30 ಕೋಟಿ ರೂ. ಬೆಳೆ ನಷ್ಟ ದಾಖಲು
Team Udayavani, Jan 28, 2019, 8:17 AM IST
ಸೇಡಂ: ರಾಜ್ಯ ಬಿಜೆಪಿ ಉಪಾಧ್ಯಕ್ಷ ಹಾಗೂ ಶಾಸಕ ಶ್ರೀರಾಮುಲು ರವಿವಾರ ತಾಲೂಕಿನ ಹಲವೆಡೆ ಮಿಂಚಿನ ಸಂಚಾರ ನಡೆಸಿ ಬರ ಅಧ್ಯಯನ ನಡೆಸಿದರು. ಮೊದಲಿಗೆ ತಾಲೂಕಿನ ಕೋಡ್ಲಾ ಗ್ರಾಮದ ಏಜಿತಮಿಯಾಖಾನ್ (ಸಿದ್ದಣ್ಣಗೌಡ ಉಳುಮೆ ಮಾಡುವ)ಅವರಿಗೆ ಸೇರಿದ ಜಮೀನಿಗೆ ಭೇಟಿ ನೀಡಿ ಕಡಲೆ ಮತ್ತು ತೊಗರಿ ಬೆಳೆ ವೀಕ್ಷಿಸಿದರು. ಇದೇ ವೇಳೆೆ ರೈತರಿಂದ ಮಾಹಿತಿ ಪಡೆದ ಶ್ರೀರಾಮುಲು ಬೆಳೆ ಹಾನಿ ಬಗ್ಗೆ ತಹಶೀಲ್ದಾರ್ ಸುಬ್ಬಣ್ಣ ಜಮಖಂಡಿ ಮತ್ತು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ವೈ. ಹಂಪಣ್ಣ ಅವರಿಂದ ಬೆಳೆ ಹಾನಿಯ ಅಂಕಿ-ಅಂಶ ಪಡೆದರು. ನಂತರ ಕೆಲಹೊತ್ತು ರೈತರೊಂದಿಗೆ ಸಮಾಲೋಚನೆ ನಡೆಸಿದ ಅವರಿಗೆ ಕೃಷಿ ಇಲಾಖೆಯ ಹಂಪಣ್ಣ ಮುಂಗಾರು-ಹಿಂಗಾರು ಬೆಳೆ ಬಿತ್ತನೆ ಕುರಿತು ಮಾಹಿತಿ ನೀಡಿದರು. ಈ ವೇಳೆ ರೈತ ಮುಖಂಡ ಬಸವರಾಜ ಇಂಗಿನ್ ಮಾತನಾಡಿ, ರೈತರ ಬೆಳೆ ಸಾಲ ಮನ್ನಾ ಕುರಿತು ಹೆಚ್ಚಿನ ಜಾಗೃತಿ ವಹಿಸುವ ಅವಶ್ಯಕತೆ ಇದೆ. ಅನೇಕರ ಹೆಸರುಗಳು ತಪ್ಪಾಗಿರುವುದರಿಂದ ಮನ್ನಾ ಹಣ ರೈತರ ಕೈ ತಲುಪುತ್ತಿಲ್ಲ ಎಂದು ದೂರಿದರು.
