ಮುಂಬಯಿ ದೇವಾಡಿಗ ಸಂಘದ  54ನೇ ಕ್ರೀಡಾ ಮಹೋತ್ಸವ


Team Udayavani, Jan 27, 2019, 3:39 PM IST

2401mum13.jpg

ಮುಂಬಯಿ: ದೇವಾಡಿಗ ಸಂಘ ಮುಂಬಯಿ ಇದರ  54 ನೇ ಕ್ರೀಡಾಕೂಟವು ಜ. 13 ರಂದು ಸೋಮಯ್ಯ ಫುಟ್ಬಾಲ್‌ ಕ್ರೀಡಾಂಗಣದಲ್ಲಿ ವೈವಿಧ್ಯಮಯ ಕ್ರೀಡಾಸ್ಪರ್ಧೆಗಳೊಂದಿಗೆ ನಡೆಯಿತು.

ಬೆಳಗ್ಗೆ 9ರಿಂದ  ಕ್ರೀಡಾಕೂಟವನ್ನು ಸಂಘದ ಉಪಾಧ್ಯಕ್ಷರಾದ  ಸುರೇಶ್‌ ಎಸ್‌. ರಾವ್‌ ಉದ್ಘಾಟಿಸಿದರು.  ಕ್ರೀಡೋತ್ಸವದ ಪ್ರಮುಖ ಪ್ರಾಯೋಜಕತ್ವವನ್ನು  ರಿಲಾಯನ್ಸ್‌ ಗ್ರೂಪ್‌ನ ಉಪಾಧ್ಯಕ್ಷರಾದ ವಿಶ್ವಾಸ್‌ ಅತ್ತಾವರ ಅವರ ನೇತೃತ್ವದಲ್ಲಿ ರಿಲಾಯನ್ಸ್‌ ಗ್ರೂಪ್‌ ವಹಿಸಿಕೊಂಡಿತ್ತು.  ಸೀತಾ ಬುಕ್ಸ್‌ ಆ್ಯಂಡ್‌ ಪಬ್ಲಿಷರ್ಸ್‌ ಮುಖ್ಯಸ್ಥ  ಸುರೇಶ್‌ ರಾವ್‌ ಇವರು ಪ್ರಾಯೋಜಕರಾಗಿ ಸಹಕರಿಸಿದರು. ಸಮಾಜದ 3 ವರ್ಷದಿಂದ 60 ವರ್ಷ ಮತ್ತು 60 ವರ್ಷ ಮೇಲ್ಪಟ್ಟವರಿಗೂ ಸ್ಪರ್ದೆಗಳನ್ನು ಆಯೋಜಿಸಲಾಗಿತ್ತು. ಉದ್ದ ಜಿಗಿತ, ಗುಂಡೆಸೆತ, ರನ್ನಿಂಗ್‌,  ಬಾಲ್‌ ಎಸೆತ, ವೇಗದ ನಡಿಗೆ ಸ್ಪರ್ದೆ,  ಹಗ್ಗಜಗ್ಗಾಟ,   ರಿಲೆ ಓಟ, ಚಾಕ್ಲೆಟ್‌ ಪಿಕ್ಕಿಂಗ್‌,  ಬಾಲ್‌ ಕಲೆಕ್ಟಿಂಗ್‌  ಓಟ  ಸ್ಪರ್ದೆಗಳನ್ನು ಆಯೋಜಿಸಲಾಗಿತ್ತು.

ಕ್ರೀಡಾ ಆಯೋಜನೆಯ ಯಶಸ್ವಿಗಾಗಿ ಸಂಘದ ಕ್ರೀಡಾ ಕಾರ್ಯಾದ್ಯಕ್ಷೆ ಜಯಂತಿ ದೇವಾಡಿಗರು ಹಾಗೂ ಅವರ ತಂಡದವರಾದ ಸುರೇಶ್‌ ದೇವಾಡಿಗ, ಮೋಹನ್‌ ದಾಸ್‌ ಗುಜರನ್‌, ನಿತೇಶ್‌ ದೇವಾಡಿಗರು ಶ್ರಮಿಸಿದರು. 

