ದೇಶಭಕ್ತಿ ಗೀತೆಗಳಿಗೆ ಹೆಜ್ಜೆ ಹಾಕಿದ ಮಕ್ಕಳು
Team Udayavani, Jan 27, 2019, 11:45 AM IST
ತುಮಕೂರು: ನಗರದ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ವಿವಿಧ ಶಾಲೆಯ ಮಕ್ಕಳು ದೇಶಾಭಿಮಾನ ಬಿಂಬಿಸುವ ದೇಶ ಭಕ್ತಿ ಗೀತೆಗಳಿಗೆ ರಾಷ್ಟ್ರಧ್ವಜ ಹಿಡಿದು ಹೆಜ್ಜೆ ಹಾಕುತ್ತಾ ರಂಜಿಸುವ ಮೂಲಕ ಗಣರಾಜ್ಯೋತ್ಸವ ಸಮಾರಂಭಕ್ಕೆ ಮೆರುಗು ನೀಡಿದರು.
ನಗರದ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ 70ನೇ ವರ್ಷದ ಭಾರತ ಗಣರಾಜ್ಯೋತ್ಸವದಲ್ಲಿ ನಗರದ ವಿವಿಧ ಶಾಲೆಯ ಸಾವಿರಾರು ಮಕ್ಕಳು ಆಕರ್ಷಕವಾದ ಕವಾಯತ್ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.
ಈ ವೇಳೆ ಪೊಲೀಸ್ ಬ್ಯಾಂಡ್ ಸೆಟ್ನಿಂದ ರಾಷ್ಟ್ರ ಗೀತೆ ಮೊಳಗಿತು. ಪೇರೆಡ್‌ನಲ್ಲಿ 29 ತಂಡಗಳು ಗಣರಾಜೋತ್ಸವ ಪಥಸಂಚಲನದಲ್ಲಿ ಭಾಗವಹಿಸಿ ಗಮನಸೆಳೆದರು.
ಬಹುಮಾನ: ಬಾಲಕಿಯರ ಪದವಿ ಪೂರ್ವ ಕಾಲೇಜಿನ 600 ಮಕ್ಕಳು ಹೆಜ್ಜೆ ಹಾಕಿದ ನೃತ್ಯಕ್ಕೆ ಮೊದಲ ಬಹುಮಾನ ಪಡೆದರು. ಬಟವಾಡಿಯ ಚೇತನ ಹಿರಿಯ ಪ್ರಾಥಮಿಕ ಶಾಲೆಯ 400 ಮಕ್ಕಳು ಪ್ರದರ್ಶಿಸಿದ ನೃತ್ಯಕ್ಕೆ 2ನೇ ಬಹುಮಾನ ಪಡೆದರು. ಡಾನ್ ಬಾಸ್ಕೋ ಶಾಲೆಯ 500 ವಿದ್ಯಾರ್ಥಿಗಳು ನೀಡಿದ ನೃತ್ಯ ಪ್ರದರ್ಶನಕ್ಕೆ ಮೂರನೇ ಬಹುಮಾನಕ್ಕೆ ಭಾಜನರಾದರು. ಕಾಳಿದಾಸ ಶಾಲೆಯ 450 ಮಕ್ಕಳ ಕುಣಿತಕ್ಕೆ ಸಮಾಧಾನಕರ ಬಹುಮಾನ ನೀಡಲಾಯಿತು.
ಸಾಧಕರಿಗೆ ಸನ್ಮಾನ: ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿ ಜಿಲ್ಲೆಗೆ ಕೀರ್ತಿ ತಂದವರಿಗೆ ಉಪಮುಖ್ಯ ಮಂತ್ರಿ ಸನ್ಮಾನಿಸಿದರು.
ಉತ್ತಮ ಸರ್ಕಾರಿ ಸೇವೆಗಾಗಿ ಪ್ರಶಸ್ತಿ: ಉತ್ತಮ ಸರ್ಕಾರಿ ಸೇವೆಗಾಗಿ ಜಿಲ್ಲಾ ಸರ್ಜನ್ ಡಾ.ವೀರಭದ್ರಯ್ಯ, ಸಾಮಾಜಿಕ ಭದ್ರತೆ ಮತ್ತು ಪಿಂಚಣಿಗಳು ಇಲಾಖೆಯ ಸಹಾಯಕ ನಿರ್ದೇಶಕಿ ಗಾಯತ್ರಿ, ಮಧುಗಿರಿ ತಾಲೂಕು ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಟಿ. ರುಕ್ಮಿಣಿ, ಗುಬ್ಬಿ ತಾಲೂಕು ಎಂ.ಎಚ್.ಪಟ್ಟಣದ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮಂಜಮ್ಮ ಹಾಗೂ ತಿಪಟೂರು ಉಪವಿಭಾಗಾ ಧಿಕಾರಿ ಕಚೇರಿಯ ಪ್ರಥಮ ದರ್ಜೆ ಸಹಾಯಕ ಕೆ.ಬಿ. ಮಲ್ಲಿಕಾರ್ಜುನ ಅವರಿಗೆ ಸರ್ವೋತ್ತಮ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕ್ರೀಡಾ ಕ್ಷೇತ್ರದ ಸಾಧನೆಗಾಗಿ ಪ್ರಶಸ್ತಿ: ಜಕಾರ್ತದಲ್ಲಿ ಜರುಗಿದ ಇಂಡೋನೆಷಿಯಾ ಓಪನ್ ಮಾಸ್ಟರ್ 800 ಮೀ. ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್‌ನಲ್ಲಿ ಚಿನ್ನದ ಪದಕ ಪಡೆದು ರಾಜ್ಯಕ್ಕೆ ಕೀರ್ತಿ ತಂದಿರುವ ಕ್ರೀಡಾಪಟು ಸಿ.ಜಗದೀಶ್, ನ್ಯಾಷನಲ್ ಸ್ಕೂಲ್ ಗೇಮ್ಸ್ ರಾಷ್ಟ್ರಮಟ್ಟದ ಖೇಲೋ ಇಂಡಿಯಾ ಖೋ-ಖೋ ಪಂದ್ಯದಲ್ಲಿ ವಿಶೇಷ ಸಾಧನೆಗಾಗಿ ಸರ್ವೋದಯ ಶಾಲೆಯ ಜಿ.ಆರ್. ಯಶ ವಂತ್, ಜಿ.ಬಿ.ರೋಷನ್, ಆರ್.ಶಶಾಂಕ್, ಪಿ.ಧನುಷ್, ಬಿ.ಷಣ್ಮಖ್, ಎನ್‌ಸಿಸಿ ವಿಭಾಗದ ವಿಶೇಷ ಸಾಧನೆ ಗಾಗಿ ಕಿರಣ್‌ನಂದನ್ ಹಾಗೂ ಖೋಖೋ ಕೋಚ್ ದೈಹಿಕ ಶಿಕ್ಷಕ ವೈ.ರಮೇಶ್‌ರನ್ನು ಸನ್ಮಾನಿಸ ಲಾಯಿತು.
