ಕುಡಿವ ನೀರಿನ ಯೋಜನೆಗೆ ಗ್ರಹಣ


Team Udayavani, Jan 28, 2019, 10:16 AM IST

28-january-20.jpg

ಕನಕಗಿರಿ: ಸಾರ್ವಜನಿಕರಿಗೆ ಶುದ್ಧ ಕುಡಿಯುವ ನೀರನ್ನು ಒದಗಿಸಲು ಸರ್ಕಾರ ಪ್ರತಿ ವರ್ಷವೂ ಸಾವಿರಾರು ಕೋಟಿ ರೂ. ವೆಚ್ಚ ಮಾಡುತ್ತಿದೆ. ಆದರೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಇಲ್ಲಿನ ಕುಡಿಯುವ ನೀರಿನ ಯೋಜನೆ 7 ವರ್ಷಗಳಾದರೂ ಅರ್ಧವೂ ಮುಗಿದಿಲ್ಲ.

ಹೌದು. ಹೇರೂರು ಮತ್ತು ಹುಲಿಹೈದರ್‌ ಜಿಪಂ ವ್ಯಾಪ್ತಿಯ 27 ಗ್ರಾಮಗಳಿಗೆ ಶುದ್ಧ ಕುಡಿಯುವ ನೀರು ಒದಗಿಸುವ ರಾಜೀವ್‌ ಗಾಂಧಿ ಶುದ್ಧ ಕುಡಿಯುವ ನೀರಿನ ಯೋಜನೆ ಹಳ್ಳ ಹಿಡಿಯುತ್ತಿದೆ. ಬೇಸಿಗೆಯಲ್ಲಿ ಹಲವಾರು ಹಳ್ಳಿಗಳಲ್ಲಿ ನೀರಿಗಾಗಿ ಹಾಹಾಕಾರ ಸಾಮಾನ್ಯವಾಗಿದೆ. ಇದನ್ನರಿತ ಮಾಜಿ ಸಚಿವ ಶಿವರಾಜ ತಂಗಡಗಿ 27 ಗ್ರಾಮಗಳಿಗೆ ಶುದ್ಧ ಕುಡಿಯುವ ನೀರು ಒದಗಿಸುವ ಯೋಜನೆಗೆ 2012-13ನೇ ಸಾಲಿನಲ್ಲಿ ಭೂಮಿಪೂಜೆ ನೆರವೇರಿಸುವ ಮೂಲಕ ಮಹತ್ವದ ಯೋಜನೆಗೆ ಚಾಲನೆ ನೀಡಿದ್ದರು. ಆದರೆ ಭೂಮಿಪೂಜೆ ನೆರವೇರಿಸಿ 7 ವರ್ಷಗಳಾದರೂ ಅರ್ಧದಷ್ಟು ಕಾಗಮಾರಿ ಮುಗಿದಿಲ್ಲ.

ಇದು 21 ಕೋಟಿ ರೂ. ವೆಚ್ಚದಲ್ಲಿ ಹೇರೂರು ಮತ್ತು ಹುಲಿಹೈದರ್‌ ಜಿಪಂ ವ್ಯಾಪ್ತಿಯ 27 ಗ್ರಾಮಗಳಿಗೆ ತುಂಗಭದ್ರಾ ಡ್ಯಾಮ್‌ನಿಂದ ನೀರು ಪೂರೈಸುವ ಯೋಜನೆ ಇದಾಗಿದೆ. ಸುಳೇಕಲ್ಲ ಹತ್ತಿರ 21 ಎಕರೆ ಪ್ರದೇಶದಲ್ಲಿ ಕೆರೆ ನಿರ್ಮಿಸಿ ಎಡದಂಡೆ ಕಾಲುವೆಯಿಂದ ಪೈಪ್‌ಲೈನ್‌ ಮೂಲಕ ಕೆರೆ ತುಂಬಿಸುವುದು, ನಂತರ ನೀರು ಶುದ್ಧೀಕರಿಸಿ ಗ್ರಾಮಗಳಿಗೆ ಪೈಪ್‌ಲೈನ್‌ ಮೂಲಕ ಪೂರೈಸುವ ಯೋಜನೆ ಇದ್ದಾಗಿದೆ. ಆದರೆ ಅಧಿಕಾರಿಗಳು ಮತ್ತು ಗುತ್ತೆದಾರರ ನಿರ್ಲಕ್ಷ್ಯದಿಂದ ಯೋಜನೆ ಅರ್ಧಕ್ಕೆ ನಿಂತಿದೆ. ಕಾಮಗಾರಿಗೆ ನಿಗದಿಪಡಿಸಿದ ಅವಧಿಯೊಳಗೆ ಗ್ರಾಮಗಳಿಗೆ ಪೈಪ್‌ಲೈನ್‌ ಅಳವಡಿಸಲಾಗಿದೆ. ಕೆರೆ ನಿರ್ಮಾಣ, ಟ್ಯಾಂಕ್‌ ನಿರ್ಮಾಣ, ಪಂಪ್‌ಹೌಸ್‌, ಮೇಲ್ಮಟ್ಟದ ಜಲಾಗಾರ ಸೇರಿದಂತೆ ವಿವಿಧ ಕೆಲಸಗಳು ಇನ್ನೂ ಪ್ರಾರಂಭವಾಗಿಲ್ಲ. ಗುತ್ತಿಗೆಯನ್ನು ಬಳ್ಳಾರಿಯ ಶ್ರೀನಿವಾಸ ಕನ್‌ಸ್ಟ್ರಕ್ಷನ್ಸ್‌ನವರು ಪಡೆದಿದ್ದಾರೆ.

