ಯಗಳಲ್ಲಿ ಗಣರಾಜ್ಯೋತ್ಸವವನ್ನು ಬಹಿಷ್ಕರಿಸಲಾಗಿತ್ತು. ಮಿಜೋರಾಂನಲ್ಲಿ ರಾಜ್ಯಪಾಲರು ಖಾಲಿ ಮೈದಾನದ ಎದುರೇ ಭಾಷಣ ಮಾಡಬೇಕಾಯಿತು. ಸಾರ್ವಜನಿಕರು ಕಾರ್ಯಕ್ರಮಕ್ಕೆ ಹಾಜರಾಗಿರಲಿಲ್ಲ. ಕೇವಲ ಸಚಿವರು, ಹಿರಿಯ ಅಧಿಕಾರಿಗಳಷ್ಟೇ ಕಾರ್ಯಕ್ರಮದಲ್ಲಿ ಕಂಡುಬಂದರು. ಇತರ ರಾಜ್ಯಗಳಲ್ಲೂ ಬಹುತೇಕ ಇದೇ ಪರಿಸ್ಥಿತಿ ಇತ್ತು.

ಗಣರಾಜ್ಯೋತ್ಸವಕ್ಕೆ ನಿಷೇಧ ಹೇರಿದವರ ವಿರುದ್ಧ ಕಠಿನ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನು ಮಣಿಪುರ ಸಿಎಂ ಎನ್‌. ಬಿರೇನ್‌ ಸಿಂಗ್‌ ನೀಡಿದರೆ, ಈಶಾನ್ಯ ರಾಜ್ಯದಲ್ಲಿ ವಿದೇಶೀ ಯರಿಗೆ ಅವಕಾಶವಿಲ್ಲ. ಇದು ಮೂಲನಿವಾಸಿಗಳ ರಾಜ್ಯ ಎಂದು ಅಸ್ಸಾಂ ರಾಜ್ಯಪಾಲ ಜಗದೀಶ್‌ ಮುಖರ್ಜಿ ಹೇಳಿದರು.

ಗೂಗಲ್‌ನಿಂದ ಡೂಡಲ್‌ ಶುಭಾಶಯ
ಸರ್ಚ್‌ ಎಂಜಿನ್‌ ಗೂಗಲ್‌ ಭಾರತದ 70ನೇ ಗಣರಾಜ್ಯೋತ್ಸವಕ್ಕೆ ವಿಶೇಷ ಡೂಡಲ್‌ ರಚಿಸಿ ಗೌರವಿಸಿದೆ. ರಾಷ್ಟ್ರಪತಿ ಭವನದ ಹಿನ್ನೆಲೆಯಲ್ಲಿ ಭಾರತದ ಜೀವವೈವಿಧ್ಯ, ಶ್ರೀಮಂತ ಪರಂಪರೆ, ವಾಸ್ತುಶಿಲ್ಪವನ್ನು ಡೂಡಲ್‌ನಲ್ಲಿ ಚಿತ್ರಿಸಲಾಗಿದೆ. 3ಡಿ ತಂತ್ರಜ್ಞಾನ ದಲ್ಲಿ ಚಿತ್ರಿಸಿರುವ ಈ ಡೂಡಲ್‌ ವರ್ಣರಂಜಿತವಾಗಿದೆ. ಯುನೆಸ್ಕೊ ಗುರುತಿಸಿರುವ ಪಾರಂಪರಿಕ ಕಟ್ಟಡ ಕುತುಬ್‌ ಮಿನಾರ್‌ ಕೂಡ ಇದರಲ್ಲಿದೆ. ಆನೆ ಸೊಂಡಿಲು, ನವಿಲಿನ ಚಿತ್ರ ಗಳೂ ಇದರಲ್ಲಿ ಅಡಕವಾಗಿವೆ.

