ಮಾಸಿಕ ಋತುಸ್ರಾವ ನೈಸರ್ಗಿಕ ಕ್ರಿಯೆ ಅಷ್ಟೆ

Team Udayavani, Jan 29, 2019, 7:24 AM IST

masika.jpg

ತುಮಕೂರು: ಮಹಿಳೆಯರಲ್ಲಿ ಆಗುವ ಮಾಸಿಕ ಋತುಸ್ರಾವ, ಇತ್ಯಾದಿಗಳೆಲ್ಲಾ ಒಂದು ನೈಸರ್ಗಿಕ ಕ್ರಿಯೆ ಅಷ್ಟೆ. ಹುಟ್ಟು-ಮುಟ್ಟಿನ ಕಾರಣಕ್ಕೆ ಮಹಿಳೆ ಯರನ್ನು ಹಟ್ಟಿಗಳಿಂದ ಹೊರಗೆ ಇಡುವ ಸಂಪ್ರ ದಾಯ ನಿಲ್ಲಿಸಬೇಕು ಎಂದು ಜಿಪಂ ಮಾಜಿ ಅಧ್ಯಕ್ಷೆ ಪ್ರೇಮಾ ಮಹಾಲಿಂಗಪ್ಪ ತಿಳಿಸಿದರು.

ಜಿಲ್ಲೆಯ ಗುಬ್ಬಿ ತಾಲೂಕಿನ ಗೊಲ್ಲರಹಟ್ಟಿಗಳಲ್ಲಿ ಕರ್ನಾಟಕ ರಾಜ್ಯ ಕಾಡುಗೊಲ್ಲರ ಯುವಸೇನೆ ರಾಜ್ಯ ಹಾಗೂ ಜಿಲ್ಲಾ ಘಟಕ, ತುಮಕೂರಿನ ಬ್ರೈಟ್ ಫ್ಯೂಚರ್‌ ಫೌಂಡೇಷನ್‌, ವರದಕ್ಷಿಣೆ ವಿರೋಧಿ ವೇದಿಕೆ, ಸುವರ್ಣಯುಗ ಫೌಂಡೇಷನ್‌, ನಂದ ಗೋಕುಲ ಫೌಂಡೇಷನ್‌, ಸ್ನೇಹ ಸಮ್ಮಿಲನ ಫೌಂಡೇ ಷನ್‌ ಸಹಯೋಗದಲ್ಲಿ ಗೊಲ್ಲರಹಟ್ಟಿಗಳಲ್ಲಿ ಇರುವ ಮೌಡ್ಯಗಳು ಹಾಗೂ ಮಹಿಳೆಯರಲ್ಲಿ ಇನ್ನೂ ಇರುವ ಕೆಲವು ಸಂಪ್ರದಾಯಗಳ ನಿವಾರಣೆಗಾಗಿ ಏರ್ಪಡಿಸಿದ್ದ ಅರಿವಿನ ಜಾಥಾ ಕಾರ್ಯಕ್ರಮದಲ್ಲಿ ಗೊಲ್ಲರಹಟ್ಟಿ ಮಹಿಳೆಯರಿಗೆ ಜಾಗೃತಿ ಮೂಡಿಸಿದರು.