ಇದಾದ ಮೇಲೆ ತಾಲೂಕಿನ ಸಿಂಧನಮಡು ಗ್ರಾಮದ ಹೊಲಕ್ಕೆ ಭೇಟಿ ನೀಡಿದ ಶ್ರೀರಾಮುಲು ಮತ್ತು ತಂಡ ಉದ್ಯೋಗ ಖಾತ್ರಿ ಕುರಿತು ಪಿಡಿಒರಿಂದ ಮಾಹಿತಿ ಪಡೆಯಿತು. ನಂತರ ಕಾನಾಗಡ್ಡಾ ಗ್ರಾಪಂ ವ್ಯಾಪ್ತಿಯ ತೊಲಮಾಮಡಿ ಗ್ರಾಮದ ಸಮೀಪವಿರುವ ಬೃಹತ್ ಕೆರೆಯ ವೀಕ್ಷಣೆ ನಡೆಸಿ ಕೆಲಹೊತ್ತು ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಮಾಡುತ್ತಿರುವ ಗ್ರಾಮಸ್ಥರೊಂದಿಗೆ ಚರ್ಚೆ ನಡೆಸಿದರು. ಉದ್ಯೋಗ ಖಾತ್ರಿಯಡಿ ನೀಡುತ್ತಿರುವ ಸಂಬಳ ಸರಿಯಾದ ಸಮಯಕ್ಕೆ ಕೈ ಸೇರದಿರುವುದು ಮತ್ತು ಕಾರ್ಯಸ್ಥಳಕ್ಕೆ ಬರಲು ಪ್ರಯಾಣ ವ್ಯವಸ್ಥೆ ಇಲ್ಲದಿರುವ ಬಗ್ಗೆ ಫಲಾನುಭವಿಗಳು ಶ್ರೀರಾಮುಲು ಎದುರು ದೂರಿದರು. ಇದಕ್ಕೆ ಪ್ರತಿಕ್ರಿಯಿಸಿದ ಅವರು, 10 ದಿನದಲ್ಲಿ ಸಂಬಳ ಪಾವತಿಸಬೇಕು ಮತ್ತು ಪ್ರಯಾಣ ವ್ಯವಸ್ಥೆ ಕಲ್ಪಿಸುವಂತೆ ನರೇಗಾ ಅಧಿಕಾರಿಗೆ ಸೂಚಿಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ 8 ತಂಡಗಳನ್ನು ಬರ ಅಧ್ಯಯನಕ್ಕಾಗಿ ರಚಿಸಲಾಗಿದೆ. 156 ಬರ ಪೀಡಿತ ಪ್ರದೇಶ ಎಂದು ರಾಜ್ಯ ಸರ್ಕಾರ ಗುರುತಿಸಿದ್ದು, ಬೆಳೆ ನಷ್ಟಕ್ಕೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರಿಗೆ ವರದಿ ಸಲ್ಲಿಸಲಾಗುವುದು ಎಂದರು.
ಬರ ನಿರ್ವಹಣೆಯಲ್ಲಿ ಸರ್ಕಾರ ವಿಫಲ
ಕಲಬುರಗಿ: ಬರಗಾಲದಿಂದ ರೈತರು, ಮಹಿಳೆಯರು ಕಣ್ಣೀರಲ್ಲಿ ಕೈ ತೊಳೆಯುತ್ತಿದ್ದರೂ ರಾಜ್ಯ ಸರ್ಕಾರ ಬರ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ವಹಿಸಿದೆ. ಜಿಲ್ಲಾ ಉಸ್ತುವಾರಿ ಸಚಿವರು ಕ್ಷೇತ್ರಗಳತ್ತ ತಲೆ ಹಾಕದೆ ಬೆಂಗಳೂರಿನಲ್ಲಿ ಐಷಾರಾಮಿ ಜೀವನ ನಡೆಸುತ್ತಿದ್ದಾರೆ ಎಂದು ಬಿಜೆಪಿ ಶಾಸಕ ಬಿ. ಶ್ರೀರಾಮುಲು ಟೀಕಿಸಿದರು.
ಐವಾನ್-ಇ-ಶಾಹಿ ಅತಿಥಿಗೃಹದಲ್ಲಿ ರವಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ತಾವು ಕೈಗೊಂಡ ಬರ ಅಧ್ಯಯನದ ಬಗ್ಗೆ ಮಾಹಿತಿ ನೀಡಿದರು. ಬಿಜೆಪಿ ರಾಜಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ಆರ್.ಅಶೋಕ, ಕೆ.ಎಸ್. ಈಶ್ವರಪ್ಪ ಹಾಗೂ ತಾವು ನಾಲ್ಕು ತಂಡಗಳಾಗಿ ರಾಜ್ಯಾದ್ಯಂತ ಬರ ಅಧ್ಯಯನ ನಡೆಸುತ್ತಿದ್ದೇವೆ. ರಾಯಚೂರು, ಬಳ್ಳಾರಿ, ಚಿತ್ರದುರ್ಗ, ಕಲಬುರಗಿಯಲ್ಲಿ ತಾವು ಪ್ರವಾಸ ಆರಂಭಿಸಿದ್ದು, ರವಿವಾರ ಸೇಡಂ ಹಾಗೂ ಚಿತ್ತಾಪುರ ತಾಲೂಕಿನಲ್ಲಿ ಬರ ಅಧ್ಯಯನ ನಡೆಸಲಾಗಿದೆ ಎಂದರು.