ಭಾಷಣ ಓದಲು ಬಾರದ ಸಚಿವೆ!
ಮಧ್ಯಪ್ರದೇಶದ ಸಚಿವೆ ಇಮರ್ತಿ ದೇವಿ ಗಣರಾಜ್ಯೋತ್ಸವ ಕಾರ್ಯಕ್ರಮದ ದಿನ ಭಾಷಣ ಓದಲು ಬಾರದೇ ತಡವರಿಸಿದ ಘಟನೆ ನಡೆದಿದೆ. ಗ್ವಾಲಿಯರ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿಎಂ ಕಮಲ್‌ನಾಥ್‌ರ ಸಂದೇಶವನ್ನು ಓದಲು ಪ್ರಯತ್ನಿಸಿ ದರಾದರೂ ಕೆಲವು ಸಾಲುಗಳನ್ನು ತಡವರಿಸುತ್ತಲೇ ಓದಿದರು. ಅನಂತರ ಜಿಲ್ಲಾಧಿಕಾರಿಗೆ ಓದುವಂತೆ ಸೂಚಿಸಿದರು. ಈ ವಿಡಿಯೋ ಸಾಮಾಜಿಕ ಅಂತರ್ಜಾಲ ತಾಣದಲ್ಲಿ ಭಾರೀ ವೈರಲ್‌ ಆಗಿದೆ. ಅನಂತರ ಮಾತನಾಡಿದ ಅವರು ಅನಾರೋಗ್ಯ ದಿಂದಾಗಿ ಓದಲು ಸಾಧ್ಯವಾಗಲಿಲ್ಲ ಎಂದು ಸಮಜಾಯಿಷಿ ನೀಡಿದರು.

ಈ ಬಾರಿಯ ಪ್ರಥಮಗಳು
•ನೇತಾಜಿ ಸ್ಥಾಪಿಸಿದ ಇಂಡಿಯನ್‌ ನ್ಯಾಶ‌ನಲ್‌ ಆರ್ಮಿಯ 90ಕ್ಕೂ ಹೆಚ್ಚು ವಯಸ್ಸಿನ ನಾಲ್ವರು ಪಥಸಂಚಲನದಲ್ಲಿ ಭಾಗಿ.
•ಇತ್ತೀಚೆಗೆ ಅಮೆರಿಕದಿಂದ ಖರೀದಿಸಲಾದ ಎಂ777 ಅಮೆರಿಕನ್‌ ಅಲ್ಟ್ರಾ ಲೈಟ್ ಹೊವಿಟ್ಜರ್‌ಗಳು ಮತ್ತು ಕೆ9 ವಜ್ರ ಗನ್‌ ಇದೇ ಮೊದಲ ಬಾರಿ ಪರೇಡ್‌ನ‌ಲ್ಲಿ ಭಾಗಿ
•ಅಸ್ಸಾಂ ರೈಫ‌ಲ್ಸ್‌ನ ಮಹಿಳೆಯರೇ ಒಳಗೊಂಡ ತಂಡದಿಂದ ರಾಜಪಥದಲ್ಲಿ ಮೊದಲ ಬಾರಿಗೆ ಪಥಸಂಚಲನ
•ಸಾಂಪ್ರದಾಯಿಕ ಇಂಧನ ಹಾಗೂ ಜೈವಿಕ ಇಂಧನ ಬಳಸಿ ಇದೇ ಮೊದಲ ಬಾರಿಗೆ ಗಣರಾಜ್ಯೋತ್ಸವ ದಿನದಂದು ವಾಯುಪಡೆಯ ಎಎನ್‌ 32 ಯುದ್ಧವಿಮಾನಗಳ ಹಾರಾಟ. •ಮಹರ್‌ ರೆಜಿಮೆಂಟ್‌ನ ಹಿರಿಯ ಅಧಿಕಾರಿ ರಚಿಸಿದ ಕವಿತೆಗೆ ಸಂಗೀತ ಸಂಯೋಜಿಸಿ, ಗಣರಾಜ್ಯೋತ್ಸವದಂದು ನುಡಿಸಲಾಯಿತು.

ಟಾಪ್ ನ್ಯೂಸ್

Toxic Movie: ʼಟಾಕ್ಸಿಕ್‌ʼನಲ್ಲಿ ನಟಿಸಲು ಯಶ್‌ ಪಡೆದ ಸಂಭಾವನೆ ಎಷ್ಟು?

