ಚರಂಡಿಯಲ್ಲಿ ಡ್ರೈನೇಜ್ ನೀರು!
Team Udayavani, Jan 28, 2019, 12:50 AM IST
ಉಡುಪಿ: ಬಸ್ ನಿಲ್ದಾಣದ ಡ್ರೈನೇಜ್ ನೀರಿನ ಸಮಸ್ಯೆಯಿಂದಾಗಿ ಇಲ್ಲಿನ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದು, ರೋಗ ಭೀತಿ ಅವರನ್ನು ಕಾಡುತ್ತಿದೆ.
ಡ್ರೈನೇಜ್ ನೀರು ಇಲ್ಲಿನ ಖಾಸಗಿ ಬಸ್ ನಿಲ್ದಾಣದಿಂದ ಹಾದು ಬೋರ್ಡ್ ಸ್ಕೂಲ್‌ನ ಮುಂಭಾಗದಿಂದ ಕಿದಿಯೂರು ಹೋಟೆಲ್ ಮಾರ್ಗವಾಗಿ ಮಳೆನೀರು ಹರಿಯುವ ಚರಂಡಿಯಲ್ಲಿ ಸಾಗಿ, ಶಿರಿಬೀಡು ಇಷ್ಟಸಿದ್ದಿವಿನಾಯಕ ದೇವಸ್ಥಾನದವರೆಗೂ ಹರಿಯುತ್ತದೆ. ಕೆಲವೆಡೆ ಚರಂಡಿ ತೆರೆದುಕೊಂಡಿದ್ದು, ಗಬ್ಬುವಾಸನೆ ಹರಡಿಕೊಂಡಿದೆ.
ಸ್ಥಳೀಯರಿಗೆ ತೊಂದರೆ
ಈ ಚರಂಡಿ ನೀರಿನಿಂದಾಗಿ ಸುತ್ತಮುತ್ತಲಿನ 200ರಿಂದ 250 ಮನೆಗಳಿಗೆ ತೊಂದರೆಯಾಗಿದೆ ಎಂದು ಸ್ಥಳೀಯರಾದ ಸುರೇಶ್ ಶೇರಿಗಾರ್ ಅವರು ಆರೊಪಿಸಿದ್ದಾರೆ. ಈ ಹಿಂದೆ ರಾತ್ರಿ ಹೊತ್ತು ಡ್ರೈನೇಜ್ ನೀರನ್ನು ಬಿಡುತ್ತಿದ್ದರು. ಆದರೆ ಈಗ ಹಗಲಿನಲ್ಲಿಯೇ ನೀರು ಬಿಡುತ್ತಿದ್ದು, ವಾಸನೆ ಹರಡುತ್ತಿದೆ.
ಈ ಬಗ್ಗೆ ಕೆಲ ತಿಂಗಳ ಹಿಂದೆ ನಗರಸಭೆಗೆ ದೂರು ನೀಡಿದ್ದರೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂಬುದು ಸ್ಥಳೀಯರ ಆರೋಪ. ಅನೇಕ ಬಾರಿ ಪುರಸಭೆಯ ಗಮನಕ್ಕೆ ತಂದಿದ್ದರೂ ಸಮಸ್ಯೆ ಇನ್ನೂ ಬಗೆಹರಿದಿಲ್ಲ. ಸಮಸ್ಯೆ ಶೀಘ್ರವಾಗಿ ಬಗೆಹರಿಯದಿದ್ದರೆ ಪ್ರತಿಭಟನೆ ನಡೆಸಲಾಗುವುದು ಎಂದು ಶಿರಿಬೀಡು-ಬನ್ನಂಜೆ ನಿವಾಸಿಗಳು ತಿಳಿಸಿದ್ದಾರೆ.
