ಸೆಟ್‌ಟಾಪ್ ಬಾಕ್ಸ್ ಪೋರ್ಟ್ ಸೌಲಭ್ಯ
Team Udayavani, Jan 28, 2019, 12:50 AM IST
ಹೊಸದಿಲ್ಲಿ: ಕೇಬಲ್ ಆಪರೇಟರ್ ಹಾಗೂ ಡಿಟಿಎಚ್ ಆಪರೇಟರ್‌ಗಳನ್ನು ಬದಲಿಸಿದಾಗ ಸೆಟ್ ಟಾಪ್ ಬಾಕ್ಸ್ ಬದಲಾವಣೆ ಮಾಡಲು ನಿಮಗೆ ಸಾಧ್ಯವಾಗುತ್ತಿಲ್ಲವೇ? ಹಾಗಾದರೆ ಅದಕ್ಕೆ ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ವರ್ಷಾಂತ್ಯಕ್ಕೆ ಪರಿಹಾರ ನೀಡಲಿದೆ. ಅದಕ್ಕಾಗಿ ಅತ್ಯಂತ ನಿರೀಕ್ಷಿತ ಸೆಟ್‌ಟಾಪ್ ಬಾಕ್ಸ್ ಪೋರ್ಟ್ ಸೌಲಭ್ಯವನ್ನೂ ಜಾರಿಗೆ ತರಲಿದೆ.
ಒಮ್ಮೆ ಸೆಟ್ ಟಾಪ್ ಬಾಕ್ಸ್ ಖರೀದಿಸಿದರೆ ಅದನ್ನು ಯಾವುದೇ ಕೇಬಲ್ ಆಪರೇಟರ್ ಅಥವಾ ಡಿಟಿಎಚ್ ಆಪರೇಟರ್ ಜೊತೆ ಬೇಕಾದರೂ ಬಳಸಿಕೊಳ್ಳಬಹುದಾದ ಸೌಲಭ್ಯವನ್ನು ಜಾರಿಗೆ ತರಲು ಚಿಂತನೆ ನಡೆಸುತ್ತಿದ್ದೇವೆ ಎಂದು ಟ್ರಾಯ್ ಅಧ್ಯಕ್ಷ ಆರ್.ಎಸ್.ಶರ್ಮಾ ಹೇಳಿದ್ದಾರೆ. ಸದ್ಯ ಜನರಿಗೆ ಟಿವಿ ಚಾನೆಲ್‌ಗಳ ಆಯ್ಕೆಯಲ್ಲಿ ಇನ್ನಷ್ಟು ಸ್ವಾತಂತ್ರ್ಯ ನೀಡಲು ನೂತನ ನೀತಿ ಜಾರಿಗೊಳಿಸಿರುವ ಟ್ರಾಯ್, ಸದ್ಯ ದೇಶದಲ್ಲಿ 16 ಕೋಟಿ ಕೇಬಲ್ ಹಾಗೂ ಡಿಟಿಎಚ್ ಬಳಕೆದಾರರಿದ್ದಾರೆ. ಈ ಎಲ್ಲ ಎಸ್‌ಟಿಬಿಗಳನ್ನೂ ಕೇವಲ ಒಂದು ಸೇವೆ ಪೂರೈಕೆದಾರರೊಂದಿಗೆ ಮಾತ್ರ ಬಳಸಬೇಕಿದೆ. ಅಂದರೆ ಒಂದು ಕಡೆಯಿಂದ ಇನ್ನೊಂದು ಕಡೆಗೆ ಮನೆ ಬದಲಿಸಿದರೆ, ಅಲ್ಲಿ ಆ ಕೇಬಲ್ ಚಾನೆಲ್‌ನ ಸೇವೆ ಇಲ್ಲದೇ, ಬೇರೆ ಕೇಬಲ್ ಸಂಪರ್ಕ ಪಡೆಯಬೇಕಾದರೆ ಈಗಾಗಲೇ ಖರೀದಿ ಮಾಡಿದ ಸೆಟ್ ಟಾಪ್ ಬಾಕ್ಸ್ ಬದಲಿಗೆ ಇನ್ನೊಂದು ಸೆಟ್ ಟಾಪ್ ಬಾಕ್ಸ್ ಪಡೆಯಬೇಕಿದೆ.