Toxic Movie: ʼಟಾಕ್ಸಿಕ್‌ʼನಲ್ಲಿ ನಟಿಸಲು ಯಶ್‌ ಪಡೆದ ಸಂಭಾವನೆ ಎಷ್ಟು?

tirupati

Tirupati;ದುರಂತಕ್ಕೆ ಸಿಎಂ ನಾಯ್ಡು,ಆಡಳಿತ ಮಂಡಳಿ,ಪೊಲೀಸರು ಕಾರಣ: ಮಾಜಿ ಟಿಟಿಡಿ ಮುಖ್ಯಸ್ಥರು

ಮೊಳಹಳ್ಳಿ ವ್ಯವಸಾಯ ಸೇವಾ ಸಹಕಾರಿ ಸಂಘ: ನೂತನ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ

ಮೊಳಹಳ್ಳಿ ವ್ಯವಸಾಯ ಸೇವಾ ಸಹಕಾರಿ ಸಂಘ: ನೂತನ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ

Dharwad: ಬಂದ್ ಹೆಸರಲ್ಲಿ ವ್ಯಾಪಾರಿಗೆ ಕಪಾಳಮೋಕ್ಷ?: ಕಾಲೇಜು ಪ್ರಾಧ್ಯಾಪಕರಿಗೆ ಅವಾಜ್

Dharwad: ಬಂದ್ ಹೆಸರಲ್ಲಿ ವ್ಯಾಪಾರಿಗೆ ಕಪಾಳಮೋಕ್ಷ?: ಕಾಲೇಜು ಪ್ರಾಧ್ಯಾಪಕರಿಗೆ ಅವಾಜ್

ಏನು ಧೈರ್ಯ..! ರೈಲು ಹಳಿ ಮೇಲೆ ಬಂದ ಸಿಂಹವನ್ನು ಸಾಕು ಪ್ರಾಣಿಯಂತೆ ಓಡಿಸಿದ ಅರಣ್ಯ ಸಿಬ್ಬಂದಿ

ಏನು ಧೈರ್ಯ..! ರೈಲು ಹಳಿ ಮೇಲೆ ಬಂದ ಸಿಂಹವನ್ನು ಸಾಕು ಪ್ರಾಣಿಯಂತೆ ಓಡಿಸಿದ ಅರಣ್ಯ ಸಿಬ್ಬಂದಿ

Team India; Bumrah meets Kiwi surgeon: Doubts over Champions Trophy?

Team India; ಕಿವೀಸ್‌ ಸರ್ಜನ್‌ ಭೇಟಿಯಾದ ಬುಮ್ರಾ: ಚಾಂಪಿಯನ್ಸ್‌ ಟ್ರೋಫಿಗೆ ಅನುಮಾನ?

Tirupati Tragedy: ಸಾವಿನ ಸಂಖ್ಯೆ ಹೆಚ್ಚಳ ಸಾಧ್ಯತೆ; ಪ್ರತ್ಯಕ್ಷದರ್ಶಿಗಳು ಹೇಳಿದ್ದೇನು?

Tirupati Tragedy: ಸಾವಿನ ಸಂಖ್ಯೆ ಹೆಚ್ಚಳ ಸಾಧ್ಯತೆ; ಪ್ರತ್ಯಕ್ಷದರ್ಶಿಗಳು ಹೇಳಿದ್ದೇನು?

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tirupati

Tirupati;ದುರಂತಕ್ಕೆ ಸಿಎಂ ನಾಯ್ಡು,ಆಡಳಿತ ಮಂಡಳಿ,ಪೊಲೀಸರು ಕಾರಣ: ಮಾಜಿ ಟಿಟಿಡಿ ಮುಖ್ಯಸ್ಥರು

ಏನು ಧೈರ್ಯ..! ರೈಲು ಹಳಿ ಮೇಲೆ ಬಂದ ಸಿಂಹವನ್ನು ಸಾಕು ಪ್ರಾಣಿಯಂತೆ ಓಡಿಸಿದ ಅರಣ್ಯ ಸಿಬ್ಬಂದಿ

ಏನು ಧೈರ್ಯ..! ರೈಲು ಹಳಿ ಮೇಲೆ ಬಂದ ಸಿಂಹವನ್ನು ಸಾಕು ಪ್ರಾಣಿಯಂತೆ ಓಡಿಸಿದ ಅರಣ್ಯ ಸಿಬ್ಬಂದಿ

Tirupati Tragedy: ಸಾವಿನ ಸಂಖ್ಯೆ ಹೆಚ್ಚಳ ಸಾಧ್ಯತೆ; ಪ್ರತ್ಯಕ್ಷದರ್ಶಿಗಳು ಹೇಳಿದ್ದೇನು?