ಇಚ್ಛಾಶಕ್ತಿ ಕೊರತೆ: ಈ ಭಾಗದ ಜಿಪಂ ಸದಸ್ಯರು ಒಂದೇ ಒಂದು ಬಾರಿಯೂ ರಾಜೀವ್‌ ಗಾಂಧಿ ಶುದ್ಧ ಕುಡಿಯುವ ನೀರಿನ ಯೋಜನೆಯ ಬಗ್ಗೆ ಜಿಪಂ ಸಾಮಾನ್ಯ ಸಭೆಯಲ್ಲಿ ಚಕಾರ ಎತ್ತಿಲ್ಲ್ಲ. ಜನಪ್ರತಿನಿಧಿಗಳ ಮತ್ತು ಅಧಿಕಾರಿಗಳ ಇಚ್ಛಾಶಕ್ತಿಯ ಕೊರತೆಯಿಂದ ಕಾಮಗಾರಿಯು 7 ವರ್ಷಗಾಳದರೂ ಅರ್ಧದಷ್ಟು ಮುಗಿದಿಲ್ಲ. ಇದರಿಂದ ಜನರಿಗೆ ಶುದ್ಧ ಕುಡಿಯುವ ನೀರು ಸಿಗದೇ, ಫ್ಲ್ಲೋರೈಡ್‌ಯುಕ್ತ ನೀರೇ ಗತಿಯಾಗಿದೆ. ಬೇಸಿಗೆ ಸಮೀಪಿಸುತ್ತಿದ್ದು, 27 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಮತ್ತೆ ಉಲ್ಬಣಗೊಳ್ಳಲಿದೆ!

ಯೋಜನೆಗೆ ಒಳಪಡುವ ಗ್ರಾಮ: ಹೇರೂರು, ಗೋನಾಳ್‌, ಬಾಪಿರೆಡ್ಡಿ ಕ್ಯಾಂಪ್‌, ಡಾಕ್ಟರ್‌ ಕ್ಯಾಂಪ್‌, ಕೇಸರಹಟ್ಟಿ, ಕೆಸಕ್ಕಿ ಹಂಚಿನಾಳ, ಕೆಸಕ್ಕಿ ಹಂಚಿನಾಳ ಕ್ಯಾಂಪ್‌, ಗುಳದಾಳ, ಮರಕುಂಬಿ, ಹಣವಾಳ, ಹಣವಾಳ ಕ್ಯಾಂಪ್‌, ಸೊಂಗನಾಳ, ಬಟ್ಟರ ನರಸಾಪುರ, ವಡ್ಡರಹಟ್ಟಿ, ವಡ್ಡರಹಟ್ಟಿ ಕ್ಯಾಂಪ್‌, ಹುಲಿಹೈದರ್‌, ಹೊಸಗುಡ್ಡ, ಕನಕಾಪುರ, ಮಲ್ಲಿಗೆವಾಡ, ನೀರಲೂಟಿ, ಲಾಯದಹುಣಸಿ, ಹನುಮನಾಳ, ಸಿರಿವಾರ, ಗೋಡಿನಾಳ, ಕೆ. ಕಾಟಾಪುರ, ಬೈಲಕ್ಕಂಪುರ, ಹಿರೇಖೇಡಾ, ಚಿಕ್ಕಖೇಡಾ, ವರನಖೇಡ ಗ್ರಾಮಗಳು ಈ ಯೋಜನೆಗೆ ಒಳಪಡಲಿವೆ.

