ಆಶ್ರಮ ಶಾಲೆಗೆ ಬೇಕು ಕ್ರೀಡಾಂಗಣ, ರಂಗಮಂದಿರ, ಕೊಠಡಿ


Team Udayavani, Jan 27, 2019, 5:21 AM IST

27-january-4.jpg

ಸುಬ್ರಹ್ಮಣ್ಯ: ಸರಕಾರಿ ಶಾಲೆಗ ಳೆಂದರೆ ಮೂಗು ಮುರಿಯುವ ದಿನಗಳಲ್ಲಿ ಪ್ರಕೃತಿ ಮಡಿಲಿನಲ್ಲಿ ಗುಣಮುಟ್ಟದ ಶಿಕ್ಷಣ ಜತೆಗೆ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುತ್ತಿದೆ ಸುಬ್ರಹ್ಮಣ್ಯದ ಬಿಲದ್ವಾರ ಬಳಿಯ ಆಶ್ರಮ ಶಾಲೆ. ತಕ್ಕಮಟ್ಟಿಗೆ ಇಲ್ಲಿ ಸೌಕರ್ಯವಿದ್ದರೂ ಪ್ರಮುಖ ಮೂರು ಬೇಡಿಕೆಗಳು ಈಡೇರಬೇಕಿವೆ.

ಪ್ರಕೃತಿ ಮಡಿಲಿನ ಕುಕ್ಕೆ ಸುಬ್ರಹ್ಮಣ್ಯದಲ್ಲಿ 1959ರಲ್ಲಿ ಆರಂಭವಾದ ಆಶ್ರಮ ಶಾಲೆ ಉತ್ತಮ ಕಲಿಕಾ ವಾತಾವರಣ ಹೊಂದಿದೆ. ಗ್ರಾಮೀಣ ಪ್ರದೇಶದ ಈ ಆಶ್ರಮ ಶಾಲೆ ಯಲ್ಲಿ 50 ಮಕ್ಕಳಿಗೆ ಕಲಿಯಲು ಅವಕಾಶ ವಿದೆ. ಪರಿಶಿಷ್ಟ ಜಾತಿ ಹಾಗೂ ವರ್ಗದವರಿಗೆ ತಲಾ ಶೇ. 50 ಸ್ಥಾನ ಮೀಸಲಿರಿಸಲಾಗಿದೆ. 1 ರಿಂದ 5ನೇ ತರಗತಿ ತನಕ ವ್ಯಾಸಂಗ ಇಲ್ಲಿದೆ.

ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ 37 ವಿದ್ಯಾ ರ್ಥಿಗಳಿದ್ದಾರೆ. 27 ಹುಡುಗರು, 10 ಹುಡುಗಿಯರಿದ್ದು, 15 ಮಂದಿ ಪ.ವರ್ಗ ಮತ್ತು 18 ಪ.ಜಾತಿ, 4 ಇತರ ವರ್ಗಕ್ಕೆ ಸೇರಿದ ವಿದ್ಯಾರ್ಥಿಗಳು ಇಲ್ಲಿದ್ದಾರೆ. ಪರಿಶಿಷ್ಟ ವರ್ಗದ 10 ಮತ್ತು ಪ.ಜಾತಿಯ 3 ಸೀಟುಗಳು ಭರ್ತಿಯಾಗಿಲ್ಲ. ಶಾಲೆಯಲ್ಲಿ ಮೇಲ್ವಿಚಾರಕರು ಮತ್ತು ಮುಖ್ಯ ಶಿಕ್ಷಕ ಹುದ್ದೆ ಅಧಿಕಾರಿ ಇದ್ದಾರೆ. ಹೊರಗುತ್ತಿಗೆಯಲ್ಲಿ ಇಬ್ಬರು ಶಿಕ್ಷಕಿಯರು ಕರ್ತವ್ಯದಲ್ಲಿದ್ದು, ಮೂವರು ಅಡುಗೆ ಸಿಬಂದಿ ಇದ್ದಾರೆ. ಸರಕಾರದಿಂದ ಎಲ್ಲ ವ್ಯವಸ್ಥೆಗಳನ್ನು ಆಶ್ರಮ ಶಾಲೆಗೆ ಒದಗಿಸಲಾಗಿದೆ. ಉತ್ತಮ ಪೌಷ್ಟಿಕಾಂಶದ ಆಹಾರ ಸರಬರಾಜಾಗುತ್ತಿದೆ. ಶಾಲೆಯ ಸುತ್ತ ಆವರಣಗೋಡೆ, ಐಟಿಡಿಪಿ ಇಲಾಖೆಯಿಂದ ಶುದ್ಧ ನೀರಿನ ಘಟಕ ವ್ಯವಸ್ಥೆ, ಮಲಗಲು ಹಾಸಿಗೆ, ಫ್ಯಾನ್‌, ಕ್ರೀಡಾ ಸಾಮಗ್ರಿಗಳು ದೊರಕಿವೆ. ತರಗತಿ ಕೊಠಡಿಗೆ ಟೈಲ್ಸ್‌, ಅಂಗಣಕ್ಕೆ ಇಂಟರ್‌ಲಾಕ್‌ ಅಳವಡಿಸಲಾಗಿದೆ.

