ಸೌಹಾರ್ದತೆಯ ಶಿರೋಳದ ರೊಟ್ಟಿ ಜಾತ್ರೆ
Team Udayavani, Jan 27, 2019, 6:09 AM IST
ನರಗುಂದ: ತಾಲೂಕಿನ ಶಿರೋಳದ ಸರ್ವಧರ್ಮ ಸಮನ್ವಯದ ರೊಟ್ಟಿ ಜಾತ್ರೆಯು ಉತ್ತರ ಕರ್ನಾಟಕ ಭಾಗದಲ್ಲೇ ಸಾಮರಸ್ಯದ ಸಂಕೇತವಾಗಿ ವರ್ಷದಿಂದ ವರ್ಷಕ್ಕೆ ಜನಪ್ರಿಯತೆ ಹೊಂದುತ್ತಿದೆ. ಇದು ಮಲಪ್ರಭಾ ನದಿ ದಂಡೆಯ ಬಹು ಗ್ರಾಮಗಳ ಒಗ್ಗಟ್ಟಿನ ದ್ಯೋತಕವಾಗಿ ಆಚರಣೆಗೊಳ್ಳುತ್ತಿರುವುದು ವಿಶೇಷ.
ಶಿರೋಳ ತೋಂಟದಾರ್ಯ ಮಠದ ‘ನಮ್ಮೂರ ಜಾತ್ರೆ’ಯ ಒಂದು ಭಾಗವೇ ರೊಟ್ಟಿ ಜಾತ್ರೆ. ಧರ್ಮಸಭೆ, ರಥೋತ್ಸವಕ್ಕೆ ಸೀಮಿತವಾಗದ ಈ ಜಾತ್ರೆ ಸರ್ವ ಜನಾಂಗಗಳ ಮನಸ್ಸು ಒಗ್ಗೂಡಿಸಿ ಕೋಮು ಸೌಹಾರ್ದತೆ ಗಟ್ಟಿಗೊಳಿಸಿ, ಏಕತೆಯ ಬದುಕಿನ ಭಾರತೀಯ ಸಂಸ್ಕೃತಿ, ಗ್ರಾಮೀಣ ಸೊಗಡು ಬಿಂಬಿಸುವಲ್ಲಿ ಹೆಸರಾಗಿದೆ.
ಮುಂಡರಗಿ ತಾಲೂಕು ಡಂಬಳ ತೋಂಟದಾರ್ಯ ಮಠದ ಜಾತ್ರೆಯಲ್ಲಿ ತೋಂಟದ ಲಿಂ| ಡಾ| ಸಿದ್ಧಲಿಂಗ ಸ್ವಾಮೀಜಿ ಖಡಕ್ ರೊಟ್ಟಿ, ಪಲ್ಲೆ(ಭಜ್ಜಿ), ಕರಿಂಡಿ, ಅನ್ನದ ಬಾನ ಭೋಜನ ಪ್ರಸಾದ ಪದ್ಧತಿ ಪ್ರಾರಂಭಿಸಿದ್ದರು. ಅದೇ ಮಾದರಿಯಲ್ಲಿ 1994ರಲ್ಲಿ ಶಿರೋಳ ತೋಂಟದಾರ್ಯ ಮಠದಲ್ಲಿ ಶ್ರೀ ಗುರುಬಸವ ಸ್ವಾಮೀಜಿ ರೊಟ್ಟಿ ಜಾತ್ರೆಗೆ ಮುನ್ನುಡಿ ಬರೆದರು. 24 ವರ್ಷದಿಂದ ತೇರು, ಉತ್ಸವ, ಪೂಜೆಗಿಂತ ಜನಪ್ರಿಯವಾಗಿದ್ದು ರೊಟ್ಟಿ ಜಾತ್ರೆಯಾಗಿದೆ. ಅದಕ್ಕೆಂದೇ ಮಹಾನುಭಾವರು ‘ಅನ್ನಬ್ರಹ್ಮ’ ಎಂದರು.
ರೊಟ್ಟಿ ಜಾತ್ರೆ ವಿಶೇಷ: 15 ಚೀಲ ಜೋಳದ ಹಿಟ್ಟು ಸರ್ವ ಧರ್ಮೀಯರ ಮನೆಗಳಿಗೆ ತಲುಪುತ್ತದೆ. ಕೆಲವರು ಖುದ್ದಾಗಿ ಹಿಟ್ಟು ಪಡೆಯುವರು. ಇಲ್ಲವೇ ತಮ್ಮದೆ ಹಿಟ್ಟಿನಿಂದ ರೊಟ್ಟಿ ಮಾಡಿ ಶ್ರೀಮಠಕ್ಕೆ ಕಳಿಸುತ್ತಾರೆ. ತಟ್ಟುವ ಕೈಗಳಿಗೂ ಯಾವುದೇ ರೀತಿಯ ಭಿನ್ನಭೇದ ಇಲ್ಲದ ಜಾತ್ರೆ ಇದಾಗಿದೆ.