ಸಂಘದ ನಿಕಟ ಪೂರ್ವ ಅಧ್ಯಕ್ಷರಾದ    ಕೆ. ಕೆ. ಮೋಹನ್‌ದಾಸ್‌, ಗೋಪಾಲ್‌ ಮೊಲಿ, ಹಿರಿಯಡ್ಕ ಮೋಹನ್‌ದಾಸ್‌, ವಾಸು ಎಸ್‌. ದೇವಾಡಿಗ, ಶ್ರೀನಿವಾಸ್‌ ಪಿ. ಕರ್ಮರನ್‌, ಗೌರವ ಕಾರ್ಯದರ್ಶಿ  ವಿಶ್ವನಾಥ್‌  ಬಿ. ದೇವಾಡಿಗ,  ಜೊತೆ ಕಾರ್ಯದರ್ಶಿಗಳಾದ ಮಾಲತಿ ಜೆ. ಮೊಲಿ, ಗಣೇಶ್‌ ಶೇರಿಗಾರ್‌,  ಕೋಶಾಧಿಕಾರಿಗಳಾದ ದಯಾನಂದ್‌ ದೇವಾಡಿಗ, ಪ್ರಶಾಂತ್‌ ಮೊಲಿ, ಸಾಂಸ್ಕೃತಿಕ ವಿಭಾಗದ ಅಧ್ಯಕ್ಷರಾದ  ಜನಾರ್ದನ ದೇವಾಡಿಗ, ಶಿಕ್ಷಣ ವಿಭಾಗದ ಅಧ್ಯಕ್ಷರಾದ ಕೃಷ್ಣ ದೇವಾಡಿಗ, ಮಹಿಳಾ ಕಾರ್ಯದಕ್ಷೆ ಜಯಂತಿ ಮೊಲಿ, ಉಪ ಕಾರ್ಯದಕ್ಷೆಯಾರಾದ ರಂಜಿನಿ ಮೊಯಿಲಿ, ಸುರೇಖಾ ದೇವಾಡಿಗ, ಕಾರ್ಯದರ್ಶಿ  ಪೂರ್ಣಿಮಾ ದೇವಾಡಿಗ, ಜೊತೆ ಕಾರ್ಯದರ್ಶಿ ಪ್ರಮೀಳಾ ಶೇರಿಗಾರ್‌ ಹಾಗೂ ಪ್ರವೀಣ್‌ ನಾರಾಯಣ, ಲತಾ ಶೇರಿಗಾರ್‌, ಪ್ರಫುಲ್ಲಾ ವಿ. ದೇವಾಡಿಗ, ಡಾ| ರೇಖಾ ದೇವಾಡಿಗ ಉಪಸ್ಥಿತರಿದ್ದರು.

ಹತ್ತು ಪ್ರಾದೇಶಿಕ ಸಮಿತಿಗಳು ಭಾಗವಹಿಸಿದ ಕ್ರೀಡೋತ್ಸವದಲ್ಲಿ ಡೊಂಬಿವಿಲಿ ಪ್ರಾದೇಶಿಕ ಸಮಿತಿಯು ಅತ್ಯುತಮ ತಂಡ ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡಿತು. ಹಗ್ಗ ಜಗ್ಗಾಟದಲ್ಲಿ ಪ್ರಥಮ ಸ್ಥಾನವನ್ನು ನವಿ ಮುಂಬಯಿ ಪ್ರಾದೇಶಿಕ ಸಮನ್ವಯ ಸಮಿತಿ ಪಡೆದುಕೊಂಡರೆ, ದ್ವಿತೀಯ ಸ್ಥಾನವನ್ನು ನಗರ ವಲಯ ಪ್ರಾದೇಶಿಕ ಸಮನ್ವಯ ಸಮಿತಿ ಪಡೆದುಕೊಂಡಿತು.  ರಿಲೆ ಓಟದಲ್ಲಿ ಪ್ರಥಮ ಸ್ಥಾನವನ್ನು ಡೊಂಬಿವಿಲಿ ಪ್ರಾದೆಶಿಕ ಸಮನ್ವಯ ಸಮಿತಿ ಪಡೆದುಕೊಂಡರೆ, ದ್ವಿತಿಯ ಸ್ಥಾನವನ್ನು ನಗರ ವಲಯ  ಪ್ರಾದೆಶಿಕ ಸಮನ್ವಯ ಸಮಿತಿ ಪಡೆದುಕೊಂಡಿತು.