ಬರಗಾಲ ಹಿನ್ನೆಲೆಯಲ್ಲಿ ಬಿತ್ತನೆ ಮಾಡಿದ ಯಾವುದೇ ಬೆಳೆ ಬೆಳೆದಿಲ್ಲ. ಪ್ರತಿ ವರ್ಷ ತೊಗರಿ ಏಳೆಂಟು ಚೀಲ ಬರುತ್ತಿತ್ತು. ಈ ಬಾರಿ ಅರ್ಧ ಚೀಲವೂ ತೊಗರಿ ಬಂದಿಲ್ಲ. ಕಡಲೆ, ಜೋಳ ಫಸಲು ಸರಿಯಾಗಿ ಬಂದಿಲ್ಲ. ಉದ್ಯೋಗ ಖಾತ್ರಿ ಯೋಜನೆಯಡಿ ಕೂಲಿ ಸಿಗುತ್ತಿಲ್ಲ ಎಂದು ರೈತರು, ಮಹಿಳೆಯರು ಕಣ್ಣೀರು ಸುರಿಸಿದರು. ಕುಡಿಯುವ ನೀರಿಗಾಗಿ ಪ್ರತಿ ದಿನ ಜನರು ಪರಿತಪಿಸುತ್ತಿದ್ದಾರೆ. ಬರದಿಂದ ಕಂಗೆಟ್ಟು ಉದ್ಯೋಗ ಸಿಗದೆ ಗುಳೆ ಹೋಗುವುದು ಸಾಮಾನ್ಯವಾಗಿದೆ. ಆದರೆ, ರಾಜ್ಯ ಸರ್ಕಾರ ಮಾತ್ರ ಬರಕ್ಕೆ ಸಂಬಂಧಿಸಿದಂತೆ ಯಾವುದೇ ಪರಿಹಾರ ಕಾಮಗಾರಿ ಕೈಗೊಂಡಿಲ್ಲ. ಕುಡಿಯುವ ನೀರಿಗಾಗಿ ಪ್ರತಿ ತಾಲೂಕಿಗೆ 50 ಲಕ್ಷ ರೂ. ಬಿಡುಗಡೆ ಮಾಡಿದ್ದು ಬಿಟ್ಟರೆ ಬೇರೆ ಯಾವುದೇ ಕ್ರಮ ಜರುಗಿಸಿಲ್ಲ. ಕ್ಷೇತ್ರಗಳಿಗೆ ಭೇಟಿ ನೀಡುವಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಸಂಪೂರ್ಣ ವಿಫಲರಾಗಿದ್ದಾರೆ ಎಂದರು.