ತಾಂತ್ರಿಕ ಸವಾಲು: ಈ ನೀತಿಯನ್ನು ಜಾರಿಗೊಳಿಸಲು ಡಿಟಿಎಚ್ ಹಾಗೂ ಕೇಬಲ್ ಆಪರೇಟರ್‌ಗಳ ವಲಯದಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಪ್ರತಿ ಎಸ್‌ಟಿಬಿಯೂ ಎನ್‌ಕ್ರಿಪ್ಟ್ ಆಗಿದೆ. ಇದನ್ನು ಉಲ್ಲಂ ಸಲು ಪ್ರಯತ್ನಿಸಿದರೆ ಹಕ್ಕುಸ್ವಾಮ್ಯ ಹಾಗೂ ಪೈರಸಿ ಪ್ರಕರಣಗಳು ಹೆಚ್ಚಬಹುದು ಎಂದು ಎಚ್ಚರಿಕೆ ನೀಡಿವೆ. ಇನ್ನೊಂದೆಡೆ ಪ್ರತಿ ಸೆಟ್ ಟಾಪ್ ಬಾಕ್ಸ್ ಕೂಡ ವಿಭಿನ್ನ ಸಾಫ್ಟ್ವೇರ್ ಮತ್ತು ಕಾನ್ಫಿಗರೇಶನ್ ಹೊಂದಿದೆ. ಹೀಗಾಗಿ ಇದನ್ನು ವಿಭಿನ್ನ ಕಂಪನಿಗಳ ಸೇವೆಗೆ ಬಳಸಲಾಗದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಸಾಫ್ಟ್ವೇರ್ ಪರಿಹಾರ: ತಾಂತ್ರಿಕ ಸಮಸ್ಯೆಗಳನ್ನು ಪರಿಹರಿಸಲು ಸೆಂಟರ್ ಫಾರ್ ಡೆವಲಪ್‌ಮೆಂಟ್ ಆಫ್ ಟೆಲಿಮ್ಯಾಟಿಕ್ಸ್ ಜೊತೆಗೆ ಸಹಭಾಗಿತ್ವ ಸಾಧಿಸಿದ್ದೇವೆ. ಅಲ್ಲದೆ ಇತರ ಸಂಸ್ಥೆಗಳೂ ಇದಕ್ಕೆ ಕೈಜೋಡಿಸಿವೆ. ಈ ಯೋಜನೆ ನಿರೀಕ್ಷಿಸಿದ್ದಕ್ಕಿಂತ ವಿಳಂಬವಾಗಿದ್ದಕ್ಕೆ ಈ ಸವಾಲೇ ಕಾರಣ ಎಂದು ಶರ್ಮಾ ಹೇಳಿದ್ದಾರೆ.
ಒಂದೊಂದು ಸೆಟ್ ಟಾಪ್ ಬಾಕ್ಸ್ ನಲ್ಲೂ ಒಂದೊಂದು ಸಾಫ್ಟ್ವೇರ್ ಇದೆ. ಅವೆಲ್ಲವುಗಳಿಗೂ ಒಂದೇ ಸಾಫ್ಟ್ವೇರ್ ಅಳವಡಿಸುವ ಕುರಿತು ನಾವು ಚಿಂತನೆ ನಡೆಸಿದ್ದೇವೆ. ಈ ಬಗ್ಗೆ ಸದ್ಯ ಪ್ರಯೋಗ ನಡೆಯುತ್ತಿದೆ ಎದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Cyclone Fengal: ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ: ತಮಿಳುನಾಡಲ್ಲಿ 3 ದಿನ ಭಾರೀ ಮಳೆ
Ayodhya: ರಾಮಮಂದಿರ ಪ್ರಾಣಪ್ರತಿಷ್ಠೆ ಸಂಭ್ರಮ ಜ.22ರ ಬದಲು 11ಕ್ಕೆ!
Cyber Fraud: 1 ತಿಂಗಳು ವೃದ್ದೆ ಡಿಜಿಟಲ್ ಅರೆಸ್ಟ್: 3.8 ಕೋಟಿ ಲೂಟಿ ಹೊಡೆದ ಕಳ್ಳರು!
ರಾಹುಲ್ ಬ್ರಿಟನ್ ಪೌರತ್ವದ ಬಗ್ಗೆ ಪರಿಶೀಲಿಸುತ್ತಿದ್ದೇವೆ: ಹೈಕೋರ್ಟ್‌ಗೆ ಸರ್ಕಾರ!
MahaKumbh 2025: ಕುಂಭಮೇಳದಲ್ಲಿ ಬೆಂಕಿ ನಂದಿಸಲು ರೊಬೋಟ್!
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.