ಸ್ವಚ್ಛತೆಯ ಕಡೆಗೆ ಹೆಚ್ಚು ಗಮನಹರಿಸಿ: ಹಿಂದಿನಿಂದ ಆಚರಿಸಿಕೊಂಡು ಬಂದಿರುವ ಇಂಥ ಸಂಪ್ರದಾಯ ಗಳು ಈಗಿನ ಕಾಲಕ್ಕೆ ಸರಿಹೊಂದುವುದಿಲ್ಲ. ಮಹಿಳೆ ಯರ ಸಮಸ್ಯೆಗಳನ್ನು ಆಲಿಸಿ ಸ್ಥಳದಲ್ಲಿಯೇ ಅವರೊಂದಿಗೆ ಸಮಾಲೋಚನೆ ನಡೆಸಿದ ಅವರು, ಸಂಪ್ರದಾಯಗಳು ಏನೇ ಇರಲಿ ಮಹಿಳೆಯರನ್ನು ಮುಟ್ಟು ಎನ್ನುವ ಕಾರಣಕ್ಕೆ ಊರಿನಿಂದ ಹೊರಗಿಡುವ ಸಂಪ್ರದಾಯಗಳ ಬಗ್ಗೆ ಪ್ರತಿಯೊಬ್ಬರು ಅರಿತುಕೊಳ್ಳ ಬೇಕು. ಜೊತೆಗೆ ಎಲ್ಲಾ ಹಟ್ಟಿಗಳಲ್ಲಿಯೂ ಶೌಚಾಲಯ ಗಳು ಇರುವಂತೆ ನೋಡಿಕೊಳ್ಳಬೇಕು. ಸ್ವಚ್ಛತೆಯ ಕಡೆಗೆ ಹೆಚ್ಚು ಗಮನಹರಿಸಬೇಕು ಎಂದು ಹೇಳಿದರು.

ಅನಿಷ್ಟ ಪದ್ಧತಿ ಕೈ ಬಿಡಿ: ವರದಕ್ಷಿಣೆ ವಿರೋಧಿ ವೇದಿಕೆ ಪ್ರಧಾನ ಕಾರ್ಯದರ್ಶಿ ಸಾ.ಚಿ.ರಾಜಕುಮಾರ್‌ ಮಾತನಾಡಿ, ಬದಲಾದ ಕಾಲಘಟ್ಟಕ್ಕೆ ಅನುಗುಣವಾಗಿ ಸಂಪ್ರದಾಯಗಳು ಬದಲಾಗಬೇಕಿದೆ. ಗೊಲ್ಲಸಮು ದಾಯಗಳಲ್ಲಿ ಹಲವು ಒಳ್ಳೆಯ ಸಂಪ್ರದಾಯಗಳು ಇವೆ. ಇವುಗಳನ್ನು ಉಳಿಸಿಕೊಂಡು ಜೀವಕ್ಕೆ ಹಾನಿ ಯಾಗುವಂಥ, ಆರೋಗ್ಯಕ್ಕೆ ಅವಮಾನವಾಗುವಂಥ ಪದ್ಧತಿ ಕೈ ಬಿಡಬೇಕು.

ಮಹಿಳೆಯರ ವಿಚಾರದಲ್ಲಿ ಈ ಸಮುದಾಯದಲ್ಲಿ ಸಾಕಷ್ಟು ಅನಾನುಕೂಲಗಳು ಇನ್ನೂ ಇವೆ. ಇಂಥ ಸಾಮಾಜಿಕ ಸಮಸ್ಯೆಗಳನ್ನು ಹಟ್ಟಿಗಳಲ್ಲಿರುವ ಗೌಡರು, ಪೂಜಾರಿಗಳು ಮತ್ತು ವಿದ್ಯಾವಂತರು ಕುಳಿತು ತೀರ್ಮಾನ ಕೈಗೊಳ್ಳಬೇಕು. ಮುಂದಿನ ದಿನಗಳಲ್ಲಿ ಮೌಡ್ಯ ನಿಷೇಧ ಕಾಯ್ದೆ ಪರಿಣಾಮಕಾರಿಯಾಗುವ ಹಿನ್ನೆಲೆಯಲ್ಲಿ ಸಾಮಾಜಿಕ ಹಾಗೂ ಆರೋಗ್ಯಕ್ಕೆ ಹಾನಿಯಾಗುವ ಆಚರಣೆಗಳನ್ನು ಈಗಲೇ ಕೈ ಬಿಡುವುದು ಸೂಕ್ತ. ಸ್ವಚ್ಛತೆಯೊಂದೇ ಆರೋಗ್ಯಕ್ಕೆ ಮೆಟ್ಟಿಲೇ ಹೊರತು ಸೂತಕ, ಮೈಲಿಗೆ ಇತ್ಯಾದಿಗಳಲ್ಲ ಎಂದರು.