ಕ್ರೀಡಾ ಉದ್ಘೋಷಕರಾಗಿ ಗಿರೀಶ್‌ ದೇವಾಡಿಗ, ಡಾ| ರೇಖಾ ದೇವಾಡಿಗ ಮತ್ತು  ಸತೀಶ್‌ ಕಣ್ವತೀರ್ಥ ಇವರು ನೆರವೇರಿಸಿದರು.   ಸಂಘದ ಸದ್ಯಸರಾದ ಅಶೋಕ ದೇವಾಡಿಗ,  ಸತೀಶ್‌ ಮೊಯಿಲಿ, ವನಿತಾ ದೇವಾಡಿಗ, ಭಾಸ್ಕರ ದೇವಾಡಿಗ,  ಹರೀಶ್‌ ದೇವಾಡಿಗ ಡೊಂಬಿವಿಲಿ, ಹರೀಶ್‌ ದೇವಾಡಿಗ ಅಸಲ#, ರೋಶನ್‌ ದೇವಾಡಿಗ, ರೋಹಿತ್‌ ದೇವಾಡಿಗ, ರಘು ಮೊಯಿಲಿ, ವಿಜಯ್‌ ದೇವಾಡಿಗ, ಹೇಮಲತಾ ದೇವಾಡಿಗ, ಗಣೇಶ್‌ ದೇವಾಡಿಗ, ಸುರೇಖಾ ದೇವಾಡಿಗ, ಹೇಮನಾಥ್‌ ದೇವಾಡಿಗ ಇವರು ತೀರ್ಪುಗಾರರಾಗಿ ಸಹಕರಿಸಿದರು.
ಸಮಾರೋಪ ಸಮಾರಂಭವನ್ನು ಸಂಘದ ಗೌರವ ಕಾರ್ಯದರ್ಶಿ  ವಿಶ್ವನಾಥ್‌ ಬಿ. ದೇವಾಡಿಗ, ಕ್ರೀಡಾ ಕಾರ್ಯಾಧ್ಯಕ್ಷೆ ಜಯಂತಿ ದೇವಾಡಿಗ, ಉಪಾಕಾರ್ಯಾಧ್ಯಕ್ಷ ಸುರೇಶ್‌ ದೇವಾಡಿಗ, ಕಾರ್ಯದರ್ಶಿ ಮೋಹನ್‌ದಾಸ್‌ ಗುಜರನ್‌, ಉಪಕಾರ್ಯದರ್ಶಿ ನಿತೇಶ್‌ ದೇವಾಡಿಗ ಮತ್ತು ಅಕ್ಷಯ ದೇವಾಡಿಗರು ನೆರವೇರಿಸಿದರು. ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

