12 ಬ್ಲಾಕ್ ಮರಳುಗಾರಿಕೆ: ಟೆಂಡರ್ ಪ್ರಕ್ರಿಯೆ ಮುಕ್ತಾಯ
Team Udayavani, Jan 28, 2019, 12:50 AM IST
ಉಡುಪಿ: ಎರಡು ಮತ್ತು ಮೂರನೇ ಹಂತದಲ್ಲಿ ಕರೆಯಲಾದ ತಲಾ 6 ಮರಳು ಬ್ಲಾಕ್ಗಳ ಟೆಂಡರ್ ಪ್ರಕ್ರಿಯೆ ಮುಕ್ತಾಯಗೊಂಡಿದ್ದು, ಗುತ್ತಿಗೆದಾರರ ದಾಖಲೆಗಳ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆ ಹಿರಿಯ ಭೂವಿಜ್ಞಾನಿಗಳು ತಿಳಿಸಿದ್ದಾರೆ.
ಮರಳು ದಿಬ್ಬ ತೆರವುಗೊಳಿಸಲು ಅರಣ್ಯ, ಪರಿಸರ ಮತ್ತು ಜೀವಿ ಪರಿಸ್ಥಿತಿ ಇಲಾಖೆ ಕಾರ್ಯದರ್ಶಿಯಿಂದ ಅನುಮೋದನೆ ಪಡೆದ 7 ಮರಳು ದಿಬ್ಬಗಳಲ್ಲಿ 17,526.061 ಮೆ.ಟನ್ ಮರಳು ತೆಗೆಯಲು ಅವಕಾಶವಿದೆ. ಸೀತಾ
ನದಿ ಪಾತ್ರದಲ್ಲಿ ಗುರುತಿಸಿರುವ 2 ಮರಳು ದಿಬ್ಬಗಳಿಗೆ ಮೀನುಗಾರರಿಂದ ಆಕ್ಷೇಪಣೆ ಬಂದಿದ್ದು, ಇವುಗಳನ್ನು ಬಿಟ್ಟು ಉಳಿದ 5 ಮರಳು ದಿಬ್ಬಗಳಲ್ಲಿ 16,910.524 ಮೆ.ಟನ್ ಮರಳು ತೆಗೆಯಲು 45 ಮಂದಿಗೆ ಪರವಾನಿಗೆ ನೀಡಲಾಗಿದೆ.
ಅನುಮೋದನೆ ಬಾಕಿ
ಉಳಿದ ನದಿ ಪಾತ್ರಗಳಲ್ಲಿ ಬೆಥಮೆಟ್ರಿಕ್ ತಂತ್ರಾಂಶ ಮೂಲಕ ಉಡುಪಿ, ಬ್ರಹ್ಮಾವರ ಮತ್ತು ಕಾಪು ತಾಲೂಕು ವ್ಯಾಪ್ತಿಯಲ್ಲಿ ಸರ್ವೇ ನಡೆಸಿರುವ ಸುರತ್ಕಲ್ ಎನ್ಐಟಿಕೆ 8 ಮರಳು ದಿಬ್ಬಗಳಿಂದ ಒಟ್ಟು 13,86,479.045 ಮೆ.ಟನ್ ಮರಳನ್ನು ತೆಗೆಯಬಹುದೆಂದು ವರದಿ ನೀಡಿದೆ. ಜಿಲ್ಲಾ ಕರಾವಳಿ ವಲಯ ನಿರ್ವಹಣ ಪ್ರಾಧಿಕಾರದ ಶಿಫಾರಸಿನೊಂದಿಗೆ ಜ. 8ರಂದು ಪ್ರಸ್ತಾವನೆ ಸಲ್ಲಿಸಲಾಗಿದೆ. ಅನುಮೋದನೆ ಬಳಿಕ 7 ಸದಸ್ಯರ ಸಮಿತಿ ಸಭೆಯಲ್ಲಿ ಮಂಡಿಸಿ ಕ್ರಮ ಕೈಗೊಳ್ಳಲಾಗುವುದು.
