ಅರಿವಿನ ಪ್ರಜ್ಞೆಯೇ ಬೌದ್ಧ ಧರ್ಮದ ಧ್ಯೇಯ


Team Udayavani, Jan 28, 2019, 10:11 AM IST

cta-3.jpg

ಚಿತ್ರದುರ್ಗ: ಬುದ್ಧನನ್ನು ನಾವು ಅರಿಯಬೇಕಾದರೆ ಕೆಟ್ಟ ಗುಣಗಳನ್ನು ಮೊದಲು ತ್ಯಜಿಸಬೇಕು ಎಂದು ಸಾಹಿತಿ, ಚಿಂತಕ ಡಾ| ನಟರಾಜ್‌ ಬೂದಾಳ್‌ ಹೇಳಿದರು. ನಗರದ ಪತ್ರಿಕಾ ಭವನದಲ್ಲಿ ಅರಿವಿನ ಚಾವಡಿ ಚಿತ್ರದುರ್ಗ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ನಾವು ಬುದ್ಧನನ್ನು ಅರಿಯಬೇಕಾದರೆ ಮೊದಲು ನಾವು ಖಾಲಿಯಾಗಬೇಕು. ಖಾಲಿಯಾಗುವುದು ಎಂದರೆ ನಮ್ಮಲ್ಲಿರುವ ಕೆಟ್ಟ ಗುಣಗಳನ್ನು ಹೊರ ಹಾಕಿ ಸ್ವಚ್ಛವಾಗುವುದು ಎಂದರ್ಥ. ಶೂನ್ಯವಾದ ತಾಯಿ ಗರ್ಭದಲ್ಲಿ ಕೇಡುಗಳಿರುವುದಿಲ್ಲ. ಖಾಲಿ ಇರುವುದನ್ನು ತುಂಬಿಕೊಳ್ಳುವುದೇ ಬೌದ್ಧ ಧರ್ಮ. ಮತೀಯ ಪುಸ್ತಕಗಳು ಬೌದ್ಧ ಧರ್ಮ ಇಲ್ಲವೆಂದು ಹೇಳುತ್ತವೆ. ಹಾಗಾಗಿ ಪುಸ್ತಕದಿಂದ ಬುದ್ಧನನ್ನು ಅರ್ಥೈಸಿಕೊಳ್ಳಲು ಆಗದು. ಕಾಯಕ ನಿಷ್ಠೆಯಿಂದ ಅರಿತುಕೊಳ್ಳಬಹುದು ಎಂದರು. ಯಾವುದೇ ವ್ಯಕ್ತಿ ಮನಸ್ಸನ್ನು ಮಣಿಸದೆ ಧ್ಯಾನ, ಪೂಜೆ ಮಾಡಿದರೆ ವ್ಯರ್ಥ. ಪಠ್ಯಗಳ ಆಚೆ ಬುದ್ಧನನ್ನು ಕಾಣಬೇಕು. ಪ್ರತಿ ಮನುಷ್ಯನಲ್ಲೂ ಬುದ್ಧ ಸತ್ವ ಇದೆ. ನಿಸರ್ಗದ ತತ್ವವಾಗಿ ಬಂದಿರುವ ಜ್ಞಾನವೇ ಬುದ್ಧ. ಪ್ರತಿಯೊಬ್ಬರೂ ವಿವೇಕದಿಂದ ಬದುಕುವ ಜೀವನ ಕ್ರಮವೂ ಆಗಿದೆ. ಅಲ್ಲಮ ಒಬ್ಬ ಪ್ರತ್ಯೇಕ ಬುದ್ಧ. ಅಲ್ಲಮನಿಗೆ ಗುರು-ಶಿಷ್ಯರ ಹಂಗು ಇಲ್ಲ ಎಂದು ತಿಳಿಸಿದರು.

ಬೌದ್ಧ ಧರ್ಮದ ಮಹಾಯಾನವನ್ನು ಕಟ್ಟಿಕೊಟ್ಟವರು ಕನ್ನಡಿಗರು. ಆಸೆಯೇ ದುಃಖಕ್ಕೆ ಮೂಲ ಎಂದು ಬುದ್ಧ ಹೇಳಲೇ ಇಲ್ಲ. ಯಾವುದೇ ವಿಷಯಕ್ಕೆ ಜೋತು ಬೀಳುವುದೇ ದುಃಖಕ್ಕೆ ಕಾರಣ ಎಂದಿದ್ದ. ನಿಸರ್ಗದ ವಿರುದ್ಧ ಜೀವನ ಮಾಡುವಂತೆ ಎಂದೂ ಹೇಳಲಿಲ್ಲ. ಬುದ್ಧ ದೇವರು, ದೇವ ದೂತನೂ ಅಲ್ಲ. ದೇವರ ಕುರಿತ ಬುದ್ಧನ ಒಂದೇ ಉತ್ತರ ಗೊತ್ತಿಲ್ಲ ಎಂಬುದಾಗಿತ್ತು ಎಂದರು.