ವೈಯಕ್ತಿಕ ಚಾಂಪಿಯನ್‌ ಆಗಿ 16 ವರ್ಷದ ಕೆಳಗಿನ  ಹುಡುಗರ ವಿಭಾಗದಲ್ಲಿ ದೀವೆಶ್‌ ದೇವಾಡಿಗ ಹಾಗೂ ಹುಡುಗಿಯರ ವಿಭಾಗದಲ್ಲಿ ಭೂಮಿಕಾ ದೇವಾಡಿಗ,  22 ವರ್ಷದ ಕೆಳಗಿನ  ಹುಡುಗರ ವಿಭಾಗದಲ್ಲಿ ವಿಶಾಲ್‌ ದೇವಾಡಿಗ ಹಾಗೂ ಹುಡುಗಿಯರ ವಿಭಾಗದಲ್ಲಿ ಹರ್ಷ  ದೇವಾಡಿಗ, 30 ವರ್ಷದ ಕೆಳಗಿನ  ಹುಡುಗರ ವಿಭಾಗದಲ್ಲಿ ಆತಿಶ್‌ ಶೇರಿಗಾರ್‌ ಹಾಗೂ ಹುಡುಗಿಯರ ವಿಭಾಗದಲ್ಲಿ ಸ್ವಾತಿ ಎಸ್‌. ದೇವಾಡಿಗ ಮತ್ತು 40 ವರ್ಷದ ಕೆಳಗಿನ  ಹುಡುಗರ ವಿಭಾಗದಲ್ಲಿ ಕಿರಣ್‌ ಆರ್‌. ದೇವಾಡಿಗ ಹಾಗೂ ಹುಡುಗಿಯರ ವಿಭಾಗದಲ್ಲಿ ಸುಲೋಚನಾ ಶೇರಿಗಾರ್‌ ಪಡೆದುಕೊಂಡರು.

ಟಾಪ್ ನ್ಯೂಸ್

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕರ್ನಾಟಕ ಸಂಘ ಕತಾರ್‌: ಮಹಿಳಾ ಮತ್ತು ಮಕ್ಕಳ ಪ್ರತಿಭಾನ್ವೇಷಣೆ-2025

ಕರ್ನಾಟಕ ಸಂಘ ಕತಾರ್‌: ಮಹಿಳಾ ಮತ್ತು ಮಕ್ಕಳ ಪ್ರತಿಭಾನ್ವೇಷಣೆ-2025

ಮನದ ಮಾತು ಎಂದರೇನು:ಅರಿವಿರುವುದು ಗೋಚರ, ಅರಿವಿಲ್ಲದ್ದು ಅಗೋಚರ!

ಮನದ ಮಾತು ಎಂದರೇನು:ಅರಿವಿರುವುದು ಗೋಚರ, ಅರಿವಿಲ್ಲದ್ದು ಅಗೋಚರ!

ಈ ಬಾರಿ ಫ್ಲೋರಿಡಾದ ಲೇಕ್‌ಲ್ಯಾಂಡ್‌ನ‌ಲ್ಲಿ ನಾವಿಕೋತ್ಸವ

ಈ ಬಾರಿ ಫ್ಲೋರಿಡಾದ ಲೇಕ್‌ಲ್ಯಾಂಡ್‌ನ‌ಲ್ಲಿ ನಾವಿಕೋತ್ಸವ

Desi Swara: ವಿಮಾನ ಪ್ರಯಾಣಗಳಲ್ಲಿ ನವರಸಾನುಭವಗಳು ಮತ್ತು ಫ‌ಜೀತಿಯ ಕ್ಷಣ!!

Desi Swara: ವಿಮಾನ ಪ್ರಯಾಣಗಳಲ್ಲಿ ನವರಸಾನುಭವಗಳು ಮತ್ತು ಫ‌ಜೀತಿಯ ಕ್ಷಣ!!

ಲಂಡನ್‌: ವಿಶ್ವದಲ್ಲೇ ಪ್ರಥಮ ಬಾರಿಗೆ “ಪುರಂದರ ನಮನ’

ಲಂಡನ್‌: ವಿಶ್ವದಲ್ಲೇ ಪ್ರಥಮ ಬಾರಿಗೆ “ಪುರಂದರ ನಮನ’

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

accident

Kaup: ಸ್ಕೂಟಿ, ಕಾರಿಗೆ ಬಸ್‌ ಢಿಕ್ಕಿ; ಸವಾರನಿಗೆ ಗಾಯ

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

16

Pro Hockey: ಇಂಗ್ಲೆಂಡ್‌ ವಿರುದ್ಧ ಭಾರತ ವನಿತೆಯರಿಗೆ ಸೋಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.