ಜಿಲ್ಲೆಯ ನಾನ್ ಸಿಆರ್ಝಡ್ ಪ್ರದೇಶ ದಲ್ಲಿ ಕರ್ನಾಟಕ ಉಪ ಖನಿಜ ರಿಯಾಯಿತಿ ನಿಯಮಾವಳಿಯಂತೆ ಕನಿಷ್ಠ 5 ಹೆಕ್ಟೇರ್ಗಿಂತಲೂ ಕಡಿಮೆ ವಿಸ್ತೀರ್ಣ ಹೊಂದಿರುವ ಬ್ಲಾಕ್ಗಳಿಗೆ ಅನುಮೋದನೆ ಲಭಿಸಿದೆ. ಇಲ್ಲಿ ಪರಿಸರ ನಿರ್ವಹಣಾ ಯೋಜನೆ ಅಗತ್ಯವಿಲ್ಲ. ಪರಿಸರ ಅನುಮತಿ ಪತ್ರ ಪಡೆದ ಅನಂತರ ಮರಳು ಗಣಿಗಾರಿಕೆ ಮಾಡಲು ಸರಕಾರ ಸಮ್ಮತಿಸಿದೆ. 7 ಮರಳು ಬ್ಲಾಕ್ಗಳನ್ನು ಸರಕಾರಿ ಕಾಮಗಾರಿಗಳಿಗೆ ಮೀಸಲಿಡಲಾಗಿದೆ.
ನಿಯಮಾವಳಿಯಂತೆ ಟೆಂಡರ್-ಕಂ- ಹರಾಜು ಮೂಲಕ ಮರಳು ವಿಲೇವಾರಿ ಮಾಡಲು ಟೆಂಡರ್ ಕರೆಯಲಾಗಿದೆ. 11 ಬ್ಲಾಕ್ಗಳಿಗೆ 96 ಜನ ಟೆಂಡರ್ನಲ್ಲಿ ಭಾಗವಹಿಸಿದ್ದು, ಅದರಲ್ಲಿ 57 ಮಂದಿ 3 ವರ್ಷಗಳ ಐಟಿ ರಿಟರ್ನ್ಸ್ ಪ್ರತಿ ಸಲ್ಲಿಸಿಲ್ಲ. ಷರತ್ತುಗಳನ್ನು ಸಡಿಲಿಸುವಂತೆ ಡಿ. 28ರಂದು ಸರಕಾರಕ್ಕೆ ಪತ್ರ ಬರೆಯಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
BJP Internal Dispute: ಶಾಸಕ ಬಸನಗೌಡ ಯತ್ನಾಳ್ ವಿವಾದ ಇತ್ಯರ್ಥಕ್ಕೆ ಡಿ.9ರ ಗಡುವು
Constitution Day: ಉಡುಪಿ ಪೇಜಾವರ ಶ್ರೀ ಮನುಸ್ಮೃತಿ ಪ್ರತಿಪಾದಕರು: ಸಿಎಂ ಸಿದ್ದರಾಮಯ್ಯ
Train: ಗೋಮಟೇಶ್ವರ ಎಕ್ಸ್ಪ್ರೆಸ್ ರೈಲು ಮಂಗಳೂರು ಸೆಂಟ್ರಲ್ಗೆ ಬಾರದು
Kambala: ತೀರ್ಪುಗಾರರ ತೀರ್ಮಾನವೇ ಅಂತಿಮ:ಜಿಲ್ಲಾ ಕಂಬಳ ಸಮಿತಿ ಸಭೆಯಲ್ಲಿ ನಿರ್ಣಯ
Congress: ಗ್ಯಾರಂಟಿ ಯೋಜನೆಗಳ ಬಗ್ಗೆ ಅಪಸ್ವರ ಎತ್ತಿದರೆ ಶಿಸ್ತುಕ್ರಮ: ಡಿ.ಕೆ.ಶಿವಕುಮಾರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.