ಕೇಸರಿಬಾತ್ನಲ್ಲಿ ವಿಷ? ಘಟನೆಗೆ ಅನೈತಿಕ ಸಂಬಂಧ ಕಾರಣ ಶಂಕೆ
Team Udayavani, Jan 28, 2019, 12:50 AM IST
ಚಿಕ್ಕಬಳ್ಳಾಪುರ: ಚಿಂತಾಮಣಿಯ ನಾರಸಿಂಹ ಪೇಟೆಯ ಗಂಗಮ್ಮ ಗುಡಿಯಲ್ಲಿ ಪ್ರಸಾದ ತಿಂದು ಇಬ್ಬರು ಮಹಿಳೆಯರ ಸಾವನ್ನಪ್ಪಿರುವ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದ್ದು, ವಿಷ ಪ್ರಸಾದ ವಿತರಣೆಯ ಹಿಂದೆ ಅನೈತಿಕ ಸಂಬಂಧದ ಶಂಕೆ ಮೂಡಿದೆ.
ದೇಗುಲದ ಸನಿಹವೇ ಇದ್ದ ಲೋಕೇಶ್ ಎಂಬ ವ್ಯಕ್ತಿಯೊಬ್ಬ ತನ್ನ ಪ್ರಿಯತಮೆ ಲಕ್ಷ್ಮೀ ಜತೆ ಸೇರಿ ತನ್ನ ಪತ್ನಿಯನ್ನು ಹತ್ಯೆ ಮಾಡಲು ಈ ಸಂಚು ರೂಪಿಸಿ ಕೇಸರಿಬಾತ್ನಲ್ಲಿ ವಿಷವನ್ನು ಹಾಕಿಸಿದ್ದಾನೆ ಎಂಬುದು ಮೇಲ್ನೋಟಕ್ಕೆ ತಿಳಿದುಬಂದಿದೆ. ಅಲ್ಲದೆ ಸಂಚಿನ ಸೂತ್ರಧಾರಿಯಾಗಿದ್ದ ವ್ಯಕ್ತಿಯ ಅತ್ತೆ ಸರಸ್ವತಮ್ಮ ಕೂಡ ಮೃತರಾಗಿರುವುದು ಘಟನೆಗೆ ಮತ್ತಷ್ಟು ಪುಷ್ಠಿ ನೀಡಿದೆ. ತನ್ನ ಪತ್ನಿ ರಾಧಾಳನ್ನು ಹತ್ಯೆ ಮಾಡುವ ಸಲುವಾಗಿ ಕೇಸರಿಬಾತ್ನ ಕೆಲವು ಪೊಟ್ಟಣಗಳಿಗೆ ಮಾತ್ರ ವಿಷ ಹಾಕಿದ್ದು, ಉಳಿದವುಗಳನ್ನು ಹಾಗೆಯೇ ಹಂಚಲಾಗಿದೆ.
ಕಣ್ತಪ್ಪಿ ಒಂದು ವಿಷದ ಪೊಟ್ಟಣ ವಿತರಣೆ ಯಾಗಿದೆ ಎನ್ನಲಾಗಿದೆ. ಇದನ್ನು ತಿಂದು ಇಬ್ಬರು ಸಾವನ್ನಪ್ಪಿದ್ದಾರೆ. ಈ ಮಧ್ಯೆ, ವಿಷ ಪ್ರಸಾದ ಹಂಚಿಕೆ ಮಾಡಿದ್ದ ಲಕ್ಷ್ಮೀ ಹಾಗೂ ಆಕೆಯ ಸ್ನೇಹಿತೆ ಅಮರಾವತಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಅಕ್ರಮ ಸಂಬಂಧದ ಶಂಕೆ
ನಿಟ್ಟಿನಲ್ಲೂ ತನಿಖೆ ನಡೆಸುತ್ತೇವೆ ಎಂದು ಜಿಲ್ಲಾ ಎಸ್ಪಿ ಕಾರ್ತಿಕ್ ರೆಡ್ಡಿ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Congress; ನಾನು ಸಚಿವ ಸ್ಥಾನದ ಆಕಾಂಕ್ಷಿ ಅಲ್ಲ: ಯತೀಂದ್ರ ಸಿದ್ದರಾಮಯ್ಯ
Temperature; ಮುಂದಿನ 20 ವರ್ಷ ಮಳೆ ಜಾಸ್ತಿ, ಉಷ್ಣಾಂಶ ಏರಿಕೆ!
Communalization ಜತೆ ಆರೆಸ್ಸೆಸ್ ಆರಂಭ: ಬಿಳಿಮಲೆ ಹೇಳಿದ್ದು ವಿವಾದ
Maharashtra BJP ಗೃಹಲಕ್ಷ್ಮಿ ನಕಲು ಮಾಡಿ ಗೆದ್ದಿದೆ: ಡಿ.ಕೆ.ಶಿವಕುಮಾರ್
New Scheme: ಶೀಘ್ರವೇ ಗೃಹಲಕ್ಷ್ಮೀ ಸಂಘ ಸ್ಥಾಪನೆ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.