ಸ್ವರ್ಗ ಶಾಲೆ: ವಿಶೇಷ ತರಕಾರಿ ತೋಟ, ಬೆಳೆ ಕೊಯ್ಲು
Team Udayavani, Jan 30, 2019, 12:50 AM IST
ಸ್ವರ್ಗ: ಸ್ವರ್ಗ ಸ್ವಾಮಿ ವಿವೇಕಾನಂದ ಎಯುಪಿ ಶಾಲೆಯಲ್ಲಿ ಸಾರ್ವಜನಿಕ ಶಿಕ್ಷಣ ಸಂರಕ್ಷಣ ಯಜ್ಞದ ಅಂಗವಾಗಿ ವಿದ್ಯಾರ್ಥಿಗಳಲ್ಲಿ ಎಳವೆಯಲ್ಲಿಯೇ ಕೃಷಿ ಚಟುವಟಿಕೆಯಲ್ಲಿ ಆಸಕ್ತಿ ಬೆಳೆಸುವ ಉದ್ದೇಶದಿಂದ ಇಕೋ ಕ್ಲಬ್ ನೇತೃತ್ವದಲ್ಲಿ ವಿಶೇಷ ತರಕಾರಿ ತೋಟ ಮಾಡಲಾಗಿದ್ದು ಬೆಳೆ ಕೊಯ್ಲು ನಡೆಯಿತು.
ವಿವಿಧ ತರಕಾರಿಗಳಾದ ಪಡುವಲ, ತೊಂಡೆ, ಅಲಸಂಡೆ ಮೊದಲಾದ ತರಕಾರಿ ಕೃಷಿಯು ಶಾಲಾ ಪರಿಸರದಲ್ಲಿ ಆಕರ್ಷಣೆಯಾಗಿದೆ. ಪ್ರಥಮ ಬಾರಿ ಬೆಳೆಸಲಾದ ಸೌತೆಯು ಉತ್ತಮ ಫಸಲು ನೀಡಿದ್ದು , ಹೊಸ ಬೆಳೆ ಹೂಕೋಸು ಹೂ ಬಿಟ್ಟು ಕೃಷಿಯೋಗ್ಯವೆನಿಸಿದೆ. ಕ್ಯಾಬೇಜು ಸೊಂಪಾಗಿ ಬೆಳೆದಿದ್ದು ಇನ್ನು ಕೆಲವು ದಿನಗಳಲ್ಲಿ ಫಲ ನೀಡುವ ನಿರೀಕ್ಷೆಯಿದೆ.
ಎಣ್ಮಕಜೆ ಕೃಷಿ ಭವನದ ಸಹಕಾರದೊಂದಿಗೆ ಪರಿಸರ ಕ್ಲಬ್ ವಿದ್ಯಾರ್ಥಿಗಳು ಬಹಳ ಆಸಕ್ತಿಯಿಂದ ತರಕಾರಿ ತೋಟ ಬೆಳೆಸುವಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ ಎಂದು ಮುಖ್ಯ ಶಿಕ್ಷಕಿ ಹೇಳುತ್ತಾರೆ.
ಇದೀಗ ಶಾಲೆಯ ಮಧ್ಯಾಹ್ನದ ಭೋಜನಕ್ಕೆ ಬೇಕಾದ ತರಕಾರಿಗಳು ಇಲ್ಲಿಯೇ ಲಭಿಸುತ್ತಿವೆ ಎನ್ನುತ್ತಾರೆ.
ಶಾಲಾ ಆವರಣದಲ್ಲಿ ಹಲವಾರು ಗಿಡ ಮರಗಳಿದ್ದು ಅದರ ಹೆಸರುಗಳನ್ನು ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ಲಗತ್ತಿಸಿದ್ದಾರೆ. ತರಕಾರಿ ಕೃಷಿ ತೋಟ ಬೆಳೆಸಲು ಸಮೀಪ ನಿವಾಸಿಗಳು, ಹಳೆವಿದ್ಯಾರ್ಥಿಗಳು, ಶಾಲಾ ಆಡಳಿತ ಮಂಡಳಿ, ಅಧ್ಯಾಪಕ ವೃಂದ, ಪಿಟಿಎ, ಎಂಪಿಟಿಎ ಎಲ್ಲರೂಸಹಾಯ ನೆರವು ನೀಡುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Tensions Grip: ಬಾಂಗ್ಲಾದೇಶ ಸರಕಾರದಿಂದ ಹಿಂದೂ ನಾಯಕ, ಇಸ್ಕಾನ್ನ ಕೃಷ್ಣದಾಸ್ ಸೆರೆ
Parliament Session: ಗೂಂಡಾಗಿರಿ ಮೂಲಕ ಸಂಸತ್ ಮೇಲೆ ನಿಯಂತ್ರಣ ಸಾಧಿಸಲು ಯತ್ನ: ಮೋದಿ
Sullia: ರಬ್ಬರ್ ಸ್ಮೋಕ್ ಹೌಸ್ಗೆ ಬೆಂಕಿ
Horoscope: ಆತ್ಮ ವಿಶ್ವಾಸ ಮತ್ತು ಸಕಾರಾತ್ಮಕ ಚಿಂತನೆಯಿಂದ ಯಶಸ್ಸು ಸಿಗಲಿದೆ
Mosque survey: ಸಂಭಲ್ ಹಿಂಸೆ: ಎಸ್ಪಿ ಸಂಸದ ಸೇರಿ ಹಲವರ ವಿರುದ್ಧ ಕೇಸು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.