ಬಹುತೇಕ ಜಾತ್ರೆಗಳಲ್ಲಿ ಸಿಹಿಯೂಟ ಪ್ರಸಾದವಿದ್ದರೆ, ತೋಂಟದಾರ್ಯ ಜಾತ್ರೆಯಲ್ಲಿ ಜೋಳದ ರೊಟ್ಟಿಯನ್ನೇ ಪ್ರಸಾದವಾಗಿ ನೀಡುವುದಕ್ಕೆ ದಶಕಗಳ ಇತಿಹಾಸವಿದೆ. ಖಡಕ್ ರೊಟ್ಟಿ, ಹೊಲದಲ್ಲಿ ಬೆಳೆದ ತರಕಾರಿಗಳನ್ನು ಚಕ್ಕಡಿ, ಟ್ರ್ಯಾಕ್ಟರ್‌ನಲ್ಲಿ ತಂದು ಮಠದಲ್ಲಿ ಕೂಡಿ ಹಾಕುತ್ತಾರೆ. ಈ ವರ್ಷ 85 ಸಾವಿರಕ್ಕೂ ಹೆಚ್ಚು ಜೋಳದ ಖಡಕ್ ರೊಟ್ಟಿ ಸಂಗ್ರಹವಾಗಿದೆ ಎನ್ನುತ್ತಾರೆ ಸದ್ಭಕ್ತರು.
ಬರಗಾಲಕ್ಕೆ ಬರಡಾಗಿಲ್ಲ: ಜನಪ್ರಿಯತೆ ಸಾಧಿಸಿದ ರೊಟ್ಟಿ ಜಾತ್ರೆ ಎಂದಿಗೂ ಬರಗಾಲ ಭವನೆಗೆ ಬರಡಾಗಿಲ್ಲ. ನಾಲ್ಕೈದು ವರ್ಷಗಳಿಂದ ಸತತ ಬರಗಾಲವಿದ್ದರೂ ಭಕ್ತರು ಜಾತ್ರೆ ಮುನ್ನಡೆಸಿದ್ದಾರೆ. ಇದು ಭಕ್ತಿಯ ಪರಾಕಾಷ್ಟೆಗೆ ನಿದರ್ಶವಾಗಿದೆ. ಜ.27ರಂದು ಶಿರೋಳ ತೋಂಟದಾರ್ಯ ಮಠದ ಆವರಣದಲ್ಲಿ ರೊಟ್ಟಿ ಊಟ ಜಾತ್ರೆ ನಡೆಯಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lakkundi: ಹೊಸದಾಗಿ 5 ಬಾವಿ, 5 ಶಾಸನಗಳು, ಸಾವಿರಕ್ಕೂ ಹೆಚ್ಚು ಶಿಲ್ಪಕಲೆಗಳ ಅನ್ವೇಷಣೆ
Waqf Protest: ಕೊಪ್ಪಳ-ಗದಗದಲ್ಲಿ ಬಿಜೆಪಿ ಪ್ರತಿಭಟನೆ
ಗಜೇಂದ್ರಗಡ: ಸೂಡಿ ಉತ್ಸವಕ್ಕೆ ತೋರಬೇಕಿದೆ ಇಚ್ಛಾಶಕ್ತಿ-ಹಾಳು ಕೊಂಪೆಯಾದ ಸ್ಮಾರಕ
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
ಗದಗ: ಸರ್ಕಾರಿ ಪ್ರಾಚ್ಯವಸ್ತು ಸಂಗ್ರಹಾಲಯಕ್ಕೆ ಕಾಯಕಲ್ಪ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Maharashtra: ಕಾಂಗ್ರೆಸ್ ಗೆ ಕೇವಲ 16 ಸ್ಥಾನ; ಕೈ ಅಧ್ಯಕ್ಷ ಸ್ಥಾನಕ್ಕೆ ಪಟೋಲೆ ರಾಜೀನಾಮೆ
Politics: ಫಡ್ನವೀಸ್ ಗೆ ಬೆಂಬಲ ನೀಡಿದ ಅಜಿತ್; ಮಹಾರಾಷ್ಟ್ರದಲ್ಲಿ ಮುಗಿಯದ ಸಿಎಂ ತಿಕ್ಕಾಟ
Video: ನೋಟಿನ ಮಾಲೆಯ ನೋಟು ಎಗರಿಸಿದ ಕಳ್ಳ… ಮದುವೆ ಬಿಟ್ಟು ಕಳ್ಳನ ಹಿಂದೆ ಓಡಿದ ವರ
Sudeep: ʼಮ್ಯಾಕ್ಸ್ʼ ರಿಲೀಸ್ ದಿನ ಫಿಕ್ಸ್: ಕಿಚ್ಚನ ಸಿಟ್ಟಿಗೆ ಎಚ್ಚೆತ್ತ ನಿರ್ಮಾಣ ಸಂಸ್ಥೆ
Bidar: ಭಾರತದಿಂದಲೇ ವಕ್ಫ್ ತೊಲಗಿಸಬೇಕು: ಯತ್ನಾಳ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.