ಸುಳ್ಳು ಲೈಂಗಿಕ ಕಿರುಕುಳ ಬೆದರಿಕೆ: 25 ಲಕ್ಷ ದಂಡ
Team Udayavani, Jan 29, 2019, 12:30 AM IST
ಮುಂಬಯಿ: ಮಹಿಳೆಯರ ಸಂರಕ್ಷಣೆಗಾಗಿ ಇರುವ ಕಾನೂನುಗಳನ್ನು ದುರ್ಬಳಕೆ ಮಾಡಿಕೊಳ್ಳಲು ಯತ್ನಿಸಿದ ಆರೋಪದ ಮೇರೆಗೆ ಹರಿಯಾಣ ಮೂಲದ ಮಹಿಳಾ ಉದ್ಯಮಿ ನೇಹಾ ಗಾಂಧೀರ್ ಹಾಗೂ ಅವರ ಪತಿಗೆ ಬಾಂಬೆ ಹೈಕೋರ್ಟ್ 25 ಲಕ್ಷ ರೂ. ದಂಡ ವಿಧಿಸಿದೆ. ನೇಹಾ ಅವರ ಕಂಪೆನಿಯ ವಿರುದ್ಧ ಬಾಂಬೆ ಹೈಕೋರ್ಟ್ ನಲ್ಲಿ ದಾಖಲಾಗಿದ್ದ ಟ್ರೇಡ್ಮಾರ್ಕ್ ನಕಲು ದಾವೆಯೊಂದರ ವಿಚಾರಣೆ ನಡೆಸಿದ ನ್ಯಾಯಾಲಯ ಕಂಪೆನಿಯ ಉತ್ಪನ್ನಗಳ ಜಪ್ತಿಗೆ ಆದೇಶಿಸಿತ್ತು.
ಈ ಹಿನ್ನೆಲೆಯಲ್ಲಿ ಗೋದಾಮಿಗೆ ಹೋಗಿದ್ದ ರಿಸೀವರ್ ಜತೆ ನೇಹಾ ವಾಗ್ವಾದಕ್ಕಿಳಿದಿದ್ದರು. ರಿಸೀವರ್ ವಿರುದ್ಧ ಲೈಂಗಿಕ ಕಿರುಕುಳ ಕೇಸು ದಾಖಲಿಸುವ ಬೆದರಿಕೆ ಹಾಕಿದ್ದರು. ಈ ಸಂಬಂಧ ದಾಖಲಾದ ಪ್ರಕರಣದ ವಿಚಾರಣೆ ವೇಳೆ ನೇಹಾ ತಪ್ಪನ್ನು ಒಪ್ಪಿಕೊಂಡು ಕೋರ್ಟ್ ಕ್ಷಮೆ ಕೇಳಿದರು. ಆದರೆ ಇದನ್ನು ತಳ್ಳಿಹಾಕಿದ ನ್ಯಾಯಾಲಯ, ಮಹಿಳಾ ರಕ್ಷಣೆಗಾಗಿ ಇರುವ ಕಾನೂನುಗಳ ದುರ್ಬಳಕೆ ಫ್ಯಾಶನ್ ಆಗಿದೆ. ನಿಮಗೆ ಕ್ಷಮೆ ನೀಡಿದರೆ ಇಂಥ ತಪ್ಪುಗಳನ್ನು ಮಾಡಲು ಅನೇಕರಿಗೆ ಪರೋಕ್ಷವಾಗಿ ಅವಕಾಶ ಕೊಟ್ಟಂತಾಗುತ್ತದೆ ಎಂದು ಹೇಳಿ ದಂಡ ವಿಧಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pollution: ದಿಲ್ಲಿಯಲ್ಲಿ ಈಗ ನಿರ್ಮಾಣಕ್ಕೆ ಬ್ರೇಕ್, ಬಸ್ಗಳಿಗೆ ನಿರ್ಬಂಧ
Video: ಕಾರಿನ ಟಯರ್ ಒಳಗಿತ್ತು ಒಂದಲ್ಲ, ಎರಡಲ್ಲ ಬರೋಬ್ಬರಿ 50 ಲಕ್ಷ… ದಂಗಾದ ಅಧಿಕಾರಿಗಳು
Notice: ಸಂಗೀತ ಕಾರ್ಯಕ್ರಮಕ್ಕೂ ಮುನ್ನ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್
Media powerhouse: ರಿಲಯನ್ಸ್- ಡಿಸ್ನಿ ಕಂಪನಿ ವಿಲೀನ ಈಗ ಅಧಿಕೃತ
PM ನರೇಂದ್ರ ಮೋದಿಗೆ ಡೊಮಿನಿಕಾದ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಗೌರವ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.