ಸರ್ಕಾರಿ ಕಲಾ ಕಾಲೇಜಿನ ಪ್ರಾಧ್ಯಾಪಕ ಡಾ| ಜೆ. ಕರಿಯಪ್ಪ ಮಾಳಿಗೆ ಮಾತನಾಡಿ, ಅಂಬೇಡ್ಕರ್‌, ಬುದ್ಧ, ಬಸವಣ್ಣನವರ ಚಿಂತನೆಗಳನ್ನು ಅರಿಯಲು ಪ್ರತಿ ತಿಂಗಳ ಒಂದು ಭಾನುವಾರ ಸಂವಾದ ಕಾರ್ಯಕ್ರಮ ಆಯೋಜಿಸಲಾಗುವುದು ಎಂದು ತಿಳಿಸಿದರು. ಸಾಹಿತಿಗಳು, ಚಿಂತಕರು, ಸ್ನಾತಕೋತ್ತರ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಪ್ರಸ್ತುತ ದಿನಗಳಲ್ಲಿ ಇಕ್ಕಟ್ಟು ಮತ್ತು ಭ್ರಮೆಗಳಲ್ಲಿ ಬದುಕುತ್ತಿದ್ದೇವೆ. ಆದ್ದರಿಂದ ನಮಗೆಲ್ಲ ಅರಿವಿನ ಮಾರ್ಗ ಅವಶ್ಯಕವಾಗಿದೆ. ಲೋಪವನ್ನು ತೊಳೆದು ಹಾಕಿ ಉತ್ತಮವಾದುನ್ನು ಅಳವಡಿಸಿಕೊಳ್ಳುವುದೇ ಬೌದ್ಧ ಧರ್ಮದ ಧ್ಯೇಯ.
• ಡಾ| ನಟರಾಜ್‌ ಬೂದಾಳ್‌, ಸಾಹಿತಿ-ಚಿಂತಕರು.

ಟಾಪ್ ನ್ಯೂಸ್

Santhosh-lad

Dharawad: ಬಿಜೆಪಿಯವರಿಗೆ ವಕ್ಫ್ ಬಿಟ್ಟು ಬೇರೆ ವಿಷಯವೇ ಇಲ್ಲ: ಸಚಿವ ಸಂತೋಷ್‌ ಲಾಡ್‌

1-eshwar-bg

K.S.Eshwarappa;’ಕ್ರಾಂತಿವೀರ’ ಹೊಸ ಬ್ರಿಗೇಡ್ ಘೋಷಣೆ: ಫೆ.4ರಂದು ಉದ್ಘಾಟನೆ

School-Chikki

Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು

Sagara-Autrity

Sagara: ಹತ್ತು ಎಕರೆ ಜಾಗದಲ್ಲಿ ಆಶ್ರಯ ಲೇ ಔಟ್ ನಿರ್ಮಿಸಿ ಬಡವರಿಗೆ ಹಂಚಿಕೆ: ಶಾಸಕ ಬೇಳೂರು

1-ree

Karkala; ಕಸದಲ್ಲಿದ್ದ 25 ಗ್ರಾಂ ಚಿನ್ನದ ಸರ ಮರಳಿಸಿ ಪ್ರಾಮಾಣಿಕತೆ ಮೆರೆದ SLRM ಸಿಬಂದಿಗಳು

BBK11: ಬಿಗ್‌ ಬಾಸ್‌ ಮನೆಯಿಂದ ಹೊರಗಡೆ ಬರಲು ನಿರ್ಧರಿಸಿದ ಚೈತ್ರಾ ಕುಂದಾಪುರ

BBK11: ಬಿಗ್‌ ಬಾಸ್‌ ಮನೆಯಿಂದ ಹೊರಗಡೆ ಬರಲು ನಿರ್ಧರಿಸಿದ ಚೈತ್ರಾ ಕುಂದಾಪುರ

Keerthy Suresh: ಪೋಷಕರು ನಿಶ್ಚಯಿಸಿದ ಹುಡುಗನ ಜತೆ ನಡೆಯಲಿದೆ ಕೀರ್ತಿ ಸುರೇಶ್‌ ಮದುವೆ?

