ಪಬ್ಲಿಕ್ಕೇ ಪರಮಗುರು!
Team Udayavani, Jan 29, 2019, 12:30 AM IST
ಪ್ರಚಾರ (ಪಬ್ಲಿಸಿಟಿ) ಯಾರಿಗೆ ತಾನೇ ಬೇಕಿಲ್ಲ. ಹಿಂದೆಲ್ಲಾ ದೊಡ್ಡ ದೊಡ್ಡ ಸಂಸ್ಥೆಗಳು ಮಾತ್ರವೇ ಪ್ರಚಾರದ ಮೊರೆ ಹೋಗುತ್ತಿದ್ದವು. ತಮ್ಮ ಉತ್ಪನ್ನಗಳ ಬಗ್ಗೆ ಸಾರ್ವಜನಿಕರಿಗೆ ತಿಳಿಯಪಡಿಸಲು ಅವರಿಗೆ ಪ್ರಚಾರದ ಅಗತ್ಯ ಇದ್ದೇ ಇತ್ತು. ಆದರೆ ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ, ತಮ್ಮ ತಮ್ಮ ಉದ್ಯೋಗ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಪ್ರಚಾರ ಅನ್ನೋದು ಒಂದಲ್ಲ ಒಂದು ರೀತಿಯಲ್ಲಿ ಜನರಿಗೂ ಅಗತ್ಯವಾಗಿಬಿಟ್ಟಿದೆ. ಬರಹಗಾರರು, ಸಮಾಜ ಸೇವಕರು, ಉದ್ಯಮಿಗಳು, ನಟ- ನಟಿಯರು, ಚಿತ್ರಕಲಾವಿದರು ಹೀಗೆ ಪಟ್ಟಿ ಉದ್ದ ಸಾಗುತ್ತದೆ. ಇವರಿಗೆ ಪ್ರಚಾರ ನೀಡಲು ನೆರವಾಗುವವರೇ ಪಿ.ಆರ್.ಒ (ಪಬ್ಲಿಕ್ ರಿಲೇಷನ್ ಆಫೀಸರ್). ಈಗೀಗ ಭಾರತದಲ್ಲಿ ಪಿ.ಆರ್. ಕ್ಷೇತ್ರ (ಸಾರ್ವಜನಿಕ ಸಂಪರ್ಕ ವಿಭಾಗ) ಹೆಚ್ಚು ಹೆಚ್ಚು ಜನರನ್ನು ಆಕರ್ಷಿಸುತ್ತಿದೆ.
ಸೆಲಬ್ರಿಟಿಗಳೊಂದಿಗೆ ಕೆಲಸ
ಸೃಜನಾತ್ಮಕ ಮನಸ್ಸು, ಸಮಯಪ್ರಜ್ಞೆ, ಎಲ್ಲಕ್ಕಿಂತ ಮುಖ್ಯವಾಗಿ ಸಂವಹನ ಕಲೆ ಈ ಕ್ಷೇತ್ರಕ್ಕೆ ಅಗತ್ಯವಾಗಿ ಬೇಕು. ಕಂಪೆನಿಯೊಂದರ ಬ್ರ್ಯಾಂಡ್ ಇಮೇಜ್ ಕಟ್ಟಿ ಬೆಳೆಸುವ ಮುಖ್ಯ ಜವಾಬ್ದಾರಿ ಇದು. ಪತ್ರಿಕೆ, ದೃಶ್ಯ ಮಾಧ್ಯಮದವರಿಗೆ ಮಾಹಿತಿ ಕಳಿಸಬೇಕಾದುದರಿಂದ ಬರವಣಿಗೆಯ ಕೌಶಲ್ಯವನ್ನೂ ಈ ವೃತ್ತಿ ಬೇಡುತ್ತದೆ. ಪಿ.ಆರ್. ಕ್ಷೇತ್ರದಲ್ಲಿ ಅನುಭವ ಪಡೆದಂತೆಲ್ಲ ಅತ್ಯುತ್ತಮ, ಪ್ರತಿಷ್ಠಿತ ಕಂಪೆನಿಗಳು, ಸೆಲಬ್ರಿಟಿಗಳೊಂದಿಗೆ ಗುರುತಿಸಿಕೊಳ್ಳುವ, ಅವರೊಂದಿಗೆ ಕೆಲಸ ಮಾಡುವ ಅವಕಾಶ ಪಿ.ಆರ್. ಉದ್ಯೋಗಿಗಳಿಗೆ ದೊರೆಯುತ್ತದೆ. ಒಟ್ಟಿನಲ್ಲಿ ಪಿ.ಆರ್. ಎನ್ನುವುದು ಸಂಸ್ಥೆಯು ತನ್ನ ಹಾಗೂ ಸಾರ್ವಜನಿಕರ ನಡುವಣ ಬಾಂಧವ್ಯವನ್ನು ಇಟ್ಟುಕೊಳ್ಳಲು ನೆರವಾಗುವ ಕ್ಷೇತ್ರ.
