ಐತಿಹಾಸಿಕ ಬಾರಕೂರು ಆಳುಪೋತ್ಸವಕ್ಕೆ ತೆರೆ
Team Udayavani, Jan 28, 2019, 12:50 AM IST
ಬ್ರಹ್ಮಾವರ: ಪಾರಂಪರಿಕ ನಗರ ಬಾರಕೂರಿನಲ್ಲಿ ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ತೋಟಗಾರಿಕಾ ಇಲಾಖೆಯ ಸಹಯೋಗದಲ್ಲಿ ಮೂರು ದಿನಗಳ ಕಾಲ ನಡೆದ ಆಳುಪೋತ್ಸವ ರವಿವಾರ ತೆರೆ ಕಂಡಿತು.
ರಾಜರ ಆಳ್ವಿಕೆ ಸಂದರ್ಭ ವೈಭವದ ದಿನಗಳನ್ನು ಕಂಡ, 365 ದೇವಸ್ಥಾನಗಳ ಐತಿಹಾಸಿಕ ನಗರ, ತುಳುನಾಡ ರಾಜಧಾನಿ ಬಾರಕೂರಿನಲ್ಲಿ ಪ್ರಥಮ ಬಾರಿಗೆ ಆಯೋಜಿಸಲಾದ ಆಳುಪೋತ್ಸವದಲ್ಲಿ ಸಾವಿರಾರು ಮಂದಿ ಪಾಲ್ಗೊಂಡರು.
ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ, ಫಲಪುಷ್ಪ ಪ್ರದರ್ಶನ, ರಾಜ-ರಾಣಿ ಕಲ್ಯಾಣಿ, ಕುದುರೆ ಲಾಯ, ಮಾಸ್ತಿಕಲ್ಲು ಹಾಗೂ ವೀರಗಲ್ಲುಗಳು ಜನರ ವಿಶೇಷ ಆಕರ್ಷಣೆಯಾಗಿದ್ದವು. ಕತ್ತಲೆ ಬಸದಿ ದೀಪಾಲಂಕಾರ ಮನಸೂರೆಗೊಂಡಿತು.
ವಿಚಾರ ಸಂಕಿರಣ
ರವಿವಾರ ಬಾರಕೂರು ಶ್ರೀಮತಿ ರುಕ್ಮಿಣಿ ಶೆಡ್ತಿ ಸ್ಮಾರಕ ನ್ಯಾಶನಲ್ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಳುಪರ ಕುರಿತು ವಿಚಾರ ಸಂಕಿರಣ ನಡೆಯಿತು. ಸಂಜೆ ಬಾಕೂìರು ಸಂಸ್ಥಾನದಲ್ಲಿ ಯಕ್ಷಗಾನದ ಧೀಮಂತ ಕಲಾವಿದರ ಕೊಡುವಿಕೆಯಿಂದ ಮಹಾದೈವ ಮಹಿಸಂದಾಯ ಕಥಾನಕ ಜರಗಿತು.
ಗಂಗಾರತಿ
ಶ್ರೀ ಸೋಮೇಶ್ವರ ಸ್ವಾಮಿಯ ಪುರಮೆರವಣಿಗೆ ಅನಂತರ ಮೂಡುಕೇರಿ ಪುಷ್ಕರಿಣಿಯಲ್ಲಿ ಮನ ಮೋಹಕ ಗಂಗಾ ಆರತಿ ನಡೆಯಿತು.
ಕಾರ್ಯಕ್ರಮ ವೈವಿಧ್ಯ
ಮುಖ್ಯ ವೇದಿಕೆಯಲ್ಲಿ ಸರ್ವ ಮಹಿಳಾ ಸಂಗೀತ ತಂಡದವರಿಂದ ಘಲ್-ಝಲ್, ಕೊರಗರ ಸಂಗೀತ ನಾವೀನ್ಯ, ಆಳುಪ-ಬಾಕೂìರು ಗತ ವೈಭವದ ನೃತ್ಯ ರೂಪಕ ಜರಗಿತು. ಉಪ ವೇದಿಕೆಯಲ್ಲಿ ರಾಘವೇಂದ್ರ ಜನ್ಸಾಲೆ ತಂಡದಿಂದ ಯಕ್ಷ-ಗಾನ-ವೈಭವ ಜುಗಲ್‌ಬಂದಿ, ಕಾಳಿಂಗ ರಾವ್ ಪ್ರತಿಷ್ಠಾನದವರಿಂದ ಭಾವ ಬೆಳದಿಂಗಳ ಗೀತಗಾಯನ ನಡೆಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Naxal Vikram Gowda: ನೆಟ್ಟಣದಿಂದ ಮುರ್ಡೇಶ್ವರಕ್ಕೆ ರೈಲಿನಲ್ಲಿ ಪ್ರಯಾಣಿಸಿದ್ದ ನಕ್ಸಲರು!
Karkala: ಬೋಳ ಗ್ರಾಮದ ವ್ಯಕ್ತಿ ಆತ್ಮಹತ್ಯೆ
Udupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚ
Udupi: ಆರೆಸ್ಸೆಸ್ ಹಿರಿಯ ಪ್ರಚಾರಕ್ ಭಯ್ಯಾಜಿ ಜೋಷಿ ಶ್ರೀಕೃಷ್ಣಮಠಕ್ಕೆ ಭೇಟಿ
Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ
MUST WATCH
ಹೊಸ ಸೇರ್ಪಡೆ
Election Results: ಮಹಾರಾಷ್ಟ್ರ, ಝಾರ್ಖಂಡ್ ನಲ್ಲಿ ಮತ ಎಣಿಕೆ ಪ್ರಕ್ರಿಯೆ ಆರಂಭ
ಉಪ ಚುನಾವಣಾ ಫಲಿತಾಂಶ: ಸಂಡೂರು, ಚನ್ನಪಟ್ಟಣ, ಶಿಗ್ಗಾಂವಿ ಕ್ಷೇತ್ರಗಳ ಮತ ಎಣಿಕೆ ಆರಂಭ
BJP Internal Politics: ಬಿಜೆಪಿಯ ಬೇಗುದಿ ಇತ್ಯರ್ಥಕ್ಕೆ ಡಿಸೆಂಬರ್‌ನಲ್ಲಿ ಮುಹೂರ್ತ?
Naxal Vikram Gowda: ನೆಟ್ಟಣದಿಂದ ಮುರ್ಡೇಶ್ವರಕ್ಕೆ ರೈಲಿನಲ್ಲಿ ಪ್ರಯಾಣಿಸಿದ್ದ ನಕ್ಸಲರು!
Vikram Gowda Encounter: ಭೀತಿಗ್ರಸ್ತ ಪೀತಬೈಲು ಪರಿಸರದಲ್ಲಿ ನೀರವ ಮೌನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.