ಪುರುಷರು ಸಹಕಾರ ನೀಡಿ: ಜೆಡಿಎಸ್‌ ಜಿಲ್ಲಾ ಮಹಿಳಾ ಘಟಕ ಅಧ್ಯಕ್ಷೆ ಲಕ್ಷ್ಮಮ್ಮ ವೀರಣ್ಣಗೌಡ ಮಾತನಾಡಿ, ಸಂಪ್ರದಾಯಗಳನ್ನು ಬಿಡಲು ಮಹಿಳೆ ಯರು ಮುಂದೆ ಬರುತ್ತಾರೆ. ಇದಕ್ಕೆ ಪುರುಷ ವರ್ಗ ಸಹಕಾರ ನೀಡಬೇಕು. ಯಾವ ದೇವರು ಶಿಕ್ಷೆ ಕೊಡುವುದಿಲ್ಲ. ಎಲ್ಲಾ ಹೆಣ್ಣುಮಕ್ಕಳ ರೀತಿಯಲ್ಲಿಯೇ ಗೊಲ್ಲ ಸಮುದಾಯದ ಸಮುದಾಯದ ಹೆಣ್ಣುಮಕ್ಕಳು ಸಮಾಜದ ಮುಖ್ಯವಾಹಿನಿಗೆ ಬರುವಂತೆ ನೋಡಿ ಕೊಳ್ಳಬೇಕು. ಗ್ರಾಮಗಳಲ್ಲಿ ರಾಜಕೀಯ ಹೊರತು ಪಡಿಸಿ ಈ ಅರಿವಿನ ಕಾರ್ಯಕ್ರಮಕ್ಕೆ ಎಲ್ಲರೂ ಒಗ್ಗಟ್ಟಾಗಬೇಕು ಎಂದು ಹೇಳಿದರು.

ಜಾಗೃತಿ ಆಂದೋಲನ ಜಾಥಾವು ಹುಚ್ಚರಂಗಪ್ಪನ ಹಟ್ಟಿ, ನೆಲ್ಲೂರುಹಟ್ಟಿ, ದಿಬ್ಬದಹಳ್ಳಿಹಟ್ಟಿ, ಚೆನ್ನಿಹಟ್ಟಿಗಳಲ್ಲಿ ಸಂಚರಿಸಿತು. ಸಮಾಲೋಚನೆಯಲ್ಲಿ ಪ್ರತಿಕ್ರಯಿಸಿ ಮಾತನಾಡಿದ ಕೆಲವು ಮುಖಂಡರು ಈಗಾಗಲೇ ಕೆಲವು ಪದ್ಧ್ದತಿ ಕೈ ಬಿಡಲಾಗಿದೆ. ಉಳಿದಿರುವ ಸಂಪ್ರ ದಾಯಗಳ ಬಗ್ಗೆ ಶೀಘ್ರವೇ ಸಭೆ ಕರೆದು ತೀರ್ಮಾನ ಕೈಗೊಳ್ಳುವುದಾಗಿ ತಿಳಿಸಿದರು.