ಸಚಿವರ ಮೋಜು-ಮಸ್ತಿ: ಎಲ್ಲ ಸಚಿವರು ಬೆಂಗಳೂರಿಗೆ ಸೀಮಿತವಾಗಿದ್ದು, ಮೋಜು-ಮಸ್ತಿಯಲ್ಲಿ ತೊಡಗಿದ್ದಾರೆ. ಬರ ಪರಿಹಾರಕ್ಕಾಗಿ ರಾಜ್ಯ ಸರ್ಕಾರ ಮನಸ್ಸು ಮಾಡುತ್ತಿಲ್ಲ. ಸಾಲ ಮನ್ನಾ ವಿಚಾರದಲ್ಲಿ ಸರ್ಕಾರ ಸಂಪೂರ್ಣವಾಗಿ ವಿಫಲಗೊಂಡಿದ್ದು ಯಾವುದೇ ಸ್ಪಷ್ಟತೆ ಇಲ್ಲ. ಸೇಡಂ ಹಾಗೂ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಪ್ರಾಯೋಗಿಕವಾಗಿ ಸಾಲ ಮನ್ನಾ ಜಾರಿ ಮಾಡಿ ರೈತರ ಮೂಗಿಗೆ ತುಪ್ಪ ಸವರಲಾಗಿದೆ. ಹಿಂದಿನ ಸಿದ್ದರಾಮಯ್ಯ ಸರ್ಕಾರದ್ದೇ ಸಾಲ ಮನ್ನಾ ಹಣ ಬಾಕಿ ಇದ್ದು, ಸಿಎಂ ಕುಮಾರಸ್ವಾಮಿ ಘೋಷಿಸಿರುವ ಸಾಲ ಮನ್ನಾದಲ್ಲಿ ಸಾಕಷ್ಟು ಗೊಂದಲಗಳಿವೆ. ಜನರ ಕಷ್ಟಗಳನ್ನು ಸರ್ಕಾರ, ಸಚಿವರು ಆಲಿಸಬೇಕೆಂದು ಒತ್ತಾಯಿಸಿದರು.
ಸೇಡಂ ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ, ಬಿಜೆಪಿ ನಗರಾಧ್ಯಕ್ಷ, ಎಂಎಲ್‌ಸಿ ಬಿ.ಜಿ.ಪಾಟೀಲ, ಮುಖಂಡರಾದ ವಾಲ್ಮೀಕಿ ನಾಯ್ಕ, ಬಾಬುರಾವ ಚವ್ಹಾಣ, ಶಶೀಲ ನಮೋಶಿ, ಬಸವರಾಜ ಇಂಗಿನ್, ಡಾ| ಇಂದಿರಾ ಶಕ್ತಿ, ಶರಣಪ್ಪ ತಳವಾರ ಇದ್ದರು.

ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಶಿಗ್ಗಾವಿ ಫಲಿತಾಂಶ ಅನಿರೀಕ್ಷಿತ; ನಾವು ಒಪ್ಪುವುದಿಲ್ಲ: ಸಿ.ಟಿ.ರವಿ
School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ
Karnataka: 18 ತಿಂಗಳಲ್ಲಿ 18 ಎಸ್‌ಐಟಿ ರಚಿಸಿದ ಕಾಂಗ್ರೆಸ್: ಛಲವಾದಿ
Report: ರಾಜ್ಯ ಗುತ್ತಿಗೆದಾರರ ಸಂಘದಿಂದ ಲೋಕಾಯುಕ್ತಕ್ಕೆ ದೂರು ಕೊಟ್ಟಿಲ್ಲ: ಜಗನ್ನಾಥ ಶೇಗಜಿ
Road Mishap: ಕಲಬುರ್ಗಿಯಲ್ಲಿ ರಸ್ತೆ ಅಪಘಾತ… ಮುದ್ದೇಬಿಹಾಳದ ಯುವಕ ಮೃತ್ಯು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Rishabh Pant: ಅಪಘಾತದ ವೇಳೆ ನೆರವಾದವರಿಗೆ ಗಿಫ್ಟ್ ನೀಡಿದ ರಿಷಭ್ ಪಂತ್
Prabhutva movie review: ಪ್ರಗತಿ ಪಥದಲ್ಲಿ ಕ್ರಾಂತಿಯ ಕಿಡಿ
BBK11: ಇವತ್ತು ಬಿಗ್‌ಬಾಸ್ ಮನೆಯಿಂದ ಆಚೆ ಬರುವುದು ಇವರೇ ನೋಡಿ
Vijayapura: ಜಿಲ್ಲಾಸ್ಪತ್ರೆಯಲ್ಲಿ ಒಂದು ವರ್ಷದ ಮಗು ಅಪಹರಣ: ಸಿಸಿಟಿವಿಯಲ್ಲಿ ದೃಶ್ಯ
Kundgol: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬೈಕ್; ಸವಾರರು ಕಣ್ಮರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.