ಈ ಹಿಂದೆ ಈ ಡ್ರೈನೇಜ್ ನೀರು ಮಠದಬೆಟ್ಟು ಕಡೆಗೆ ಹರಿಯುತ್ತಿತ್ತು. ಅಲ್ಲಿನವರು ಇದನ್ನು ವಿರೋಧಿಸಿದಾಗ ಚರಂಡಿಯನ್ನು ಬ್ಲಾಕ್ ಮಾಡಲಾಯಿತು ಎಂದು ಹೇಳುತ್ತಾರೆ ಸ್ಥಳೀಯರಾದ ಮಹೇಶ್ ಪೂಜಾರಿ ಅವರು.
ಬಾವಿಗಳೂ ಕಲುಷಿತ
ಈ ಪ್ರದೇಶದಲ್ಲಿ ಒಳಚರಂಡಿಯ ತ್ಯಾಜ್ಯ ನೀರಿನ ಹರಿವಿಗೆ ವೈಜ್ಞಾನಿಕವಾದ ಸೂಕ್ತ ವ್ಯವಸ್ಥೆಯೇ ಇಲ್ಲ. ತೆರೆದ ಚರಂಡಿಯಲ್ಲಿಯೇ ತ್ಯಾಜ್ಯದ ನೀರು ಹರಿದು ಸುತ್ತಮುತ್ತಲ ಪ್ರದೇಶದಲ್ಲಿ ದುರ್ನಾತ ಬೀರಿ, ವಾತಾವರಣ ಹದಗೆಟ್ಟಿದೆ. ಪರಿಸರದಲ್ಲಿದ್ದ ಬಹುತೇಕ ಬಾವಿಗಳ ನೀರು ಕಲುಷಿತಗೊಂಡಿದೆ.
– ಮಹೇಶ ಪೂಜಾರಿ, ಬನ್ನಂಜೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Manipal: ನಿತ್ಯ ಅಪಘಾತ ತಾಣವಾದ ಈಶ್ವರ ನಗರ-ಪರ್ಕಳ ರಸ್ತೆ
Karkala: ತಿಂಗಳ ಹಿಂದೆ ಮೃತಪಟ್ಟ ಪತಿ, ಮನನೊಂದು ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ
Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿ ವಿದ್ಯುತ್ ಆಘಾತದಿಂದ ಮೃ*ತ್ಯು
Udupi: ಮೀನುಗಾರರಿಗೆ ಎನ್‌ಎಫ್ಡಿಪಿ ಪೋರ್ಟಲ್‌ನಲ್ಲಿ ಶುಲ್ಕರಹಿತ ನೋಂದಣಿ
ಏಕನಿವೇಶನ ನಕ್ಷೆ ಅನುಮೋದನೆ ಅಧಿಕಾರ ಗ್ರಾಮ ಪಂಚಾಯತ್‌ಗೆ ನೀಡಲು ಸಿಎಂಗೆ ಸಂಸದ ಕೋಟ ಪತ್ರ
MUST WATCH
ಹೊಸ ಸೇರ್ಪಡೆ
Shimoga: ಎಸ್ಐಟಿ ರಚನೆ ಮೂಲಕ ಕಾಂಗ್ರೆಸ್ ಹಗೆ ತೀರಿಸಿಕೊಳ್ಳುತ್ತಿದೆ: ಆರಗ ಜ್ಞಾನೇಂದ್ರ
Organ Donation: ಸಾವಿನ ನಂತರವೂ ನೆರವಾದ ಜೀವ
Anandapura: ಸಾಲದ ಬಾಧೆ ತಾಳಲಾರದೆ ರೈತ ಆತ್ಮಹ*ತ್ಯೆ
Maharashtra Election: ಅಮಿತ್ ಶಾ ಅವರ ಬ್ಯಾಗ್ ಪರೀಕ್ಷಿಸಿದ ಚುನಾವಣಾ ಅಧಿಕಾರಿಗಳು
Bengaluru: ವೈದ್ಯೆಗೆ ಲೈಂಗಿಕ ಕಿರುಕುಳ: ಪಿಎಸ್‌ಐ ವಿರುದ್ದ ಪೊಲೀಸ್ ಆಯುಕ್ತರಿಗೆ ದೂರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.