ರಾಜೀವ್‌ ಗಾಂಧಿ ಕುಡಿಯುವ ನೀರಿನ ಯೋಜನೆಗೆ 36 ಎಕರೆ ಭೂಮಿ ಅವಶ್ಯವಿದ್ದು, ಭೂಮಿಯನ್ನು ಮಂಜೂರು ಮಾಡಿಲ್ಲ. ಸದ್ಯ 21 ಎಕರೆ ಭೂವಿ ನೀಡುವುದಾಗಿ ಕಂದಾಯ ಇಲಾಖೆಯವರು ಹೇಳಿದ್ದಾರೆ. ಕಾಮಗಾರಿಗೆ ನಿಗದಿ ಪಡಿಸಿದ ಅನುದಾನವಿದೆ. ಆದರೆ ಕಾಮಗಾರಿ ಬೇಕಾದ ಭೂಮಿ ಮಂಜೂರಾಗಿಲ್ಲ. ಆದ್ದರಿಂದ ಕಾಮಗಾರಿಯನ್ನು ಪ್ರಾರಂಭಿಸಿಲ್ಲ. ಈಗಾಗಲೇ ಪೈಪ್‌ಲೈನ್‌ ಕೆಲಸ, ಮೇಲ್ತೊಟ್ಟಿ ಕೆಲಸ ಕೊನೆಯ ಹಂತದಲ್ಲಿದೆ.
•ಚಿದಾನಂದ, ಕಿರಿಯ ಅಭಿಯಂತರ

ರಾಜೀವ್‌ ಗಾಂಧಿ ಶುದ್ಧ ಕುಡಿಯುವ ನೀರಿನ ಯೋಜನೆಗೆ ಭೂಮಿಯ ಕೊರತೆ ಇದ್ದು, ಈಗಾಲೇ 21 ಎಕರೆ ಭೂಮಿಯನ್ನು ಮಂಜೂರು ಮಾಡಲಾಗಿದೆ. ಕೆರೆ ನಿರ್ಮಾಣ ಮಾಡಲು ನೀಲ ನಕ್ಷಾಶೆ ತಯಾರಿಸಿ ಅನುಮೋದನೆ ಕಳಿಸಲಾಗಿದೆ. ಶೀಘ್ರವೇ ಕಾಮಗಾರಿಯನ್ನು ಪ್ರಾರಂಭಿಸುವಂತೆ ಗುತ್ತಿಗೆದಾರರಿಗೆ ಮತ್ತು ಅಧಿಕಾರಿಗಳಿಗೆ ಸೂಚಿಸಲಾಗಿದೆ.
•ಬಸವರಾಜ ದಢೇಸುಗೂರು, ಶಾಸಕ

•ಶರಣಪ್ಪ ಗೋಡಿನಾಳ 

ಟಾಪ್ ನ್ಯೂಸ್

Vijayapura: Unnatural assault on 6-year-old boy: Convict sentenced to 20 years in prison

Vijayapura: 6ರ ಬಾಲಕನ ಮೇಲೆ ಅನೈಸರ್ಗಿಕ ಲೈಂಗಿಕ ದೌರ್ಜನ್ಯ: ಅಪರಾಧಿಗೆ 20 ವರ್ಷ ಜೈಲು

The day will come when our team member will become CM: Yatnal

Kalaburagi; ನಮ್ಮ ತಂಡದವರು ಸಿಎಂ ಆಗುವ ದಿನ ಬರಲಿದೆ: ಗುಡುಗಿದ ಯತ್ನಾಳ್

ಯಡಿಯೂರಪ್ಪ

Politics: ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರ್ಕಾರ ರಚನೆಗೆ ಪ್ರಯತ್ನ: ಬಿಎಸ್‌ ಯಡಿಯೂರಪ್ಪ