Keerthy Suresh: ಪೋಷಕರು ನಿಶ್ಚಯಿಸಿದ ಹುಡುಗನ ಜತೆ ನಡೆಯಲಿದೆ ಕೀರ್ತಿ ಸುರೇಶ್‌ ಮದುವೆ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Chitradurga: ಅಡಿಕೆ ಖರೀದಿಸಿ ಹಣ ನೀಡದೆ ವಂಚನೆ;

Chitradurga: ಅಡಿಕೆ ಖರೀದಿಸಿ ಹಣ ನೀಡದೆ ವಂಚನೆ; ಆತ್ಮಹ*ತ್ಯೆಗೆ ಶರಣಾದ ವ್ಯಾಪಾರಿ

BYV-yathnal

Talk Fight: ಬಿ.ಎಸ್‌.ಯಡಿಯೂರಪ್ಪ ಬಗ್ಗೆ ಹಗುರ ಮಾತು ಸಲ್ಲ: ಬಿ.ವೈ.ವಿಜಯೇಂದ್ರ ಎಚ್ಚರಿಕೆ

BYV-1

Waqf Property: ಸಚಿವ ಜಮೀರ್‌ ಅಹ್ಮದ್‌ರನ್ನು ಗಡೀಪಾರು ಮಾಡಿ: ಬಿ.ವೈ.ವಿಜಯೇಂದ್ರ

ಬಿಜೆಪಿಯವರಿಗೆ ಕಾಳಜಿಯಿದ್ದರೆ ಕೇಂದ್ರದಿಂದ ಬೆಳೆ ಪರಿಹಾರ ಹೆಚ್ಚಿಸಲಿ: ಕೃಷ್ಣ ಬೈರೇಗೌಡ

ಬಿಜೆಪಿಯವರಿಗೆ ಕಾಳಜಿಯಿದ್ದರೆ ಕೇಂದ್ರದಿಂದ ಬೆಳೆ ಪರಿಹಾರ ಹೆಚ್ಚಿಸಲಿ: ಕೃಷ್ಣ ಬೈರೇಗೌಡ

Rain: ಚಿತ್ರದುರ್ಗದಲ್ಲಿ ತಡರಾತ್ರಿ ವರುಣನ ಅಬ್ಬರ… ಕೆರೆಯಂತಾದ ನಾಯಕನಹಟ್ಟಿ ಪೊಲೀಸ್ ಠಾಣೆ

Rain: ಚಿತ್ರದುರ್ಗದಲ್ಲಿ ತಡರಾತ್ರಿ ವರುಣನ ಅಬ್ಬರ… ಕೆರೆಯಂತಾದ ನಾಯಕನಹಟ್ಟಿ ಪೊಲೀಸ್ ಠಾಣೆ

MUST WATCH

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

ಹೊಸ ಸೇರ್ಪಡೆ

18

Men’s Senior Hockey Nationals: ಒಡಿಶಾ ಚಾಂಪಿಯನ್‌

Santhosh-lad

Dharawad: ಬಿಜೆಪಿಯವರಿಗೆ ವಕ್ಫ್ ಬಿಟ್ಟು ಬೇರೆ ವಿಷಯವೇ ಇಲ್ಲ: ಸಚಿವ ಸಂತೋಷ್‌ ಲಾಡ್‌

Mike Tyson: 58 ವರ್ಷದ ಬಾಕ್ಸಿಂಗ್‌ ದಂತಕಥೆ ಟೈಸನ್‌ಗೆ 27 ವರ್ಷದ ಪೌಲ್‌ ಎದುರು ಸೋಲು

Mike Tyson: 58 ವರ್ಷದ ಬಾಕ್ಸಿಂಗ್‌ ದಂತಕಥೆ ಟೈಸನ್‌ಗೆ 27 ವರ್ಷದ ಪೌಲ್‌ ಎದುರು ಸೋಲು

ACC U-19 Asia Cup: ರಾಜ್ಯದ ಮೂವರು

ACC U-19 Asia Cup: ರಾಜ್ಯದ ಮೂವರು

Ranji Trophy: ಕರ್ನಾಟಕಕ್ಕೆ ನಾಕೌಟ್‌ ಕಷ್ಟ

Ranji Trophy: ಕರ್ನಾಟಕಕ್ಕೆ ನಾಕೌಟ್‌ ಕಷ್ಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.