ಕಾರ್ಯಕ್ರಮದಲ್ಲಿ ಚಿಕ್ಕಣ್ಣಸ್ವಾಮಿ ಕ್ಷೇತ್ರದ ಸಿ.ಶಿವಕುಮಾರಸ್ವಾಮಿ, ತುಮಕೂರು ತಾಪಂ ಸದಸ್ಯ ಎಸ್‌.ಕೆ.ಜಯಕೃಷ್ಣ, ಕರ್ನಾಟಕ ರಾಜ್ಯ ಕಾಡುಗೊಲ್ಲರ ಯುವಸೇನೆ ಅಧ್ಯಕ್ಷ ಜಿ.ವಿ.ರಮೇಶ್‌, ಕಾರ್ಮಿಕ ಹೋರಾಟಗಾರ ಗೌಡರಂಗಪ್ಪ, ರಾಜೇಶ್ವರಿ, ಚಿಕ್ಕಪ್ಪಯ್ಯ, ಉಪನ್ಯಾಸಕಿ ಲಾವಣ್ಯಉಮೇಶ್‌ ಜಿ.ಟಿ. ಗೋವಿಂದರಾಜು, ನೆಟ್ಟಿಕೆರೆ ದೇವಾಲಯದ ಅರ್ಚಕ ಮಹಾಲಿಂಗಪ್ಪ, ಈರೇಗೌಡ, ರಾಜಣ್ಣ, ಬಿ.ಕೆ.ರಾಜು, ಪ್ರಕಾಶ್‌, ಟಿ.ನಾಗರಾಜು, ಬೇಡಬಾಬು, ಮಹೇಶ್‌ ಸೇರಿದಂತೆ ಸ್ಥಳೀಯ ಮುಖಂಡರು ಕಾಡುಗೊಲ್ಲ ಯುವಸೇನೆ ಪದಾಧಿಕಾರಿಗಳು ಈ ಆಂದೋಲನದಲ್ಲಿ ಪಾಲ್ಗೊಂಡಿದ್ದರು.

ಟಾಪ್ ನ್ಯೂಸ್

BBK11: ಮೋಕ್ಷಿತಾ ಎರಡು ತಲೆ ನಾಗರಹಾವು ಎಂದ ತ್ರಿವಿಕ್ರಮ್; ನಾಮಿನೇಟ್‌ ವಿಚಾರವಾಗಿ ವಾಗ್ವಾದ

BBK11: ಮೋಕ್ಷಿತಾ ಎರಡು ತಲೆ ನಾಗರಹಾವು ಎಂದ ತ್ರಿವಿಕ್ರಮ್; ನಾಮಿನೇಟ್‌ ವಿಚಾರವಾಗಿ ವಾಗ್ವಾದ

Udaipur Palace: ಉತ್ತರಾಧಿಕಾರ ವಿಚಾರದಲ್ಲಿ ಉದಯಪುರ ಅರಮನೆಯಲ್ಲಿ ಸಂಘರ್ಷ: ಮೂವರಿಗೆ ಗಾಯ

Udaipur Palace: ರಾಜಮನೆತನದ ಎರಡು ಗುಂಪುಗಳ ನಡುವೆ ಘರ್ಷಣೆ: ಮೂವರಿಗೆ ಗಾಯ

Bangala-Krishna-Das

Tensions Grip: ಬಾಂಗ್ಲಾದೇಶ ಸರಕಾರದಿಂದ ಹಿಂದೂ ನಾಯಕ, ಇಸ್ಕಾನ್‌ನ ಕೃಷ್ಣದಾಸ್‌ ಸೆರೆ

PM-Modi-Sansad

Parliament Session: ಗೂಂಡಾಗಿರಿ ಮೂಲಕ ಸಂಸತ್‌ ಮೇಲೆ ನಿಯಂತ್ರಣ ಸಾಧಿಸಲು ಯತ್ನ: ಮೋದಿ

Horoscope: ಆತ್ಮ ವಿಶ್ವಾಸ ಮತ್ತು ಸಕಾರಾತ್ಮಕ ಚಿಂತನೆಯಿಂದ ಯಶಸ್ಸು ಸಿಗಲಿದೆ

Horoscope: ಆತ್ಮ ವಿಶ್ವಾಸ ಮತ್ತು ಸಕಾರಾತ್ಮಕ ಚಿಂತನೆಯಿಂದ ಯಶಸ್ಸು ಸಿಗಲಿದೆ

Sambhal

Mosque survey: ಸಂಭಲ್‌ ಹಿಂಸೆ: ಎಸ್ಪಿ ಸಂಸದ ಸೇರಿ ಹಲವರ ವಿರುದ್ಧ ಕೇಸು

Cardamom: ಜಾಗತಿಕ ಉತ್ಪಾದನೆ ಕುಸಿತ : ಏಲಕ್ಕಿಗೂ ಶುಕ್ರದೆಸೆ: ಕೆ.ಜಿ.ಗೆ 3,000 ರೂ.!