ಕಟ್ಟಡದ ಸ್ಥಿತಿ ಪರವಾಗಿಲ್ಲ
ಕಟ್ಟಡ ನಿರ್ಮಾಣವಾಗಿ 60 ವರ್ಷಗಳು ಉರುಳಿದ್ದರೂ ಸದ್ಯ ರಿಪೇರಿಯಾಗಿ ಸುಸ್ಥಿತಿಯಲ್ಲಿದೆ. ಆಶ್ರಮ ಶಾಲೆಯ ಕಟ್ಟಡ ಶಿಥಿಲಾವಸ್ಥೆಗೆ ತಲುಪಿದಾಗಲೆಲ್ಲ ದುರಸ್ತಿ ಮಾಡಿಕೊಂಡು ಬರಲಾಗಿದೆ.
ಕಟ್ಟಡ ಹಳೆಯದಾದರೂ ಪರವಾಗಿಲ್ಲ ಎನ್ನುವಂತಿದೆ. ಮಕ್ಕಳಿಗೆ ಎಲ್ಲ ವ್ಯವಸ್ಥೆಗಳಿದ್ದರೂ ಬಹುಮುಖ್ಯವಾಗಿ ಪಠ್ಯೇತರ ಚಟುವಟಿಕೆಗೆ ಬೇಕಿರುವ ಪ್ರಮುಖ ಮೂರು ಸೌಕರ್ಯಗಳು ಇಲ್ಲಿಲ್ಲ.

ಯಾವೆಲ್ಲ ಸೌಕರ್ಯ ಬೇಕು?
ಆಟವಾಡಲು ಕ್ರೀಡಾಂಗಣ ವಿಲ್ಲ. ಸಾಂಸ್ಕೃತಿಕ ಚಟುವಟಿಕೆಗೆ ರಂಗಮಂದಿರ ವಿಲ್ಲ. 6 ಮತ್ತು 7ನೇ ತರಗತಿಯ ಬೇಡಿಕೆ ಇದ್ದರೂ ತರಗತಿ ಪ್ರಾರಂಭಿಸಲು ಅನುಮತಿ ಸಿಕ್ಕಿಲ್ಲ. ಜತೆಗೆ ತರಗತಿ ಕೊಠಡಿಗಳು ನಿರ್ಮಾಣವಾಗಬೇಕಿದೆ. ಪ್ರಸ್ತುತ ಶಾಲೆ ಮತ್ತು ವಸತಿ ನಿಲಯ ದೂರದಲ್ಲಿದ್ದು, ಒಂದೇ ಕಡೆಯಲ್ಲಿ ಸುಸಜ್ಜಿತ ಶಾಲೆ ಮತ್ತು ವಸತಿಗೃಹ ನಿರ್ಮಾಣವಾಗಬೇಕಿದೆ. ಆಶ್ರಮ ಶಾಲೆಯಲ್ಲಿ ಶೈಕ್ಷಣಿಕ ವರ್ಷದ ಎಲ್ಲ ಅವಧಿಗಳಲ್ಲಿ ಪಠ್ಯೇತರ ಚಟುವಟಿಕೆಗಳಿಗೆ ಮಕ್ಕಳಿಗೆ ಅವಕಾಶ ಮಾಡಿಕೊಡುತ್ತ ಬರಲಾಗಿದೆ. ಸ್ಥಳೀಯ ಸಂಘ ಸಂಸ್ಥೆಗಳು ಶಾಲೆಯ ವಾರ್ಷಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಹಲವು ಕೊಡುಗೆಗಳನ್ನು ನೀಡುತ್ತಿವೆ.

ದಾನಿಗಳು ಮಕ್ಕಳ ಬೆಳವಣಿಗೆಗೆ ಕೈಜೋಡಿಸು ತ್ತಿದ್ದಾರೆ. ಉತ್ತಮ ಶಿಕ್ಷಕರನ್ನು ಒಳಗೊಂಡ ಈ ಶಾಲೆಗೆ ಮುಖ್ಯವಾಗಿ ಬಾಕಿ ಇರುವ ಮೂರು ಬೇಡಿಕೆಗಳು ಈಡೇರಿದಲ್ಲಿ ಉತ್ತಮ ಎನ್ನುವುದು ಮಕ್ಕಳ ಹೆತ್ತವರ ಅಭಿಪ್ರಾಯವಾಗಿದೆ.

