ಫೆಡ್ ಕಪ್‌ನಿಂದ ಹಿಂದೆ ಸರಿದ ಪೆಟ್ರಾ ಕ್ವಿಟೋವಾ
Team Udayavani, Jan 28, 2019, 12:55 AM IST
ಮೆಲ್ಬರ್ನ್: ಆಸ್ಟ್ರೇಲಿಯನ್ ಓಪನ್ ಫೈನಲ್ ಸೋಲಿನ ಬೆನ್ನಲ್ಲೇ ಜೆಕ್ ಆಟಗಾರ್ತಿ ಪೆಟ್ರಾ ಕ್ವಿಟೋವಾ “ಫೆಡ್ ಕಪ್’ ಪಂದ್ಯಾವಳಿಯಿಂದ ಹಿಂದೆ ಸರಿಯಲು ನಿರ್ಧರಿಸಿದ್ದಾರೆ. ಇದನ್ನು ಅವರ ಮ್ಯಾನೇಜರ್ ಮಿರೋಸ್ಲಾವ್ ಸೆನೊìಸೆಕ್ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಜೆಕ್ ಮತ್ತು ರೊಮೇನಿಯಾ ನಡುವಿನ ಈ ಸ್ಪರ್ಧೆ ಫೆ. 9 ಮತ್ತು 10ರಂದು ನಡೆಯಲಿದೆ.
“ಕ್ವಿಟೋವಾ ವಿಶ್ರಾಂತಿ ಕಾರಣಕ್ಕಾಗಿ ಇಂಥದೊಂದು ನಿರ್ಧಾರಕ್ಕೆ ಬಂದಿದ್ದಾರೆ. ಅವರು ಆಡಲೇಬೇಕೆಂದು ನಾನು ಅಥವಾ ನಾಯಕ ಪೆಟ್ರ ಪಲಾ ಅವರಾಗಲೀ ಒತ್ತಯಿಸುವುದಿಲ್ಲ’ ಎಂದು ಸೆನೊìಸೆಕ್ ಹೇಳಿದ್ದಾರೆ.
2011 ಮತ್ತು 2014ರಲ್ಲಿ ವಿಂಬಲ್ಡನ್ ಪ್ರಶಸ್ತಿ ಜಯಿಸಿದ 28ರ ಹರೆಯದ ಪೆಟ್ರಾ ಕ್ವಿಟೋವಾ ಶನಿವಾರದ ಆಸ್ಟ್ರೇಲಿಯನ್ ಓಪನ್ ಫೈನಲ್‌ನಲ್ಲಿ ಜಪಾನಿನ ನವೋಮಿ ಒಸಾಕಾಗೆ ಶರಣಾಗಿದ್ದರು. ಸೋಮವಾರ ಪ್ರಕಟಗೊಳ್ಳಲಿರುವ ನೂತನ ರ್‍ಯಾಂಕಿಂಗ್‌ನಲ್ಲಿ ದ್ವಿತೀಯ ಸ್ಥಾನಕ್ಕೆ ಏರಲಿದ್ದಾರೆ. ಚಾಂಪಿಯನ್ ಒಸಾಕಾ ನಂ.1 ಆಗಿ ಹೊರಹೊಮ್ಮಲಿದ್ದಾರೆ. ಅವರು ಈ ಎತ್ತರಕ್ಕೇರಿದ ಜಪಾನಿನ ಮೊದಲ ಆಟಗಾರ್ತಿ ಎಂಬುದು ಉಲ್ಲೇಖನೀಯ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Karnataka Bypoll Results:ಮೂರು ಕ್ಷೇತ್ರಗಳಲ್ಲೂ “ಕೈ” ಮೇಲುಗೈ, ಬಿಜೆಪಿ ಮೈತ್ರಿಗೆ ಮುಖಭಂಗ
ಸಹಕಾರ ಭಾರತಿ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಸಾಣೂರು ನರಸಿಂಹ ಕಾಮತ್ ಆಯ್ಕೆ
ಶೋರೂಮ್ ನಿಂದ ಕದ್ದು ಬಾಂಗ್ಲಾದೇಶಕ್ಕೆ ಕಳ್ಳಸಾಗಣೆ ಮಾಡುತ್ತಿದ್ದ 2 ಕೋಟಿ ಮೌಲ್ಯದ ಐಫೋನ್ ವಶ
Panaji: ಮಣಿರತ್ನಂರ ಕ್ಯಾಮೆರಾ ಕಣ್ಣು ಹಂಪಿ ಕಡೆಗೆ ?
Bengaluru: ಬಸ್‌ಗಳಲ್ಲಿ ಮೊಬೈಲ್ ಕಳ್ಳತನ: ಇಬ್ಬರು ಆರೋಪಿಗಳ ಸೆರೆ, 60 ಫೋನ್ ಜಪ್ತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.