ವಿದ್ಯಾರ್ಹತೆ ಮತ್ತು ಕೌಶಲ
ಸಾಮಾನ್ಯವಾಗಿ ಜರ್ನಲಿಸಂ ಮತ್ತು ಮಾಸ್ ಕಮ್ಯೂನಿಕೇಷನ್ (ಪತ್ರಿಕೋದ್ಯಮ) ಓದಿದ ವಿದ್ಯಾರ್ಥಿಗಳೇ ಮುಂದೆ ಹೆಚ್ಚಾಗಿ ಪಿ.ಆರ್.ಗಳಾಗಿ ಸೇವೆ ಸಲ್ಲಿಸುತ್ತಾರೆ. ಅಲ್ಲದೆ ಬೇರೆ ಬೇರೆ ಕ್ಷೇತ್ರಗಳ ಪದವೀಧರರು ಪಿ.ಆರ್ ಕ್ಷೇತ್ರಕ್ಕೆ ಅಗತ್ಯವಾದ ಕೌಶಲಗಳನ್ನು ಹೊಂದಿದ್ದರೆ ಈ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸಬಹುದು. ಅಂಚೆ ಶಿಕ್ಷಣದ ಮೂಲಕ ಕಲಿತೂ ಪಿ.ಆರ್. ಕ್ಷೇತ್ರಕ್ಕೆ ಕಾಲಿಡಬಹುದು. ಓದುವ ಹವ್ಯಾಸವಿದ್ದರೆ ಔದ್ಯೋಗಿಕ ಬೆಳವಣಿಗೆಗೆ ಪ್ಲಸ್ ಪಾಯಿಂಟ್. ದಿನಪತ್ರಿಕೆ, ನಿಯತಕಾಲಿಕೆಗಳು ಮತ್ತು ಪುಸ್ತಕಗಳನ್ನು ಓದುವುದರಿಂದ ನಮ್ಮ ಸುತ್ತಮುತ್ತಲಿನ ಆಗುಹೋಗುಗಳು ತಿಳಿಯುವುದಲ್ಲದೆ ಇತರೆ ಪಿ.ಆರ್. ಸಂಸ್ಥೆಗಳ ಹೊಸ ಹೊಸ ಬ್ರ್ಯಾಂಡಿಂಗ್ ಪ್ರಯತ್ನಗಳ ಬಗ್ಗೆಯೂ ತಿಳಿದುಕೊಂಡಂತಾಗುತ್ತದೆ.
ಉತ್ತಮ ಪಿ.ಆರ್. ಆಗುವುದು ಹೇಗೆ?
ಪಿ.ಆರ್. ಆದವರು ಇತರ ಕಂಪೆನಿಗಳ ಬ್ರಾಂಡಿಂಗ್ ತಂತ್ರಗಳನ್ನು, ಅವರು ಬಳಸುತ್ತಿರುವ ಮಾದರಿ, ಮಾಧ್ಯಮಗಳನ್ನು ಗಮನಿಸುತ್ತಿರಬೇಕು. ಕೇವಲ ಬರಹದಲ್ಲಿ ನಿಪುಣತೆ ಸಾಧಿಸುವುದಲ್ಲದೆ ಬ್ರಾಂಡ್ ಬೆಳೆಸಲು, ಹೊಸ ಕ್ಲಯಂಟ್‌ಗಳನ್ನು ಸಂಪರ್ಕಿಸಲು ಪಿ.ಆರ್. ಸಿದ್ಧನಾಗಬೇಕು. ಜೊತೆಗೆ ಕ್ಲಯಂಟ್ ಕುರಿತ ಧನಾತ್ಮಕ, ಸೃಜನಾತ್ಮಕ ನಿರೂಪಣೆಗಳನ್ನು ಹೆಣೆಯಬೇಕು. ಗ್ರಾಹಕರ ಮನಸ್ಸಿನಲ್ಲಿ ಕಂಪೆನಿಗೆ ಅನುಕೂಲಕರವಾದ ಚಿತ್ರಣ ಸೃrಸಬೇಕು, ಧನಾತ್ಮಕ ಚರ್ಚೆಗೆ ಸೂಕ್ತ ವೇದಿಕೆ ನಿುìಸಬೇಕು, ಅಡೆತಡೆಗಳನ್ನು ನಿವಾರಿಸಲು ಸಿದ್ಧರಿರಬೇಕು ಹಾಗು ಈವೆಂಟ್‌ಗಳನ್ನು ಪ್ರಮೋಟ್ ಮಾಡಬೇಕು. ಇವೆಲ್ಲವನ್ನು ಸಮರ್ಥವಾಗಿ ನಿಭಾುಸಬೇಕಾದರೆ ನಿಮ್ಮ ಟಾರ್ಗೆಟ್ ಆಡಿಯನ್ಸ್ ಯಾರೆಂದು ಗೊತ್ತಿರಬೇಕು. ಸುತ್ತಲಿನ ಸೂಕ್ಷ್ಮ ಬದಲಾವಣೆಗಳ ಮೇಲೆ ದೃುrದ್ದಾಗ ನೀವೊಬ್ಬ ಉತ್ತಮ ಪಿ.ಆರ್. ಆಗಬಲ್ಲಿರಿ.