58758

Renukaswamy Case: ದರ್ಶನ್‌ ಜಾಮೀನು ಅರ್ಜಿ ವಿಚಾರಣೆ ನ.28ಕ್ಕೆ ಮುಂದೂಡಿದ ಹೈಕೋರ್ಟ್

ಹೊಸಪೇಟೆ: ಸ್ಕ್ಯಾನ್‌ ಮಾಡಿ, ಹಂಪಿ ಕಂಬಗಳ ಸಪ್ತ ಸ್ವರ ಕೇಳಿ

ಹೊಸಪೇಟೆ: ಸ್ಕ್ಯಾನ್‌ ಮಾಡಿ, ಹಂಪಿ ಕಂಬಗಳ ಸಪ್ತ ಸ್ವರ ಕೇಳಿ

6-uv-fusion

Opportunities: ಅವಕಾಶಗಳನ್ನು ಸೃಷ್ಟಿಸಿಕೊಳ್ಳುವ ಚತುರತೆ

Yadagiri: ಗ್ಯಾರಂಟಿಗಳಿಂದ ಹಿಂದೆ ಸರಿಯಲ್ಲ: ಸಚಿವ ದರ್ಶನಾಪುರ

Yadagiri: ಗ್ಯಾರಂಟಿಗಳಿಂದ ಹಿಂದೆ ಸರಿಯಲ್ಲ: ಸಚಿವ ದರ್ಶನಾಪುರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

By Election… ಕಮಲಕ್ಕೊಂದು ಕೈಗೊಂದು

By Election: ಕೊಪ್ಪಳ ನಗರಸಭೆ ಉಪಚುನಾವಣೆ… ಕಮಲಕ್ಕೊಂದು ಕೈಗೊಂದು ಗೆಲುವು

5,000 tractors blockade Suvarna Soudha on December 10; Kudalasangama Sri

Protest: ಡಿ.10 ರಂದು ಸುವರ್ಣಸೌಧಕ್ಕೆ 5 ಸಾವಿರ ಟ್ರ್ಯಾಕ್ಟರ್ ಮುತ್ತಿಗೆ; ಕೂಡಲಸಂಗಮ ಶ್ರೀ

MB-Patil-Mi

Railway: ಗಂಗಾವತಿ ರೈಲ್ವೆ ನಿಲ್ದಾಣಕ್ಕೆ ಅಂಜನಾದ್ರಿ ಹೆಸರು ಶಿಫಾರಸು: ಸಚಿವ ಎಂ.ಬಿ.ಪಾಟೀಲ್‌

ಕೊಪ್ಪಳ: ಫ್ಲೈಟ್‌ನಲ್ಲಿ ಲಿಂಗದಹಳ್ಳಿ ಸರ್ಕಾರಿ ಶಾಲಾ ಮಕ್ಕಳ ಪ್ರವಾಸ!

ಕೊಪ್ಪಳ: ಫ್ಲೈಟ್‌ನಲ್ಲಿ ಲಿಂಗದಹಳ್ಳಿ ಸರ್ಕಾರಿ ಶಾಲಾ ಮಕ್ಕಳ ಪ್ರವಾಸ!

kop

Waqf Protest: ಕೊಪ್ಪಳ-ಗದಗದಲ್ಲಿ ಬಿಜೆಪಿ ಪ್ರತಿಭಟನೆ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

10-uv-fusion

Nature: ಪ್ರಕೃತಿ ಮಡಿಲಲ್ಲಿ ಒಂದು ಕ್ಷಣ

9-uv-fusion

Grandfather: ಬಡ ತಾತನ ಹೃದಯ ಶ್ರೀಮಂತಿಕೆ

Vijayapura: Unnatural assault on 6-year-old boy: Convict sentenced to 20 years in prison

Vijayapura: 6ರ ಬಾಲಕನ ಮೇಲೆ ಅನೈಸರ್ಗಿಕ ಲೈಂಗಿಕ ದೌರ್ಜನ್ಯ: ಅಪರಾಧಿಗೆ 20 ವರ್ಷ ಜೈಲು

ನಿರ್ಲಕ್ಷ್ಯಕ್ಕೊಳಗಾದ ರಾಣಿ ಬೆನ್ನೂರ ಕೆರೆ-ಸ್ಥಳೀಯರ ಆಕ್ರೋಶ

ನಿರ್ಲಕ್ಷ್ಯಕ್ಕೊಳಗಾದ ರಾಣಿ ಬೆನ್ನೂರ ಕೆರೆ-ಸ್ಥಳೀಯರ ಆಕ್ರೋಶ

The day will come when our team member will become CM: Yatnal

Kalaburagi; ನಮ್ಮ ತಂಡದವರು ಸಿಎಂ ಆಗುವ ದಿನ ಬರಲಿದೆ: ಗುಡುಗಿದ ಯತ್ನಾಳ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.