ಉತ್ತಮ ಸೇನಾ ಸೇವೆಗಾಗಿ ಗೌರವ: ರಾಷ್ಟ್ರಪತಿಗಳಿಂದ ಶೌರ್ಯ ಪ್ರಶಸ್ತಿಗೆ ಭಾಜನರಾಗಿ ಭಾರತೀಯ ಸೇನಾ ಪಡೆಯಲ್ಲಿ ಸೇವೆ ಸಲ್ಲಿ ಸುತ್ತಿರುವ ನಗರದ ಪುರಸ್ ಕಾಲೋನಿ ನಿವಾಸಿ ಎಂ. ಸಾದಿಕ್ ಕುಟುಂಬವನ್ನು ಗೌರವಿಸಲಾಯಿತು.
ಸಾರಿಗೆ ಚಾಲಕರಿಗೆ ಪುರಸ್ಕಾರ: ಅಪಘಾತ ರಹಿತ ರಾಜ್ಯ ಸಾರಿಗೆ ಸಂಸ್ಥೆಯ ಚಾಲಕ ಕಂ ನಿರ್ವಾಹಕ ಮಹೇಶ್ ಅಂಗಡಿ, ಶಿವರಾಜ್ ಟಿ., ಉಮೇಶ್, ಮಹದೇವಪ್ಪ ಅವರಿಗೆ ಸುರಕ್ಷಾ ಚಾಲಕ ಎಂಬ ಬಿರುದು ನೀಡಿ ಬೆಳ್ಳಿ ಪದಕದ ಜೊತೆಗೆ 30 ಸಾವಿರ ರೂ.ಗಳ ನಗದು ಬಹುಮಾನ ನೀಡಿ ಪುರಸ್ಕರಿಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ
Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ
Tumkur: ತುಮಕೂರಲ್ಲಿ ದಲಿತ ಮಹಿಳೆ ಹ*ತ್ಯೆ: 21 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ
Road Mishap: ಚಲಿಸುತ್ತಿದ್ದ ಲಾರಿಗೆ ಕಾರು ಢಿಕ್ಕಿ: ತಂದೆ-ಮಗು ಸ್ಥಳದಲ್ಲೇ ಸಾವು
Maharashtra ಸರಕಾರ ವಿರುದ್ಧ ಮಾನನಷ್ಟ ಕೇಸ್: ಸಚಿವ ಡಾ| ಜಿ. ಪರಮೇಶ್ವರ್
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Mangaluru: ಪಿ.ಎಂ. ರಾವ್ ರಸ್ತೆಯಲ್ಲಿ ಮತ್ತೆ ಎಲ್ಲೆಂದರಲ್ಲಿ ವಾಹನ ನಿಲುಗಡೆ
Thirthahalli: ತುಂಗಾ ಕಮಾನು ಸೇತುವೆ ಬಳಿ ಪತ್ತೆಯಾಗಿದ್ದ ಅಸ್ತಿ ಪಂಜರ ತಂದು ಹಾಕಿದ್ಯಾರು!!?
IPL: ಗೊಂದಲದಲ್ಲಿ ಮರಿ ಸೆಹ್ವಾಗ್ ನನ್ನು ಖರೀದಿಸಿದ ಆರ್ ಸಿಬಿ; ಯಾರು ಈ ಸ್ವಸ್ತಿಕ್ ಚಿಕಾರ
Kundapura: ರಾಷ್ಟ್ರೀಯ ಹೆದ್ದಾರಿಯ ಅರಾಟೆ ಹಳೆ ಸೇತುವೆಯಲ್ಲಿ ಸಂಚಾರ ಸ್ಥಗಿತ
Essar Group: ಎಸ್ಸಾರ್ ಗ್ರೂಪ್ ನ ಸಹ ಸಂಸ್ಥಾಪಕ ಶಶಿ ರುಯಿಯಾ ನಿಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.