Tirupati Tragedy: ಸಾವಿನ ಸಂಖ್ಯೆ ಹೆಚ್ಚಳ ಸಾಧ್ಯತೆ; ಪ್ರತ್ಯಕ್ಷದರ್ಶಿಗಳು ಹೇಳಿದ್ದೇನು?

Bhopal: ಕೇಂದ್ರ ಕಾರಾಗೃಹದ ಬಳಿ ಚೀನಾ ನಿರ್ಮಿತ ಡ್ರೋನ್ ಪತ್ತೆ… ಹೈ ಅಲರ್ಟ್

Bhopal: ಉಗ್ರರನ್ನು ಇರಿಸಲಾಗಿದ್ದ ಕೇಂದ್ರ ಕಾರಾಗೃಹದ ಬಳಿ ಚೀನಾ ನಿರ್ಮಿತ ಡ್ರೋನ್ ಪತ್ತೆ…

18ನೇ ‘ಪ್ರವಾಸಿ ಭಾರತೀಯ ದಿವಸ್’​ ಉದ್ಘಾಟಿಸಿದ ಪ್ರಧಾನಿ ಮೋದಿ; ವಿಶೇಷ ರೈಲಿಗೆ ಚಾಲನೆ

Odisha: ‘ಪ್ರವಾಸಿ ಭಾರತೀಯ ದಿವಸ್’​ ಉದ್ಘಾಟಿಸಿದ ಪ್ರಧಾನಿ ಮೋದಿ; ವಿಶೇಷ ರೈಲಿಗೂ ಚಾಲನೆ

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

Toxic Movie: ʼಟಾಕ್ಸಿಕ್‌ʼನಲ್ಲಿ ನಟಿಸಲು ಯಶ್‌ ಪಡೆದ ಸಂಭಾವನೆ ಎಷ್ಟು?

Toxic Movie: ʼಟಾಕ್ಸಿಕ್‌ʼನಲ್ಲಿ ನಟಿಸಲು ಯಶ್‌ ಪಡೆದ ಸಂಭಾವನೆ ಎಷ್ಟು?

tirupati

Tirupati;ದುರಂತಕ್ಕೆ ಸಿಎಂ ನಾಯ್ಡು,ಆಡಳಿತ ಮಂಡಳಿ,ಪೊಲೀಸರು ಕಾರಣ: ಮಾಜಿ ಟಿಟಿಡಿ ಮುಖ್ಯಸ್ಥರು

ಮೊಳಹಳ್ಳಿ ವ್ಯವಸಾಯ ಸೇವಾ ಸಹಕಾರಿ ಸಂಘ: ನೂತನ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ

ಮೊಳಹಳ್ಳಿ ವ್ಯವಸಾಯ ಸೇವಾ ಸಹಕಾರಿ ಸಂಘ: ನೂತನ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ

Dharwad: ಬಂದ್ ಹೆಸರಲ್ಲಿ ವ್ಯಾಪಾರಿಗೆ ಕಪಾಳಮೋಕ್ಷ?: ಕಾಲೇಜು ಪ್ರಾಧ್ಯಾಪಕರಿಗೆ ಅವಾಜ್

Dharwad: ಬಂದ್ ಹೆಸರಲ್ಲಿ ವ್ಯಾಪಾರಿಗೆ ಕಪಾಳಮೋಕ್ಷ?: ಕಾಲೇಜು ಪ್ರಾಧ್ಯಾಪಕರಿಗೆ ಅವಾಜ್

13-frndshp

Friendship: ಸ್ನೇಹವೇ ಸಂಪತ್ತು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.