Cardamom: ಜಾಗತಿಕ ಉತ್ಪಾದನೆ ಕುಸಿತ : ಏಲಕ್ಕಿಗೂ ಶುಕ್ರದೆಸೆ: ಕೆ.ಜಿ.ಗೆ 3,000 ರೂ.!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ

Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ

1-parm

Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ

Tumkur: ತುಮಕೂರಲ್ಲಿ ದಲಿತ ಮಹಿಳೆ ಹ*ತ್ಯೆ: 21 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ

Road Mishap: ಚಲಿಸುತ್ತಿದ್ದ ಲಾರಿಗೆ ಕಾರು ಢಿಕ್ಕಿ: ತಂದೆ-ಮಗು ಸ್ಥಳದಲ್ಲೇ ಸಾವು

Road Mishap: ಚಲಿಸುತ್ತಿದ್ದ ಲಾರಿಗೆ ಕಾರು ಢಿಕ್ಕಿ: ತಂದೆ-ಮಗು ಸ್ಥಳದಲ್ಲೇ ಸಾವು

Maharashtra ಸರಕಾರ ವಿರುದ್ಧ ಮಾನನಷ್ಟ ಕೇಸ್‌: ಸಚಿವ ಡಾ| ಜಿ. ಪರಮೇಶ್ವರ್‌

Maharashtra ಸರಕಾರ ವಿರುದ್ಧ ಮಾನನಷ್ಟ ಕೇಸ್‌: ಸಚಿವ ಡಾ| ಜಿ. ಪರಮೇಶ್ವರ್‌

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

BBK11: ಮೋಕ್ಷಿತಾ ಎರಡು ತಲೆ ನಾಗರಹಾವು ಎಂದ ತ್ರಿವಿಕ್ರಮ್; ನಾಮಿನೇಟ್‌ ವಿಚಾರವಾಗಿ ವಾಗ್ವಾದ

BBK11: ಮೋಕ್ಷಿತಾ ಎರಡು ತಲೆ ನಾಗರಹಾವು ಎಂದ ತ್ರಿವಿಕ್ರಮ್; ನಾಮಿನೇಟ್‌ ವಿಚಾರವಾಗಿ ವಾಗ್ವಾದ

Udaipur Palace: ಉತ್ತರಾಧಿಕಾರ ವಿಚಾರದಲ್ಲಿ ಉದಯಪುರ ಅರಮನೆಯಲ್ಲಿ ಸಂಘರ್ಷ: ಮೂವರಿಗೆ ಗಾಯ

Udaipur Palace: ರಾಜಮನೆತನದ ಎರಡು ಗುಂಪುಗಳ ನಡುವೆ ಘರ್ಷಣೆ: ಮೂವರಿಗೆ ಗಾಯ

Bangala-Krishna-Das

Tensions Grip: ಬಾಂಗ್ಲಾದೇಶ ಸರಕಾರದಿಂದ ಹಿಂದೂ ನಾಯಕ, ಇಸ್ಕಾನ್‌ನ ಕೃಷ್ಣದಾಸ್‌ ಸೆರೆ

PM-Modi-Sansad

Parliament Session: ಗೂಂಡಾಗಿರಿ ಮೂಲಕ ಸಂಸತ್‌ ಮೇಲೆ ನಿಯಂತ್ರಣ ಸಾಧಿಸಲು ಯತ್ನ: ಮೋದಿ

1

Sullia: ರಬ್ಬರ್‌ ಸ್ಮೋಕ್‌ ಹೌಸ್‌ಗೆ ಬೆಂಕಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.