ಅಪಘಾತ ರಹಿತ ಚಾಲಕರಿಗೆ ಬೆಳ್ಳಿ ಪದಕ ವಿತರಣೆ
Team Udayavani, Jan 27, 2019, 5:47 AM IST
ಪುತ್ತೂರು: ವೃತ್ತಿ ಧರ್ಮವನ್ನು ಜೀವನ ಧರ್ಮವಾಗಿ ಪಾಲಿಸಿದವರಿಗೆ ಸಮಾ ಜದಲ್ಲಿ ಗೌರವ ಲಭಿಸುತ್ತದೆ. ಸಿಬಂದಿಯ ಕಡೆಯಿಂದ ಸ್ವಚ್ಛ ನಿರ್ವಹಣೆ, ಸಮಯ ಪರಿಪಾಲನೆ, ಸಜ್ಜನಿಕೆಯ ವ್ಯವಹಾರ, ಮಾನವೀಯ ಸೇವೆ ಸಾರಿಗೆ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುತ್ತದೆ ಎಂದು ಪುತ್ತೂರು ಶಾಸಕ ಸಂಜೀವ ಮಠಂದೂರು ಹೇಳಿದರು.
ಕೆಎಸ್‌ಆರ್‌ಟಿಸಿ ಪುತ್ತೂರು ವಿಭಾಗದ ವತಿಯಿಂದ ಮುಕ್ರಂಪಾಡಿಯಲ್ಲಿರುವ ಕೆಎಸ್‌ಆರ್‌ಟಿಸಿ ವಿಭಾಗೀಯ ಕಾರ್ಯಗಾರದಲ್ಲಿ ಅಪಘಾತ ರಹಿತ ಚಾಲಕರಿಗೆ ಶನಿವಾರ ಆಯೋಜಿಸಿದ ಬೆಳ್ಳಿ ಪದಕ ವಿತರಣೆ, ಅಭಿನಂದನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಾರಿಗೆ ನಿಗಮದ ಎಲ್ಲ ಕಾರ್ಯಗಳನ್ನು ಮನಗಂಡು ಪುತ್ತೂರಿಗೆ ವಿಭಾಗೀಯ ಕಚೇರಿಯೂ ನಿರ್ಮಾಣಗೊಂಡಿದೆ. ಪುತ್ತೂರು ಹೊರತುಪಡಿಸಿ ಎರಡನೇ ದೊಡ್ಡ ಪಟ್ಟಣ ಹಾಗೂ ರಾಷ್ಟ್ರೀಯ ಹೆದ್ದಾರಿ ಹಾದು ಹೋಗುವ ಉಪ್ಪಿನಂಗಡಿಗೆ ಆಧುನಿಕ ಬಸ್ ನಿಲ್ದಾಣ, ಡಿಪೋ ನಿರ್ಮಾಣಕ್ಕೆ ಪ್ರಯತ್ನ ಮಾಡಲಾಗುತ್ತಿದೆ ಎಂದು ಹೇಳಿದರು.
ಸೂಕ್ಷ್ಮ ಮತ್ತು ಮೌಲ್ಯಯುತ
ಪ್ರತಿಭಾ ಪುರಸ್ಕಾರ ವಿತರಿಸಿದ ಸಹಾಯಕ ಆಯುಕ್ತ ಎಚ್.ಕೆ. ಕೃಷ್ಣಮೂರ್ತಿ, ಮಾತನಾಡಿ, ಪ್ರತಿಯೊಬ್ಬರ ವೃತ್ತಿಯೂ ಶ್ರೇಷ್ಠವಾದುದು. ಪ್ರತಿಯೊಬ್ಬರೂ ಸ್ಥಿತಿ ಪ್ರಜ್ಞರಾಗಿ ಮಾಡುವ ಕೆಲಸವನ್ನು ಗೌರವಿಸುವುದೇ ನಮ್ಮ ಶ್ರೇಷ್ಠತನ ಎಂದರು. ಚಾಲಕರು ನಮ್ಮನ್ನು ರಕ್ಷಿಸುವ ಕೆಲಸವನ್ನು ಪ್ರತಿ ಕ್ಷಣ ಮಾಡುತ್ತಾರೆ. ಅವರ ವೃತ್ತಿಯ ಪ್ರತಿ ಕ್ಷಣವೂ ಸೂಕ್ಷ್ಮವಾದುದು ಮತ್ತು ಮೌಲ್ಯಯುತವಾದುದು. ಚಾಲಕ ಒಳ್ಳೆಯ ಕೆಲಸವನ್ನು ಗುರುತಿಸಿ ಗೌರವಿಸಿದಾಗ ಅವರ ಸೇವೆ ಸಾರ್ಥವಾಗುತ್ತದೆ. ಇದರಿಂದ ಅವರ ವೃತ್ತಿಯಲ್ಲಿ ಬದ್ಧತೆ ಹೆಚ್ಚಾಗುತ್ತದೆ.
ಘಟಕ ಪ್ರಶಸ್ತಿ
ಇಂದನ ಉಳಿತಾಯದಲ್ಲಿ ಪುತ್ತೂರು ಘಟಕ, ಗರಿಷ್ಠ ಆದಾಯ ಗಳಿಕೆಯಲ್ಲಿ ಧರ್ಮಸ್ಥಳ ಘಟಕ, ಕಡಿಮೆ ನಷ್ಟ ಬಂದ ಸುಳ್ಯ ಘಟಕ, ಅತೀ ಕಡಿಮೆ ಅಪಘಾತ ನಡೆದ ಕಾರಣಕ್ಕೆ ಮಡಿಕೇರಿ ಘಟಕ ಹಾಗೂ ಅತ್ಯುತ್ತಮ ಘಟಕ ಪ್ರಶಸ್ತಿಯನ್ನು ಬಿ.ಸಿ. ರೋಡ್ ಘಟಕಗಳಿಗೆ ನೀಡಿ ಗೌರವಿಸಲಾಯಿತು.
ವಿಭಾಗದ ಅಧಿಕಾರಿ ಹಾಗೂ ಸಿಬಂದಿಯ ಒಟ್ಟು 90 ಮಂದಿಗೆ ಪ್ರತಿಭಾವಂತ ವಿದ್ಯಾರ್ಥಿಗಳಿಗೆ 3.15 ಲಕ್ಷ ರೂ. ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ವಿಭಾಗದ ಸಿಬಂದಿ ಹಾಗೂ ಅಧಿಕಾರಿಗಳಿಗೆ ನಡೆಸಲಾಗಿದ್ದ ವಿವಿಧ ಕ್ರೀಡೆ, ಸಾಂಸ್ಕೃತಿಕ ಹಾಗೂ ಕಲಾ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ನೀಡಿ ಅಭಿನಂದಿಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.