ವಿವಿಧ ಪ್ರಚಾರ ತಂತ್ರಗಳು, ಮಾಧ್ಯಮಗಳ ಬಳಕೆ
ಪಿ.ಆರ್. ಜವಾಬ್ದಾರಿಗಳೇನು?
– ಪತ್ರಿಕಾ ಪ್ರಕಟಣೆಗಳನ್ನು ರೂಪಿಸಿ, ಸೂಕ್ತ ಸಮಯದಲ್ಲಿ ಅವು ಮಾಧ್ಯಮಗಳಲ್ಲಿ ಪ್ರಕಟಗೊಳ್ಳುವಂತೆ ಮಾಡುವುದು.
– ಸಂಸ್ಥೆಗೆ ಬೇಕಾದ ಕಾರ್ಯಕ್ರಮಗಳನ್ನು ಆಯೋಜಿಸಿ, ಉಸ್ತುವಾರಿ ನೋಡಿಕೊಳ್ಳುವುದು.
– ಗ್ರಾಹಕರು/ ಸಾರ್ವಜನಿಕರು ಮತ್ತು ಸಂಸ್ಥೆಯ ನಡುವೆ ಸಕರಾತ್ಮಕ ಸಂವಹನ ಏರ್ಪಡುವಂತೆ ಮಾಡುವುದು
– ಎಲ್ಲೆಲ್ಲಾ ಸಾಧ್ಯವೋ ಅಲ್ಲೆಲ್ಲಾ ಸಂಸ್ಥೆಯ ಬ್ರಾಂಡ್ ಇಮೇಜ್ ಎತ್ತಿ ಹಿಡಿಯುವುದು.
– ಕ್ಲೈಂಟ್ (ನಿಯೋಜಿಸಿದ ಸಂಸ್ಥೆ ಅಥವಾ ವ್ಯಕ್ತಿ) ಇಮೇಜಿಗೆ ಹಾನಿಯಾಗುವ ಸಂದರ್ಭ ಒದಗಿದರೆ – ಪರಿಸ್ಥಿತಿ ತಿಳಿಯಾಗಿಸಿ, ಡ್ಯಾಮೇಜ್ ಕಂಟ್ರೋಲ್ ಮಾಡುವುದು.
– ಹೊಸ ಹೊಸ ಪ್ರಚಾರ ತಂತ್ರಗಳನ್ನು ರೂಪಿಸುವುದು
– ಇಂಟರ್‌ನೆಟ್, ದಿನಪತ್ರಿಕೆ, ದೃಶ್ಯ ಮಾಧ್ಯಮಗಳೆಲ್ಲವನ್ನೂ ಪರಿಣಾಮಕಾರಿಯಾಗಿ ಬಳಸಿಕೊಳ್ಳುವುದು
ರಘು ವಿ., ಪ್ರಾಂಶುಪಾಲರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kollegala: ಎತ್ತಿನಗಾಡಿಗೆ ಸಾಮ್ರಾಟ್ ಟರ್ಬೇ ವಾಹನ ಡಿಕ್ಕಿ; ಹಸು ಸಾವು
Udupi: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್; ಉಡುಪಿ ಮಹಿಳಾ ವಿಭಾಗ ಆರಂಭ
ಕನಕಗಿರಿ:ಮಂಗಳೂರು ಮೂಲದ ಕುಟುಂಬ-ಸೌಹಾರ್ದತೆಗೆ ಸಾಕ್ಷಿ 4 ದಶಕದ ಸಕ್ಕರೆ ಗೊಂಬೆ ತಯಾರಿಕೆ!
Davanagere: ಕಾಂತರಾಜ್ ವರದಿ ಸ್ವೀಕರಿಸಿ ಬಹಿರಂಗಪಡಿಸಿ: ಸಿಎಂಗೆ ಆಂಜನೇಯ ಮನವಿ
ಬೆಳಗಾವಿ: ಮಾನವ ಕಳ್ಳ ಸಾಗಾಣಿಕೆ-ಜೀತ ಪದ್ಧತಿ ದೊಡ್ಡ ಸಮಸ್ಯೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.