ಇಲಾಖೆ ಗಮನಕ್ಕೆ ತರಲಾಗಿದೆ
ಮಕ್ಕಳ ಶಿಕ್ಷಣ ಗುಣಮಟ್ಟ ಹೆಚ್ಚಿಸು ವಲ್ಲಿ ಎಲ್ಲ ಪ್ರಯತ್ನಗಳನ್ನು ಇಲ್ಲಿ ಮಾಡಲಾಗುತ್ತಿದೆ. ಇಲಾಖೆ ಕಡೆಯಿಂದ ಕಾಲ ಕಾಲಕ್ಕೆ ಅನುದಾನ ಗಳು ಬರುವ ಮೂಲಕ ಉತ್ತಮ ಸಹಕಾರ ದೊರಕಿದೆ. ಹೆತ್ತವರು, ದಾನಿಗಳು ಹಾಗೂ ಶಿಕ್ಷಕಿಯರ ಸಹಕಾರ ಅತ್ಯುತ್ತಮವಾಗಿದೆ. ಮೂರು ಬೇಡಿಕೆಗಳ ಕುರಿತು ಇಲಾಖೆ ಗಮನಕ್ಕೆ ತರಲಾಗಿದೆ.
 -ಕೃಷ್ಣಪ್ಪ ಬಿ., ಮೇಲ್ವಿಚಾರಕರು

ಕಲಿಕೆ ಜತೆ ಭಜನೆ
ಆಶ್ರಮ ಶಾಲೆಯಲ್ಲಿ ಒಳ್ಳೆಯ ವಾತಾವರಣ ಇದೆ. ಮಕ್ಕಳಲ್ಲಿ ದೇವರನ್ನು ಇಲ್ಲಿ ಕಾಣಬಹುದು. ಕಲಿಕೆ ಜತೆ ಭಜನೆ ಪುಸ್ತಕ ಓದುವುದರಲ್ಲಿ ಮಕ್ಕಳು ನಿರತರಾಗಿದ್ದಾರೆ. ಈ ಶಾಲೆಯ ಮಕ್ಕಳ ವಿದ್ಯಾಭ್ಯಾಸಕ್ಕೆ ಕೊರತೆಯಾಗದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿ.
ಹರೀಶ್‌ ಕಾಮತ್‌,
   ಸ್ಥಳೀಯರು

ಬಾಲಕೃಷ್ಣ ಭೀಮಗುಳಿ

ಟಾಪ್ ನ್ಯೂಸ್

GOLD2

Gold Price Decline: ಚಿನ್ನದ ದರ ಮತ್ತೆ 1,000 ರೂ.ಇಳಿಕೆ: 10 ಗ್ರಾಂಗೆ 78,550 ರೂ.

Ajith-Pawar

Assembly Election: ನಾನು ಪ್ರಚಾರ ಮಾಡದ್ದಕ್ಕೆ ನೀನು ಶಾಸಕನಾದೆ: ಸಂಬಂಧಿಗೆ ಅಜಿತ್‌

AAP–BJP

Scheme: ದಿಲ್ಲಿಯಲ್ಲಿ ಆಮ್‌ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!

Raj-Thackrey

Election: ರಾಜ್‌ ಠಾಕ್ರೆ ಎಂಎನ್‌ಎಸ್‌ ಶೂನ್ಯ ಸಾಧನೆ: ಚಿಹ್ನೆ, ಮಾನ್ಯತೆ ನಷ್ಟದ ಭೀತಿ!

Delhi-School

Air Quality: ದಿಲ್ಲಿಯಲ್ಲಿ ಭೌತಿಕ ತರಗತಿ ಪುನಾರಂಭದ ಬಗ್ಗೆ ಗಮನ ಹರಿಸಿ: ಸುಪ್ರೀಂ ಕೋರ್ಟ್‌

President-Murmu

Indian Constitution: ಸಂವಿಧಾನ ಅಂಗೀಕರಿಸಿ 75 ವರ್ಷ: ಸದನದಲ್ಲಿಂದು ರಾಷ್ಟ್ರಪತಿ ಭಾಷಣ

supreme-Court

Judgement: ಸಂವಿಧಾನ ಪೀಠಿಕೆಯ ಜಾತ್ಯತೀತ ಪದ ಪ್ರಶ್ನಿಸಿದ್ದ ಅರ್ಜಿ ಸುಪ್ರೀಂನಿಂದ ವಜಾ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

GOLD2

Gold Price Decline: ಚಿನ್ನದ ದರ ಮತ್ತೆ 1,000 ರೂ.ಇಳಿಕೆ: 10 ಗ್ರಾಂಗೆ 78,550 ರೂ.

Ajith-Pawar

Assembly Election: ನಾನು ಪ್ರಚಾರ ಮಾಡದ್ದಕ್ಕೆ ನೀನು ಶಾಸಕನಾದೆ: ಸಂಬಂಧಿಗೆ ಅಜಿತ್‌

AAP–BJP

Scheme: ದಿಲ್ಲಿಯಲ್ಲಿ ಆಮ್‌ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!

Raj-Thackrey

Election: ರಾಜ್‌ ಠಾಕ್ರೆ ಎಂಎನ್‌ಎಸ್‌ ಶೂನ್ಯ ಸಾಧನೆ: ಚಿಹ್ನೆ, ಮಾನ್ಯತೆ ನಷ್ಟದ ಭೀತಿ!

Delhi-School

Air Quality: ದಿಲ್ಲಿಯಲ್ಲಿ ಭೌತಿಕ ತರಗತಿ ಪುನಾರಂಭದ ಬಗ್ಗೆ ಗಮನ ಹರಿಸಿ: ಸುಪ್ರೀಂ ಕೋರ್ಟ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.